ವಿಶ್ವಕಪ್ 2023 ರಲ್ಲಿ(World Cup 2023) ದಕ್ಷಿಣ ಆಫ್ರಿಕಾ ( South Africa Cricket Team) ತಂಡ ಅದ್ಬುತ ಫಾರ್ಮ್‌ನಲ್ಲಿದೆ. ಶ್ರೀಲಂಕಾ ವಿರುದ್ದದ ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿದೆ. ಆದ್ರೆ ಡೋಪಿಂಗ್ ವಿರೋಧಿ ನಿಯಮಗಳನ್ನು ಪಾಲಿಸದ ಕಾರಣಕ್ಕೆ ದಕ್ಷಿಣ ಆಫ್ರಿಕಾ ತಂಡ ವಿಶ್ವಕಪ್‌ನಿಂದ ನಿಷೇಧಕ್ಕೆ (NADO Ban) ಒಳಗಾಗುವ ಸಾಧ್ಯತೆಯಿದೆ.
ದಕ್ಷಿಣ ಆಫ್ರಿಕಾದ ರಾಷ್ಟ್ರೀಯ ಉದ್ದೀಪನ-ನಿರೋಧಕ ಸಂಸ್ಥೆಯು ವಾಡಾದ 2021 ಕೋಡ್ ಅನ್ನು ಇನ್ನೂ ಅಳವಡಿಸಿಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ವಿಶ್ವಕಪ್ ಪಂದ್ಯಾವಳಿಯಲ್ಲಿ ಅನುಮತಿಯನ್ನು ಎದುರಿಸಬೇಕಾಗಿದೆ.

ಕ್ರಿಕ್‌ಬಜ್ ಪ್ರಕಟಿಸಿರುವ ವರದಿಯ ಪ್ರಕಾರ, ದಕ್ಷಿಣ ಆಫ್ರಿಕಾ ತಂಡವು ಡೋಪಿಂಗ್ ವಿರೋಧಿ ನಿಯಮಗಳನ್ನು ಪಾಲನೆ ಮಾಡದ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕದ ರಾಷ್ಟ್ರಧ್ವಜದ ಪ್ರದರ್ಶನ ನಿಷೇಧ ಸೇರಿದಮತೆ ಹಲವು ನಿರ್ಬಂಧಗಳಿಗೆ ಒಳಪಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ : ವಿಶ್ವಕಪ್ 2023 : ಟೀಂ ಇಂಡಿಯಾ ನಾಯಕತ್ವ ಕಳೆದುಕೊಂಡ ರೋಹಿತ್ ಶರ್ಮಾ !
2021 ರಲ್ಲಿ ಜಾರಿಗೆ ಬಂದಿರುವ ವಾಡಾ ಕೋಡ್ ಅನ್ನು ದಕ್ಷಿಣ ಆಫ್ರಿಕಾದ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಘಟನೆ (NADO) ಪಾಲಿಸಿಲ್ಲ. ಇನ್ನು ಕ್ರಿಕೆಟ್ ಅನ್ನು ಒಲಿಂಪಿಕ್ಸ್‌ಗೆ ತರುವ ನಿಟ್ಟಿನಲ್ಲಿ ಇದು ಅಡಚಣೆಯಾಗಿದೆ. ಒಲಿಂಪಿಕ್ಸ್‌ಗೆ ಕ್ರಿಕೆಟ್ ಸೇರ್ಪಡೆಯ ಕುರಿತು ಐಒಸಿ ಅಧಿಕಾರಿಗಳು ಮುಂದಿನ ವಾರ ಸಭೆ ಸೇರಲಿದ್ದು, ಈ ಕುರಿತು ತೀರ್ಮಾನವನ್ನು ಕೈಗೊಳ್ಳುವ ಸಾಧ್ಯತೆಯಿದೆ.
ExCo ವಿಶ್ವ ಡೋಪಿಂಗ್ ವಿರೋಧಿ ಕೋಡ್ (ಕೋಡ್) ನೊಂದಿಗೆ ಮೂರು ಡೋಪಿಂಗ್ ವಿರೋಧಿ ಸಂಸ್ಥೆಗಳ (ADOs) ಒಳಪಡುವುದಕ್ಕೆ ಎರಡು ರಾಷ್ಟ್ರೀಯ ಉದ್ದೀಪನ ಮದ್ದು ಸೇವನೆ-ವಿರೋಧಿ ಸಂಸ್ಥೆಗಳು (NADOಗಳು) ಬರ್ಮುಡಾ ಮತ್ತು ದಕ್ಷಿಣ ಆಫ್ರಿಕಾ ಒಳಪಟ್ಟಿಲ್ಲ.
