Virat Kohli – Smriti Mandhana: ರಾಯಲ್ ಚಾಲೆಂಜರ್ಸ್ ತಂಡದಲ್ಲಿ ನಂ.18 ಸಮಾಗಮ

ಬೆಂಗಳೂರು: Virat Kohli – Smriti Mandhana : ಒಬ್ಬ ಕ್ರಿಕೆಟ್ ಜಗತ್ತಿನ ಶ್ರೇಷ್ಠ ಬ್ಯಾಟ್ಸ್’ಮನ್. ಮತ್ತೊಬ್ಬಾಕೆ ಮಹಿಳಾ ಕ್ರಿಕೆಟ್ ಜಗತ್ತಿನ ಶ್ರೇಷ್ಠ ಬ್ಯಾಟರ್. ಇಬ್ಬರ ಜರ್ಸಿ ನಂಬರ್ ಕೂಡ ಒಂದೇ. ಇದೀಗ ಆ ಇಬ್ಬರೂ ತಾರೆಯರು ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡದಲ್ಲಿದ್ದಾರೆ. ನಾವು ಹೇಳ್ತಿರೋದು ಟೀಮ್ ಇಂಡಿಯಾದ ರನ್ ಮಷಿನ್ ವಿರಾಟ್ ಕೊಹ್ಲಿ (Virat Kohli) ಮತ್ತು ಮಹಿಳಾ ಕ್ರಿಕೆಟ್’ನ ಸೂಪರ್ ಸ್ಟಾರ್ ಸ್ಮೃತಿ ಮಂಧನ (Smriti Mandhana) ಬಗ್ಗೆ.

https://twitter.com/Trend_VKohli/status/1625107789319385089?s=20&t=Wsfx-nEHaiLM0WkV-HnWDA

ಮುಂಬೈನಲ್ಲಿ ನಡೆದ ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ (Women’s Premier League) ಟೂರ್ನಿಗೆ ನಡೆದ ಆಟಗಾರ್ತಿಯರ ಹರಾಜಿನಲ್ಲಿ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ಸ್ಮೃತಿ ಮಂಧನ (Smriti Mandhana) ಅತೀ ಹೆಚ್ಚು ಮೊತ್ತಕ್ಕೆ ಮಾರಾಟವಾಗಿದ್ದಾರೆ.

ಎಡಗೈ ಬ್ಯಾಟರ್ ಮಂಧನ 3.4 ಕೋಟಿ ಮೊತ್ತಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸೇಲ್ ಆಗಿದ್ದಾರೆ. ಮಹಾರಾಷ್ಟ್ರದ ಸಾಂಗ್ಲಿಯವರಾದ ಸ್ಮೃತಿ ಮಂಧನ ಅವರನ್ನು ಖರೀದಿಸಲು ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ತಂಡಗಳ ಮಧ್ಯೆ ಭಾರೀ ಪೈಪೋಟಿ ಏರ್ಪಟ್ಟಿತ್ತು. ಆದರೆ ಕೊನೆಯಲ್ಲಿ ಮುಂಬೈ ಫ್ರಾಂಚೈಸಿಯ ಪೈಪೋಟಿಯನ್ನು ಮೆಟ್ಟಿ ನಿಂತ ರಾಯಲ್ ಚಾಲೆಂಜರ್ಸ್, ಸ್ಟಾರ್ ಆಟಗಾರ್ತಿಯನ್ನು ತನ್ನ ಮಡಿಲಿಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಯ್ತು.

