ಸೋಮವಾರ, ಏಪ್ರಿಲ್ 28, 2025
HomeSportsCricketಪ್ರಿನ್ಸ್ ಶುಭಮನ್ ಗಿಲ್’ಗೆ ದುಬಾರಿ ವಾಚ್ ಗಿಫ್ಟ್ ಕೊಟ್ಟ ಕಿಂಗ್ ಕೊಹ್ಲಿ

ಪ್ರಿನ್ಸ್ ಶುಭಮನ್ ಗಿಲ್’ಗೆ ದುಬಾರಿ ವಾಚ್ ಗಿಫ್ಟ್ ಕೊಟ್ಟ ಕಿಂಗ್ ಕೊಹ್ಲಿ

- Advertisement -

ಬೆಂಗಳೂರು: ಶುಭಮನ್ ಗಿಲ್ (Shubhman Gill) ಟೀಮ್ ಇಂಡಿಯಾದ ರೈಸಿಂಗ್ ಸ್ಟಾರ್, ಫ್ಯೂಚರ್ ಸ್ಟಾರ್. ಭಾರತೀಯ ಕ್ರಿಕೆಟ್’ನ ಭವಿಷ್ಯದ ತಾರೆಯಾಗಿರುವ ಶುಭಮನ್ ಗಿಲ್ ಮೊನ್ನೆ ಮೊನ್ನೆಯಷ್ಟೇ ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಅಮೋಘ ಶತಕ ಬಾರಿಸಿದ್ದರು. ದ್ವಿಶತಕವೀರ ಶುಭಮನ್ ಗಿಲ್’ಗೆ ವಿಶೇಷ ಉಡುಗೊರೆಯೊಂದು (Virat Kohli gifted shubman gill) ಸಿಕ್ಕಿದೆ. ಟೀಮ್ ಇಂಡಿಯಾದ ‘ಪ್ರಿನ್ಸ್’ಗೆ ಆ ಉಡುಗೊರೆ ಕೊಟ್ಟವರು ಬೇರಾರೂ ಅಲ್ಲ, ಟೀಮ್ ಇಂಡಿಯಾ ರನ್ ಮಷಿನ್ (Virat Kohli), ‘ಕಿಂಗ್’ ಖ್ಯಾತಿಯ ವಿರಾಟ್ ಕೊಹ್ಲಿ. ವಿರಾಟ್ ಮತ್ತು ಗಿಲ್ ನಡುವಿನ ಟ್ವಿಟರ್ ಸಂಭಾಷಣೆಯಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ.

ಎರಡು ದಿನಗಳ ಹಿಂದೆ ಶುಭಮನ್ ಗಿಲ್ ಅವರ ಫೋಟೋ ಶೂಟ್ ನಡೆದಿತ್ತು. ಆ ಸ್ಟೈಲಿಷ್ ಫೋಟೋದಲ್ಲಿ ಶುಭಮನ್ ಗಿಲ್ ಕೈಯಲ್ಲೊಂದು ವಾಚ್ ಮಿರ ಮಿರ ಮಿಂಚುತ್ತಿತ್ತು.

ಶುಭಮನ್ ಗಿಲ್ ಅವರ ಸ್ಟೈಲಿಷ್ ಫೋಟೋ, ಕೈಯಲ್ಲಿದ್ದ ವಾಚ್ ನೋಡಿದ ವಿರಾಟ್ ಕೊಹ್ಲಿ ಟ್ವೀಟ್ ಒಂದನ್ನು ಮಾಡಿದ್ದಾರೆ. ಕೊಹ್ಲಿ ಟ್ವೀಟ್’ಗೆ ಶುಭಮನ್ ಗಿಲ್ ಟ್ವೀಟ್ ಮೂಲಕವೇ ಉತ್ತರಿಸಿದ್ದಾರೆ. ಕೊಹ್ಲಿ ಮತ್ತು ಗಿಲ್ ಮಧ್ಯೆ ನಡೆದ ಟ್ವಿಟರ್ ಸಂಭಾಷಣೆ ಹೀಗಿದೆ.

ವಿರಾಟ್ ಕೊಹ್ಲಿ: ನಿನ್ನ ಕೈಯಲ್ಲಿರುವ ನಾಚ್ ಗಿಫ್ಟ್ ಕೊಟ್ಟದ್ದು ಯಾರು?
ಶುಭಮನ್ ಗಿಲ್: ಇದು ‘ಕಿಂಗ್’ ಕೃಪೆಯಿಂದ ಸಿಕ್ಕಿರುವ ಉಡುಗೊರೆ.‌ ಭಾರತೀಯ ಕ್ರಿಕೆಟ್’ನ ವರ್ತಮಾನ ಹಾಗೂ ಭವಿಷ್ಯದ ತಾರೆಗಳ ಈ ಟ್ವೀಟ್ ಸಂಭಾಷಣೆ ಟ್ವಿಟರ್’ನಲ್ಲಿ ವೈರಲ್ ಆಗಿದೆ.

23 ವರ್ಷದ ಶುಭಮನ್ ಗಿಲ್ ಜನವರಿ 18ರಂದು ಹೈದರಾಬಾದ್’ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಪ್ರಥಮ ಏಕದಿನ ಪಂದ್ಯದಲ್ಲಿ ಭರ್ಜರಿ ದ್ವಿಶತಕ ಸಿಡಿಸಿದ್ದರು. ಅಷ್ಟೇ ಅಲ್ಲ, ಏಕದಿನ ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ದ್ವಿಶತಕ ಬಾರಿಸಿದ ಜಗತ್ತಿನ ಅತ್ಯಂತ ಕಿರಿಯ ಆಟಗಾರನೆಂಬ ವಿಶ್ವದಾಖಲೆ ಬರೆದಿದ್ದರು.

ಶುಭಮನ್ ಗಿಲ್ ಬಾರಿಸಿದ ದ್ವಿಶತಕ ಹಾಗೂ ಬಲಗೈ ವೇಗಿ ಮೊಹಮ್ಮದ್ ಸಿರಾಜ್ ಅವರ ಅಮೋಘ ಬೌಲಿಂಗ್ ಬಲದಿಂದ ಪಂದ್ಯ ಗೆದ್ದಿದ್ದ ಭಾರತ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತ್ತು. ಸರಣಿಯ 2ನೇ ಪಂದ್ಯ ಇಂದು (ಶನಿವಾರ) ಛತ್ತೀಸ್’ಗಢದ ರಾಯ್ಪುರದಲ್ಲಿ ನಡೆಯಲಿದೆ.

ಇದನ್ನೂ ಓದಿ : Chennai Super Kings : ಕಟ್ಟ ಕಡೆಯ ಐಪಿಎಲ್’ಗೆ ಧೋನಿ ಜಬರ್ದಸ್ತ್ ಅಭ್ಯಾಸ, ‘’ತಲಾ’’ ಹೊಸ ಸ್ಟೈಲ್’ಗೆ ಫ್ಯಾನ್ಸ್ ಫಿದಾ

ಇದನ್ನೂ ಓದಿ : Virat Kohli 25000 Runs : ಇವತ್ತೇ 25 ಸಾವಿರದ ಮೈಲುಗಲ್ಲು ನೆಡ್ತಾರಾ ಕಿಂಗ್ ಕೊಹ್ಲಿ? 25000ಕ್ಕೆ ಬೇಕು 111 ರನ್

English News Click Here

Virat Kohli gifted watch to shubman gill

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular