Tamil Talaiwas enters play off : ಅದ್ಭುತ ಕಂಬ್ಯಾಕ್‌ನೊಂದಿಗೆ ಪ್ಲೇ ಆಫ್ ಹಂತಕ್ಕೆ ಲಗ್ಗೆ ಇಟ್ಟ ತಮಿಳ್ ತಲೈವಾಸ್

ಹೈದರಾಬಾದ್ : ಕ್ರೀಡಾ ಜಗತ್ತಿನಲ್ಲಿ ಅದ್ಭುತ ಕಂಬ್ಯಾಕ್’ಗಳಿಗೆ ಮತ್ತೊಂದು ನಿದರ್ಶನ ಪ್ರೊ ಕಬಡ್ಡಿ ಲೀಗ್ 9ನೇ ಆವೃತ್ತಿಯ ಟೂರ್ನಿಯಲ್ಲಿ (Pro Kabaddi League) ತಮಿಳ್ ತಲೈವಾಸ್ ತಂಡದ (Tamil Talaiwas enters play off) ಸಾಧನೆ. ಸವಾಲುಗಳನ್ನು ಮೆಟ್ಟಿ ನಿಂತಿರುವ ತಲೈವಾಸ್ ಯಾರೂ ನಿರೀಕ್ಷಿಸಿರದ ರೀತಿಯಲ್ಲಿ ಪ್ಲೇ ಆಫ್ ಹಂತಕ್ಕೆ ಲಗ್ಗೆ ಇಟ್ಟಿದೆ.

ಹೈದರಾಬಾದ್’ನ ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ಬುಧವಾರ ನಡೆದ ತನ್ನ 21ನೇ ಲೀಗ್ ಪಂದ್ಯದಲ್ಲಿ ತಮಿಳ್ ತಲೈವಾಸ್ ಪಡೆ, ಯು.ಪಿ ಯೋಧಾ ಪಡೆಯನ್ನು 43-28ರಲ್ಲಿ ಸೋಲಿಸಿ ಒಟ್ಟು 66 ಅಂಕಗಲೊಂದಿಗೆ ಇನ್ನೂ ಒಂದು ಪಂದ್ಯ ಬಾಕಿ ಇರುತ್ತಲೇ ಪ್ಲೇ ಆಫ್ ಹಂತಕ್ಕೇರಿತು. ಈ ಬಾರಿ ತಮಿಳ್ ತಲೈವಾಸ್ ತಂಡದ ಸಾಧನೆ ನಿಜಕ್ಕೂ ಅದ್ಭುತ. ಮೊದಲ ಪಂದ್ಯದಲ್ಲೇ ನಾಯಕ ಪವನ್ ಸೆಹ್ರಾವತ್ ಗಾಯಗೊಂಡು ಟೂರ್ನಿಯಿಂದ ಹೊರ ಬಿದ್ದದ್ದು, ಮೊದಲ ಆರು ಪಂದ್ಯಗಳಲ್ಲಿ ಕೇವಲ ಒಂದರಲ್ಲಿ ಗೆದ್ದದ್ದು, ಅಷ್ಟರಲ್ಲಿ ಕೋಚ್ ಉದಯ್ ಕುಮಾರ್ ಅವರನ್ನು ಬದಲಿಸಿ ಅಶಾನ್ ಕುಮಾರ್ ಅವರನ್ನು ನೇಮಕ ಮಾಡಿದ್ದು… ತಮಿಳ್ ತಲೈವಾಸ್ ತಂಡದ ಅದೃಷ್ಟ ಖುಲಾಯಿಸಿದ್ದು ಅಲ್ಲಿಂದಲೇ.

ಹೊಸ ಕೋಚ್ ಹಾಗೂ ಹೊಸ ನಾಯಕನ ಮುಂದಾಳತ್ವದಲ್ಲಿ ಮುನ್ನುಗ್ಗಿದ ತಮಿಳ್ ತಲೈವಾಸ್, ಮುಂದಿನ 15 ಪಂದ್ಯಗಳಲ್ಲಿ 9ರಲ್ಲಿ ಗೆದ್ದು ಪ್ಲೇ ಆಫ್ ಹಂತಕ್ಕೇರಿದೆ. ಈ ಮಧ್ಯೆ ತಂಡದ ನಾಯಕನಾಗಿದ್ದ ಸಾಗರ್ ರಾಥಿ ಗಾಯಗೊಂಡು ಲೀಗ್’ನಿಂದ ಹೊರ ಬಿದ್ದರೂ ಎದೆಗುಂದದ ತಲೈವಾಸ್, ದಿಟ್ಟ ಹೋರಾಟದ ಮೂಲಕ ಪ್ರೊ ಕಬಡ್ಡಿ ಲೀಗ್ ಇತಿಹಾಸದಲ್ಲೇ ಇದೇ ಮೊದಲ ಬಾರಿ ಪ್ಲೇ ಆಫ್ ಹಂತಕ್ಕೆ ಎಂಟ್ರಿ ಕೊಟ್ಟಿದೆ.ದಿನದ ಮತ್ತೊಂದು ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ ತಂಡವನ್ನು 57-44ರಲ್ಲಿ ಮಣಿಸಿದ ಬೆಂಗಳೂರು ಬುಲ್ಸ್ 13ನೇ ಗೆಲುವಿನೊಂದಿಗೆ ಒಟ್ಟಾರೆ 73 ಅಂಕ ಸಂಪಾದಿಸಿ ಪಾಯಿಂಟ್ ಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿತು.

ಗುರುವಾರ ಎರಡು ಪಂದ್ಯಗಳು ನಡೆಯಲಿದ್ದು, ಮೊದಲ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ಮತ್ತು ಬೆಂಗಾಲ್ ವಾರಿಯರ್ಸ್ ಮುಖಾಮುಖಿಯಾಗಲಿವೆ. ಒಟ್ಟಾರೆ 60 ಅಂಕ ಗಳಿಸಿರುವ ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿ ಈ ಪಂದ್ಯದಲ್ಲಿ ಗೆದ್ದರೆ 6ನೇ ತಂಡವಾಗಿ ಪ್ಲೇ ಆಫ್ ಹಂತಕ್ಕೇರಲಿದೆ. ಒಂದು ವೇಳೆ ದಬಾಂಗ್ ಡೆಲ್ಲಿ ಸೋತು ಬೆಂಗಾಲ್ ವಾರಿಯರ್ಸ್ ಗೆದ್ದರೆ ವಾರಿಯರ್ಸ್ ಪಡೆಗೂ ಪ್ಲೇ ಆಫ್ ಹಂತಕ್ಕೇರುವ ಅವಕಾಶವಿದೆ. ಬೆಂಗಾಲ್ ವಾರಿಯರ್ಸ್ ಗೆಲುವು ಗುಜರಾತ್ ಜೈಂಟ್ಸ್, ಹರ್ಯಾಣ ಸ್ಟೀಲರ್ಸ್ ಮತ್ತು ಸ್ವತಃ ವಾರಿಯರ್ಸ್ ಪಡೆಯ ಪ್ಲೇ ಆಫ್ ಕನಸನ್ನು ಜೀವಂತವಾಗಿಡಲಿದೆ.

ಪ್ರೊ ಕಬಡ್ಡಿ ಲೀಗ್-9: ಗುರುವಾರದ ಪಂದ್ಯಗಳು (Pro Kabaddi League)

  1. ಬೆಂಗಾಲ್ ವಾರಿಯರ್ಸ್ Vs ದಬಾಂಗ್ ಡೆಲ್ಲಿ
  2. ಹರ್ಯಾಣ ಸ್ಟೀಲರ್ಸ್ Vs ತೆಲುಗು ಟೈಟನ್ಸ್

ಇದನ್ನೂ ಓದಿ : Pro Kabaddi League: ದಕ್ಷಿಣ ಭಾರತ ಡರ್ಬಿಯಲ್ಲಿ ತಲೈವಾಸ್ ವಿರುದ್ಧ ಗೆದ್ದರೆ ಬೆಂಗಳೂರು ಬುಲ್ಸ್ ಟೇಬಲ್ ಟಾಪರ್

ಇದನ್ನೂ ಓದಿ : Gujarat Giants Vs Dabang Delhi K.C : ದಬಾಂಗ್ ಡೆಲ್ಲಿ, ಗುಜರಾತ್ ಟೈಂಟ್ಸ್ ಪ್ಲೇ ಆಫ್ ಕನಸು ಜೀವಂತ

ಇದನ್ನೂ ಓದಿ : Puneri Paltan vs Jaipur Pink Panthers : ಸೆಮಿಫೈನಲ್‌ಗೆ ಎಂಟ್ರಿ ಕೊಟ್ಟ ಪುಣೇರಿ ಪಲ್ಟನ್, ಜೈಪುರ ಪಿಂಕ್ ಪ್ಯಾಂಥರ್ಸ್

ಸ್ಥಳ: ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣ, ಹೈದರಾಬಾದ್
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
ಲೈವ್ ಸ್ಟ್ರೀಮಿಂಗ್: ಡಿಸ್ನಿ+ಹಾಟ್ ಸ್ಟಾರ್

Tamil Talaiwas enters play off : Tamil Talaiwas enters the play off stage with a brilliant comeback.

Comments are closed.