ಸ್ಮೃತಿ ಮಂಧನ ಅವರ ಜರ್ಸಿ ನಂಬರ್ 18. ಇದೇ ಜರ್ಸಿ ನಂಬರ್ ಅನ್ನು ವಿರಾಟ್ ಕೊಹ್ಲಿ ಬಳಸುತ್ತಿದ್ದಾರೆ. 2008ರಿಂದಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುತ್ತಿರುವ ವಿರಾಟ್ ಕೊಹ್ಲಿ, ಒಂದು ರೀತಿಯಲ್ಲಿ ಬೆಂಗಳೂರಿನ ಮನೆಮಗನೇ ಆಗಿ ಬಿಟ್ಟಿದ್ದಾರೆ. ಜರ್ಸಿ ನಂಬರ್ 18ರ ಇಬ್ಬರೂ ಸೂಪರ್ ಸ್ಟಾರ್’ಗಳು ಒಂದೇ ತಂಡದಲ್ಲಿ ಕಾಣಿಸಿಕೊಂಡಿರುವುದಕ್ಕೆ ಕರ್ನಾಟಕ ಕ್ರಿಕೆಟ್ ಪ್ರಿಯರು ಸಾಮಾಜಿಕ ಜಾಲತಾಣದಲ್ಲಿ ಹರ್ಷ ವ್ಯಕ್ತಪಡಿಸುತ್ತಿದ್ದಾರೆ.

https://twitter.com/realpkmkb/status/1625062591667265536?s=20&t=Wsfx-nEHaiLM0WkV-HnWDA

ಟೀಮ್ ಇಂಡಿಯಾ ನಾಯಕಿ ಹರ್ಮನ್ ಪ್ರೀತ್ ಕೌರ್ 1.8 ಕೋಟಿ ಮೊತ್ತಕ್ಕೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಮಾರಾಟವಾಗಿದ್ದಾರೆ. ಟೀಮ್ ಇಂಡಿಯಾದ ಮತ್ತೊಬ್ಬ ತಾರೆ ಜೆಮೈಮಾ ರಾಡ್ರಿಗ್ಸ್ 2.2 ಕೋಟಿ ಮೊತ್ತಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೇರಿದ್ದಾರೆ.

ಇಲ್ಲಿಯರೆಗಿನ ಹರಾಜಿನಲ್ಲಿ ಯಾರು ಯಾರು ಯಾವ ಯಾವ ತಂಡಕ್ಕೆ ಮಾರಾಟವಾಗಿದ್ದಾರೆ ಎಂಬ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು:
ಸ್ಮೃತಿ ಮಂಧನ: 3.4 ಕೋಟಿ
ರಿಚಾ ಘೋಷ್: 1.9 ಕೋಟಿ
ರೇಣುಕಾ ಠಾಕೂರ್: 1.5 ಕೋಟಿ
ಎಲೀಸ್ ಪೆರಿ (ಆಸ್ಟ್ರೇಲಿಯಾ): 1.7 ಕೋಟಿ
ಸೋಫೀ ಡಿವೈನ್ (ನ್ಯೂಜಿಲೆಂಡ್): 50 ಲಕ್ಷ

ಡೆಲ್ಲಿ ಕ್ಯಾಪಿಟಲ್ಸ್:
ಜೆಮೈಮಾ ರಾಡ್ರಿಗ್ಸ್: 2.2 ಕೋಟಿ
ಶೆಫಾಲಿ ವರ್ಮಾ: 2 ಕೋಟಿ
ಮೆಗ್ ಲ್ಯಾನಿಂಗ್ (ಆಸ್ಟ್ರೇಲಿಯಾ): 1.1 ಕೋಟಿ
ಮರಿಜೇನ್ ಕಪ್ (ದಕ್ಷಿಣ ಆಫ್ರಿಕಾ): 1.5 ಕೋಟಿ
ಶಿಖಾ ಪಾಂಡೆ: 60 ಲಕ್ಷ
ರಾಧಾ ಯಾದವ್: 40 ಲಕ್ಷ