ಇದನ್ನೂ ಓದಿ : ವಿಶ್ವಕಪ್‌ನಲ್ಲಿ ವೇಗವಾಗಿ 1000 ರನ್ : ಸಚಿನ್ ತೆಂಡೂಲ್ಕರ್ ದಾಖಲೆ ಮುರಿದ ಡೇವಿಡ್ ವಾರ್ನರ್
ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾಕ್ಕೆ ಸಂಪೂರ್ಣ ನಿಷೇಧ ಹೇರಿಕೆಯ ವರದಿಯನ್ನು ತಳ್ಳಿ ಹಾಕಿದೆ. ದಕ್ಷಿಣ ಆಫ್ರಿಕಾದ ಧ್ವಜವನ್ನು ಪ್ರಾದೇಶಿಕ ಮತ್ತು ವಿಶ್ವ ಚಾಂಫಿಯನ್ ಶಿಪ್ ಹಾಗೂ ಪ್ರಮುಖ ಕ್ರೀಡಾಕೂಟಗಳಲ್ಲಿ ( ಒಲಿಂಪಿಕ್ಸ್, ಪ್ಯಾರಾಲಂಪಿಕ್ ಕ್ರೀಡಾಕೂಟ ಹೊರತು ಪಡಿಸಿ) SAIDS (ದಕ್ಷಿಣ ಆಫ್ರಿಕಾದ ಡ್ರಗ್-ಫ್ರೀ ಸ್ಪೋರ್ಟ್ ಸಂಸ್ಥೆ) ಮರುಸ್ಥಾಪಿಸುವವರೆಗೆ ಹಾರಿಸಲು ಸಾಧ್ಯವಿಲ್ಲ.

SAIDS ಅನ್ನು ಮರುಸ್ಥಾಪಿಸುವವರೆಗೆ ಒಲಿಂಪಿಕ್ ಕ್ರೀಡಾಕೂಟ ಮತ್ತು ಪ್ಯಾರಾಲಿಂಪಿಕ್ (Para Olympic) ಕ್ರೀಡಾಕೂಟಗಳಲ್ಲಿ ದಕ್ಷಿಣ ಆಫ್ರಿಕಾದ ಧ್ವಜವನ್ನು ಹಾರಿಸಲಾಗುವುದಿಲ್ಲ. ಇನ್ನು ಪ್ರಸಕ್ತ ಸಾಲಿನ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡ ಉತ್ತಮ ಪ್ರದರ್ಶನವನ್ನು ನೀಡಿದೆ.
ಇದನ್ನೂ ಓದಿ : KL ರಾಹುಲ್, ವಿರಾಟ್ ಕೊಹ್ಲಿ ಆಕರ್ಷಕ ಅರ್ಧಶತಕ : ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ದ ಭಾರತಕ್ಕೆ ಗೆಲುವು
ಶ್ರೀಲಂಕಾ ವಿರುದ್ದದ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಭರ್ಜರಿ ಗೆಲುವು ದಾಖಲಿಸಿದೆ. ದಕ್ಷಿಣ ಆಪ್ರಿಕಾ ತಂಡದ ಮೂವರು ಆಟಗಾರರು ಶತಕ ಸಿಡಿಸಿದ್ದಾರೆ. ದಕ್ಷಿಣ ಆಫ್ರಿಕಾ ತಂಡ ಅಕ್ಟೋಬರ್ 12 ರಂದು ಆಸ್ಟ್ರೇಲಿಯಾ ವಿರುದ್ದ ಸೆಣೆಸಲಿದೆ. ನಂತರ ನೆದರ್‌ಲ್ಯಾಂಡ್ ಹಾಗೂ ಇಂಗ್ಲೆಂಡ್ ವಿರುದ್ದ ಪಂದ್ಯಗಳನ್ನು ಆಡಬೇಕಾಗಿದೆ.
ಈ ಬಾರಿ ವಿಶ್ವಕಪ್‌ನಲ್ಲಿ ಫೈನಲ್‌ಗೆ ಎಂಟ್ರಿಕೊಡುವ ತಂಡಗಳ ಪೈಕಿ ದಕ್ಷಿಣ ಆಫ್ರಿಕಾ ಕೂಡ ಒಂದಾಗಿದೆ. ಇದೀಗ ವಾಡಾ ನಿಷೇಧದ ಭೀತಿ ದಕ್ಷಿಣ ಆಫ್ರಿಕಾದ ಆಟಗಾರರನ್ನು ಕಂಗೆಡಿಸಿದೆ. ಆದರೆ ನಿಷೇಧದ ಕುರಿತು ಯಾವುದೇ ಅಧಿಕೃತ ಮಾಹಿತಿಗಳು ಇದುವರೆಗೂ ಹೊರಬಿದ್ದಿಲ್ಲ.
WADA ban faces for the South Africa cricket team in the World Cup 2023