ವಿಶ್ವಕಪ್ 2023 (world Cup 2023) ರಲ್ಲಿ ಇದುವರೆಗೂ ಸೋಲನ್ನೇ ಕಾಣದ ಭಾರತ (Team india) ಇದೀಗ ಮಾಜಿ ಚಾಂಪಿಯನ್ ಇಂಗ್ಲೆಂಡ್ ತಂಡದ (England Cricket Team) ವಿರುದ್ದ ಭರ್ಜರಿ 100 ರನ್‌ಗಳ ಗೆಲುವು ದಾಖಲಿಸಿದೆ. ಮೊಹಮ್ಮದ್ ಸೆಮಿ, ಜಸ್ಪ್ರಿತ್ ಬೂಮ್ರಾ ದಾಳಿಗೆ ತತ್ತರಿಸಿ ಇಂಗ್ಲೆಂಡ್ ಹೀನಾಯ ಸೋಲು ಕಂಡಿದೆ. ಈ ಮೂಲಕ ಭಾರತ ವಿಶ್ವಕಪ್ ಅಂಕಪಟ್ಟಿಯಲ್ಲಿ(World Cup points Table 2023) ಅಗ್ರಸ್ಥಾನಕ್ಕೇರಿದೆ.

ಲಕ್ನೋದ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಏಕನಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಕ್ರಿಕೆಟ್ ತಂಡ ಶುಭಮನ್ ಗಿಲ್ ಕೇವಲ 9 ರನ್‌ಗಳಿಗೆ ಔಟಾಗುವ ಮೂಲಕ ನಿರಾಸೆ ಅನುಭವಿಸಿದ್ರು. ಒಂದನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ವಿರಾಟ್ ಕೊಹ್ಲಿ ಶೂನ್ಯಕ್ಕೆ ಔಟಾಗುವ ಮೂಲಕ ಭಾರತವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರು.
ಇದನ್ನೂ ಓದಿ : ವಿಶ್ವಕಪ್‌ನಲ್ಲಿ ಇತಿಹಾಸ ಸೃಷ್ಟಿಸಿದ ರಚಿನ್ ರವೀಂದ್ರ : ಸಚಿನ್ ದಾಖಲೆ ಸರಿಗಟ್ಟಿದ ಬೆಂಗಳೂರಿನ ಹುಡುಗ
ಸತತ ಎರಡು ವಿಕೆಟ್ ಉರುಳುತ್ತಲೇ ಬ್ಯಾಟಿಂಗ್‌ಗೆ ಇಳಿದ ಶ್ರೇಯಸ್ ಅಯ್ಯರ್ ಕೂಡ 4 ರನ್ ಗಳಿಗೆ ವಿಕೆಟ್ ಒಪ್ಪಿಸಿದ್ದಾರೆ. ಭಾರತ ತಂಡ 40 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಸಂದರ್ಭದಲ್ಲಿಯೇ ಬ್ಯಾಟಿಂಗ್‌ಗೆ ಇಳಿದ ಕನ್ನಡಿಗ ಕೆಎಲ್.ರಾಹುಲ್ ಹಾಗೂ ರೋಹಿತ್ ಶರ್ಮಾ 80 ರನ್‌ಗಳ ಜೊತೆಯಾದ ನೀಡಿದ್ದಾರೆ

.
ರಾಹುಲ್ 39 ರನ್ ಗಳಿಸಿ ಔಟಾಗುತ್ತಿದ್ದಂತೆಯೇ ಕ್ರೀಸ್‌ಗೆ ಬಂದ ಸೂರ್ಯಕುಮಾರ್ ಯಾದವ್ 37 ಎಸೆತಗಳಲ್ಲಿ 49 ರನ್ ಬಾರಿಸಿದ್ದಾರೆ. ರೋಹಿತ್ ಶರ್ಮಾ 101 ಎಸೆತಗಳಲ್ಲಿ 87ರನ್ ಸಿಡಿಸುವ ಮೂಲಕ ಭಾರತ ತಂಡದ ಮೊತ್ತ 200ರನ್ ಗಡಿ ದಾಟಿಸಿದ್ರು. ಬೂಮ್ರಾ ಅಂತಿಮ ಹಂತದಲ್ಲಿ 16 ರನ್ ಬಾರಿಸಿದ್ದಾರೆ.
ಅಂತಿಮವಾಗಿ ಭಾರತ ತಂಡ 50 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 229 ರನ್ ಬಾರಿಸಿದೆ. ಇಂಗ್ಲೆಂಡ್ ತಂಡದ ಪರ ಡೇವಿಡ್ ವೆಲ್ಲಿ 3, ಕ್ರಿಸ್ ವೋಕ್ಸ್ ಮತ್ತು ಆದೀಲ್ ರಶೀದ್ ತಲಾ ತಲ ಎರಡು ವಿಕೆಟ್ ಪಡದುಕೊಂಡಿದ್ದಾರೆ. ನಂತರ ಭಾರತ ನೀಡಿದ್ದ ಮೊತ್ತವನ್ನು ಬೆನ್ನತ್ತಲು ಹೊರಟ ಇಂಗ್ಲೆಂಡ್ ತಂಡಕ್ಕೆ ಜಾನಿ ಬ್ರೆಸ್ಟೋ ಹಾಗೂ ಡೇವಿಡ್ ಮಲನ್ ಉತ್ತಮ ಆರಂಭದ ನಿರೀಕ್ಷೆ ಮೂಡಿಸಿದ್ದರು.
ಇದನ್ನೂ ಓದಿ : 2 ಎಸೆತ 21 ರನ್ ! ವಿಶ್ವಕಪ್‌ನಲ್ಲಿ ವಿಶ್ವದಾಖಲೆ ಬರೆದ ಟ್ರಾವೆಸ್ ಹೆಡ್
ಆದರೆ ಮೊಹಮ್ಮದ ಶೆಮಿ ಹಾಗೂ ಜಸ್ಪ್ರೀತ್ ಬೂಮ್ರಾ ಆಘಾತವನ್ನು ನೀಡಿದ್ರು. 16 ರನ್ ಗಳಿಸಿ ಆಡುತ್ತಿದ್ದ ಡೇವಿಡ್ ಮಲನ್ ಅವರನ್ನು ಬೂಮ್ರಾ ಬಲಿ ಪಡೆದ್ರು. ನಂತರ ಕ್ರೀಸ್‌ಗೆ ಜೋ ರೂಟ್ ಎದುರಿಸಿದ ಮೊದಲ ಎಸೆತದಲ್ಲಿಯೂ ಬೂಮ್ರಾ ಅವರ ಎಲ್‌ಬಿಡಬ್ಲ್ಯೂ ಬಲೆಗೆ ಬಿದಿದ್ದಾರೆ. ಬೂಮ್ರಾ ಬೆನ್ನಲ್ಲೆ ಶೆಮಿ ಕೂಡ ಆರ್ಭಟಿಸಿದ್ದಾರೆ. ಬೆನ್‌ಸ್ಟೋಕ್ಸ್ ಅವರನ್ನು ಶೂನ್ಯಕ್ಕೆ ಔಟ್ ಮಾಡಿದ್ರು.

ಇನ್ನೊಂದೆಡೆಯಲ್ಲಿ ಉತ್ತಮವಾಗಿ ಆಡುತ್ತಿದ್ದ ಜಾನಿಬ್ರೆಸ್ಟೋ ಅವರನ್ನು ಬೌಲ್ಡ್ ಮಾಡಿ ಶಮಿ ಇಂಗ್ಲೆಂಡ್ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದ್ರು. ಕೇವಲ 9 ರನ್‌ಗಳ ಅಂತರದಲ್ಲಿ ಇಂಗ್ಲೆಂಡ್ ತಂಡ 3 ವಿಕೆಟ್ ಕಳೆದುಕೊಂಡಿತ್ತು. ಶೆಮಿ, ಬೂಮ್ರಾ ಬೆನ್ನಲ್ಲೇ ಕುಲದೀಪ್ ಯಾದವ್ ಇಂಗ್ಲೆಂಡ್ ತಂಡಕ್ಕೆ ಸಂಕಷ್ಟ ವನ್ನು ತಂದೊಡ್ಡಿದ್ದರು.
ಇದನ್ನೂ ಓದಿ : ಭಾರತ ಕ್ರಿಕೆಟ್ ತಂಡಕ್ಕೆ ಹೊಸ ಕೋಚ್ ? ವಿಶ್ವಕಪ್ ಫಲಿತಾಂಶದ ಮೇಲೆ ಬಿಸಿಸಿಐ ನಿರ್ಧರಿಸುತ್ತೆ ರಾಹುಲ್ ದ್ರಾವಿಡ್ ಭವಿಷ್ಯ
ನಾಯಕ ಜೋಸ್ ಬಟ್ಲರ್ ಅವರನ್ನು ಕೇವಲ 10 ರನ್ ಗಳಿಗೆ ಕುಲದೀಪ್ ಯಾದವ್ ಬಲಿ ಪಡೆದಿದ್ದಾರೆ. ಮೋಯಿನ್ ಆಲಿ 15, ಲಿವಿಂಗ್‌ಸ್ಟೋನ್ 27, ಕ್ರಿಸ್ ವೋಕ್ಸ್ 10, ಡೇವಿಡ್ ವಿಲ್ಲಿ 16, ಆದಿಲ್ ರಶೀಲ್ 12ರನ್ ಗಳಿಸಿದ್ರು. ಭಾರತ ಪರ ಮೊಹಮ್ಮದ್ ಸೆಮಿ 4 ವಿಕೆಟ್ ಪಡೆದ್ರೆ, ಜಸ್ಪ್ರಿತ್ ಬೂಮ್ರಾ 3, ಕುಲದೀಪ್ ಯಾದವ್ 2 ಹಾಗೂ ರವೀಂದ್ರ ಜಡೇಜಾ 1 ವಿಕೆಟ್ ಪಡೆದುಕೊಂಡಿದ್ದಾರೆ.

ವಿಶ್ವಕಪ್ ಅಂಕಪಟ್ಟಿಯಲ್ಲಿ ಭಾರತಕ್ಕೆ ಅಗ್ರಸ್ಥಾನ
ಈ ಬಾರಿಯ ವಿಶ್ವಕಪ್‌ನಲ್ಲಿ ಭಾರತ ತಂಡ ಉತ್ತಮ ಆಟದ ಪ್ರದರ್ಶನ ನೀಡುತ್ತಿದೆ. ಭಾರತ ತಂಡ ಆಡಿದ ಎಲ್ಲಾ 6 ಪಂದ್ಯಗಳನ್ನು ಜಯಿಸುವ ಮೂಲಕ ಒಟ್ಟು 12ಅಂಕಗಳನ್ನು ಪಡೆದಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಇನ್ನು ದಕ್ಷಿಣ ಆಫ್ರಿಕಾ ತಂಡ ಒಟ್ಟು ೬ ಪಂದ್ಯಗಳ ಪೈಕಿ 5ಪಂದ್ಯಗಳನ್ನು ಜಯಿಸುವ ಮೂಲಕ 10ಅಂಕಗಳೊಂದಿಗೆ 2 ನೇ ಸ್ಥಾನದಲ್ಲಿದೆ.
ಕಳೆದ ಬಾರಿಯ ರನ್ನರ್ ಅಪ್ ತಂಡ ನ್ಯೂಜಿಲೆಂಡ್ 6 ಪಂದ್ಯಗಳನ್ನು ಆಡಿದ್ದು, 4 ಗೆಲುವು ದಾಖಲಿಸುವ ಮೂಲಕ 8 ಅಂಕಗಳೊಂದಿಗೆ 2 ನೇ ಸ್ಥಾನದಲ್ಲಿದ್ರೆ, ಆಸ್ಟ್ರೇಲಿಯಾ ತಂಡ 6 ಪಂದ್ಯಗಳಲ್ಲಿ 4ಗೆಲುವಿನೊಂದಿಗೆ 8ಅಂಕ ಪಡೆದುಕೊಂಡಿದ್ದು, ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಇನ್ನು ಕಳೆದ ಬಾರಿಯ ಚಾಂಪಿಯನ್ ತಂಡ ಇಂಗ್ಲೆಂಡ್ ಆಡಿದ 6 ಪಂದ್ಯಗಳ ಪೈಕಿ 5 ಪಂದ್ಯಗಳಲ್ಲಿ ಸೋಲನ್ನು ಕಾಣುವ ಮೂಲಕ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
Unbeaten for India 6th win in a row, india first and Champion England is last in the World Cup Points Table