ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಗೆ ಸಜ್ಜಾದ ಟೀಂ ಇಂಡಿಯಾ : ಸ್ಟಾರ್ ಸ್ಪೋರ್ಟ್ ಬಿಡುಗಡೆ ಮಾಡಿದೆ ವಿಭಿನ್ನ ಪ್ರೋಮೋ

ನವದೆಹಲಿ : ಟೀಂ ಇಂಡಿಯಾ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಗೆ ಸಜ್ಜಾಗುತ್ತಿದೆ. ಜೂನ್ 18 ರಿಂದ 25ರ ವರೆಗೆ ಇಂಗ್ಲೆಂಡ್ ನಲ್ಲಿ ನಡೆಯಲಿರುವ ಫೈನಲ್ ಪಂದ್ಯಕ್ಕಾಗಿ ಅಭಿಮಾನಿಗಳು ಕಾದು ಕುಳಿತಿದ್ದಾರೆ‌. ಈ‌ ನಡುವಲ್ಲೇ ಸ್ಟಾರ್ ಸ್ಪೋರ್ಟ್ಸ್ ವಿಭಿನ್ನ ಪ್ರೋಮೋವೊಂದನ್ನು ಬಿಡುಗಡೆ ಮಾಡಿದೆ.

ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯದಲ್ಲಿ ಟೀಂ ಇಂಡಿಯಾ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಎರಡು ಬಲಾಡ್ಯ ತಂಡಗಳ ನಡುವೆ ರೋಚಕ‌ ಹಣಾಹಣಿ ನಡೆಯುವುದು ಖಚಿತ.

ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಾವಳಿಯ ಬೆನ್ನಲ್ಲೇ ಟೆಸ್ಟ್  ಚಾಂಪಿಯನ್ ಶಿಪ್ ನಡೆಯುವುದರಿಂದ ಟೀ ಇಂಡಿಯಾ ಸಕಲ ರೀತಿಯಲ್ಲಿಯೂ ತಾಲೀಮು ನಡೆಸುತ್ತಿದೆ. ವಿರಾಟ್ ಕೊಯ್ಲಿ ನಾಯಕತ್ವದ ಪಂದ್ಯಕ್ಕೆ ಆಡುವ 11ರ ಬಳಗದ ಬಗ್ಗೆ ಇನ್ನೂ ಯಾವುದೇ ಖಚಿತವಾಗಿಲ್ಲ. ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಬೆನ್ನಲ್ಲೇ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಹಾಗೂ ಏಕದಿನ ಸರಣಿಯನ್ನು ಭಾರತ ತಂಡ ಆಡಲಿದೆ.

ಇದೇ ಮೊದಲ ಬಾರಿಗೆ ನಡೆಯುತ್ತಿರುವ ವಲ್ಡ್ ಟೆಸ್ಟ್ ಚಾಂಪಿಯನ್ ಶಿಪ್ ಗಾಗಿ ಸ್ಟಾರ್ ಸ್ಪೋರ್ಟ್ಸ್ ಬಿಡುಗಡೆ ಮಾಡಿರುವ ಪ್ರೋಮೋ ಅಭಿಮಾನಿಗಳಿಗೆ ಖುಷಿಕೊಟ್ಟಿದೆ. ಭಾರತ ತಂಡದ ನಿರ್ಭೀತ ಪಯಣ ಅಂತಿಮ ಟೆಸ್ಟ್‌ ಮೂಲಕ ಕೊನೆಗೊಳ್ಳಲಿದೆಯೇ?’ ಎಂಬ ಸಾಲನ್ನೂ ಸ್ಟಾರ್ ಸ್ಪೋರ್ಟ್ ಟ್ವೀಟ್ ನಲ್ಲಿ ಬರೆದುಕೊಂಡಿದೆ.

Comments are closed.