Batting trio failure: ತ್ರಿಮೂರ್ತಿಗಳ ಭಾರೀ ವೈಫಲ್ಯ… ಹೀಗಾದ್ರೆ ವಿಶ್ವಕಪ್ ಗೆಲ್ಲೋದು ಹೇಗೆ?

ಬೆಂಗಳೂರು : ನಾಯಕ ರೋಹಿತ್ ಶರ್ಮಾ (Rohit Sharma), ಎಡಗೈ ಓಪನರ್ ಶಿಖರ್ ಧವನ್ (Shikhar Dhawan) ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli). ಭಾರತ ಏಕದಿನ ತಂಡದ (Batting trio failure) ಬ್ಯಾಟಿಂಗ್ ತ್ರಿಮೂರ್ತಿಗಳು. ಆರಂಭಿಕವಾಗಿ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಆಡಿದ್ರೆ, 3ನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಆಡುತ್ತಾರೆ. ಮುಂದಿನ ವರ್ಷ ಭಾರತದಲ್ಲೇ ನಡೆಯುವ ಐಸಿಸಿ ಏಕದಿನ ವಿಶ್ವಕಪ್’ನಲ್ಲಿ ಭಾರತ ಚಾಂಪಿಯನ್ ಆಗ್ಬೇಕು ಅಂದ್ರೆ ಈ ತ್ರಿಮೂರ್ತಿಗಳ ಪಾತ್ರ ನಿರ್ಣಾಯಕ. ಆದರೆ ಬ್ಯಾಟಿಂಗ್ ತ್ರಿಮೂರ್ತಿಗಳ ಸದ್ಯದ ಬ್ಯಾಟಿಂಗ್ ಫಾರ್ಮ್ ನಿಜಕ್ಕೂ ಚಿಂತೆಗೀಡು ಮಾಡಿದೆ.

ರೋಹಿತ್ ಶರ್ಮಾ, ಶಿಖರ್ ಧವನ್ ಮತ್ತು ವಿರಾಟ್ ಕೊಹ್ಲಿ 2017ರಿಂದ 2019ರವರೆಗೆ ಒಟ್ಟು 43 ಏಕದಿನ ಶತಕಗಳನ್ನು ಬಾರಿಸಿದ್ದರು. ಇದರಲ್ಲಿ 18 ಶತಕಗಳನ್ನು ರೋಹಿತ್ ಶರ್ಮಾ ಬಾರಿಸಿದ್ರೆ, 17 ಶತಕಗಳನ್ನು ವಿರಾಟ್ ಕೊಹ್ಲಿ ಬಾರಿಸಿದ್ದರು. ಶಿಖರ್ ಸಿಡಿಸಿದ್ದ ಶತಕಗಳ ಸಂಖ್ಯೆ 8. ಆದರೆ 2020ರಿಂದ 2022ರವರೆಗೆ ಇದೇ ತ್ರಿಮೂರ್ತಿಗಳ ಬ್ಯಾಟ್’ನಿಂದ ಸಿಡಿದಿರುವ ಶತಕ ಕೇವಲ ಒಂದು. ಅದನ್ನು ಬಾರಿಸಿರೋದು ರೋಹಿತ್ ಶರ್ಮಾ. ವಿರಾಟ್ ಕೊಹ್ಲಿ ಮತ್ತು ಶಿಖರ್ ಧವನ್ ಕಳೆದ ಮೂರು ವರ್ಷಗಳಲ್ಲಿ ಒಂದೇ ಒಂದು ಏಕದಿನ ಶತಕ ಬಾರಿಸಿಲ್ಲ.

2017ರಿಂದ 2019ರವರೆಗೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಏಕದಿನ ಕ್ರಿಕೆಟ್’ನಲ್ಲಿ ರನ್ ಹೊಳೆಯನ್ನೇ ಹರಿಸಿದ್ದರು. ಈ ತ್ರಿಮೂರ್ತಿಗಳು ಆ ಅವಧಿಯಲ್ಲಿ ಗಳಿಸಿದ ಒಟ್ಟು ರನ್ 10,292, ಬಾರಿಸಿದ ಶತಕ 43. ಆದರೆ 2020ರಿಂದ 2022ರವರೆಗೆ ಈ ತ್ರಿಮೂರ್ತಿಗಳು ಏಕದಿನ ಕ್ರಿಕೆಟ್’ನಲ್ಲಿ ಗಳಿಸಿರುವ ಒಟ್ಟು ರನ್ ಕೇವಲ 2,480.

ಏಕದಿನ ಕ್ರಿಕೆಟ್ 2017-19: ಭಾರತದ ಟಾಪ್-3 ಬ್ಯಾಟರ್’ಗಳ ಸಾಧನೆ
ಆಟಗಾರ ಪಂದ್ಯ ರನ್ ಸರಾಸರಿ ಶತಕ ಅರ್ಧಶತಕ
ವಿರಾಟ್ ಕೊಹ್ಲಿ 66 4039 79.19 17 17
ರೋಹಿತ್ ಶರ್ಮಾ 68 3813 65.74 18 14
ಶಿಖರ್ ಧವನ್ 59 2440 45.18 08 10

ಏಕದಿನ ಕ್ರಿಕೆಟ್ 2020-22: ಭಾರತದ ಟಾಪ್-3 ಬ್ಯಾಟರ್’ಗಳ ಸಾಧನೆ
ಆಟಗಾರ ಪಂದ್ಯ ರನ್ ಸರಾಸರಿ ಶತಕ ಅರ್ಧಶತಕ
ಶಿಖರ್ ಧವನ್ 33 1272 43.86 00 12
ವಿರಾಟ್ ಕೊಹ್ಲಿ 22 749 34.04 00 09
ರೋಹಿತ್ ಶರ್ಮಾ 14 459 38.25 01 02

ಇದನ್ನೂ ಓದಿ : India Vs Bangladesh ODI series: ರೋಹಿತ್ ನಾಯಕತ್ವದಲ್ಲಿ ಬಾಂಗ್ಲಾ ವಿರುದ್ಧ ಭಾರತಕ್ಕೆ ಸರಣಿ ಸೋಲಿನ ಅವಮಾನ

ಇದನ್ನೂ ಓದಿ : Exclusive: Robin Uthappa CSK : ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಕನ್ನಡಿಗ ರಾಬನ್ ಉತ್ತಪ್ಪಗೆ ಹೊಸ ಜವಾಬ್ದಾರಿ

ಇದನ್ನೂ ಓದಿ : Suryakumar Yadav to play Ranji Trophy: ಟೀಮ್ ಇಂಡಿಯಾದಿಂದ ಔಟ್, ರಣಜಿ ಟ್ರೋಫಿಯಲ್ಲಿ ಮುಂಬೈ ಪರ ಆಡಲಿದ್ದಾರೆ ಸೂರ್ಯಕುಮಾರ್ ಯಾದವ್

ಬಾಂಗ್ಲಾದೇಶ ಪ್ರವಾಸದ ಏಕದಿನ ಸರಣಿಯ (India vs Bangladesh ODI series) ಮೊದಲೆರಡು ಪಂದ್ಯಗಳಲ್ಲೂ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ವಿಫಲರಾಗಿದ್ದಾರೆ. ವಿಶ್ವಕಪ್ ಹೊಸ್ತಿಲಲ್ಲೇ ಬ್ಯಾಟಿಂಗ್ ತ್ರಿಮೂರ್ತಿಗಳ ಈ ವೈಫಲ್ಯ ಭಾರತಕ್ಕೆ ಚಿಂತೆಯ ವಿಷಯ.

Batting trio failure: Big failure of the triumvirate… then how to win the world cup?

Comments are closed.