Hassan accident : ಹಾಸನ ಬಳಿ ಭೀಕರ ಅಪಘಾತ : 9 ಮಂದಿ ಸಾವು

ಹಾಸನ : (Hassan accident) ಅವರೆಲ್ಲಾ ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಶನ ಪಡೆದುಕೊಂಡು ಮನೆಗೆ ವಾಪಾಸಾಗುತ್ತಿದ್ದರು. ಸ್ವಲ್ಪ ಹೊತ್ತು ಕಳೆದಿದ್ರೆ ಮನೆಯನ್ನೂ ತಲುಪಿ ಬಿಡುತ್ತಿದ್ದರು. ಆದರೆ ಜವರಾಯ ಅವರ ಬದುಕಲ್ಲಿ ಅಟ್ಟಹಾಸ ಮೆರೆದಿದ್ದಾನೆ. ಬಸ್, ಟಿಟಿ ವಾಹನ ಹಾಗೂ ಟ್ಯಾಂಕರ್ ನಡುವೆ ನಡೆದ ಭೀಕರ ಅಪಘಾತದಲ್ಲಿ ನಾಲ್ವರು ಮಕ್ಕಳು ಸೇರಿದಂತೆ ಒಟ್ಟು ೯ ಮಂದಿ ಸಾವನ್ನಪ್ಪಿದ್ದಾರೆ. ಈ ದುರಂತ ಘಟನೆ ನಡೆದಿರೋದು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಬಾಣಾವರದಲ್ಲಿ.

ದೊಡ್ಡಯ್ಯ (60ವರ್ಷ), ಭಾರತಿ (50 ವರ್ಷ), ಲೀಲಾವತಿ (50 ವರ್ಷ), ಚೈತ್ರಾ (33 ವರ್ಷ), ಸಮರ್ಥ (10 ವರ್ಷ), ಡಿಂಪಿ (12 ವರ್ಷ ), ತನ್ಮಯ್ (10ವರ್ಷ ), ಧ್ರುವ (2 ವರ್ಷ), ವಂದನಾ (20 ವರ್ಷ) ಎಂಬವರೇ ಮೃತ ದುರ್ದೈವಿಗಳು. ಒಟ್ಟು 14 ಮಂದಿ ಟಿಟಿ ವಾಹನದಲ್ಲಿ ಧರ್ಮಸ್ಥಳಕ್ಕೆ ತೆರಳಿದ್ದರು. ದೇವರ ದರ್ಶನ ಮುಗಿಸಿ ಬರುತ್ತಿದ್ದ ವೇಳೆಯಲ್ಲಿ ಈ ದುರಂತ ಸಂಭವಿಸಿದೆ.

ಧರ್ಮಸ್ಥಳ – ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ್ದ ಕುಟುಂಬ ದರ್ಶನ ಮುಗಿಸಿಕೊಂಡು ವಾಪಾಸಾಗುತ್ತಿತ್ತು. ಈ ವೇಳೆಯಲ್ಲಿ ಟೆಂಪೋ ಟ್ರಾವೆಲರ್ ಗೆ ಎದುರುಗಡೆ ರಾಂಗ್ ಸೈಡ್ ನಿಂದ ಬಂದ ಹಾಲಿನ ಟ್ಯಾಂಕರ್ ಢಿಕ್ಕಿ ಹೊಡೆದಿದೆ. ಅಲ್ಲದೇ ಬೆಂಗಳೂರಿನಿಂದ ಶಿವಮೊಗ್ಗದ ಕಡೆಗೆ ಸಾಗುತ್ತಿದ್ದ ಕೆಎಸ್ಆರ್ ಟಿಸಿ ಬಸ್ ಗೆ ಢಿಕ್ಕಿ ಹೊಡೆದಿದೆ ಎನ್ನಲಾಗುತ್ತಿದೆ. ಹಾಲಿನ ಟ್ಯಾಂಕರ್ ಶಿವಮೊಗ್ಗದಿಂದ ಚನ್ನರಾಯಪಟ್ಟಣದ ಕಡೆಗೆ ಚಲಿಸುತ್ತಿತ್ತು. ಅಪಘಾತ ಸಂಭವಿಸುತ್ತಿದ್ದಂತೆಯೇ ಹಾಲಿನ ಟ್ಯಾಂಕರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾರೆ.

https://www.youtube.com/watch?v=ZRYMohQkxrY

ಹಾಸನ‌ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಬಾಣವಾರ ಹೋಬಳಿ ಗಾಂಧಿ ನಗರ ಗ್ರಾಮದ ಬಳಿಯಲ್ಲಿನ ರಾಷ್ಟ್ರೀಯ ಹೆದ್ದಾರಿ 69 ರಲ್ಲಿ ಭೀಕರ ದುರಂತ ಸಂಭವಿಸಿದೆ.ಲಾರಿ ಬಸ್ ಮಧ್ಯೆ ಸಿಲುಕಿ ಟಿಟಿ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ. ಘಟನೆಯಲ್ಲಿ ಗಾಯಗೊಂಡಿರುವವರನ್ನು ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ. ಸ್ಥಳಕ್ಕೆ ಬಾಣಾವರ ಠಾಣೆಯ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ :  ಟೀಚರ್ ಜೊತೆ ಪ್ರೀತಿ.. ಲವ್ ಬ್ರೇಕ್ ಅಪ್.. ಸಾವಿಗೆ ಶರಣಾದ ವಿದ್ಯಾರ್ಥಿ.. ಶಿಕ್ಷಕಿ ಅರೆಸ್ಟ್

ಇದನ್ನೂ ಓದಿ :  ಅತ್ಯಾಚಾರಕ್ಕೊಳಗಾಗಿ ಗರ್ಭಿಣಿಯಾದ ಬಾಲಕಿ ; ಕೊಲ್ಲಲು ಮುಂದಾದ ತಾಯಿ ಮತ್ತು ಸಹೋದರಿ

9 people died in road accident Hassan arasikere

Comments are closed.