ಬೆಂಗಳೂರು: (Virat Kohli New Hair Style) ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಹೊಸ ಹೇರ್ ಸ್ಟೈಲ್’ನೊಂದಿಗೆ ಮಿಂಚುತ್ತಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೂ (India Vs Australia T20 Series) ಮುನ್ನ ಕಿಂಗ್ ಕೊಹ್ಲಿ ಹೇರ್ ಕಟಿಂಗ್ ಮಾಡಿಸಿಕೊಂಡಿದ್ದು, ಕೊಹ್ಲಿ ಹೇರ್ ಸ್ಟೈಲ್ ಹೊಸ ವಿನ್ಯಾಸದಲ್ಲಿ ಆಕರ್ಷಕವಾಗಿ ಕಾಣುತ್ತಿದೆ. ಅಂದ ಹಾಗೆ ವಿರಾಟ್ ಕೊಹ್ಲಿ ತಮ್ಮ ಹೊಸ ಕೇಶ ವಿನ್ಯಾಸಕ್ಕೆ ಖರ್ಚು ಮಾಡಿದ ಮೊತ್ತ ಎಷ್ಟು ಗೊತ್ತಾ ? 80,000 ರೂಪಾಯಿ. ಮುಂಬೈನಲ್ಲಿರುವ ಸೆಲೆಬ್ರಿಟಿ ಕೇಶ ವಿನ್ಯಾಸಗಾರ ರಶೀದ್ ಸಲ್ಮಾನಿ ಅವರ ಬಳಿ ಹೇರ್ ಕಟ್ಟಿಂಗ್ ಮಾಡಿಸಿಕೊಂಡಿರುವ ಕೊಹ್ಲಿ, ಇದಕ್ಕಾಗಿ 80 ಸಾವಿರ ರೂಪಾಯಿ ವ್ಯಯಿಸಿದ್ದಾರೆ. ಕೊಹ್ಲಿ ಅವರ ಹೊಸ ಕೇಶ ವಿನ್ಯಾಸದ ವೀಡಿಯೊವನ್ನು ರಶೀದ್ ತಮ್ಮ ಇನ್’ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
34 ವರ್ಷದ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 7 ಎಸೆತಗಳಲ್ಲಿ ಕೇವಲ 2 ರನ್ ಗಳಿಸಿ ಔಟಾಗಿದ್ದರು. ಮೊಹಾಲಿಯ ಪಂಜಾಬ್ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಮಂಗಳವಾರ ನಡೆದ ಮೊದಲ ಪಂದ್ಯದಲ್ಲಿ ಆತಿಥೇಯ ಭಾರತ ತಂಡವನ್ನು 4 ವಿಕೆಟ್’ಗಳಿಂದ ಸೋಲಿಸಿದ ಆಸ್ಟ್ರೇಲಿಯಾ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಭಾರತ ಪರ ಆರಂಭಿಕ ಬ್ಯಾಟ್ಸ್’ಮನ್ ಕೆ.ಎಲ್ ರಾಹುಲ್ (35 ಎಸೆತಗಳಲ್ಲಿ 55 ರನ್, 4 ಬೌಂಡರಿ, 3 ಸಿಕ್ಸರ್), ಸೂರ್ಯಕುಮಾರ್ ಯಾದವ್ (25 ಎಸೆತಗಳಲ್ಲಿ 46 ರನ್, 2 ಬೌಂಡರಿ, 4 ಸಿಕ್ಸರ್) ಮತ್ತು ಆಲ್ರೌಂಡರ್ ಹಾರ್ದಿಕ್ ಪಾಂಡ್ಯ (30 ಎಸೆತಗಳಲ್ಲಿ 71 ರನ್, 7 ಬೌಂಡರಿ, 5 ಸಿಕ್ಸರ್) ಅವರ ಸ್ಫೋಟಕ ಬ್ಯಾಟಿಂಗ್ ಬಲದಿಂದ ನಿಗದಿತ 20 ಓವರ್’ಗಳಲ್ಲಿ 6 ವಿಕೆಟ್ ನಷ್ಟಕ್ಕೆ 208 ರನ್’ಗಳ ಬೃಹತ್ ಮೊತ್ತ ಕಲೆ ಹಾಕಿತ್ತು. ಆದರೆ ಭಾರೀ ಮೊತ್ತ ಗಳಿಸಿಯೂ ಬೌಲರ್’ಗಳ ವೈಫಲ್ಯದಿಂದ ಭಾರತ ಪಂದ್ಯ ಸೋತಿತ್ತು. ರನ್ ಚೇಸಿಂಗ್ ಸಂದರ್ಭದಲ್ಲಿ ಆಸ್ಟ್ರೇಲಿಯಾ 19.2 ಓವರ್’ಗಳಲ್ಲಿ 6 ವಿಕೆಟ್ ಕಳೆದುಕೊಂಡು 211 ರನ್ ಗಳಿಸಿ ರೋಹಿತ್ ಶರ್ಮಾ ಬಳಗಕ್ಕೆ ಶಾಕ್ ನೀಡಿತ್ತು.
Things went right down to the wire but it's Australia who won the first #INDvAUS T20I.#TeamIndia will look to bounce back in the second T20I.
— BCCI (@BCCI) September 20, 2022
Scorecard 👉 https://t.co/ZYG17eC71l pic.twitter.com/PvxtKxhpav
ಇದನ್ನೂ ಓದಿ : Death Over Problem : ವಿಶ್ವಕಪ್‌ಗೆ ಡೇಂಜರ್ ಸಿಗ್ನಲ್.. ಭಾರತವನ್ನು ಸೋಲಿಸುತ್ತಿದ್ದಾನೆ “ಡೆತ್ ಓವರ್” ವಿಲನ್
ಇದನ್ನೂ ಓದಿ : KL Rahul Record in T20 : ಆಸ್ಟ್ರೇಲಿಯಾ ವಿರುದ್ಧ ಆಕರ್ಷಕ ಅರ್ಧಶತಕ ಬಾರಿಸಿ ವಿಶೇಷ ದಾಖಲೆ ಬರೆದ ಕೆ.ಎಲ್ ರಾಹುಲ್
Virat Kohli New Hair Style Pay 80000 Rupees India Vs Australia T20 Series