IND vs ENG 2nd Test : ಇಂಗ್ಲೆಂಡ್‌ ವಿರುದ್ದ ರೋಚಕ ಗೆಲುವು ಪಡೆದ ಭಾರತ

ಲಾರ್ಡ್ಸ್‌ : ಇಂಗ್ಲೆಂಡ್‌ ವಿರುದ್ದ ಟೆಸ್ಟ್‌ ಸರಣಿಯ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಟೀಂ ಇಂಡಿಯಾ ರೋಚಕ ಗೆಲುವು ದಾಖಲಿಸಿದೆ. ಲಾರ್ಡ್ಸ್‌ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಬರೋಬ್ಬರಿ 151 ರನ್‌ಗಳ ಗೆಲುವು ದಾಖಲಿಸಿದೆ. ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಭಾರತ 1-0 ಅಂತರದಿಂದ ಮುನ್ನಡೆ ಸಾಧಿಸಿದೆ.

ಮೊದಲು ಬ್ಯಾಟಿಂಗ್‌ ಮಾಡಿದ್ದ ಭಾರತ ಕೆ.ಎಲ್.ರಾಹುಲ್‌ ಹಾಗೂ ರೋಹಿತ್‌ ಶರ್ಮಾ ಅವರ ಅದ್ಬುತ ಬ್ಯಾಟಿಂಗ್‌ ನೆರವಿನಿಂದ ಬರೋಬ್ಬರು 364 ರನ್‌ ಗಳಿಸಿತ್ತು. ಮೊದಲ ಇನ್ಸಿಂಗ್ಸ್‌ನಲ್ಲಿ ಇಂಗ್ಲೆಂಡ್‌ ಕೂಡ ಟೀಂ ಇಂಡಿಯಾಕ್ಕೆ ಡಿಟ್ಟ ಉತ್ತರವನ್ನು ನೀಡಿತ್ತು. ನಾಯಕ ಜೋ ರೂಟ್‌ ಭರ್ಜರಿ ಶತಕ ಹಾಗೂ ಜಾನಿ ಬ್ರೆಸ್ಟೋ ಅವರ ಅರ್ಧಶತಕದ ನೆರವಿನಿಂದ 391ರನ್‌ಗಳಿಗೆ ಸರ್ವ ಪತನ ಕಾಣುವ ಮೂಲಕ ಇನ್ನಿಂಗ್ಸ್‌ ಮುನ್ನಡೆಯನ್ನು ಕಂಡುಕೊಂಡಿತ್ತು.

ಆದರೆ ಎರಡನೇ ಇನ್ನ್ಸಿಂಗ್ಸ್‌ ಆರಂಭಿಸಿದ್ದ ಭಾರತಕ್ಕೆ ಆರಂಭಿಕ ಆಘಾತ ಎದುರಾಗಿತ್ತು. ಕೆ.ಎಲ್.ರಾಹುಲ್‌, ರೋಹಿತ್‌ ಶರ್ಮಾ ಬಹುಬೇಗನೆ ವಿಕೆಟ್‌ ಒಪ್ಪಿಸಿದ್ರು. ನಂತರ ಬಂದ ನಾಯಕ ಕೂಡ ಹೆಚ್ಚು ಹೊತ್ತು ಕ್ರೀಸ್‌ ನಲ್ಲಿ ಇರಲಿಲ್ಲ. ಚೇತೇಶ್ವರ ಪೂಜಾರ, ಅಜಿಂಕ್ಯಾ ರಹಾನೆ, ಮೊಹಮ್ಮದ್‌ ಸೆಮಿ ಹಾಗೂ ಜಸ್ಪ್ರಿತ್‌ ಬೂಮ್ರಾ ಅವರ ಅದ್ಬುತ ಆಟದ ನೆರವಿನಿಂದ ಟೀಂ ಇಂಡಿಯಾ 8 ವಿಕೆಟ್‌ ಕಳೆದುಕೊಂಡು 298ರನ್‌ ಗಳಿಸಿ, ಡಿಕ್ಲೇರ್‌ ಮಾಡಿಕೊಂಡಿತ್ತು.

ಗೆಲುವಿನ ನಿರೀಕ್ಷೆಯೊಂದಿಗೆ ಎರಡನೇ ಇನ್ನಿಂಗ್ಸ್‌ ಆರಂಭಿಸಿದ್ದ ಇಂಗ್ಲೆಂಡ್‌ ತಂಡಕ್ಕೆ ಬೂಮ್ರಾ, ಶರ್ಮಾ ಹಾಗೂ ಸೆಮಿ ಆಘಾತವನ್ನು ನೀಡಿದ್ರು. ಬರ್ನ್ಸ್‌ ಹಾಗೂ ಸಿಬ್ಲಿ ಸೊನ್ನೆಗೆ ಔಟಾದ್ರೆ, ನಂತರ ಬಂದ ಹಸೀಬ್‌ ಹಮೀದ್‌ ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. ಅಲ್ಲದೇ ಜಾನಿ ಬ್ರೆಸ್ಟೋ ಕೇವಲ 2 ರನ್‌ ಗೆ ಔಟಾದ್ರು. ಜೋ ರೂಟ್‌ ಒಂದಿಷ್ಟು ಹೊತ್ತು ಕ್ರೀಸ್‌ನಲ್ಲಿ ದ್ದರೂ ಕೂಡ ದೊಡ್ಡ ಮೊತ್ತವನ್ನು ಏರಿಸುವಲ್ಲಿ ವಿಫಲರಾದ್ರು. ನಂತರ ಮೊಹಮ್ಮದ್‌ ಸಿರಾಜ್‌ ಆಕ್ರಮಣಕಾರಿ ಬೌಲಿಂಗ್‌ ಮುಂದೆ ಇಂಗ್ಲೆಂಡ್‌ ತಂಡ ಸಂಪೂರ್ಣವಾಗಿ ಮಂಡಿಯೂರಿತು. ಅಂತಿಮವಾಗಿ 120ರನ್‌ಗಳಿಗೆ ಇಂಗ್ಲೆಂಡ್‌ ಸರ್ವಪತನ ಕಂಡಿದೆ. ಈ ಮೂಲಕ ಭಾರತ 151ರನ್‌ ಗೆಲುವು ಕಂಡಿದೆ.

