ಎಂಆರ್ ಪಿಗಿಂತ ಹೆಚ್ಚು ಹಣ ಪಡೆದ್ರೆ ಹುಷಾರ್ !!! ಐಸ್ ಕ್ರೀಂ ಕೊಟ್ಟು 10 ರೂ. ಹೆಚ್ಚು ಪಡೆದ ವ್ಯಾಪಾರಿಗೆ ಬಿತ್ತು 2 ಲಕ್ಷ ದಂಡ

0

ಮುಂಬೈ: ಸಾಮಾನ್ಯವಾಗಿ ನಿತ್ಯ ಬಳಕೆಯ ಆಹಾರ ಪದಾರ್ಥ, ಕುಡಿಯುವ ನೀರು, ಪ್ಯಾಕೆಟ್ ತಿಂಡಿ ಸೇರಿದಂತೆ ಹಲವು ವಸ್ತುಗಳ ಮೇಲೆ ಎಂಆರ್ ಪಿಗಿಂತ ಹೆಚ್ಚುವರಿ ಹಣ ಪಡೆಯೋದು ಮಾಮೂಲು. ಆದರೆ ಇಲ್ಲೊಬ್ಬ ವ್ಯಾಪಾರಿ ಐಸ್ ಕ್ರೀಂ ಅನ್ನು 10 ರೂಪಾಯಿ ಹೆಚ್ಚುವರಿಯಾಗಿ ಮಾರಾಟ ಮಾಡಿದ್ದಕೆ ಇದೀಗ 2 ಲಕ್ಷ ರೂಪಾಯಿ ದಂಡ ಕಟ್ಟಬೇಕಾಗಿದೆ.

ಹೌದು, ಮುಂಬೈನಲ್ಲಿರುವ ಶಗುನ್ ವೆಜ್ ರೆಸ್ಟೋರೆಂಟ್ ಮಾಲೀಕನಿಗೆ ಗ್ರಾಹಕರ ಕೋರ್ಟ್ ಇದೀಗ ಬುದ್ದಿ ಕಲಿಸಿದೆ. ಪೊಲೀಸ್ ಸಬ್ ಇನ್ಸ್ಪೆಕ್ಟರ್ ಭಾಸ್ಕರ್ ಜಾಧವ್ ಅವರ ಕುಟುಂಬ ಸುಮಾರು 6 ವರ್ಷಗಳ ಹಿಂದೆ ಶುಗನ್ ವೆಜ್ ರೆಸ್ಟೋರೆಂಟ್ ಗೆ ಬಂದಿತ್ತು.

ಈ ವೇಳೆ ಯಲ್ಲಿ ರೆಸ್ಟೋರೆಂಟ್ ಮಾಲೀಕ 165 ರೂಪಾಯಿ ಐಸ್ ಕ್ರೀಮ್ ಅನ್ನು 175 ರೂಪಾಯಿಗೆ ಮಾರಾಟ ಮಾಡಿದ್ದ. ಇದನ್ನು ಪ್ರಶ್ನಿಸಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಭಾಸ್ಕರ್ ಇದನ್ನು ದಕ್ಷಿಣ ಮುಂಬೈ ಜಿಲ್ಲಾ ಗ್ರಾಹಕ ವೇದಿಕೆಗೆ ದೂರು ಸಲ್ಲಿಸಿದ್ದರು.

ಈ ಕುರಿತು ದೂರು ದಾಖಲಿಸಿಕೊಂಡು ವಿಚಾರಣೆ ನಡೆಸಿದ ನ್ಯಾಯಾಲಯ ರೆಸ್ಟೋರೆಂಟ್ ಮಾಲೀಕನಿಂದಲೂ ಹೇಳಿಕೆಯನ್ನು ಪಡೆದುಕೊಂಡಿತ್ತು. ಈ ವೇಳೆಯಲ್ಲಿ ರೆಸ್ಟೋರೆಂಟ್ ಮಾಲೀಕ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದ್ದ.

ಅಂಗಡಿ ಹಾಗೂ ರೆಸ್ಟೋರೆಂಟ್ ಗಳಿಗೆ ಸಾಕಷ್ಟು ವ್ಯತ್ಯಾಸವಿದೆ. ಐಸ್ ಕ್ರೀಮ್ ಸಂಗ್ರಹಿಸಲು ತಗಲುವ ವೆಚ್ಚ, ಗ್ರಾಹಕರಿಗೆ ಪೀಠೋಪಕರಣ, ಐಸ್ಕ್ರೀಮ್ಗೆ ಕಟ್ಲರಿ ಬಳಕೆ ಇವೆಲ್ಲವುಗಳಿಗೆ ಖರ್ಚಾಗುತ್ತದೆ. ಆದ್ದರಿಂದ ಹೆಚ್ಚುವರಿ ಹಣ ಪಡೆಯಲೇಬೇಕಾಗುತ್ತದೆ ಎಂದು ಹೇಳಿಕೆ ನೀಡಿದ್ದರು.

ಆದರೆ ರೆಸ್ಟೋರೆಂಟ್ ಮಾಲೀಕನ ಹೇಳಿಕೆಯನ್ನು ನ್ಯಾಯಾಧೀಶರು ಒಪ್ಪಿಗೆಯನ್ನು ಸೂಚಿಸಿಲ್ಲ. ಯಾವುದೇ ಕಾರಣಕ್ಕೂ ಎಂಆರ್ ಪಿ ದರಕ್ಕಿಂತೆ ಹೆಚ್ಚುವರಿ ಹಣವನ್ನು ಪಡೆಯುವಂತಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಸುಮಾರು 24 ವರ್ಷಗಳಿಂದಲೂ ರೆಸ್ಟೋರೆಂಟ್ ಮಾಲೀಕ ಹೆಚ್ಚುವರಿಯಾಗಿ ಹಣವನ್ನು ಪಡೆಯುತ್ತಲೇ ಬಂದಿದ್ದಾನೆ.

ಈ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದರು. ದೈನಂದಿನ ಗಳಿಕೆಯ ಆಧಾರದಲ್ಲಿ 40 ರಿಂದ 50 ಸಾವಿರ ರೂಪಾಯಿ ಆದಾಯ ಗಳಿಸುವ ಮೂಲಕ ಲಾಭದ ಹಾದಿ ಕಂಡುಕೊಂಡಿದೆ. ಅನ್ಯಾಯದ ವ್ಯಾಪಾರವನ್ನು ನಾವು ಒಪ್ಪುವುದಿಲ್ಲ ಈ ಹಿನ್ನೆಲೆಯಲ್ಲಿ 2 ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.

Leave A Reply

Your email address will not be published.