Basangouda Patil Yatnal‌ : ವಾಜಪೇಯಿ ಕಾಲದಲ್ಲೇ ಮಿನಿಸ್ಟರ್ ನಾನು: ಈಗ್ಯಾಕೆ ಸಿಎಂ ಆಗಬಾರದು ? ಯತ್ನಾಳ್ ಹೊಸಬಾಂಬ್

ಗದಗ: ರಾಜ್ಯ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೇರುವ ಕನಸಿನಲ್ಲಿದೆ.‌ ಪಕ್ಷಕ್ಕೆ ಅಧಿಕಾರಕ್ಕೆ ಬರೋ ಕನಸಿದ್ದರೇ, ಪಕ್ಷದೊಳಗಿನ ಎಲ್ಲ ಸಮುದಾಯದ ನಾಯಕರಲ್ಲೂ ಸಿಎಂ ಸ್ಥಾನದ ಕನಸು ಚಿಗುರಿ ಹೆಮ್ಮರವಾಗುತ್ತಿದೆ. ಈಗ ಈ ಸಾಲಿಗೆ ಲಿಂಗಾಯತ ಸಮುದಾಯದ ಹಿರಿಯ ಶಾಸಕ ಬಸನಗೌಡ್ ಪಾಟೀಲ್ ಯತ್ನಾಳ್ (Basangouda Patil Yatnal) ಹೊಸ ಸೇರ್ಪಡೆ. ಪ್ರಚಾರ ಭಾಷಣದಲ್ಲಿ ಮಾತನಾಡಿದ ಯತ್ನಾಳ್, ನಾನು ಮುಖ್ಯಮಂತ್ರಿ ಆಗಬಾರದೇನು? ಎಂದು ಪ್ರಶ್ನಿಸುವ‌ಮೂಲಕ ಸಿಎಂ ರೇಸ್ ನಲ್ಲಿ‌ತಮ್ಮ ಸ್ಪರ್ಧೆ ಖಚಿತಪಡಿಸಿದ್ದಾರೆ.‌ಮಾತ್ರವಲ್ಲ ತಾನು ಸಿಎಂ ಸ್ಥಾನಕ್ಕೇರಿದರೇ ಯುಪಿ ಮಾದರಿಯ ಆಡಳಿತ ಎಂದು ಗುಡುಗಿದ್ದಾರೆ.

ಗದಗದಲ್ಲಿ ನಡೆದ ಬಿಜೆಪಿ ಪ್ರಚಾರ ಸಮಾವೇಶದಲ್ಲಿ ಆರ್ಭಟಿಸುವ ಭಾಷಣ ಮಾಡಿದ ಯತ್ನಾಳ ಶೆಟ್ಟರ್ ಸೇರಿದಂತೆ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಇದರ ಮಧ್ಯೆಯೇ ತಮ್ಮ ಸ್ವಪಕ್ಷಿಯ ವಿರೋಧಿ ಬಿಎಸ್ವೈ ಹಾಗೂ ಅವರ ಪುತ್ರನ ವಿರುದ್ಧ ವಾಗ್ದಾಳಿ ನಡೆಸಲು ಮರೆಯಲಿಲ್ಲ. ನಾನು ಯಾರ ಕಾಲಿಗೂ ಬೀಳೋದಿಲ್ಲ. ರಾಜ್ಯದಲ್ಲಿ ಅನಂತ ಕುಮಾರ್ ಬಳಿಕ ಹಿರಿಯ ನಾಯಕ‌ ನಾನೇ. ನಾನು ವಾಜಪೇಯಿಯವರ ಕಾಲದಲ್ಲಿ‌‌ ಕೇಂದ್ರ ಮಂತ್ರಿಯಾಗಿದ್ದಾಗ ರಾಜ್ಯದ ಈಗಿನ ಎಷ್ಟೋ ನಾಯಕರು ಸಚಿವರು ಹೋಗಲಿ ಶಾಸಕರೇ ಆಗಿರಲಿಲ್ಲ ಎನ್ನುವ ಮೂಲಕ ಹಲವರಿಗೆ ಟಾಂಗ್ ನೀಡಿದ್ದಾರೆ. ಅಷ್ಟೇ ಅಲ್ಲ ನಾನು ಸ್ಥಾನಮಾನಕ್ಕೆ ಆಸೆ ಪಡದೇ ಸಮುದಾಯಕ್ಕಾಗಿ ಕಷ್ಟಪಟ್ಟಿದ್ದೇನೆ. ಲಿಂಗಾಯತ್ ರಿಗೆ ಮೀಸಲಾತಿ ಕೊಡಿಸಿದ್ದೇನೆ.

ಈಗ ನಾನು ಯಾವುದೇ ಮಂತ್ರಿಯಲ್ಲ, ಕೇಂದ್ರದ ಯಾವುದೇ ಸಮಿತಿಯ ಸದಸ್ಯನಲ್ಲ. ಯಾವುದೇ ಅಧಿಕಾರವಿಲ್ಲ.‌ಆದರೂ ನಾನು ಪ್ರಚಾರಕ್ಕೆ ಬರ್ತೀನಿ ಅಂದ್ರೇ 10-15 ಸಾವಿರ ಜನ ಸೇರುತ್ತಿದ್ದಾರೆ. ಮಂತ್ರಿಗಳ ಕ್ಷೇತ್ರಕ್ಕೆ ನಾನು ಸ್ಟಾರ್ ಪ್ರಚಾರಕನಾಗಿ ಬರ್ತಿದ್ದೇನೆ. ಇದು ಯತ್ನಾಳ್ (Basangouda Patil Yatnal) ನ ತಾಕತ್ತು. ನನ್ನನ್ನು ರಾಜ್ಯದಲ್ಲಿ ಹಲವರು ಕಡೆಗಣಿಸಿದ್ದರು. ಯತ್ನಾಳ್‌ ಮುಂದಕ್ಕೆ ಬಂದ್ರೇ ತಮ್ಮ ಮಗನ ಕತೆ ಏನು ಎಂದು ಅಂಜಿಕೊಂಡಿದ್ದರು.

ಆದರೆ ಕೇಂದ್ರ ನಾಯಕರಿಗೆ ನನ್ನ ಶಕ್ತಿ ಗೊತ್ತಾಗಿದೆ. ಅದಕ್ಕೆ ನಾನು ಪ್ರಚಾರಕ್ಕೆ ಬರುತ್ತಿದ್ದೇನೆ. ನನ್ನ ಬಯೋಡೇಟಾ ನೋಡಿ ಅವಕಾಶ ಕೊಟ್ಟರೇ ನಾನು ಸಿಎಂ ಸ್ಥಾನಕ್ಕೂ ರೆಡಿ. ಯಾಕೆ ನಾನು ಸಿಎಂ ಆಗಬಾರದಾ? ನಂಗೇ ಯೋಗ್ಯತೆ ಇಲ್ವಾ ಎಂದು ಪ್ರಶ್ನಿಸಿದ ಯತ್ನಾಳ್ ಪರೋಕ್ಷವಾಗಿ ಲಿಂಗಾಯತ್ ಸಮುದಾಯದಿಂದ ತಾನೊಬ್ಬ ಸಿಎಂ ಸ್ಥಾನದ ಪ್ರಬಲ ಆಕಾಂಕ್ಷಿ ಎಂಬುದನ್ನು ಸ್ಪಷ್ಟವಾಗಿ ನೇರವಾಗಿ ಹೇಳಿಕೊಂಡಿದ್ದಾರೆ. ಆ ಮೂಲಕ ಬಿಜೆಪಿ ಸಿಎಂ ಆಕಾಂಕ್ಷಿಗಳ ಪಟ್ಟಿ ಕೂಡ ಬೆಳೆದಿದ್ದು, ಬಸವರಾಜ್ ಬೊಮ್ಮಾಯಿ, ಅರವಿಂದ ಬೆಲ್ಲದ್, ಸಿ.ಟಿ.ರವಿ , ಶೋಭಾ ಕರಂದ್ಲಾಜೆ ಬಳಿಕ ಈಗ ಯತ್ನಾಳ್ ಕೂಡ ಸೇರ್ಪಡೆಗೊಂಡಿದ್ದು ಈ ಕದನ ಯಾವ ಸ್ವರೂಪ ಪಡೆಯುತ್ತೆ ಕಾದು ನೋಡಬೇಕಿದೆ.

ಇದನ್ನೂ ಓದಿ : ಬಿಪಿಎಲ್‌ ಕಾರ್ಡುದಾರರಿಗೆ ಅರ್ಧ ಲೀಟರ್‌ ಹಾಲು, ವರ್ಷಕ್ಕೆ 3 ಗ್ಯಾಸ್‌ ಸಿಲಿಂಡರ್‌ ಉಚಿತ: ಬಿಜೆಪಿ ಪ್ರನಾಳಿಕೆಯಲ್ಲಿ ಏನೇನಿದೆ ?

ಇದನ್ನೂ ಓದಿ : Ramya Campaign : ಪ್ರಿಯಾಂಕಾ ಗಾಂಧಿ ಜೊತೆ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಕ್ಯಾಂಪೇನ್ : ಮಂಡ್ಯ ರಣಕಣದಲ್ಲಿ ಸ್ಟಾರ್ ಹವಾ

Comments are closed.