KL ರಾಹುಲ್‌, ವಿರಾಟ್‌ ಕೊಹ್ಲಿ ಆಕರ್ಷಕ ಅರ್ಧಶತಕ : ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ದ ಭಾರತಕ್ಕೆ ಗೆಲುವು

ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣ ಆಸ್ಟ್ರೇಲಿಯಾದ ಪಾಲಿಗೆ ಅದೃಷ್ಟದ ಮೈದಾನ. ಆದರೆ ಕೆಎಲ್‌ ರಾಹುಲ್‌ (KL Rahul) , ವಿರಾಟ್‌ ಕೊಹ್ಲಿ( Virat Kohli) ಆಕರ್ಷಕ ಬ್ಯಾಟಿಂಗ್‌, ರವೀಂದ್ರ ಜಡೇಜಾ, ಕುಲದೀಪ್‌ ಯಾದವ್‌ ಬೌಲಿಂಗ್‌ ದಾಳಿಗೆ ಆಸ್ಟ್ರೇಲಿಯಾ (india vs Australia) ಸೋಲು ಕಂಡಿದೆ.

ಚೆನ್ನೈ : ಏಕದಿನ ಕ್ರಿಕೆಟ್‌ ವಿಶ್ವಕಪ್‌ನಲ್ಲಿ ( ICC Cricket World Cup 2023) ಭಾರತ ಕ್ರಿಕೆಟ್‌ ತಂಡ (Indian Cricket Team win)  ಭರ್ಜರಿ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ಕನ್ನಡಿಗ ಕೆಎಲ್‌ ರಾಹುಲ್‌ (KL Rahul) ಹಾಗೂ ವಿರಾಟ್‌ ಕೊಹ್ಲಿ (Virat Kohli) ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ಭಾರತ ಆಸ್ಟ್ರೇಲಿಯಾ ವಿರುದ್ದ (India Vs Australia) ಭರ್ಜರಿ 6 ವಿಕೆಟ್‌ಗಳ ಗೆಲುವು ದಾಖಲಿಸಿದೆ.

ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್‌ ನಡೆಸಿದೆ. ಆದ್ರೆ ಆಸ್ಟ್ರೇಲಿಯಾ ತಂಡಕ್ಕೆ ಜಸ್ಪ್ರಿತ್‌ ಬೂಮ್ರಾ ಆರಂಭಿಕ ಆಘಾತ ನೀಡಿದ್ರು. ಮಿಚಲ್‌ ಮಾರ್ಶ್‌ ಅವರನ್ನು ಶೂನ್ಯಕ್ಕೆ ಬಲಿ ಪಡೆದ್ರು. ಆದರೆ ಡೇವಿಡ್‌ ವಾರ್ನರ್‌ಗೆ ಜೊತೆಯಾದ ಸ್ಟೀವ್‌ ಸ್ಮಿತ್‌ ಉತ್ತಮ ಜೊತೆಯಾಟ ವಾಡಿದ್ದಾರೆ.

KL Rahul, Virat Kohli impressive fifties IND vs AUS India win against Australia in ODi Cricket World Cup 2023
Image Credit : BCCI

52 ಎಸೆತಗಳಲ್ಲಿ 41 ರನ್‌ ಗಳಿಸಿ ಆಡುತ್ತಿದ್ದ ಡೇವಿಡ್‌ ವಾರ್ನರ್‌ ಕುಲದೀಪ್‌ ಯಾದವ್‌ಗೆ ವಿಕೆಟ್‌ ಒಪ್ಪಿಸಿದ್ದಾರೆ. ನಂತರ ಸ್ಟೀವ್‌ ಸ್ಮಿತ್‌ ತಾಳ್ಮೆಯ ಬ್ಯಾಟಿಂಗ್‌ ನಡೆಸಿದ್ದಾರೆ. 71 ಎಸೆತಗಳಲ್ಲಿ 46 ರನ್‌ ಗಳಿಸಿ ಆಡುತ್ತಿದ್ದ ವೇಳೆಯಲ್ಲಿ ರವೀಂದ್ರ ಜಡೇಜಾಗೆ ವಿಕೆಟ್‌ ಒಪ್ಪಿಸಿದ್ದಾರೆ. ನಂತರ ಲಾಬುಶಂಗೆ ಸ್ವಲ್ಪ ಹೊತ್ತು ತಂಡವನ್ನು ಆಧರಿಸಿದ್ರೂ ಕೂಡ ಅವರ ಆಟ ಕೇವಲ 27ರನ್‌ಗಳಿಗೆ ಕೊನೆಯಾಯ್ತು.

ಆದರೆ ಭಾರತೀಯ ಬೌಲರ್‌ಗಳು ಆಸ್ಟ್ರೇಲಿಯಾದ ಆಟಗಾರರನ್ನು ನೆಲಕಚ್ಚಿ ಆಡುವುದಕ್ಕೆ ಅವಕಾಶವನ್ನೇ ನೀಡಲಿಲ್ಲ. ಅಲೆಕ್ಸ್‌ ಕ್ಯಾರಿ ಕೇವಲ ಶೂನ್ಯಕ್ಕೆ ಜಡೇಜಾ ಎಸೆತದಲ್ಲಿ ಎಲ್‌ಬಿಡಬ್ಲ್ಯು ಆಗಿ ವಿಕೆಟ್‌ ಒಪ್ಪಿಸಿದ್ದಾರೆ. ನಂತರ ಗ್ರೀನ್‌ ಆಟವೂ ಕೂಡ 6 ರನ್‌ಗಳಿಗೆ ಕೊನೆಯಾಯ್ತು.

ಇದನ್ನೂ ಓದಿ : ವಿಶ್ವಕಪ್‌ನಲ್ಲಿ ವೇಗವಾಗಿ 1000 ರನ್ : ಸಚಿನ್‌ ತೆಂಡೂಲ್ಕರ್‌ ದಾಖಲೆ ಮುರಿದ ಡೇವಿಡ್‌ ವಾರ್ನರ್‌

ಆಲ್‌ರೌಂಡರ್‌ ಮ್ಯಾಕ್ಸ್‌ವೆಲ್‌ 16 ರನ್‌ ಗಳಿಸಿದ್ರೆ ಮಿಚನ್‌ ಸ್ಟಾರ್ಕ್‌ 28  ರನ್‌ ಸಿಡಿಸಿದ್ದಾರೆ. ಅಂತಿಮವಾಗಿ ಆಸ್ಟ್ರೇಲಿಯಾ ತಂಡ 49.3  ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡು 199 ರನ್‌ ಬಾರಿಸಿದೆ. ಭಾರತ ತಂಡದ ಪರ ರವೀಂದ್ರ ಜಡೇಜಾ 28 ಕ್ಕೆ 3, ಕುಲದೀಪ್‌ ಯಾದವ್‌ 42 ಕ್ಕೆ 2  ಹಾಗೂ ಜಸ್ಪ್ರಿಯ್‌ ಬೂಮ್ರಾ 35 ಕ್ಕೆ 2 ವಿಕೆಟ್‌ ಪಡೆದುಕೊಂಡ್ರೆ, ಮೊಹಮ್ಮದ್‌ ಸಿರಾಜ್‌, ಹಾರ್ದಿಕ್‌ ಪಾಂಡ್ಯ ಹಾಗೂ ಆರ್‌.ಅಶ್ವಿನ್‌ ತಲಾ ಒಂದೊಂದು ವಿಕೆಟ್‌ ಪಡೆದುಕೊಂಡಿದ್ದಾರೆ.

KL Rahul, Virat Kohli impressive fifties IND vs AUS India win against Australia in ODi Cricket World Cup 2023
Image Credit : BCCI

ಶೂನ್ಯಕ್ಕೆ 3 ವಿಕೆಟ್‌ ಪತನ ಕಂಡ ಭಾರತ !

ಆಸ್ಟ್ರೇಲಿಯಾ ವಿರುದ್ದದ ಮೊದಲ ಪಂದ್ಯಕ್ಕೆ ಜ್ವರದಿಂದ ಬಳಲುತ್ತಿರುವ ಶುಭಮನ್‌ ಗಿಲ್‌ ಅಲಭ್ಯರಾಗಿದ್ದರು. ಈ ಹಿನ್ನೆಲೆಯಲ್ಲಿ ತಂಡದಲ್ಲಿ ಸ್ಥಾನ ಪಡೆದಿದ್ದ ಇಶಾನ್‌ ಕಿಶನ್‌ ರೋಹಿತ್‌ ಶರ್ಮಾ ಜೊತೆಗೆ ಇನಿಂಗ್ಸ್‌ ಆರಂಭಿಸಿದ್ದಾರೆ. ಆದರೆ ಇಶಾನ್‌ ಕಿಶನ್‌, ರೋಹಿತ್‌ ಶರ್ಮ ಹಾಗೂ ಶ್ರೇಯಸ್‌ ಅಯ್ಯರ್‌ ಶೂನ್ಯಕ್ಕೆ ವಿಕೆಟ್‌ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದ್ದಾರೆ.

ಶುಭಮನ್ ಗಿಲ್‌ ಬದಲು ಆರಂಭಿನಾಗಿ ಅವಕಾಶ ಪಡೆದಿದ್ದ ಇಶಾನ್ ಕಿಶನ್‌ 1 ಎಸೆತಕ್ಕೆ ಔಟಾದ್ರೆ, ಭಾರತ ತಂಡ ನಾಯಕ ರೋಹಿತ್‌ ಶರ್ಮಾ 6 ಎಸೆತ ಎದುರಿಸಿದ್ರೂ ಖಾತೆ ತೆರೆಯಲು ಪರದಾಟ ನಡೆಸಿದ್ದಾರೆ. ಇನ್ನು ಒಂದನೇ ಕ್ರಮಾಂಕದಲ್ಲಿ ಭಡ್ತಿ ಪಡೆದಿದ್ದ  ಶ್ರೇಯಸ್‌ ಅಯ್ಯರ್‌ 3 ಎಸೆತಕ್ಕೆ ಶೂನ್ಯ ರನ್‌ ಗಳಿಸಿ ಔಟಾಗಿದ್ದಾರೆ.

KL Rahul, Virat Kohli impressive fifties IND vs AUS India win against Australia in ODi Cricket World Cup 2023
Image Credit to Original Source

ಕೆಎಲ್‌ ರಾಹುಲ್‌ – ವಿರಾಟ್‌ ಕೊಹ್ಲಿ ಶತಕದ ಜೊತೆಯಾಟ

ಭಾರತದ ಮೂವರು ಆಟಗಾರರು ಶೂನ್ಯಕ್ಕೆ ಔಟಾಗುತ್ತಿದ್ದಂತೆಯೇ ಕ್ರೀಸ್‌ಗೆ ಆಗಮಿಸಿದ ಕನ್ನಡಿಗ ಕೆಎಲ್‌ ರಾಹುಲ್‌ ವಿರಾಟ್‌ ಕೊಹ್ಲಿಯ ಜೊತೆ ಸೇರಿ ಇನ್ನಿಂಗ್ಸ್‌ ಕಟ್ಟುವ ಕಾರ್ಯವನ್ನು ಮಾಡಿದ್ದಾರೆ. ಆರಂಭದಿಂದಲೂ ಇಬ್ಬರೂ ಆಟಗಾರರು ಕೂಡ ಎಚ್ಚರಿಕೆಯ ಆಟ ಆಟಕ್ಕೆ ಮುಂದಾಗಿದ್ರು.

ಇದನ್ನೂ ಓದಿ : ಏಷ್ಯನ್‌ ಗೇಮ್ಸ್‌ ಕ್ರಿಕೆಟ್‌ ಫೈನಲ್‌ ಮಳೆಯಿಂದ ರದ್ದು : ಅಫ್ಘಾನಿಸ್ತಾನದ ವಿರುದ್ದ ಐತಿಹಾಸಿಕ ಚಿನ್ನ ಗೆದ್ದ ಭಾರತ

ವಿರಾಟ್‌ ಕೊಹ್ಲಿ 116 ಎಸೆತಗಳಲ್ಲಿ 6 ಬೌಂಡರಿ ನೆರವಿನಿಂದ ೮೫ ರನ್‌ ಬಾರಿಸಿದ್ರೆ, ಕನ್ನಡಿಗ ಕೆಎಲ್‌ ರಾಹುಲ್‌ 115 ಎಸೆತಗಳನ್ನು ಎದುರಿಸಿ 8 ಬೌಂಡರಿ ಹಾಗೂ 2 ಸಿಕ್ಸರ್‌ ನೆರವಿನಿಂದ 97 ರನ್‌ ಬಾರಿಸಿದ್ದಾರೆ. ಅಂತಿಮ ಹಂತದಲ್ಲಿ ವಿರಾಟ್‌ ಕೊಹ್ಲಿ ವಿಕೆಟ್‌ ಒಪ್ಪಿಸಿದ್ರೂ ಕೂಡ ರಾಹುಲ್‌ ಹಾಗೂ ಹಾರ್ದಿಕ್‌ ಪಾಂಡ್ಯ ಭಾರತಕ್ಕೆ ಗೆಲುವನ್ನು ತಂದುಕೊಟ್ಟಿದ್ದಾರೆ.

ಆಸ್ಟ್ರೇಲಿಯಾಕ್ಕೆ ಅದೃಷ್ಟ ಚೆನ್ನೈ ಮೈದಾನದಲ್ಲಿ ಮೊದಲ ಸೋಲು

ಆಸ್ಟ್ರೇಲಿಯಾ ಕ್ರಿಕೆಟಿಗರ ಪಾಲಿಗೆ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣ ಅದೃಷ್ಟದ ಮೈದಾನ. ವಿಶ್ವಕಪ್‌ ಪಂದ್ಯಾವಳಿಯಲ್ಲಿ ಆಸ್ಟ್ರೇಲಿಯಾ ಇದುವರೆಗೆ ಚೆನ್ನೈ ಮೈದಾನದಲ್ಲಿ ಒಟ್ಟು 4 ಪಂದ್ಯಗಳನ್ನು ಆಡಿದ್ದು, ಮೂರರಲ್ಲಿ ಗೆಲುವು ಕಂಡಿತ್ತು.

1987 ರಲ್ಲಿ ಆಸ್ಟ್ರೇಲಿಯಾ ತಂಡ ಭಾರತ ವಿರುದ್ದ ಇದೇ ಚೆನನೈಮೈದಾನದಲ್ಲಿ ಗೆಲುವು ಕಂಡಿತ್ತು. ಅದೇ ವರ್ಷ ಜಿಂಬಾಬ್ವೆ ವಿರುದ್ದದ ಪಂದ್ಯದಲ್ಲೂ ಜಯಿಸಿತ್ತು. 1996 ರಲ್ಲಿ ನ್ಯೂಜಿಲೆಂಡ್‌ ವಿರುದ್ದ ಆಸ್ಟ್ರೇಲಿಯಾ ಭರ್ಜರಿ ಗೆಲುವು ದಾಖಲಿಸಿದ್ದು ಇದೀಗ 2023 ರ ವಿಶ್ವಕಪ್‌ ನಲ್ಲಿ ಭಾರತ ವಿರುದ್ದ ಸೋಲನ್ನು ಕಂಡಿದ್ದು, ಆಸ್ಟ್ರೇಲಿಯನ್ನರಿಗೆ ಇದೇ ಮೊದಲ ಸೋಲಾಗಿದೆ.

KL Rahul, Virat Kohli impressive fifties IND vs AUS India win against Australia in ODi Cricket World Cup 2023
Image Credit : BCCI

ವಿಶ್ವಕಪ್‌ನಲ್ಲಿ ವಿಶ್ವದಾಖಲೆಗೆ ಬರೆದ ವಿರಾಟ್‌ ಕೊಹ್ಲಿ

ಆಸ್ಟ್ರೇಲಿಯಾ ವಿರುದ್ದ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಸಿಡಿಸುವ ಮೂಲಕ ಭಾರತ ತಂಡ ವಿರಾಟ್‌ ಕೊಹ್ಲಿ ಎರಡು ವಿಶ್ವದಾಖಲೆಯನ್ನು ತನ್ನ ಹೆಸರಿಗೆ ಬರೆಯಿಸಿಕೊಂಡಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ಬಾರಿ ಅರ್ಧ ಶತಕ ಸಿಡಿಸಿ ಆಟಗಾರ ಅನ್ನೋ ಖ್ಯಾತಿಗೆ ಪಾತ್ರರಾಗಿದ್ದಾರೆ.

ವಿರಾಟ್‌ ಕೊಹ್ಲಿ ಒಟ್ಟು 113 ಅರ್ಧ ಶತಕ ಸಿಡಿಸಿದ್ರೆ, ಕುಮಾರ್‌ ಸಂಗಕ್ಕರ್‌ 122 , ರಿಕಿ ಪಾಂಟಿಂಗ್‌ 109  ಹಾಗೂ ಜಾಕ್‌ ಕಾಲಿಸ್‌ 106 ಬಾರಿ ಅರ್ಧ ಶತಕ ಬಾರಿಸಿದ್ದರು. ಇನ್ನು ವಿರಾಟ್‌ ಕೊಹ್ಲಿ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ದಾಖಲೆಯನ್ನು ಸರಿಗಟ್ಟಿದ್ದಾರೆ.

ಇದನ್ನೂ ಓದಿ : ವಿಶ್ವಕಪ್‌ನಲ್ಲಿ ಗರಿಷ್ಠ ಸ್ಕೋರ್‌ ದಾಖಲಿಸಿದ ದಕ್ಷಿಣ ಆಫ್ರಿಕಾ : ವೇಗದ ಶತಕ ಸಿಡಿಸಿದ ಮಕ್ರಮ್‌

ಭಾರತ ಪರ ವಿಶ್ಬಕಪ್‌ನಲ್ಲಿ ಅತೀ ಹೆಚ್ಚು ರನ್‌ ಗಳಿಸಿದವರ ಸಾಲಿನಲ್ಲಿ ಸಚಿನ್‌ ತೆಂಡೂಲ್ಕರ್‌ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಇದೀಗ ವಿರಾಟ್‌ ಕೊಹ್ಲಿ ಅಳಿಸಿ ಹಾಕಿದ್ದಾರೆ. ವಿರಾಟ್‌ ಕೊಹ್ಲಿ 64 ಇನ್ನಿಂಗ್ಸ್‌ಗಳಲ್ಲಿ 2785  ರನ್‌ ಗಳಿಸುವ ಮೂಲಕ ಭಾರತ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ.

ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ 58  ಇನ್ನಿಂಗ್ಸ್‌ಗಳಲ್ಲಿ 2719 ರನ್‌ ಬಾರಿಸಿದ್ರೆ, ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ 64 ಇನ್ನಿಂಗ್ಸ್‌ಗಳಲ್ಲಿ 2422 ರನ್‌, ಯುವರಾಜ್‌ ಸಿಂಗ್‌ 62 ಇನ್ನಿಂಗ್ಸ್‌ಗಳಲ್ಲಿ 1707 , ಸೌರವ್‌ ಗಂಗೂಲಿ 32 ಇನ್ನಿಂಗ್ಸ್‌ಗಳಲ್ಲಿ 1671 ರನ್‌ ಗಳಿಸಿದ್ದರು.

KL Rahul, Virat Kohli impressive fifties IND vs AUS India win against Australia in ODi Cricket World Cup 2023
Image Credit : BCCI

ಆಸ್ಟ್ರೇಲಿಯಾ ವಿರುದ್ದ ಕನ್ನಡಿಗ ರಾಹುಲ್‌ ದಾಖಲೆ

ಇನ್ನು ವಿರಾಟ್‌ ಕೊಹ್ಲಿ ಮಾತ್ರವಲ್ಲ ಕನ್ನಡಿಗ ಕೆಎಲ್‌ ರಾಹುಲ್‌ ಕೂಡ ಆಸ್ಟ್ರೇಲಿಯಾ ವಿರುದ್ದದ ಪಂದ್ಯದಲ್ಲಿ ವಿಶಿಷ್ಟ ದಾಖಲೆಯೊಂದನ್ನು ಬರೆದಿದ್ದಾರೆ. ಆಸ್ಟ್ರೇಲಿಯಾ ವಿರುದ್ದ ಭಾರತ ಪರ ಪಂದ್ಯವೊಂದರಲ್ಲಿ ಅತೀ ಹೆಚ್ಚು ರನ್‌ ಗಳಿಸಿ ಮೂರನೇ ಆಟಗಾರ ಎನಿಸಿಕೊಂಡಿದ್ದಾರೆ.

ಈ ಹಿಂದೆ 1991 ರಲ್ಲಿ ಅಜೆಯ್‌ ಜಡೇಜಾ ಓವಲ್‌ ಮೈದಾನದಲ್ಲಿ 100 ರನ್‌ ಬಾರಿಸಿದ್ದರು. ಈ ದಾಖಲೆಯನ್ನು 2019 ರಲ್ಲಿ ಟೀಂ ಇಂಡಿಯಾದ ಆರಂಭಿಕ ಆಟಗಾರ ಓವಲ್‌ನಲ್ಲಿ 117 ರನ್‌ ಬಾರಿಸುವ ಮೂಲಕ ಅಳಿಸಿ ಹಾಕಿದ್ದರು. ಇದೀಗ ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ 97 ರನ್‌ ಸಿಡಿಸುವ ಮೂಲಕ ಕೆಎಲ್‌ ರಾಹುಲ್‌ ಈ ಸಾಧನೆ ಮಾಡಿದ ಮೂರನೇ ಆಟಗಾರ ಎನಿಸಿಕೊಂಡಿದ್ದಾರೆ.

KL Rahul, Virat Kohli impressive fifties IND vs AUS India win against Australia in ODi Cricket World Cup 2023

Comments are closed.