ಹುಲಿ ಉಗುರು ಧರಿಸಿದ ಕಾರಣಕ್ಕೆ ಅರಣ್ಯ ಇಲಾಖೆಯ ಕೆಂಗಣ್ಣಿಗೆ ಗುರಿಯಾಗಿ ಜೈಲು ಸೇರಿರೋ ವರ್ತೂರು ಸಂತೋಷ್ ಜಾಮೀನುಗಾಗಿ ಸರ್ಕಸ್ ನಡೆಸಿದ್ದಾರೆ. ಈ ಮಧ್ಯೆ ಸದ್ಯ ತನಿಖೆ ಆರಂಭಿಸಿರೋ ಅರಣ್ಯ ಇಲಾಖೆ ಹಳ್ಳಿಕಾರ್ ಸಂತೋಷ್ ವರ್ತೂರು ( Santhosh Varthur) ಬಳಿ ವಶಪಡಿಸಿ ಕೊಳ್ಳಲಾದ ಹುಲಿ ಉಗುರನ್ನು ಎಫ್ ಎಸ್ ಎಲ್ ಪರೀಕ್ಷೆಗೆ (FSL Report) ಕಳುಹಿಸಿದ್ದು, ಈ ಪರೀಕ್ಷೆ ರಿಪೋರ್ಟ್ ಬಂದ ಬಳಿಕ ಸಂತೋಷ್ ಗೆ ಅಸಲಿ ಸಂಕಷ್ಟ ಶುರುವಾಗಲಿದೆ.

ಸಂತೋಷ್ ಧರಿಸಿದ್ದ ಹುಲಿ ಉಗುರನ್ನು ವಶಕ್ಕೆ ಪಡೆದಿರೋ ಹಾರೋಹಳ್ಳಿ ಅರಣ್ಯ ಅಧಿಕಾರಿಗಳತಂಡ ಈ ಉಗುರನ್ನು ಎಫ್ ಎಸ್ ಎಲ್ ಪರೀಕ್ಷೆಗೆ ಕಳುಹಿಸಿದೆ. ಇನ್ನು ಎರಡು ದಿನಗಳಲ್ಲಿ FSL ರಿಪೋರ್ಟ್ ಅರಣ್ಯ ಅಧಿಕಾರಿಗಳಿಗೆ ಸಿಗಲಿದೆ. ಈ ರಿಪೋರ್ಟ್ ಬಂದ ಬಳಿಕ ತನಿಖೆ ಆರಂಭಿಸಲಿರುವ ಅರಣ್ಯ ಇಲಾಖೆ ಅಧಿಕಾರಿಗಳು ಈಗಾಗಲೇ NTCA ಗೆ ಮಾಹಿತಿ ನೀಡಿದ್ದಾರೆ.
NTCA ಅಂದ್ರೆ (ನ್ಯಾಷನಲ್ ಟೈಗರ್ ಕಂಷರ್ವೇಷನ್ ಅಥಾರಿಟಿ) ಈ NTCA ಬಳಿ ದೇಶದ ಎಲ್ಲಾ ರಾಜ್ಯಗಳ ಹುಲಿಗಳ ಬಗ್ಗೆ ಸಂಪೂರ್ಣ ಡೇಟಾ ಇರುತ್ತದೆ. ಈ ಡೇಟಾ ಆಧರಿಸಿ ಸಂತೋಷ್ ಧರಿಸಿದ ಹುಲಿ ಉಗುರಿನ ಎಫ್ ಎಸ್ ಎಲ್ ರಿಪೋರ್ಟ್ ನೋಡಿದ್ರೆ ಸಾಕು ಇದು ಯಾವ ಜಾತಿಯದ್ದು, ಯಾವ ರಾಜ್ಯದ್ದು ಅನ್ನೋ ಮಾಹಿತಿಯನ್ನು ಅಥಾರಿಟಿ ನೀಡುತ್ತದೆ.
ಇದನ್ನೂ ಓದಿ : ನಟ ದರ್ಶನ್ ತೂಗುದೀಪ್, ಜಗ್ಗೇಶ್, ಮುನಿರತ್ನ ಬಂಧನ ಸಾಧ್ಯತೆ ? ಸ್ಯಾಂಡಲ್‌ವುಡ್‌ಗೆ ಹುಲಿ ಉಗುರಿನ ಸಂಕಷ್ಟ
ಹೀಗಾಗಿ ಎಫ್‌ಎಸ್ಎಲ್ ವರದಿ ಬಳಿಕ NTCA ಗೆ ಮಾಹಿತಿ ನೀಡಿ ತನಿಖೆ ಮುಂದುವರೆಸಲು ಅರಣ್ಯ ಇಲಾಖೆ ನಿರ್ಧರಿಸಿದೆ. ಈ ಮಧ್ಯೆ ಕರ್ನಾಟಕ ಹಾಗೂ ತಮಿಳುನಾಡು ಟೈಗರ್ ರಿಸರ್ವ್ ಫಾರೆಸ್ಟ್ ಅಧಿಕಾರಿಗಳಿಂದ ಕರ್ನಾಟಕ ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ಪಡೆಯಲು ಮುಂದಾಗಿದ್ದಾರೆ. ಒಟ್ಟಾರೆ ಸಂತೋಷ ಧರಿಸಿದ ಹುಲಿ ಉಗುರಿನ ಮೂಲ ಹುಡುಕೋದು ಅಧಿಕಾರಿಗಳ ಉದ್ದೇಶ.

ಕರ್ನಾಟಕದದಲ್ಲಿ ಒಟ್ಟು ಐದು ಟೈಗರ್ ರಿಸರ್ವ್ ಫಾರೆಸ್ಟ್ ಗಳಿವೆ. ಬಂಡೀಪುರ, ಭದ್ರ (ಚಿಕ್ಕಮಗಳೂರು), ಕಾಳಿ ಫಾರೆಸ್ಟ್ (ದಾಂಡೇಳಿ), ನಾಗರಹೊಳೆ, ಬಿಳಿಗಿರಿ ರಂಗನ ಟೈಗರ್ ರಿಸರ್ವ್ ಫಾರೆಸ್ಟ್. ಈಗಾಗಲೇ ಮೂರು ವರ್ಷಗಳ ಹಿಂದೆ ಯಾವುದಾರರೂ ಹುಲಿ ಸತ್ತಿರೋ ವರದಿ ಆಗಿದೆಯಾ ಅಂತ ಮಾಹಿತಿ ಸಂಗ್ರಹಿಸಿರೋ ಅರಣ್ಯ ಇಲಾಖೆ ಅಧಿಕಾರಿಗಳು ತಮಿಳುನಾಡಿನ ಹುಲಿ ಸಾವಿನ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ.
ಇದನ್ನೂ ಓದಿ : ನಟ ಯಶ್ ಕಾಲಿಗೆ ಪೊಲೀಯೋ ? ಇಲ್ಲಿದೆ ವೈರಲ್ ವಿಡಿಯೋದ ಅಸಲಿ ಸತ್ಯ
ಅರಣ್ಯ ಇಲಾಖೆಯ ಅಧಿಕಾರಿಗಳ ಪ್ರಾಥಮಿಕ ವಿಚಾರಣೆ ವೇಳೆ ವರ್ತೂರು ಸಂತೋಷ್ ಈ ಹುಲಿ ಉಗುರನ್ನು ಹೊಸೂರಿನಲ್ಲಿ ಖರೀದಿಸಿದ್ದೇನೆ ಎಂದಿದ್ದಾರೆ. ಹೀಗಾಗಿ ಅಧಿಕಾರಿಗಳು ತಮಿಳುನಾಡಿದ ಟೈಗರ್ ರಿಸರ್ವ್ ಫಾರೆಸ್ಟ್ ಅಧಿಕಾರಿಗಳಿಂದಲೂ ಮಾಹಿತಿ ಸಂಗ್ರಹಕ್ಕೆ ಮುಂದಾಗಿದ್ದಾರೆ. ತಮಿಳುನಾಡಿನಲ್ಲಿ ಒಟ್ಟು ಐದು ಟೈಗರ್ ರಿಸರ್ವ್ ಫಾರೆಸ್ಟ್ ಗಳಿವೆ. ಕಳ್ಳಡ್ಕ, ಅಣ್ಣಮಲೈ, ಮಧುಮಲೈ, ಸತ್ಯಮಂಗಲ ಹಾಗೂ ಶ್ರೀವಲ್ಲಿ ಪುತ್ತುರ್ ಮೇಘಮಲೈ.

ಹೀಗಾಗಿ ಕಳೆದ ಐದು ವರ್ಷಗಳಿಂದ ಇಲ್ಲಿ ಯಾವುದಾದರೂ ಹುಲಿಯ ಸಾವಾಗಿದೆಯಾ..? ಮಿಸ್ಸಿಂಗ್ ಆಗಿದೆಯಾ ಅನ್ನೋ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಸಂತೋಷ್ ಧರಿಸಿದ ಹುಲಿ ಉಗುರಿನ ಎಫ್ ಎಸ್ ಎಲ್ ವರದಿ ಬಂದ ಬಳಿಕ ಅದರ ರಿಪೋರ್ಟ್ ಆಧಾರದ ಮೇಲೆ ಹುಲಿ ಯಾವ ಜಾತಿಯದ್ದು, ಉಗುರಿಗೆ ಎಷ್ಟು ವರ್ಷ, ಆ ಜಾತಿಯ ಹುಲಿ ಎಲ್ಲಿ ಮಿಸ್ ಆಗಿದೆ ಅನ್ನೋ ಮಾಹಿತಿ ಸಿಗಲಿದೆ.
ಈ ವರದಿ ಹುಲಿ ಡಾಟಾದೊಂದಿಗೆ ಮ್ಯಾಚ್ ಆದಲ್ಲಿ ಸಂತೋಷ್ ಧರಿಸಿದ ಉಗುರಿನ ಅಸಲಿ ಸತ್ಯ ಬಯಲಾಗಲಿದೆ. ಒಂದೊಮ್ಮೆ ಬೇಟೆಯಾಡಿ ಮಾರಾಟ ಮಾಡಿದ ಹುಲಿ ಉಗುರು ಇದು ಎಂದಾದಲ್ಲಿ ಸಂತೋಷ್ ಸಂಕಷ್ಟ ಇನ್ನಷ್ಟು ಹೆಚ್ಚೋದು ಗ್ಯಾರಂಟಿ.
here is the tiger claw worn by Hallikar owner Bigboss Contest Santosh Varthur ? Officials from FSL have been asked to find the source of the tiger