ಸಂಕ್ಷಿಪ್ತ ಸ್ಕೋರ್‌ :
ಮೊದಲ ಇನ್ನಿಂಗ್ಸ್‌ : ಭಾರತ :
ಕೆ.ಎಲ್.‌ ರಾಹುಲ್‌ 129 , ರೋಹಿತ್‌ ಶರ್ಮಾ 83, ವಿರಾಟ್‌ ಕೊಯ್ಲಿ42, ರವೀಂದ್ರ ಜಡೇಜಾ 40, ರಿಷಬ್‌ ಪಂತ್‌ 37, ಜಮ್ಮಿ ಅಂಡರ್‌ಸನ್‌ 62/5, ರಾಬಿನ್‌ ಸನ್‌ 73/2, ಮಾರ್ಕ್‌ವುಡ್‌ 91/2, ಮೊಯಿನ್‌ ಆಲಿ 53/1.

ಇಂಗ್ಲೆಂಡ್‌ : ಜೋ ರೂಟ್‌ 180, ಜಾನಿ ಬ್ರೆಸ್ಟೋ 57, ಬರ್ನ್ಸ್‌ 49, ಮೊಯಿನ್‌ ಆಲಿ 27, ಜೋಸ್‌ ಬಟ್ಲರ್‌ 23, ಮೊಹಮ್ಮದ್‌ ಸಿರಾಜ್‌ 94/4, ಇಶಾಂತ್‌ ಶರ್ಮಾ 69/3, ಮೊಹಮ್ಮದ್‌ ಸೆಮಿ 95/2

ಎರಡನೇ ಇನ್ನಿಂಗ್ಸ್‌ : ಭಾರತ : ಅಜಿಂಕ್ಯಾ ರಹಾನೆ 61, ಮೊಹಮ್ಮದ್‌ ಸೆಮಿ 56, ಚೇತೇಶ್ವರ ಪೂಜಾರ 45, ಜಸ್ಪ್ರಿತ್‌ ಬೂಮ್ರಾ 34, ರೋಹಿತ್‌ ಶರ್ಮಾ 21, ವಿರಾಟ್‌ ಕೊಯ್ಲಿ20, ಮಾರ್ಕ್‌ವುಡ್‌ 51/3, ರಾಬಿನ್‌ಸನ್‌ 45/2, ಮೊಯಿನ್‌ ಆಲಿ 84/2, ಸ್ಯಾಮ್‌ ಕರನ್‌ 42/1

ಇಂಗ್ಲೆಂಡ್‌ : ಜೋರೂಟ್‌ 33, ಜೋಸ್‌ ಬಟ್ಲರ್‌ 25, ಮೊಯಿನ್‌ ಆಲಿ 13, ಮೊಹಮ್ಮದ್‌ ಸಿರಾಜ್‌ 32/4, ಜಸ್ಪ್ರಿತ್‌ ಬೂಮ್ರಾ 33/3, ಇಶಾಂತ್‌ ಶರ್ಮಾ 13/2, ಮೊಹಮ್ಮದ್‌ ಸೆಮಿ 13/1

ಇದನ್ನೂ ಓದಿ : Rahul Lord’s Record : ಲಾರ್ಡ್ಸ್‌ ಅಂಗಳದಲ್ಲಿ ಕನ್ನಡಿಗನ ಪರಾಕ್ರಮ : ಐತಿಹಾಸಿಕ ದಾಖಲೆ ಬರೆದ ಕೆ.ಎಲ್.ರಾಹುಲ್‌

ಇದನ್ನೂ ಓದಿ : KL Rahul : ಕೆ.ಎಲ್.ರಾಹುಲ್‌ ಭರ್ಜರಿ ಶತಕ : ಬೃಹತ್‌ ಮೊತ್ತದತ್ತ ಟೀಂ ಇಂಡಿಯಾ

ಇದನ್ನೂ ಓದಿ : IND vs ENG : ಟೀಂ ಇಂಡಿಯಾಕ್ಕೆ ಡಬ್ಬಲ್‌ ಆಘಾತ : ಕೆ.ಎಲ್.ರಾಹುಲ್‌, ಅಜ್ಯಂಕೆ ರಹಾನೆ ಔಟ್‌

ಇದನ್ನೂ ಓದಿ : Afghanistan Crisis : ಸಂಕಷ್ಟದಲ್ಲೇ ಟಿ 20 ವಿಶ್ವಕಪ್ ಗೆ ಸಿದ್ದವಾಗ್ತಿದೆ ಅಪ್ಘಾನಿಸ್ತಾನ್‌ ಕ್ರಿಕೆಟ್‌ ತಂಡ

Comments are closed.