Kamal Hassan : ಕಮಲ್ ಸಿನಿಮಾ ಮುಗೀತು! ನಾಯಕಿ ಯಾರು ಅನ್ನೋದು ಗುಪ್ತ್ ಗುಪ್ತ್…

ಇತ್ತ ರಾಜಕೀಯ ಅತ್ತ ಸಿನಿಮಾ ಎರಡು ರಂಗದ ಮೇಲೆ ಒಂದೊಂದು ಕಾಲಿಟ್ಟುಕೊಂಡು ಓಡಾಡುತ್ತಿರುವ ನಟ ಕಮಲ್ ಹಾಸನ್(Kamal Hassan) ಗೆ ಹೆಚ್ಚು ಒಲವು ಸಿನಿಮಾದ ಮೇಲೆಯೇ. ಕಮಲ್ ಹಾಸನ್ ಅಂದುಕೊಂಡಂತೆ ರಾಜಕೀಯದಲ್ಲಿ ಯಾವ ಮ್ಯಾಜಿಕ್ ಮಾಡಲಾಗಲಿಲ್ಲ. ಹೀಗಾಗಿ, ಅವರು ಮತ್ತೆ ಚಿತ್ರರಂಗಕ್ಕೆ(Kamal Hassan’s Vikram Movie) ಮರಳಿದ್ದಾರೆ. ಯಾವ ಮಟ್ಟಕ್ಕೆ ಅಂದರೆ, ಕಮಲ್ ಹಾಸನ್ ತಮಿಳಿನ ಬಿಗ್ ಬಾಸ್ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ವಿಕ್ರಮ್ ಸಿನಿಮಾ ಡೇಟ್ ಗೆ ಇದರಿಂದ ತೊಂದರೆ ಆಗುತ್ತಿದೆ ಹಾಗೂ ಎರಡೂ ಕಡೆ ಗಮನಕೊಡಲು ಆಗುತ್ತಿಲ್ಲ ಎಂದು ಬಹುಕೋಟಿ ಸಂಭಾವನೆಯ ಬಿಗ್ ಬಾಸ್ ಕಾರ್ಯಕ್ರಮವನ್ನು ಅರ್ಧಕ್ಕೆ ತೊರೆದರು. ಹೀಗಿದೆ ಅವರ ಸಿನಿಮಾ ಪ್ರೀತಿ.

ವಿಕ್ರಮ್ ಸಿನಿಮಾ ಬಹುತಾರಾಗಣದಿಂದ ಕೂಡಿದ್ದು ಜೂನ್ 3ನೇ ತಾರೀಖು ತೆರೆಕಾಣಲಿದೆ. 67 ವರ್ಷದ ಕಮಲ್ ಹಾಸನ್ ಇದರಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಲನ್ ಆಗಿ ವಿಜಯ್ ಸೇತುಪತಿ ತೆರೆಗೆ ಬರಲಿರುವುದರಿಂದ ಅಭಿಮಾನಿಗಳ ಕುತೂಹಲ ನೂರ್ಮುಡಿಗೊಂಡಿದೆ. ಫಾಹದ್ ಫಾಸಿಲ್ ಕೂಡ ಚಿತ್ರದಲ್ಲಿ ನಟಿಸಿದ್ದಾರೆ ಅನ್ನೋದು ಪ್ಲಸ್ ಪಾಯಿಂಟ್. ಈ ಸಿನಿಮಾದ ಇನ್ನೊಂದು ವಿಶೇಷ ಅಂದರೆ, ಚಿತ್ರದ ನಾಯಕಿಯನ್ನು ಈ ತನಕ ಘೋಷಣೆ ಮಾಡಿಲ್ಲ. ಯಾರಿರಬಹುದು ಅನ್ನೋ ಕುತೂಹಲವನ್ನು ಹಾಗೇ ಚಿತ್ರ ತಂಡ ಕಾಪಿಟ್ಟುಕೊಂಡಿದೆ.

ಕಮಲ್ ಹೇಳಿಕೊಳ್ಳುವ ಪ್ರಕಾರ, ವಿಕ್ರಮ್ ತಮ್ಮ ಚಿತ್ರ ಬದುಕಿನ ಭಿನ್ನವಾದ ಸಿನಿಮಾವಂತೆ. ಅಭಿಮಾನಿಗಳಿಗಾಗಿಯೇ ಕೆಂಪು ಹಿನ್ನೆಲೆ ಹೊಂದಿರುವ ಪೋಸ್ಟರ್ ಒಂದನ್ನು ನಿರ್ದೇಶಕ ಲೋಕೇಶ್ ಕನಕರಾಜ್ ಬಿಡುಗಡೆ ಮಾಡಿದ್ದು, ಅದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಪೋಸ್ಟರ್ ನಲ್ಲಿ ಕಮಲ್ ಕೈಯಲ್ಲಿ ಲಾಂಗ್ ಇದೆ. ಸುತ್ತಲು ರಕ್ತ ಚಿಮ್ಮಿರುವಂತೆ ಪೋಸ್ಟರ್ ಮಾಡಿದ್ದಾರೆ. ಹೀಗಾಗಿ, ಇದೊಂದು ಪಕ್ಕಾ ಹೊಡಿಬಡೀ ಸಿನಿಮಾ ಎನ್ನುವುದು ಖಚಿತವಾಗಿದೆ.

ಇದನ್ನೂ ಓದಿ: Rajamouli Next Film Hero : ರಾಜಮೌಳಿ ಮುಂದಿನ ಚಿತ್ರದ ನಾಯಕ ಇವರೇನಾ…?ಕುತೂಹಲ ಮೂಡಿಸಿದ ಮುಂದಿನ ಚಿತ್ರ

ಕಳೆದ ವರ್ಷ ಜುಲೈ ತಿಂಗಳಲ್ಲಿ ವಿಕ್ರಮ್ ಸಿನಿಮಾ ಸೆಟ್ಟೇರಿತ್ತು. ಕೊರೋನ, ಲಾಕ್‌ಡೌನ್ ಗಳಿಂದಾಗಿ ಚಿತ್ರೀಕರಣ ತಡವಾಯಿತು. ಈ ಮಧ್ಯೆ ಕಮಲ್ ಶೂಟಿಂಗ್ ನಲ್ಲಿ ತೊಡಗಿಕೊಂಡಿರುವಾಗಲೇ ಕೊರೋನ ಸೋಂಕು ಹರಡಿತು. ಕೊನೆಗೆ ಮಾರ್ಚ್ 2, 2022ರಂದು ವಿಕ್ರಮ್ ಚಿತ್ರೀಕರಣ ಸಂಪೂರ್ಣಗೊಂಡಿತು, ಮಾರ್ಚ್ 16ರಂದು ಸಿನಿಮಾದ ಹೊಸ ಪೋಸ್ಟರ್ ಒಂದನ್ನು ಬಿಡುಗಡೆಗೊಳಿಸಿದೆ.

ಸಿನಿಮಾವನ್ನು ರಾಜ್ ಕಮಲ್ ಇಂಟರ್ ನ್ಯಾಷನಲ್ ಸಂಸ್ಥೆ ನಿರ್ಮಿಸುತ್ತಿದ್ದು, ಚಿತ್ರಕ್ಕೆ ಸಂಗೀತವನ್ನು ಅನಿರುಧ್ ರವಿಚಂದ್ರನ್ ಅವರದ್ದು. ಅರ್ಜುನ್ ದಾಸ್, ಕಾಳಿದಾಸ ಜಯರಾಮ್, ಶಿವಾನಿ ಮುಂತಾದವರು ತಾರಾಬಳಗದಲ್ಲಿದ್ದಾರೆ. ಛಾಯಾಗ್ರಹಣ ರಾಷ್ಟ್ರಪ್ರಶಸ್ತಿ ವಿಜೇತ ಗಿರೀಶ್ ಗಂಗಾಧರನ್.

ಈಗಾಗಲೇ ಚಿತ್ರದ ಡಿಜಿಟಲ್ ಮತ್ತು ಸ್ಯಾಟಲೈಟ್ ಹಕ್ಕುಗಳು ಸುಮಾರು 112 ಕೋಟಿಗೆ ಮಾರಾಟವಾಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಹೀಗೇನಾದರು ಆಗಿದ್ದರೆ, ಇಡೀ ಸಿನಿಮಾದ ಹೂಡಿಕೆ ಬಿಡುಗಡೆಯ ಮೊದಲು ನಿರ್ಮಾಪಕರ ಜೇಬು ಸೇರಿದಂತಾಯಿತು. ಇನ್ನು ಥಿಯೇಟರ್ ಕಲಕ್ಷನ್ ನಿಂದ ಬರುವ ಮೊತ್ತ ಸಂಪೂರ್ಣ ಲಾಭ ಎನ್ನುವ ಲೆಕ್ಕಾಚಾರವು ನಡೆಯುತ್ತಿದೆ.

ಇದನ್ನೂ ಓದಿ: Kabja : ಸೆಪ್ಟೆಂಬರ್ ಗೆ ಬಂದೇ ಬರ್ತದೇ ಸುದೀಪ್, ಉಪೇಂದ್ರ ಅಭಿನಯದ ಕಬ್ಜ!

(Kamal Hassan Vikrama film The team does not disclose the heroine in the film)

Comments are closed.