Virat Kohli Google Trending : ವಿರಾಟ್ ಕೊಹ್ಲಿ ಟೀಂ ಇಂಡಿಯಾದ ಮಾಜಿ ನಾಯಕ. ವಿಶ್ವಕ್ರಿಕೆಟ್‌ನಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಇದೀಗ ಕ್ರಿಕೆಟ್‌ನಲ್ಲಿ ಮತ್ತೆ ವಿರಾಟ್ ಕೊಹ್ಲಿ (Virat Kohli) ಕಿಂಗ್ ಆಗಿದ್ದಾರೆ. ಗೂಗಲ್‌ನಲ್ಲಿ ಕಳೆದ 25 ವರ್ಷಗಳಲ್ಲಿ ಅತೀ ಹೆಚ್ಚು ಸರ್ಚ್ (Google Search) ಆದ ಕ್ರಿಕೆಟಿಗ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
ವಿರಾಟ್ ಕೊಹ್ಲಿ ಕ್ರಿಕೆಟ್ ಮೈದಾನದಲ್ಲಿ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದ್ದಾರೆ. ಇನ್ನು ಮೈದಾನದ ಹೊರಗೆ ಕೂಡ ಕೊಹ್ಲಿ ಒಂದಿಲ್ಲೊಂದು ದಾಖಲೆ ಬರೆದಿದ್ದಾರೆ. ಗೂಗಲ್‌ನಲ್ಲ ಅತೀ ಹೆಚ್ಚು ಟ್ರೆಂಡ್ ಆಗುವ ಮೂಲಕ ವಿರಾಟ್ ಕೊಹ್ಲಿ ಅಗ್ರಸ್ಥಾನಕ್ಕೇರಿದ್ದರು.

Google ತಮ್ಮ ವಾರ್ಷಿಕ ಸರ್ಚ್ ಪಟ್ಟಿಯನ್ನು ಪ್ರಕಟಿಸಿದೆ. ಸಾರ್ವಕಾಲಿಕವಾಗಿ ಹೆಚ್ಚು ಹುಡುಕಲಾದ ಕ್ಷಣಗಳ ವಿಡಿಯೋವನ್ನು ಗೂಗಲ್ ಹಂಚಿಕೊಂಡಿದೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ಬ್ರಿಯಾನ್ ಲಾರಾ ಅವರ ದಾಖಲೆಗಳನ್ನೇ ವಿರಾಟ್ ಕೊಹ್ಲಿ ಅಳಿಸಿ ಹಾಕಿದ್ದಾರೆ.
ಇದನ್ನೂ ಓದಿ : IPL 2024 Auction : ಐಪಿಎಲ್ 2024 ಯಾವ ತಂಡಕ್ಕೆ ಯಾರು ನಾಯಕರು ? ತಂಡಗಳ ಬಳಿ ಬಾಕಿ ಇರುವ ಮೊತ್ತವೆಷ್ಟು ?
ಭಾರತ ಕ್ರಿಕೆಟ್ ತಂಡದ ಆಟಗಾರ ಶುಭಮನ್ ಗಿಲ್ ಮತ್ತು ಭಾರತ ಮೂಲಕ ನ್ಯೂಜಿಲೆಂಡ್ ಆಟಗಾರ ರಚಿನ್ ರವೀಂದ್ರ ಸ್ಥಳೀಯವಾಗಿ ಹಾಗೂ ಜಾಗತಿಕವಾಗಿ ಅಗ್ರ ಟ್ರೆಂಡಿಂಗ್ ಕ್ರಿಕೆಟಿಗರಾಗಿ ಹೊರ ಹೊಮ್ಮಿದ್ದಾರೆ. ಈ ಕುರಿತು ಗೂಗಲ್ ಟ್ರಾಪ್ ಟ್ರೆಂಡಿಂಗ್ ಪಟ್ಟಿಯನ್ನು ಪ್ರಕಟಿಸಿದೆ. ಹಾಗಾದ್ರೆ ಟಾಪ್ ಟ್ರೆಂಡಿಂಗ್ (Google Trends)ನಲ್ಲಿರುವ ಆಟಗಾರರು ಯಾರು ಅಂತಾ ನೋಡೋದಾದ್ರೆ.
- ಶುಭಮನ್ ಗಿಲ್
- ರಚಿನ್ ರವೀಂದ್ರ
- ಮೊಹಮ್ಮದ್ ಶಮಿ
- ಗ್ಲೆನ್ ಮ್ಯಾಕ್ಸ್‌ವೆಲ್
- ಸೂರ್ಯಕುಮಾರ್ ಯಾದವ್
- ಟ್ರಾವಿಸ್ ಹೆಡ್
ಇದನ್ನೂ ಓದಿ : IPL 2024 : ಡೆಲ್ಲಿ ಕ್ಯಾಪಿಟಲ್ಸ್‌ಗೆ ರಿಷಬ್ ಪಂತ್ ಇಂಪ್ಯಾಕ್ಟ್ ಪ್ಲೇಯರ್ ?
ಇನ್ನು ಭಾರತ ಕ್ರಿಕೆಟ್ ತಂಡ ವಿಶ್ವದ ಅಗ್ರ ಟ್ರೆಂಡಿಂಗ್ ಕ್ರಿಕೆಟ್ ತಂಡವಾಗಿ ಹೊರ ಹೊಮ್ಮಿದೆ. ಅಷ್ಟೇ ಅಲ್ಲಾ ಜಾಗತಿಕ ಕ್ರೀಡಾ ತಂಡಗಳ ಪಟ್ಟಿಯ ಭಾಗವಾಗಿ ಸ್ಥಾನ ಪಡೆದುಕೊಂಡ ಏಕೈಕ ಕ್ರಿಕೆಟ್ ತಂಡ ಎಂಬ ಹೆಗ್ಗಳಿಕೆ ಪತ್ರವಾಗಿದೆ. ಇನ್ನು ವಿಶ್ವಕಪ್ 2023 ಮತ್ತು ಭಾರತ vs ಆಸ್ಟ್ರೇಲಿಯಾ ಫೈನಲ್ ಪಂದ್ಯಗಳಿಗೆ ಸಂಬಂಧಿಸಿದ ಪ್ರಶ್ನೆಗಳು ಸಾರ್ವಕಾಲಿಕವಾಗಿವೆ.

ಕ್ರೀಡೆಯ ವಿಚಾರಕ್ಕೆ ಸಂಬಂಧಿಸಿದಂತೆ ಗೂಗಲ್‌ನಲ್ಲಿ ಹಲವು ಮಂದಿ ಹಲವು ವಿಚಾರಗಳನ್ನು ಹುಡುಕಾಟ ನಡೆಸಿದ್ದಾರೆ. ಕ್ರೀಡೆಗೆ ವಿಶ್ವದಾದ್ಯಂ ಅತೀ ಹೆಚ್ಚು ಮನ್ನಣೆಯಿದೆ. ಅದ್ರಲ್ಲೂ ಕ್ರಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ವಿಚಾರಗಳನ್ನು ಜನರು ಸರ್ಚ್ ಮಾಡಿದ್ದಾರೆ. ಹಾಗಾದ್ರೆ ಗೂಗಲ್‌ನಲ್ಲಿ ಟ್ರೆಂಡ್ ಆಗಿರುವ ಈವೆಂಟ್‌ಗಳು ಯಾವುವು ಅಂತ ನೋಡೋದಾದ್ರೆ.
ಇದನ್ನೂ ಓದಿ : ಸ್ಟಾಪ್-ಕ್ಲಾಕ್ ರೂಲ್ಸ್ ಜಾರಿಗೆ ತಂದ ಐಸಿಸಿ, ಪ್ರತೀ ಓವರ್ ಆರಂಭಕ್ಕೆ 60 ಸೆಕೆಂಡ್ : ಏನಿದು ಸ್ಟಾಪ್-ಕ್ಲಾಕ್ ನಿಯಮ ?
- ಇಂಡಿಯನ್ ಪ್ರೀಮಿಯರ್ ಲೀಗ್ – ಐಪಿಎಲ್ ( indian premier league-IPL)
- ಕ್ರಿಕೆಟ್ ವಿಶ್ವಕಪ್ (Cricket World Cup )
- ಏಷ್ಯಾ ಕಪ್ (Asia Cup)
- ಮಹಿಳಾ ಪ್ರೀಮಿಯರ್ ಲೀಗ್ (Womens Premier League )
Virat Kohli most searched cricketer on Google in 25 years Google Trending