ದೆಹಲಿಯ ಗುರುದ್ವಾರದಲ್ಲಿ ಮಲಗುತ್ತಿದ್ದ ಹುಡುಗ.. ಈಗ ಕ್ರಿಕೆಟ್ ಜಗತ್ತಿನ ಟಾಕ್ ಆಫ್ ದಿ ಟೌನ್ !

ದೆಹಲಿ: ಭಾರತ ಕ್ರಿಕೆಟ್ ತಂಡ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ರಿಷಭ್ ಪಂತ್, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಸ್ಫೋಟಕ ಶತಕ ಬಾರಿಸಿ ಮತ್ತೊಮ್ಮೆ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿದ್ದಾರೆ. ಸದ್ಯ ಕ್ರಿಕೆಟ್ ಜಗತ್ತಿನ ಟಾಕ್ ಆಫ್ ದಿ ಟೌನ್ ಆಗಿರುವ ರಿಷಭ್ ಪಂತ್ ಹಿಂದೆ ಮನ ಮಿಡಿಯುವ ಕಥೆಯೊಂದಿದೆ. ಯಶಸ್ಸು ಎಂಬುದು ರಿಷಭ್ ಪಂತ್’ಗೆ ಸುಲಭವಾಗಿ ಬಂದಿದ್ದಲ್ಲ. ಅದಕ್ಕಾಗಿ ಈ ದೆಹಲಿ ಆಟಗಾರ ಬೆವರನ್ನಲ್ಲ, ರಕ್ತವನ್ನೇ ಬಸಿದಿದ್ದಾರೆ. ರಿಷಭ್ ಪಂತ್ (Rishabh Pant painful story) ಯಶಸ್ಸಿನ ಹಿಂದೆ ತಾಯಿಯ ತ್ಯಾಗವಿದೆ, ತಂದೆಯ ಶ್ರಮವಿದೆ. ಕೊನೆಗೆ ಆ ತಂದೆಯೇ ಇಲ್ಲವಾದಾಗ ಪಟ್ಟ ನೋವಿನ ಕಥೆಯಿದೆ.

ರಿಷಭ್ ಪಂತ್ ಮೂಲತಃ ಉತ್ತರಾಖಂಡ್’ನವರು. ಕ್ರಿಕೆಟ್ ಆಡಲು 12ನೇ ವರ್ಷದಲ್ಲಿ ದೆಹಲಿಗೆ ಬಂದಿದ್ದ ಹುಡುಗ. ಉತ್ತರಾಖಂಡ್’ನಲ್ಲಿ ಕ್ರಿಕೆಟ್’ಗೆ ಅಂತಹ ಸ್ಕೋಪ್ ಇರ್ಲಿಲ್ಲ. ಹೀಗಾಗಿ ದೆಹಲಿಯಲ್ಲಿ ನಡೆಯುತ್ತಿದ್ದ ಕ್ರಿಕೆಟ್ ತರಬೇತಿ ಶಿಬಿರಗಳಲ್ಲಿ ಭಾಗವಹಿಸಲು ತಾಯಿಯ ಜೊತೆ ಬರ್ತಿದ್ದ 12 ವರ್ಷದ ಹುಡುಗ. ಇದು 2009ರ ಆಸುಪಾಸಿನ ಕಥೆ. ದೆಹಲಿಗೆ ಹೊಸಬ. ಯಾರ ಗುರುತೂ ಇಲ್ಲ, ಪರಿಚಯವೂ ಇಲ್ಲ. ದೆಹಲಿಯಲ್ಲಿ ಸ್ನೇಹಿತರಂತೂ ಮೊದಲೇ ಇಲ್ಲ. ಮೊದಲೇ ಮಧ್ಯಮವರ್ಗದ ಕುಟುಂಬ. ಹೀಗಾಗಿ ದೆಹಲಿಗೆ ಬಂದಾಗಲೆಲ್ಲಾ ತಾಯಿ-ಮಗ ಉಳಿದುಕೊಳ್ತಿದ್ದದ್ದು ಮೋತಿ ಭಾಗ್’ನಲ್ಲಿರುವ ಗುರುದ್ವಾರದಲ್ಲಿ. ಅಗು ಸಿಖ್ ಸಮುದಾಯದವರು ಪ್ರಾರ್ಥನೆ ಸಲ್ಲಿಸುವ ಜಾಗ. ಅಲ್ಲೇ ನೆಲದ ಮೇಲೆ ಮಲಗುತ್ತಿದ್ದ ಬಾಲಕ ರಿಷಭ್ ಪಂತ್.