ಗುಜರಾತ್ ಜೈಂಟ್ಸ್:
ಆಶ್ಲೆ ಗಾರ್ಡ್ನರ್ (ಆಸ್ಟ್ರೇಲಿಯಾ): 3.2 ಕೋಟಿ
ಬೆತ್ ಮೂನಿ (ಆಸ್ಟ್ರೇಲಿಯಾ): 2 ಕೋಟಿ
ಸೋಫಿಯಾ ಡಂಕ್ಲೀ (ಇಂಗ್ಲೆಂಡ್): 60 ಲಕ್ಷ
ದಿಯೇಂದ್ರ ಡಾಟಿನ್ (ವೆಸ್ಟ್ ಇಂಡೀಸ್): 60 ಲಕ್ಷ
ಹರ್ಲೀನ್ ಡಿಯೋಲ್: 40 ಲಕ್ಷ
ಅನ್ನಾಬೆಲ್ ಸದರ್ಲೆಂಡ್ (ಆಸ್ಟ್ರೇಲಿಯಾ): 70 ಲಕ್ಷ
ಸ್ನೇಹ್ ರಾಣಾ: 75 ಲಕ್ಷ

ಮುಂಬೈ ಇಂಡಿಯನ್ಸ್:
ಪೂಜಾ ವಸ್ತ್ರಕಾರ್: 1.9 ಕೋಟಿ
ಹರ್ಮನ್ ಪ್ರೀತ್ ಕೌರ್: 1.8 ಕೋಟಿ
ಯಸ್ತಿಕಾ ಭಾಟಿಯಾ: 1.5 ಕೋಟಿ
ಅಮೆಲಿಯಾ ಕೆರ್ (ನ್ಯೂಜಿಲೆಂಡ್): 1 ಕೋಟಿ
ನಥಾಲೀ ಸಿವರ್ (ಇಂಗ್ಲೆಂಡ್): 3.2 ಕೋಟಿ

ಯು.ಪಿ ವಾರಿಯರ್ಸ್:
ದೀಪ್ತಿ ಶರ್ಮಾ: 2.6 ಕೋಟಿ
ಸೋಫೀ ಎಕ್ಲಿಸ್ಟೋನ್ (ಇಂಗ್ಲೆಂಡ್): 1.8 ಕೋಟಿ
ತಹಿಲಾ ಮೆಗ್ರಾತ್ (ಆಸ್ಟ್ರೇಲಿಯಾ): 1.4 ಕೋಟಿ
ಶಬ್ನಿಮ್ ಇಸ್ಮಾಯಿಲ್ (ದಕ್ಷಿಣ ಆಫ್ರಿಕಾ): 1 ಕೋಟಿ
ಅಲೀಸಾ ಹೀಲಿ (ಆಸ್ಟ್ರೇಲಿಯಾ): 70 ಲಕ್ಷ
ರಾಜೇಶ್ವರಿ ಗಾಯಕ್ವಾಡ್ (ಭಾರತ): 70 ಲಕ್ಷ
ಶ್ರೇತಾ ಸೆಹ್ರಾವತ್: 40 ಲಕ್ಷ
ಪಾರ್ಷವಿ ಚೋಪ್ರಾ: 10 ಲಕ್ಷ

ಇದನ್ನೂ ಓದಿ : ಬೆಳಗಾವಿ ಕ್ರಿಕೆಟಿಗನ ಫೀಲ್ಡಿಂಗ್‌ಗೆ ಫಿದಾ ಆದ್ರು ತೆಂಡೂಲ್ಕರ್, ಅದ್ಭುತ ಕ್ಯಾಚ್‌ಗೆ ಬಹುಪರಾಕ್ ಅಂದ್ರು ಕ್ರಿಕೆಟ್ ದಿಗ್ಗಜರು

ಇದನ್ನೂ ಓದಿ : WPL Auction 2023: ರಾಯಲ್ ಚಾಲೆಂಜರ್ಸ್ ತಂಡ ಸೇರಿದ ಸ್ಮೃತಿ ಮಂಧನ, RCB ಟೀಮ್’ಗೆ ಆಸೀಸ್’ನ ಮೋಹಕ ತಾರೆ; ಯಾವ ತಂಡಕ್ಕೆ ಯಾರ್ಯಾರು..?

Women’s Premier League Virat Kohli – Smriti Mandhana in RCB Team

Comments are closed.