ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸೋಲಿನಲ್ಲಿ ಭಾರತಕ್ಕೆ ಮುಳುವಾಗಿದ್ದೇ ‘R’ ಫ್ಯಾಕ್ಟರ್ !

ಎಡ್ಜ್‌ಬಾಸ್ಟನ್ ಟೆಸ್ಟ್: ( factor reason for India’s Test defeat ) ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯವನ್ನು (India’s Test defeat against England) ಸೋಲುವ ಮೂಲಕ ಕ್ರಿಕೆಟ್ ಜನಕರ ನಾಡಿನಲ್ಲಿ 15 ವರ್ಷಗಳ ನಂತರ ಟೆಸ್ಟ್ ಸರಣಿ ಗೆಲ್ಲುವ ಅವಕಾಶವನ್ನು ಭಾರತ ಕೈಯಾರೆ ಹಾಳು ಮಾಡಿಕೊಂಡಿದೆ. ಎಡ್ಜ್’ಬಾಸ್ಟನ್ ಮೈದಾನದಲ್ಲಿ ಇಂಗ್ಲೆಂಡ್ ಗೆಲುವಿಗೆ 377 ರನ್’ಗಳ ದೊಡ್ಡ ಗುರಿ ನಿಗದಿ ಪಡಿಸಿದ್ರೂ ಪಂದ್ಯ ಗೆಲ್ಲುವಲ್ಲಿ ಭಾರತ ವಿಫಲವಾಯಿತು. ಜೋ ರೂಟ್ (ಅಜೇಯ 142) ಮತ್ತು ಜಾನಿ ಬೇರ್’ಸ್ಟೋ (ಅಜೇಯ 114) ಅಜೇಯ ಶತಕಗಳನ್ನು ಬಾರಿಸಿ ಇಂಗ್ಲೆಂಡ್’ಗೆ ಸ್ಮರಣೀಯ ಗೆಲುವು ತಂದುಕೊಟ್ಟರು.

5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ 4 ಪಂದ್ಯಗಳು ಮುಗಿದಾಗ ಭಾರತ 2-1ರಲ್ಲಿ ಮುನ್ನಡೆ ಸಾಧಿಸಿತ್ತು. ಕಳೆದ ವರ್ಷ ನಡೆದಿದ್ದ ಸರಣಿ ಮೊದಲ 4 ಪಂದ್ಯಗಳಲ್ಲಿ ಭಾರತ 2ರಲ್ಲಿ ಗೆದ್ದಿತ್ತು. ಒಂದು ಪಂದ್ಯವನ್ನು ಇಂಗ್ಲೆಂಡ್ ಗೆದ್ದಿದ್ರೆ, ಮತ್ತೊಂದು ಪಂದ್ಯ ಡ್ರಾಗೊಂಡಿತ್ತು. ಹೀಗಾಗಿ ಎಡ್ಜ್’ಬಾಸ್ಟನ್ ಮೈದಾನದಲ್ಲಿ ನಡೆದ 5ನೇ ಟೆಸ್ಟ್ ಪಂದ್ಯವನ್ನು ಕನಿಷ್ಠ ಡ್ರಾ ಮಾಡಿಕೊಂಡ್ರೂ ಭಾರತ ತಂಡ ಇಂಗ್ಲೆಂಡ್”ನಲ್ಲಿ 15 ವರ್ಷಗಳ ನಂತ್ರ ಟೆಸ್ಟ್ ಸರಣಿ ಗೆದ್ದ ಗೌರವಕ್ಕೆ ಪಾತ್ರವಾಗ್ತಾ ಇತ್ತು. ಆದರೆ ಅದು ಸಾಧ್ಯವಾಗ್ಲಿಲ್ಲ.

ಎಡ್ಜ್‌ಬಾಸ್ಟನ್ ಟೆಸ್ಟ್ ಪಂದ್ಯದಲ್ಲಿ ಭಾರತದ ಸೋಲಿಗೆ ಕಾರಣ R ಫ್ಯಾಕ್ಟರ್. ಆ R ಫ್ಯಾಕ್ಟರ್ ಇದ್ದಿದ್ದರೆ ಭಾರತ ಖಂಡಿತಾ ಸೋಲುತ್ತಿರಲಿಲ್ಲ. R ಫ್ಯಾಕ್ಟರ್ ಅಂದ್ರೆ Rahul ಮತ್ತು Rohit. 5ನೇ ಟೆಸ್ಟ್ ಪಂದ್ಯಕ್ಕೆ ಈ ಇಬ್ಬರು ಅನುಭವಿ ಆರಂಭಿಕ ಆಟಗಾರರು ಅಲಭ್ಯರಾಗಿದ್ದರು. ರಾಹುಲ್ ತೊಡೆಸಂಧು ಗಾಯದ ಕಾರಣ ಸರಣಿಯಿಂದ ಹೊರ ಬಿದ್ದಿದ್ರೆ, ರೋಹಿತ್ ಶರ್ಮಾ ಕೋವಿಡ್ ಕಾರಣದಿಂದ ಟೆಸ್ಟ್ ಪಂದ್ಯವನ್ನು ತಪ್ಪಿಸಿಕೊಂಡಿದ್ರು.

ಕಳೆದ ವರ್ಷ ನಡೆದ ಮೊದಲ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಎರಡನ್ನು ಭಾರತ ಗೆದ್ದಿದ್ದೇ R ಫ್ಯಾಕ್ಟರ್’ನಿಂದ. ಅಂದ್ರೆ ರಾಹುಲ್ ಮತ್ತು ರೋಹಿತ್ ಸಾಹಸದಿಂದ. ಕ್ರಿಕೆಟ್ ಕಾಶಿ ಲಾರ್ಡ್ಸ್”ನಲ್ಲಿ ನಡೆದಿದ್ದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಕೆ.ಎಲ್ ರಾಹುಲ್ ಪ್ರಥಮ ಇನ್ನಿಂಗ್ಸ್’ನಲ್ಲಿ ಅಮೋಘ ಶತಕ (129 ರನ್) ಬಾರಿಸಿ ಭಾರತದ ಗೆಲುವಿನ ರೂವಾರಿಯಾಗಿದ್ರು.

4ನೇ ಟೆಸ್ಟ್ ಪಂದ್ಯದ ದ್ವಿತೀಯ ಇನ್ನಿಂಗ್ಸ್’ನಲ್ಲಿ ರೋಹಿತ್ ಶರ್ಮಾ ಶತಕ ಬಾರಿಸಿ (127 ರನ್) ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ವಿಶೇಷ ಏನಂದ್ರೆ ಭಾರತ ಗೆದ್ದಿದ್ದ ಆ ಎರಡೂ ಪಂದ್ಯಗಳಲ್ಲಿ “ಮ್ಯಾನ್ ಆಫ್ ದಿ ಮ್ಯಾಚ್” ಆಗಿದ್ದದ್ದು ರಾಹುಲ್ ಮತ್ತು ರೋಹಿತ್. ಆದರೆ 5ನೇ ಟೆಸ್ಟ್ ಪಂದ್ಯಕ್ಕೆ ಅನುಭವಿ ಓಪನರ್’ಗಳು ಅಲಭ್ಯರಾಗಿದ್ದು ಭಾರತಕ್ಕೆ ದೊಡ್ಡ ಹೊಡೆತ ನೀಡಿತು. ಇನ್ನಿಂಗ್ಸ್ ಆರಂಭಿಸಿದ ಚೇತೇಶ್ವರ್ ಪೂಜಾರ ಮತ್ತು ಶುಭಮನ್ ಗಿಲ್ ಜೋಡಿ ಟೀಮ್ ಇಂಡಿಯಾಗೆ ಭದ್ರ ಅಡಿಪಾಯ ಹಾಕಿಕೊಡುವಲ್ಲಿ ವಿಫಲವಾಗಿದ್ದೇ ಭಾರತಕ್ಕೆ ಮುಳುವಾಯ್ತು.

ಇದನ್ನೂ ಓದಿ : Racist Abuse : ಎಡ್ಜ್‌ಬಾಸ್ಟನ್ ಟೆಸ್ಟ್ ಪಂದ್ಯದಲ್ಲಿ ಭಾರತೀಯರಿಗೆ ಇಂಗ್ಲೀಷರಿಂದ ಜನಾಂಗೀಯ ನಿಂದನೆ !

ಇದನ್ನೂ ಓದಿ : Reason behind India’s lost : ಎಡ್ಜ್‌ಬಾಸ್ಟನ್ ಟೆಸ್ಟ್: ಇಂಗ್ಲೆಂಡ್ ವಿರುದ್ಧ ಭಾರತದ ಸೋಲಿಗೆ ಈತನೇ ಕಾರಣ

The ‘R’ factor was the reason for India’s Test defeat against England

Comments are closed.