ಸೋಮವಾರ, ಜೂನ್ 16, 2025
HomeCrimeಡ್ರಗ್ಸ್‌ ಫ್ಯಾಕ್ಟರಿ ಆಯ್ತಾ ಬೆಂಗಳೂರು : ಮನೆಯಲ್ಲಿಯೇ ಸಿದ್ದವಾಗ್ತಿತ್ತು ಡ್ರಗ್ಸ್‌, ಸಿಸಿಬಿಯಿಂದ ಮೆಗಾ ರೈಡ್‌

ಡ್ರಗ್ಸ್‌ ಫ್ಯಾಕ್ಟರಿ ಆಯ್ತಾ ಬೆಂಗಳೂರು : ಮನೆಯಲ್ಲಿಯೇ ಸಿದ್ದವಾಗ್ತಿತ್ತು ಡ್ರಗ್ಸ್‌, ಸಿಸಿಬಿಯಿಂದ ಮೆಗಾ ರೈಡ್‌

- Advertisement -

ಬೆಂಗಳೂರು : ಸಿಲಿಕಾನ್‌ ಸಿಟಿ ಬೆಂಗಳೂರಲ್ಲಿ ಇಷ್ಟು ದಿನ ಡ್ರಗ್ಸ್‌ ಪೆಡ್ಲರ್‌, ಡ್ರಗ್ಸ್‌ ಡೀಲರ್‌ಗಳನ್ನು ಅರೆಸ್ಟ್‌ ಮಾಡಲಾಗುತ್ತಿತ್ತು. ಆದ್ರೀಗ ಬೆಂಗಳೂರು ಡ್ರಗ್ಸ್‌ ಫ್ಯಾಕ್ಟರಿ ಆಯ್ತಾ ಅನ್ನೋ ಶಂಕೆ ವ್ಯಕ್ತವಾಗುತ್ತಿದ್ದು, ಮನೆಯನ್ನೇ ಡ್ರಗ್ಸ್‌ ಫ್ಯಾಕ್ಟರಿ ಮಾಡಿಕೊಂಡಿದ್ದಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಬರೋಬ್ಬರು ಐದು ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

Vinay Guruji Ccb 1

ಕರ್ನಾಟಕ ರಾಜ್ಯದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಸಿಸಿಬಿ ಪೊಲೀಸರು ಮೆಗಾ ಕಾರ್ಯಾಚರಣೆಯನ್ನು ನಡೆಸಿದ್ದಾರೆ. ಬೆಂಗಳೂರಿನ ಎಲೆಕ್ಟ್ರಾನಿಕ್‌ ಸಿಟಿಯ ಮನೆಯೊಂದರ ಮೇಲೆ ದಾಳಿ ನಡೆಸಿರುವ ಪೊಲೀಸರು ಬೆಚ್ಚಿಬಿದ್ದಿದ್ದಾರೆ. ನೈಜಿಯಾ ಮೂಲದ ಜಾನ್‌ ಎಂಬಾತ ವೃದ್ದ ದಂಪತಿಗಳಿಗೆ ಸೇರಿದ ಮನೆಯೊಂದನ್ನು ಬಾಡಿಗೆಗೆ ಪಡೆದಿದ್ದ. ಈ ಮನೆಯಲ್ಲಿ ಸುಮಾರು ಐದು ಕೆಮಿಕಲ್‌ಗಳನ್ನು ಬಳಸಿ ಎಂಡಿಎಂಎ ಕ್ರಿಸ್ಟಲ್ ಎಂಬ ಫೈನ್ ಕ್ವಾಲಿಟಿ ಡ್ರಗ್ಸ್ ತಯಾರು ಮಾಡ್ತಿದ್ದ. ಇದೀಗ ಸಿಸಿಬಿ ಪೊಲೀಸರು ಮನೆಯ ಮೇಲೆ ದಾಳಿ ನಡೆಸಿದ್ದು, ದಾಳಿಯ ವೇಳೆಯಲ್ಲಿ ಐದು ಕೋಟಿ ಮೌಲ್ಯದ ಡ್ರಗ್ಸ್‌ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

Ccb Raid Bangalore Drugs Case John Arrest Electronic City 2

ಕಳೆದೊಂದು ವರ್ಷದಿಂದಲೂ ಸಿಸಿಬಿ ಪೊಲೀಸರು ಡ್ರಗ್ಸ್‌ ಜಾಲದ ಬೆನ್ನುಬಿದ್ದಿದ್ದರು. ಈಗಾಗಲೇ ಡ್ರಗ್ಸ್‌ ಮಾಫಿಯಾದಲ್ಲಿ ಭಾಗಿಯಾಗಿದ್ದ ಸಿನಿಮಾ ನಟ, ನಟಿಯರು, ಉದ್ಯಮಿಗಳು, ರಾಜಕಾರಣಿಗಳ ಮಕ್ಕಳ ಜೊತೆಗೆ ಡ್ರಗ್ಸ್‌ ಪೆಡ್ಲರ್‌ಗಳನ್ನೂ ವಶಕ್ಕೆ ಪಡೆದಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿ ನೈಜೀರಿಯಾ ಮೂಲದ ಜಾನ್‌ ಬಗ್ಗೆಯೂ ಮಾಹಿತಿಯನ್ನು ಕೆಲ ಹಾಕುತ್ತಿದ್ದರು. ಕೊನೆಗೂ ಸಿಸಿಬಿ ಪೊಲೀಸರು ಜಾನ್‌ ಜಾಡು ಹಿಡಿದಿದ್ದಾರೆ. ಎಲೆಕ್ಟ್ರಾನಿಕ್‌ ಸಿಟಿಯಲ್ಲಿರುವ ಜಾನ್‌ ಮನೆಗೆ ಭೇಟಿ ನೀಡಿದ ಪೊಲೀಸರೇ ಬೆಚ್ಚಿಬಿದಿದ್ದಾರೆ.

Ccb Raid Bangalore Drugs Case John Arrest Electronic City 4

ಕೆಮಿಕಲ್ಸ್‌ಗಳನ್ನು ಬಳಸಿ ಜಾನ್‌ ಸಿಂಥೆಟಿಕ್‌ ಡ್ರಗ್ಸ್‌ ತಯಾರಿ ಮಾಡುತ್ತಿದ್ದ. ತಾನು ತಯಾರಿಸಿದ ಡ್ರಗ್ಸ್‌ಗಳನ್ನು ಬೆಂಗಳೂರು ಮಾತ್ರವಲ್ಲದೇ ದೇಶದದ ಹಲವು ಕಡೆಗಳಿಗೂ ಸಾಗಾಟ ಮಾಡುತ್ತಿದ್ದ ಅನ್ನೋ ಮಾಹಿತಿ ಲಭ್ಯವಾಗಿದೆ. ಇದೀಗ ಇದೀಗ ದಾಳಿಯ ವೇಳೆಯಲ್ಲಿ ಲಕ್ಷಾಂತರ ಮೌಲ್ಯದ ಕೆಮಿಕಲ್‌ ಕೂಡ ಪತ್ತೆಯಾಗಿದೆ. ಆರೋಪಿ ಜಾನ್‌ನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆಯನ್ನು ನಡೆಸುತ್ತಿದ್ದಾರೆ.

Ccb Raid Bangalore Drugs Case John Arrest Electronic City 3

ಸಾಮಾನ್ಯವಾಗಿ ವಿದೇಶದಲ್ಲಿ ತಯಾರಾಗುತ್ತಿದ್ದ ಮಾದಕ ವಸ್ತುಗಳನ್ನು ದೇಶದಲ್ಲಿ ಮಾರಾಟ ಮಾಡಲಾಗುತ್ತಿತ್ತು. ಆದ್ರೀಗ ಜಾನ್‌ ಬೆಂಗಳೂರಲ್ಲೇ ಡ್ರಗ್ಸ್‌ ಫ್ಯಾಕ್ಟರಿಯನ್ನು ಸಿದ್ದ ಪಡಿಸಿದ್ದಾನೆ. ಜಾನ್‌ ಎಷ್ಟು ವರ್ಷಗಳಿಂದ ಈ ಡ್ರಗ್ಸ್‌ ಫ್ಯಾಕ್ಟರಿಯನ್ನು ನಡೆಸುತ್ತಿದ್ದಾರೆ. ಇತನ ಜೊತೆಗೆ ಬೇರೆ ಯಾರಾದ್ರೂ ಸಂಪರ್ಕ ಹೊಂದಿದ್ದಾರೆಯೇ ಅನ್ನೋ ಬಗ್ಗೆಯೂ ವಿಚಾರಣೆ ನಡೆಯುತ್ತಿದೆ.

(Drugs were at home in Bangalore and CCB police raided the house 5 Crores worth of drugs, accused John Arrest)

Arun Gundmi | ಅರುಣ್ ಗುಂಡ್ಮಿ
Arun Gundmi Editor In Chief News Next Kannada. Working in more than 20 Years in Kannada Media (Print, Digital and News Channels. Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular