ಭಾನುವಾರ, ಏಪ್ರಿಲ್ 27, 2025
HomeSportsCricketKohli Vs Rayudu: ವಿರಾಟ್ ಕೊಹ್ಲಿ ಮೇಲೆ ಅಂಬಾಟಿ ರಾಯುಡುಗೇಕೆ ಈ ಪರಿ ಕೋಪ ?...

Kohli Vs Rayudu: ವಿರಾಟ್ ಕೊಹ್ಲಿ ಮೇಲೆ ಅಂಬಾಟಿ ರಾಯುಡುಗೇಕೆ ಈ ಪರಿ ಕೋಪ ? ಇಲ್ಲಿದೆ ಅಸಲಿ ಸತ್ಯ !

- Advertisement -

Virat Kholi vs Ambati Rayudu : ಇವನಿಗೆ ಅವತ್ತು ಹರ್ಭಜನ್ ಸಿಂಗ್ ಕಪಾಳಕ್ಕೆ ನಾಲ್ಕು ಬಿಗಿದಿದ್ದರೆ ಸರಿಯಿರುತ್ತಿತ್ತು, ಶ್ರೀಶಾಂತನಿಗೆ ಕಪಾಳಮೋಕ್ಷ ಮಾಡಿದ ಹಾಗೆ.. ದಾರಿಗೆ ಬರುತ್ತಿದ್ದ. ಒಬ್ಬ ಒಳ್ಳೆಯ ಕ್ರೀಡಾಪಟುವೊಬ್ಬ ತನ್ನ ಕೋಪ, ಹತಾಶೆ, ಮನಸ್ಸಿನೊಳಗಿನ ಮತ್ಸರವನ್ನು ನಿಯಂತ್ರಣದಲ್ಲಿ  ಇಟ್ಟುಕೊಳ್ಳದಿದ್ದರೆ ಆತ ಅಂಬಾಟಿ ರಾಯುಡು (Ambati Rayudu) ಆಗುತ್ತಾನೆ.

Virat Kholi
Image Credit to Original Source

ಇನ್ನೂ 19 ವರ್ಷಕ್ಕೆ ಕಾಲಿಡುವ ಮುನ್ನವೇ U-19 ಏಕದಿನ ಪಂದ್ಯವೊಂದರಲ್ಲಿ ದ್ವಿಶತಕ ಬಾರಿಸಿದ್ದ ಪ್ರತಿಭಾವಂತ. ಆಗ ಸಚಿನ್ ತೆಂಡೂಲ್ಕರ್ ಕೂಡ one day cricketನಲ್ಲಿ ಡಬಲ್ ಸೆಂಚುರಿ ಬಾರಿಸಿರಲಿಲ್ಲ. Quality ಬ್ಯಾಟ್ಸ್’ಮನ್. ಜ್ಯೂನಿಯರ್ ಕ್ರಿಕೆಟ್’ನಲ್ಲಿ ಈತನ ಆಟವನ್ನು ನೋಡಿ ಈತ next ಸಚಿನ್ ತೆಂಡೂಲ್ಕರ್ ಎಂದು ಕರೆದಿದ್ದರು. ತನ್ನೊಳಗೆ ಅಂತಹ ಆಟವನ್ನು ಇಟ್ಟಿದ್ದ ಅಂಬಾತಿ.

ಚೆನ್ನೈ ಸೂಪರ್ ಕಿಂಗ್ಸ್ ತಂಡ 2023ರಲ್ಲಿ ಐಪಿಎಲ್ ಚಾಂಪಿಯನ್ ಆಗಲು ಕಾರಣನಾಗಿದ್ದ ಅಂಬಾಟಿ ರಾಯುಡು, ಈ ಬಾರಿ ವಿರಾಟ್ ಕೊಹ್ಲಿ ಮೇಲಿನ ತನ್ನ ಅಸೂಯೆಯ ಕಾರಣಕ್ಕಾಗಿ ಸುದ್ದಿಯಾಗಿದ್ದಾನೆ. ‘’Aggression, celebrationಗಳಿಂದ ದೊಡ್ಡ ದೊಡ್ಡ ಟೂರ್ನಮೆಂಟ್’ಗಳನ್ನು ಗೆಲ್ಲಲು ಸಾಧ್ಯವಿಲ್ಲ’’ ಎಂದು ರಾಯುಡು ಹೇಳಿದ್ದು ವಿರಾಟ್ ಕೊಹ್ಲಿ ಬಗ್ಗೆಯೇ. ನೇರವಾಗಿ ವಿರಾಟ್ ಹೆಸರು ಹೇಳಲು ಧೈರ್ಯವಿಲ್ಲದೆ ಪರೋಕ್ಷವಾಗಿ ಕುಟುಕಿದ್ದಾನೆ.

ಆತ ಮರೆತ ಹಾಗಿದೆ… ಭಾರತ ಕ್ರಿಕೆಟ್ ತಂಡ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೆಸ್ಟ್ ಕ್ರಿಕೆಟ್’ನಲ್ಲಿ ನಂ.1 ತಂಡವಾಗಿದ್ದು, ಆಸ್ಟ್ರೇಲಿಯಾ ನೆಲದಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಗೆದ್ದದ್ದು ಇದೇ agressionನಿಂದ, ಅದೇ celebrationನಿಂದ. ಆಟ, ಫಿಟ್ನೆಸ್, ಬದ್ಧತೆಯ ವಿಚಾರದಲ್ಲಿ ವಿರಾಟ್ ಕೊಹ್ಲಿ ಮೈದಾನದಲ್ಲಿ set ಮಾಡಿರುವ standard ಸರ್ವಕಾಲಕ್ಕೂ ಸರ್ವರಿಗೂ ಮಾದರಿ. ಈ ಅವಿವೇಕಿ ಅಂಬಾತಿ ಅದನ್ನೇ ತಪ್ಪು ಎಂದಿದ್ದಾನೆ.

ಇದನ್ನೂ ಓದಿ : Team India Head Coach : ಟೀಮ್ ಇಂಡಿಯಾ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ ಪ್ರಧಾನಿ ಮೋದಿ, ಅಮಿತ್ ಶಾ!

‘’ಕೊಹ್ಲಿ ಒಂದು ಸ್ಟಾಂಡರ್ಡ್ ಸೆಟ್ ಮಾಡಿದ್ದಾನೆ. ಇಡೀ ತಂಡವೂ ಇದೇ ರೀತಿ ಆಡಬೇಕೆಂದು ಕೊಹ್ಲಿ ಬಯಸುತ್ತಾನೆ. ಕೊಹ್ಲಿಯ ಸ್ಟಾಂಡರ್ಡನ್ನು ಬೇರೆಯವರು ಮ್ಯಾಚ್ ಮಾಡುವುದು ಕಷ್ಟ. ಯುವ ಕ್ರಿಕೆಟಿಗರು ತಾವೂ ಅದೇ ರೀತಿ ಆಗಬೇಕೆಂದು ಬಯಸಿ ಒತ್ತಡಕ್ಕೆ ಬೀಳುತ್ತಾರೆ. ಹೀಗಾಗಿ ಕೊಹ್ಲಿ ತನ್ನ ಸ್ಟಾಂಡರ್ಡ್ ಕಡಿಮೆ ಮಾಡಿಕೊಂಡರೆ ಉತ್ತಮ’’.

Ambati Rayudu
Image Credit to Original Source

ಎಂತಹ ಮೂರ್ಖತನದ ಮಾತು..!

SSLCಯಲ್ಲಿ ಒಬ್ಬ ಹುಡುಗ 625ಕ್ಕೆ 625 ಮಾರ್ಕ್ಸ್ ಪಡೆಯುವ ಸಾಮರ್ಥ್ಯವುಳ್ಳವನಾಗಿರುತ್ತಾನೆ. ಆತನ ಸಹಪಾಠಿಗಳು average students. ತನ್ನ ಸಹಪಾಠಿಗಳಿಗೆ ಅಷ್ಟು ಮಾರ್ಕ್ಸ್ ಪಡೆಯಲು ಸಾಧ್ಯವಿಲ್ಲ ಎಂದಾಗ, ನೀನು ಓದುವುದನ್ನು ಕಡಿಮೆ ಮಾಡು ಎಂದು ಆ ಹುಡುಗನಿಗೆ ಹೇಳಿದರೆ ಹೇಗಿರುತ್ತದೆ..?

ಇಂತಹ ಮೂರ್ಖತನಕ್ಕಾಗಿಯೇ ಅಂಬಾತಿ ರಾಯುಡುನನ್ನು ಇಂಗ್ಲೆಂಡ್ ಮಾಜಿ ನಾಯಕ ಕೆವಿನ್ ಪೀಟರ್ಸನ್ ‘’ಜೋಕರ್’’ ಎಂದು ಕರೆದದ್ದು. ಪೀಟರ್ಸನ್ ಸತ್ಯವನ್ನೇ ಹೇಳಿದ್ದಾರೆ. ಈತ ಜೋಕರ್ ಅಲ್ಲದೆ ಮತ್ತಿನ್ನೇನೂ ಅಲ್ಲ. ಅಷ್ಟಕ್ಕೂ ರಾಯುಡುಗೆ ವಿರಾಟ್ ಕೊಹ್ಲಿ ಮೇಲೆ ಏಕಿಂಥಾ ಕೋಪ, ಉರಿ, ಮತ್ಸರ..? ಇದರ ಹಿಂದೆ ದೊಡ್ಡ ಕಥೆಯೇ ಇದೆ. 2019ರ ಏಕದಿನ ವಿಶ್ವಕಪ್’ನಲ್ಲಿ ವಿರಾಟ್ ಕೊಹ್ಲಿ ಭಾರತ ತಂಡದ ನಾಯಕನಾಗಿದ್ದ. ರಾಯುಡು ಊರಿನವರಾದ (ಆಂಧ್ರಪ್ರದೇಶ) ಎಂ.ಎಸ್.ಕೆ ಪ್ರಸಾದ್ ಭಾರತ ತಂಡದ ಚೀಫ್ ಸೆಲೆಕ್ಟರ್.

ಇದನ್ನೂ ಓದಿ : Yuvraj Singh 2.0 Loading: ಯುವರಾಜ್‌ ಸಿಂಗ್ ತಯಾರು ಮಾಡಿದ ಹುಡುಗ‌ ಅಭಿಷೇಕ್‌ ಶರ್ಮಾ ಐಪಿಎಲ್’ನಲ್ಲಿ ಧೂಳೆಬ್ಬಿಸಿದ!

ವಿಶ್ವಕಪ್’ಗೆ ತಂಡವನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಇದ್ದ ಪ್ರಶ್ನೆ ಒಂದೇ. 4ನೇ ಕ್ರಮಾಂಕಕ್ಕೆ ಯಾರು? ಆಗ ಒಳ್ಳೆ ಫಾರ್ಮ್’ ನಲ್ಲಿದ್ದ ಅಂಬಾಟಿ ರಾಯುಡು ಸಹಜವಾಗಿಯೇ ಆ ಸ್ಥಾನದ ನಿರೀಕ್ಷೆಯಲ್ಲಿದ್ದ. ಆದರೆ ವಿಶ್ವಕಪ್’ಗೂ ಮುನ್ನ ಭಾರತದಲ್ಲಿ ಆಸ್ಟ್ರೇಲಿಯಾ ವಿರುದ್ಧ ಒಂದು ಏಕದಿನ ಸರಣಿ ನಡೆಯಿತು. ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆಗಳೇ ಇಲ್ಲದ ತಮಿಳುನಾಡಿನ ಆಲ್ರೌಂಡರ್ (?) ವಿಜಯ್ ಶಂಕರ್ ಆ ಸರಣಿಯಲ್ಲಿ ಧೂಳೆಬ್ಬಿಸಿಬಿಟ್ಟ. ಕೋಚ್ ರವಿ ಶಾಸ್ತ್ರಿ, ಕ್ಯಾಪ್ಟನ್ ಕೊಹ್ಲಿ excite ಆಗಿ ಬಿಟ್ಟರು.

ಅಷ್ಟೇ.. ವಿಜಯ್ ಶಂಕರ್ ವಿಶ್ವಕಪ್ ತಂಡದಲ್ಲಿ ಕಾಣಿಸಿಕೊಂಡ, ಅಂಬಾಟಿ ರಾಯುಡುನನ್ನ ಫಿಟ್ನೆಸ್ ಕಾರಣವೊಡ್ಡಿ ಪಕ್ಕಕ್ಕೆ ಸರಿಸಲಾಯಿತು. ಅಂದ ಹಾಗೆ ವಿಜಯ್ ಶಂಕರ್’ನಂತಹ average ಆಟಗಾರನನ್ನು ಕರೆದುಕೊಂಡು ಹೋಗಿದ್ದಕ್ಕೇ ಭಾರತ ವಿಶ್ವಕಪ್ ಸೆಮಿಫೈನಲ್’ನಲ್ಲಿ ಸೋತಿತ್ತು ಎಂಬುದು ಬೇರೆ ಮಾತು.

ಅವತ್ತು ತನ್ನ ದಾರಿಗೆ ವಿರಾಟ್ ಕೊಹ್ಲಿ ಅಡ್ಡಗಾಲು ಹಾಕಿದ್ದ ಎಂಬುದೇ ಅಂಬಾತಿ ರಾಯುಡು ಕೋಪಕ್ಕೆ ಕಾರಣ. ಆ ವಿಷವನ್ನು ಈಗ ಕಕ್ಕುತ್ತಿದ್ದಾನೆ ಅಷ್ಟೇ. ಈ ಮಹಾನುಭಾವ ಭಾರತ ಪರ ಆಡಿರುವುದು 61 ಪಂದ್ಯಗಳಷ್ಟೇ. ವಿರಾಟ್ ಕೊಹ್ಲಿ ಭಾರತ ಪರ ಬಾರಿಸಿರುವ ಶತಕಗಳ ಸಂಖ್ಯೆಯೇ 80. ವಿರಾಟ್ ಬಳಿ ವರ್ಷಕ್ಕೊಂದು ಬ್ಯಾಟನ್ನು ಕಾಡಿ ಬೇಡಿ ಪಡೆಯುತ್ತಿದ್ದವನು ಈ ರಾಯುಡು. ಎಂಥಾ ನಿಯತ್ತಿಲ್ಲದ ಮನುಷ್ಯ ಈತ..! ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ ಬಗ್ಗೆ ಅಂಬಾಟಿ ರಾಯುಡು ಮಾತನಾಡುತ್ತಿರುವುದು ಹೇಗಿದೆ ಎಂದರೆ, “ಹಂದಿಯೊಂದು “ನಂದಿ” (ಶಿವನ ವಾಹನ) ಬಳಿ ಬಂದು, ನೀನು ಕೆಟ್ಟ ಕೊಳಕ” ಎಂದಂತಿದೆ.

ಇದನ್ನೂ ಓದಿ : Shikhar Dhawan To Marry Mithali Raj? ಮಿಥಾಲಿ ರಾಜ್ ಜೊತೆ ಶಿಖರ್ ಧವನ್ ಮದುವೆ..? ವಿವಾಹದ ಬಗ್ಗೆ ಗಬ್ಬರ್ ಹೇಳಿದ್ದೇನು..?

Virat Kholi vs Ambati Rayudu : Why is Ambati Rayudu angry with Virat Kohli? Here is the real truth!

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular