Prashant Arrest : ಲೋಕಾಯುಕ್ತ ಬಲೆಗೆ ಬಿದ್ದ ಬಿಜೆಪಿ ಶಾಸಕರ ಪುತ್ರ ಪ್ರಶಾಂತ್ : ಟೆಂಡರ್‌ ಕೊಡಿಸಲು 40 ಲಕ್ಷ ರೂ. ಲಂಚ ಸ್ವೀಕಾರ

ಬೆಂಗಳೂರು : Prashant Arrest : ಟೆಂಡರ್‌ ಕೊಡಿಸುವ ವಿಚಾರಕ್ಕೆ ಸಂಬಂಧಿಸಿದಂತೆ 40 ಲಕ್ಷ ರೂಪಾಯಿ ಲಂಚ ಸ್ವೀಕಾರ ಮಾಡುತ್ತಿದ್ದ ವೇಳೆಯಲ್ಲಿ ಚೆನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರ ಪುತ್ರ ಪ್ರಶಾಂತ್‌ ಲೋಕಾಯುಕ್ತರ ಬಲೆಗೆ ಬಿದ್ದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬಿಡ್ಲ್ಯುಎಸ್‌ಎಸ್‌ಬಿ (BWSSB ) ಮುಖ್ಯ ಲೆಕ್ಕಾಧಿಕಾರಿಯಾಗಿರುವ ಪ್ರಶಾಂತ್‌ ಕೆಎಸ್‌ಡಿಎಲ್‌ ಗೆ ಕಚ್ಚಾವಸ್ತುಗಳ ಖರೀದಿಯ ಟೆಂಡರ್‌ ಗಾಗಿ ಬರೋಬ್ಬರಿ 80 ಲಕ್ಷ ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದ. ಅಲ್ಲದೇ 40 ಲಕ್ಷ ರೂಪಾಯಿ ಹಣವನ್ನು ಕೆಎಸ್‌ಡಿಎಲ್ ಅಧ್ಯಕ್ಷರ ಪರವಾಗಿ ಹಣ ಕ್ರೆಸೆಂಟ್‌ ರಸ್ತೆಯಲ್ಲಿರುವ ಶಾಸಕರ ಕಚೇರಿಯಲ್ಲಿ ಸ್ವೀಕರಿಸುತ್ತಿದ್ದ ವೇಳೆಯಲ್ಲಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ.‌ ಲೋಕಾಯುಕ್ತ ಅಧಿಕಾರಿಗಳು ಸದ್ಯ ಶಾಸಕರ ಕಚೇರಿಯಲ್ಲಿ ಲಂಚದ ಹಣವನ್ನು ವಶಕ್ಕೆ ತೆಗೆದುಕೊಂಡಿದ್ದು, ವಿಚಾರಣೆಯನ್ನು ನಡೆಸುತ್ತಿದ್ದಾರೆ.

ಬರೋಬ್ಬರಿ ಮೂರು ಬ್ಯಾಗ್‌ಗಳಲ್ಲಿ 500 ಹಾಗೂ 2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳು ಜೊತೆಗೆ ಪ್ರಶಾಂತ್‌ ಟ್ರ್ಯಾಪ್‌ ಆಗಿದ್ದಾರೆ. ಈಗಾಗಲೇ ನೋಟುಗಳ ಎಣಿಕೆ ಕಾರ್ಯವನ್ನು ಮಾಡುತ್ತಿರುವ ಲೋಕಾಯುಕ್ತ ಅಧಿಕಾರಿಗಳು, ಕಚೇರಿಯಲ್ಲಿನ ಕಡತಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಈ ಹಿಂದೆಯೂ ಕೂಡ ಟೆಂಡರ್‌ ವಿಚಾರದಲ್ಲಿ ಲಂಚ ಸ್ವೀಕಾರ ಮಾಡಿದ್ದಾರಾ ಅನ್ನೋ ಬಗ್ಗೆಯೂ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ : ಗೃಹ ಸಚಿವ ಆರಗ ಜ್ಞಾನೇಂದ್ರ ಎಸ್ಕಾರ್ಟ್ ವಾಹನ ಬೈಕ್‌ ಗೆ ಢಿಕ್ಕಿ : ಸವಾರ ಸಾವು

ಇದನ್ನೂ ಓದಿ : ಬಿಬಿಎಂಪಿ ಬಜೆಟ್‌ 2023 : ಬೆಂಗಳೂರಿನ ಬೀದಿ ನಾಯಿಗಳಿಗೆ ಬಂಪರ್‌ ಗಿಫ್ಟ್‌

Comments are closed.