RCB Team IPL 2024 : ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೂ ಮುನ್ನ ಆರ್‌ಸಿಬಿ ಆಟಗಾರರು ಆರ್ಭಟಿಸುತ್ತಿದ್ದಾರೆ. ಈ ಬಾರಿ ವಿರಾಟ್ ಕೊಹ್ಲಿ ಹಾಗೂ ಮೊಹಮ್ಮದ್ ಸಿರಾಜ್ ಮೇಲೆ ಬೆಟ್ಟದಷ್ಟು ನಿರೀಕ್ಷೆಯಿದೆ. ಆದ್ರೆ ಈ ಬಾರಿ ವಿರಾಟ್ ಕೊಹ್ಲಿ (Virat Kohli), ಮೊಹಮ್ಮದ್ ಸಿರಾಜ್ (Mohammed Siraj) ಅಲ್ಲ ಬದಲಾಗಿ ಈ 3 ಆಟಗಾರರು ಈ ಬಾರಿ ಆರ್‌ಸಿಬಿ ತಂಡವನ್ನು ಚಾಂಪಿಯನ್ ಮಾಡಲಿದ್ದಾರೆ. ಹಾಗಾದ್ರೆ ಆ ಆಟಗಾರರು ಯಾರು ಅನ್ನೋ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದುವರೆಗೂ ಐಪಿಎಲ್ ಟ್ರೋಫಿಯನ್ನು ಜಯಿಸಿಲ್ಲ. ಪ್ರತೀ ಬಾರಿಯೂ ಈ ಬಾರಿ ಕಪ್ ನಮ್ಮದೇ ಎನ್ನುತ್ತಿರುವ ಆರ್‌ಸಿಬಿ ಅಭಿಮಾನಿಗಳು ಈ ಬಾರಿಯೂ ತಮ್ಮದೇ ಘೋಷಣೆಯನ್ನು ಮೊಳಗಿಸಿದ್ದಾರೆ. ಜೊತೆಗೆ ಆರ್‌ಸಿಬಿ ತಂಡ ಇಷ್ಟು ವರ್ಷಗಳಿಗಿಂತ ಹೆಚ್ಚು ಬಲಿಷ್ಠವಾಗಿದೆ. ವಿರಾಟ್ ಕೊಹ್ಲಿ, ಫಾಪ್ ಡುಪ್ಲಸಿಸ್, ಮೊಹಮದ್ ಸಿರಾಜ್ ಸೇರಿದಂತೆ ಘಟಾನುಘಟಿ ಆಟಗಾರರಿದ್ದಾರೆ.

ಗ್ಲೆನ್ ಮ್ಯಾಕ್ಸ್‌ವೆಲ್
ಕಳೆದ ಎರಡು ವರ್ಷಗಳಿಂದಲೂ ಆರ್‌ಸಿಬಿ ತಂಡವನ್ನು ಪ್ರತಿನಿಧಿಸುತ್ತಿರುವ ಗ್ಲೆನ್ ಮ್ಯಾಕ್ಸ್‌ವೆಲ್ ಟಿ20 ಕ್ರಿಕೆಟ್‌ನಲ್ಲಿ ವಿಶ್ವದ ಬಲಿಷ್ಟ ಕ್ರಿಕೆಟಿಗ. ಆಸ್ಟ್ರೇಲಿಯಾ ತಂಡ ಗ್ಲೇನ್ ಮ್ಯಾಕ್ಸ್‌ವೆಲ್ ಬ್ಯಾಟಿಂಗ್ ಹಾಗೂ ಬೌಲಿಂಗ್ ಮೂಲಕ ತಂಡಕ್ಕೆ ನೆರವಾಗುತ್ತಿದ್ದಾರೆ. ಈ ಬಾರಿ ಆಸ್ಟ್ರೇಲಿಯಾ ತಂಡ ಏಕದಿನ ವಿಶ್ವಕಪ್ ಗೆಲ್ಲವುದರಲ್ಲಿ ಪ್ರಮುಖ ಪಾತ್ರವಹಿಸಿದ್ದು, ಇದೇ ಗ್ಲೆನ್ ಮ್ಯಾಕ್ಸ್‌ವೆಲ್.
ಇದನ್ನೂ ಓದಿ : ಐಪಿಎಲ್ 2024 : ಡೆಲ್ಲಿ ಕ್ಯಾಪಿಟಲ್ಸ್ ಗೆ 18 ಕೋಟಿ ರೂ.ಗೆ ಸೂರ್ಯಕುಮಾರ್ ಯಾದವ್ ಸೇಲ್
2021ರಲ್ಲಿ ಆರ್‌ಸಿಬಿ ತಂಡ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು 14.25 ಕೋಟಿ ರೂಪಾಯಿಗೆ ಖರೀದಿ ಮಾಡಿತ್ತು. ಐಪಿಎಲ್‌ನಲ್ಲಿ 12 ಅರ್ಧ ಶತಕ ಬಾರಿಸಿದ್ದು, 1214ರನ್ ಸಿಡಿಸಿದ್ದಾರೆ. ಅದ್ರಲ್ಲೂ ಕಳೆದ 2 ಋತುವಿನಲ್ಲಿ 42 ಪಂದ್ಯಗಳಲ್ಲಿ 12 ವಿಕೆಟ್ ಕಬಳಿಸಿದ್ದಾರೆ. ಈ ಬಾರಿಯೂ ಆರ್‌ಸಿಬಿ ತಂಡ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನೇ ಹೆಚ್ಚು ನೆಚ್ಚಿಕೊಂಡಿದೆ.

ಇದನ್ನೂ ಓದಿ : ಟೀಂ ಇಂಡಿಯಾಗೆ ಮತ್ತೆ ವಿರಾಟ್ ಕೊಹ್ಲಿ ನಾಯಕ
ಲಾಕ್ ಫರ್ಗುಸನ್
ನ್ಯೂಜಿಲೆಂಡ್ ತಂಡ ವೇಗದ ಬೌಲರ್ ಲಾಕ್ ಫರ್ಗುಸನ್ ಆರ್‌ಸಿಬಿ ತಂಡದ ಪ್ರಮಿಖ ಅಸ್ತ್ರ. 32 ವರ್ಷದ ಲಾಕ್ ಫರ್ಗುಸನ್ ಅಂತರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಹೆಚ್ಚು ಪ್ರಖ್ಯಾತಿಯನ್ನು ಪಡೆದುಕೊಂಡಿದ್ದಾರೆ. ಇದುವರೆಗೆ ಒಟ್ಟು 38 ಐಪಿಎಲ್ ಪಂದ್ಯಗಳನ್ನು ಆಡಿರುವ ಫರ್ಗುಸನ್ 37 ವಿಕೆಟ್ ಕಬಳಿಸಿದ್ದಾರೆ. ನ್ಯೂಜಿಲೆಂಡ್ ತಂಡದ ಪ್ರಮುಖ ಆಟಗಾರನಾಗಿದ್ದು, ಈಗಾಗಲೇ ವಿವಿಧ ಕ್ರಿಕೆಟ್ ಲೀಗ್‌ನಲ್ಲಿ ಅತ್ಯುತ್ತಮ ಆಟವನ್ನು ಪ್ರದರ್ಶಿಸಿದ್ದಾರೆ.
ಇದನ್ನೂ ಓದಿ : IPL 2024 : ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಹೊಸ ನಾಯಕ

ಅಲ್ಜಾರಿ ಜೋಸೆಫ್
ಆರ್‌ಸಿಬಿ ತಂಡದ ಮತ್ತೋರ್ವ ಪ್ರಮುಖ ಆಟಗಾರ ವೆಸ್ಟ್ ಇಂಡೀಸ್ ತಂಡದ ಪ್ರಮುಖ ಬೌಲರ್ ಆಗಿರುವ ಅಲ್ಜಾರಿ ಜೋಸೆಫ್. ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ವಿರುದ್ದದ ಸರಣಿಯಲ್ಲಿ ಅತ್ಯುತ್ತಮ ಆಟದ ಪ್ರದರ್ಶನ ನೀಡಿರುವ ಜೋಸೆಫ್ ಮೇಲೆ ಆರ್‌ಸಿಬಿ ಹೆಚ್ಚು ನಿರೀಕ್ಷೆಯನ್ನು ಇಟ್ಟಿದೆ. ಮೊಹಮ್ಮದ್ ಸಿರಾಜ್, ಲಾಕ್ ಫರ್ಗುಸನ್ ಜೊತೆಗೆ ಜೋಸೆಫ್ ಆರ್‌ಸಿಬಿ ಬೌಲಿಂಗ್ ಬಲವನ್ನು ಹೆಚ್ಚಿಸಿದೆ. 19 ಐಪಿಎಲ್ ಪಂದ್ಯಗಳನ್ನು ಆಡಿರುವ ಜೋಸೆಫ್ 20 ವಿಕೆಟ್ ಕಬಳಿಸಿದ್ದಾರೆ.
Virat Kohli not Mohammad Siraj: These 3 players will make RCB Team champions for IPL 2024