ಇಂಗ್ಲೆಂಡ್ ವಿರುದ್ದ ಏಕದಿನ ಸರಣಿ ಗೆದ್ದ ಭಾರತ : ಟೀಂ ಇಂಡಿಯಾಕ್ಕೆ 7 ರನ್ ರೋಚಕ ಗೆಲುವು

ಪುಣೆ : ಇಂಗ್ಲೆಂಡ್ ವಿರುದ್ದದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಟೀಂ ಇಂಡಿಯಾ ತನ್ನ ಕೈವಶ ಮಾಡಿಕೊಂಡಿದೆ. ಭುವನೇಶ್ವರ್ ಕುಮಾರ್ ಹಾಗೂ ಶಾರ್ದೂಲ್ ಠಾಕೂರ್ ಮಾರಕ ದಾಳಿಯ ನೆರವಿನಿಂದ ಭಾರತ 7 ರನ್ ಗಳ ರೋಚಕ ಗೆಲುವು ದಾಖಲಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡಕ್ಕೆ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಭರ್ಜರಿ ಆರಂಭವೊದಗಿಸಿದ್ರು. 37 ಎಸೆತಗಳಲ್ಲಿ 37 ರನ್ ಗಳಿಸಿದ್ದ ರೋಹಿತ್ ಶರ್ಮಾ ಆದಿಲ್ ರಶೀದ್ ಗೆ ವಿಕೆಟ್ ಒಪ್ಪಿಸಿದ್ರೆ, ನಂತರ ಕ್ರೀಸ್ ಗೆ ಬಂದ ನಾಯಕ ವಿರಾಟ್ ಕೊಯ್ಲಿ ಕೇವಲ ರನ್ ಗಳಿಸಿ ನಿರಾಸೆ ಅನುಭವಿಸಿದ್ರು.ಶಿಖರ್ ಧವನ್ 67 ರನ್ ಗಳಿಸಿ ಔಟಾದ್ರು. ಕಳೆದೆರಡು ಪಂದ್ಯಗಳ ಹಿರೋ ಕನ್ನಡಿಗ ರಾಹುಲ್ 7ನ್ ಗಳಿಸಿದ್ದಾಗ ಕೆಟ್ಟ ಹೊಡೆತಕ್ಕೆ ವಿಕೆಟ್ ಒಪ್ಪಿಸಿದ್ರು.

ಸಂಕಷ್ಟದ ಸ್ಥಿತಿಯಲ್ಲಿದ್ದ ಟೀಂ ಇಂಡಿಯಾಕ್ಕೆ ಪಂತ್ ಹಾಗೂ ಹಾರ್ದಿಕ್ ಪಾಂಡ್ಯ ಉತ್ತಮ ಜೊತೆಯಾಟ ನೀಡಿದ್ರು, ಪಂತ್ 78 ರನ್ ಗಳಿಸಿದ್ರೆ, ಹಾರ್ದಿಕ್ ಪಾಂಡ್ಯ 68 ರನ್ ಸಿಡಿದಿದ್ದಾರೆ. ನಂತರ ನಿಧಾನ ಗತಿಯ ಆಟಕ್ಕೆ ಮನ ಮಾಡಿದ ಕೃನಾಲ್ ಪಾಂಡ್ಯ 25, ಶಾರ್ದೂಲ್ ಠಾಕೂರ್ 30 ರನ್ ನೆರವಿನಿಂದ ಭಾರತ ತಂಡ 48.2 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಬರೋಬ್ಬರಿ 329 ರನ್ ಗಳಿಸಿತು.

ಬೃಹತ್ ಮೊತ್ತವನ್ನು ಬೆನ್ನತ್ತಲು ಹೊರಟ ಇಂಗ್ಲೆಂಡ್ ತಂಡಕ್ಕೆ ಭುವನೇಶ್ವರ್ ಕುಮಾರ್ ಆರಂಭಿಕ ಆಘಾತ ನೀಡಿದ್ದಾರೆ. ಜಾನಿ ಬ್ರೆಸ್ಟೋ 1 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ರೆ, ಜೆಸನ್ ರಾಯ್ 14 ರನ್ ಗಳಿಸಲಷ್ಟೆ ಶಕ್ತರಾದರು. ಬೆನ್ ಸ್ಟೋಕ್ ಹಾಗೂ ಡೇವಿಡ್ ಮಲನ್ ಇಂಗ್ಲೆಂಡ್ ತಂಡಕ್ಕೆ ನೆರವಾದ್ರು 35 ರನ್ ಗಳಿಸಿದ್ದ ಬೆನ್ ಸ್ಟೋಕ್ ಗೆ ನಟರಾಜನ್ ಪೆವಿಲಿಯನ್ ಹಾದಿ ತೋರಿಸಿದ್ರು. ನಂತರದಲ್ಲಿ ಶಾರ್ದೂಲ್ ಠಾಕೂರ್ ಇಂಗ್ಲೆಂಡ್ ತಂಡವನ್ನು ಇನ್ನಿಲ್ಲದಂತೆ ಕಾಡಿದ್ದಾರೆ. ಡೇವಿಡ್ ಮಲನ್ 50 ರನ್ ಗಳಿಸಿದ್ರೆ, ಜಾಸ್ ಬಟ್ಲರ್ 15, ಮೋಯಿನ್ ಆಲಿ 29, ಲೈಮ್ ಲಿವ್ವಿಂಗ್ ಸ್ಟೋನ್ 36 ರನ್ ಗಳಿಸಿ ಠಾಕೂರ್ ಗೆ ವಿಕೆಟ್ ಒಪ್ಪಿಸಿದ್ರು.

ಆದ್ರೆ ಕೆಚ್ಚೆದೆಯ ಬ್ಯಾಟಿಂಗ್ ನಡೆಸಿದ ಸ್ಯಾಮ್ ಕರನ್ 95 ರನ್ ಗಳಿಸಿದ್ರೆ ಇನ್ನೊಂದೆಡೆ ಎಲ್ಲಾ ಆಟಗಾರರು ವಿಕೆಟ್ ಒಪ್ಪಿಸುತ್ತಲೇ ಸಾಗಿದ್ದರು. ಶಾರ್ದೂಲ್ ಠಾಕೂರ್ 4 ವಿಕೆಟ್ ಪಡೆದ್ರೆ ಭುವನೇಶ್ವರ್ ಕುಮಾರ್ 3 ವಿಕೆಟ್ ಪಡೆಯುವ ಮೂಲಕ ಭಾರತಕ್ಕೆ ರೋಚಕ ಗೆಲುವು ತಂದಿಟ್ಟರು. ಅಂತಿಮವಾಗಿ ಇಂಗ್ಲೆಂಡ್ ತಂಡ 50 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು ಕೇವಲ 322 ರನ್ ಗಳಿಸಲಷ್ಟೇ ಶಕ್ತವಾಯಿತು.

ಸಂಕ್ಷಿಪ್ತ ಸ್ಕೋರ್ :
ಭಾರತ : ಪಂತ್ 78, ಶಿಖರ್ ಧವನ್, 67, ಹಾರ್ದಿಕ್ ಪಾಂಡ್ಯ 68, ರೋಹಿತ್ ಶರ್ಮಾ 37. ಶಾರ್ದೂಲ್ ಠಾಕೂರ್ 30, ಕೃನಾಲ್ ಪಾಂಡ್ಯ 25. ಮಾರ್ಕ್ ವುಡ್ 3/34, ಆದಿಲ್ ರಶೀದ್ 2/81. ಸ್ಯಾಮ್ ಕರನ್ 1/43. ಆರ್. ಟಾಪ್ಲಿ 1/66, ಸ್ಟೋಕ್ 1/45, ಮೋಯಿನ್ 1/39, ಲಿವ್ವಿಂಗ್ ಸ್ಟೋನ್ 1/20.

ಇಂಗ್ಲೆಂಡ್ : ಸ್ಯಾಮ್ ಕರನ್ 95, ಡೇವಿಡ್ ಮಲನ್ 50, ಲೈಮ್ ಲಿವ್ವಿಂಗ್ ಸ್ಟೋನ್ 36, ಬೆನ್ ಸ್ಟೋಕ್ 35, ಮೋಯಿನ್ ಆಲಿ 29, ಆದಿಲ್ ರಶೀದ್ 19, ಜಾಸ್ ಬಟ್ಲರ್ 15, ಮಾರ್ಕ್ ವುಡ್ 14, ಜಾಸನ್ ರಾಯ್ 14. ಶಾರ್ದೂಲ್ ಠಾಕೂರ್ 4/67, ಭುವನೇಶ್ವರ್ ಕುಮಾರ್ 3/42. ನಟರಾಜನ್ 1/73.

Comments are closed.