Temple For Yogi Adityanath : ಅಯೋಧ್ಯೆಯಲ್ಲಿ ನಿರ್ಮಾಣವಾಗಿದೆ ಯೋಗಿ ಆದಿತ್ಯನಾಥ್​ ಮಂದಿರ : ಥೇಟ್​ ರಾಮನಂತೆ ಬಿಲ್ಲು-ಬಾಣ ಹಿಡಿದ ಯುಪಿ ಸಿಎಂ

ಉತ್ತರ ಪ್ರದೇಶ : Temple For Yogi Adityanath : ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿರುವ ವಿಚಾರ ಎಲ್ಲರಿಗೆ ತಿಳಿದೇ ಇದೆ. ಇದರ ನಡುವೆ ಅಯೋಧ್ಯೆಯಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ಗೆ ಸಮರ್ಪಿತವಾಗುವ ದೇವಾಲಯವೊಂದು ತಲೆ ಎತ್ತಿದೆ. ಭರತಕುಂಡ್ ಬಳಿಯ ಪುರ್ವಾ ಹಳ್ಳಿಯಲ್ಲಿರುವ ಈ ದೇವಾಲಯದಲ್ಲಿ ಯೋಗಿ ಆದಿತ್ಯನಾಥ್​ರ ಮೂರ್ತಿಯನ್ನು ಭಗವಾನ್​ ರಾಮನಂತೆ ಚಿತ್ರಿಸಲಾಗಿದೆ. ಬಿಲ್ಲು ಹಾಗೂ ಬಾಣವನ್ನು ಹಿಡಿದಿರುವ ಯೋಗಿ ಆದಿತ್ಯನಾಥ್​ ಥೇಟ್​ ಶ್ರೀರಾಮನನ್ನು ಹೋಲುತ್ತಿದ್ದಾರೆ.


ಭರತ್​ಕುಂಡ್​ನಲ್ಲಿರುವ ಈ ದೇವಸ್ಥಾನದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ವಿಗ್ರಹದ ಎದುರು ಪ್ರತಿ ದಿನ ಎರಡು ಬಾರಿ ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತದೆ. ಬೆಳಗ್ಗೆ ಹಾಗೂ ಸಂಜೆ ಯೋಗಿ ಆದಿತ್ಯನಾಥ್​ ವಿಗ್ರಹಕ್ಕೆ ಪೂಜೆ ಸಲ್ಲಿಸಿದ ಬಳಿಕ ಭಕ್ತರಿಗೆ ವಿಶೇಷ ಪ್ರಸಾದವನ್ನೂ ವಿತರಿಸಲಾಗುತ್ತದೆ. ಭರತ್​ಕುಂಡ ಭರತನು ತನ್ನ ಸಹೋದರ ಶ್ರೀರಾಮನನ್ನು ವನವಾಸಕ್ಕೆ ತೆರಳಲು ಬೀಳ್ಕೊಟ್ಟ ಜಾಗವೆಂದು ಪ್ರತೀತಿಯನ್ನು ಪಡೆದಿದೆ. ಇದೇ ಜಾಗದಲ್ಲಿ ಇದೀಗ ಯೋಗಿ ಆದಿತ್ಯನಾಥ್​ ಮಂದಿರ ನಿರ್ಮಾಣಗೊಂಡಿದೆ.


ದೇವರ ಮುಂದೆ ನಮಗೇನು ಬೇಕೆಂದು ಪ್ರಾರ್ಥಿಸುತ್ತೇವೋ ಅದೇ ರೀತಿ ನಾನು ಯೋಗಿ ಆದಿತ್ಯನಾಥ್​ರ ವಿಗ್ರಹದ ಎದುರು ನನಗೆ ಏನು ಬೇಕು ಎನ್ನುವುದನ್ನು ಪ್ರಾರ್ಥಿಸುತ್ತೇನೆ, ನಿತ್ಯ ಸ್ತ್ರೋತ್ರಗಳನ್ನು ಪಠಿಸುತ್ತೇನೆ ಎಂದು ಮೌರ್ಯ ಎಂಬವರು ಹೇಳಿದ್ದಾರೆ. ಮೂಲಗಳು ನೀಡಿರುವ ಮಾಹಿತಿಯ ಪ್ರಕಾರ ಈ ದೇವಸ್ಥಾನವನ್ನು ನಿರ್ಮಾಣ ಮಾಡಲು ಸುಮಾರು 8.5 ಲಕ್ಷ ರೂಪಾಯಿಯನ್ನು ಖರ್ಚು ಮಾಡಲಾಗಿದೆ. ಯೋಗಿ ಆದಿತ್ಯನಾಥ್​ರ ಈ ವಿಶೇಷ ವಿಗ್ರಹವನ್ನು ರಾಜಸ್ಥಾನದಿಂದ ಆರ್ಡರ್​ ಮಾಡಿ ತರಿಸಲಾಗಿದೆ.

ಇನ್ನು ಯೋಗಿ ಆದಿತ್ಯನಾಥ್​ ದೇಗುಲ ನಿರ್ಮಾಣ ವಿಚಾರದ ಕುರಿತಂತೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಹಾಗೂ ಮಾಜಿ ಸಿಎಂ ಅಖಿಲೇಶ್​ ಯಾದವ್​​ ಮಾರ್ಮಿಕವಾದ ಟ್ವೀಟ್​ ಮೂಲಕ ಟಾಂಗ್​ ನೀಡಿದ್ದಾರೆ. ಇವನು ಅವನಿಗಿಂತ ಎರಡು ಹೆಜ್ಜೆ ಮುಂದೆ ಹೋಗಿದ್ದಾನೆ. ಈಗ ನಮ್ಮ ಮುಂದಿರುವ ಪ್ರಶ್ನೆ, ಇಬ್ಬರಲ್ಲಿ ಮೊದಲು ಯಾರು ..? ಎಂದು ಬರೆದುಕೊಂಡಿದ್ದಾರೆ.

ಇದನ್ನು ಓದಿ : Parents sold their own children :ಮಾಡಿದ ಸಾಲ ತೀರಿಸಲು ಹೆತ್ತ ಕಂದಮ್ಮನನ್ನೇ ಮಾರಿದ ಪೋಷಕರು

ಇದನ್ನೂ ಓದಿ : KL Rahul Record in T20 : ಆಸ್ಟ್ರೇಲಿಯಾ ವಿರುದ್ಧ ಆಕರ್ಷಕ ಅರ್ಧಶತಕ ಬಾರಿಸಿ ವಿಶೇಷ ದಾಖಲೆ ಬರೆದ ಕೆ.ಎಲ್ ರಾಹುಲ್

Ayodhya Resident Builds Temple For Yogi Adityanath With Life-Size Idol

Comments are closed.