ದೆಹಲಿಯಲ್ಲಿ ಕ್ರಿಕೆಟ್ ಬದುಕು ಕಟ್ಟಿಕೊಳ್ಳುವ ನಿರ್ಧಾರ ಮಾಡಿದ ರಿಷಭ್ ಪಂತ್’ಗೆ ಆರಂಭದಲ್ಲೇ ನಿರಾಸೆ ಕಾದಿತ್ತು. ದೆಹಲಿ U-13 ತಂಡದ ಸೆಲೆಕ್ಷನ್ ಟ್ರಯಲ್ಸ್’ಗೆ ಹೋದ ಹುಡುಗನನ್ನು ದೆಹಲಿ ಕ್ರಿಕೆಟ್ ಸಂಸ್ಥೆಯ ಅಧಿಕಾರಿಗಳು ರಿಜೆಕ್ಟ್ ಮಾಡಿ ಬಿಟ್ರು. ಪಟ್ಚು ಬಿಡದ ಪಂತ್ ಕೆಲವೇ ವರ್ಷಗಳಲ್ಲಿ ದೆಹಲಿ U-19 ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗ್ತಾನೆ. ಅಸ್ಸಾಂ ವಿರುದ್ಧ ಬಾರಿಸಿದ ಸ್ಫೋಟಕ ಶತಕ ಈ ಹುಡುಗನನ್ನು ಕ್ರಿಕೆಟ್ ಜಗತ್ತಿಗೆ ಪರಿಚಯಿಸುತ್ತದೆ. ರಿಷಭ್ ಪಂತ್ ಹೆಸರು ಕ್ರಿಕೆಟ್ ಜಗತ್ತಿನಲ್ಲಿ ಮೊದಲ ಬಾರಿ ದೊಡ್ಡ ಸದ್ದು ಮಾಡಿದ್ದು 2016ರಲ್ಲಿ. ಆ ವರ್ಷ ನಡೆದ ಐಸಿಸಿ U-19 ವಿಶ್ವಕಪ್’ನಲ್ಲಿ ಭರ್ಜರಿ ಆಟವಾಡಿದ ಪಂತ್, ನೇಪಾಳ ವಿರುದ್ಧದ ಪಂದ್ಯದಲ್ಲಿ ಕೇವಲ 18 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಅಬ್ಬರಿಸ್ತಾನೆ. ಕಿರಿಯರ ವಿಶ್ವಕಪ್’ನಲ್ಲಿ ತೋರಿದ ಅಮೋಘ ಪ್ರದರ್ಶನ ರಿಷಭ್ ಪಂತ್’ಗೆ ಐಪಿಎಲ್ ಬಾಗಿಲು ತೆರೆಯಲು ಕಾರಣವಾಗಿ ಬಿಡುತ್ತದೆ. 2017ರ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ರಿಷಭ್ ಪಂತ್’ನನ್ನು ಖರೀದಿಸಿತ್ತು.

ಕ್ರಿಕೆಟ್ ವೃತ್ತಿಬದುಕು ಒಂದು ಹಂತಕ್ಕೆ ಬಂತು ಎನ್ನುವಷ್ಟರಲ್ಲಿ ವೈಯಕ್ತಿಕ ಬದುಕಲ್ಲು ಬಹುದೊಡ್ಡ ಆಘಾತ. ಬದುಕು ಕೊಟ್ಟ ತಂದೆ 2017ರಲ್ಲಿ ಹೃದಯಸ್ಥಂಭನಕ್ಕೊಳಗಾಗಿ ಸಾವಿಗೀಡಾಗ್ತಾರೆ. ಹುಡುಗನಿಗೆ ಆಕಾಶವೇ ತಲೆ ಮೇಲೆ ಬಿದ್ದ ಅನುಭವ. ಜೀವನದಲ್ಲಿ ಎದುರಾದ ದೊಡ್ಡ ಆಘಾತದ ಮಧ್ಯೆಯೂ ಐಪಿಎಲ್’ನಲ್ಲಿ ಹೊಡಿಬಡಿಯ ಆಟವಾಡುವ ರಿಷಭ್ ಪಂತ್, ಟೀಮ್ ಇಂಡಿಯಾಗೆ ಎಂಟ್ರಿ ಕೊಡ್ತಾನೆ. ಹುಡುಗ ಬುದ್ಧಿಯ ಪಂತ್ ಆಟದಲ್ಲಿ ತೋರುತ್ತಿದ್ದ ಬೇಜವಾಬ್ದಾರಿತನದಿಂದ ತೀವ್ರ ಟೀಕೆಗೆ ಗುರಿಯಾಗ್ತಾರೆ. ಈಗ ಅದೇ ಹುಡುಗ ಇಂಗ್ಲೆಂಡ್ ನೆಲದಲ್ಲಿ 2ನೇ ಟೆಸ್ಟ್ ಶತಕ ಬಾರಿಸಿ ಸದ್ದು ಮಾಡಿದ್ದಾನೆ. ಇಂಗ್ಲೆಂಡ್, ಆಸ್ಟ್ರೇಲಿಯಾ,ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಶತಕ ಬಾರಿಸಿದ ಭಾರತದ ಮೊದಲ ಹಾಗೂ ಏಕೈಕ ವಿಕೆಟ್ ಕೀಪರ್ ರಿಷಭ್ ಪಂತ್.

ಇದನ್ನೂ ಓದಿ : Jaspreet Bumrah : ಒಂದೇ ಓವರ್‌ನಲ್ಲಿ 35 ರನ್.. ಬ್ಯಾಟಿಂಗ್ ದಿಗ್ಗಜ ಲಾರಾ ದಾಖಲೆ ಮುರಿದ ಬುಮ್ರಾ !

ಇದನ್ನೂ ಓದಿ : ಗುಡ್ ನ್ಯೂಸ್ : ರೋಹಿತ್ ಶರ್ಮಾಗೆ ಕೋವಿಡ್ ನೆಗೆಟಿವ್ !

team India Wicket keeper Rishabh Pant painful story

Comments are closed.