ಶಾಲೆಯ ಅಂಗಳಕ್ಕೂ ಕೊರೋನಾ ಭೀತಿ: ಕ್ರಿಸ್ಮಸ್ ರಜೆ ವಿಸ್ತರಣೆ ಸಾಧ್ಯತೆ

Christmas Holiday Extend : ರಾಜ್ಯದಲ್ಲಿ ಕೊರೋನಾ ಆತಂಕ ಜೋರಾಗಿದೆ. ನಿಧಾನಕ್ಕೆ ಒಂದೊಂದೆ ಜಿಲ್ಲೆಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಏರಿಕೆ ಆಗತೊಡಗಿದೆ. ಈ ಮಧ್ಯೆ ಶಾಲೆಗಳಲ್ಲೂ ಕೊರೋನಾ ಸೋಂಕಿನ ಭೀತಿ ಎದುರಾಗಿದ್ದು ನಗರದ ಶಾಲೆಗಳು ಮಾಸ್ಕ್ ಕಡ್ಡಾಯದತ್ತ ಗಮನ ಹರಿಸಲು ಆರಂಭಿಸಿವೆ.

Christmas Holiday Extend : ರಾಜ್ಯದಲ್ಲಿ ಕೊರೋನಾ ಆತಂಕ ಜೋರಾಗಿದೆ. ನಿಧಾನಕ್ಕೆ ಒಂದೊಂದೆ ಜಿಲ್ಲೆಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಏರಿಕೆ ಆಗತೊಡಗಿದೆ. ಈ ಮಧ್ಯೆ ಶಾಲೆಗಳಲ್ಲೂ ಕೊರೋನಾ ಸೋಂಕಿನ ಭೀತಿ ಎದುರಾಗಿದ್ದು ನಗರದ ಶಾಲೆಗಳು ಮಾಸ್ಕ್ ಕಡ್ಡಾಯದತ್ತ ಗಮನ ಹರಿಸಲು ಆರಂಭಿಸಿವೆ. ಈ ಮಧ್ಯೆ ಸದ್ಯ ಖಾಸಗಿ ಸೇರಿದಂತೆ ಎಲ್ಲಾ ಶಾಲೆಗಳಿಗೆ ಕ್ರಿಸ್ಮಸ್ ರಜೆ ಘೋಷಣೆಯಾಗಿದ್ದು,ಒಂದೊಮ್ಮೆ ಕೊರೋನಾ (Corona Virus) ಪ್ರಮಾಣ ಹೆಚ್ಚಿದಲ್ಲಿ ಈ ರಜೆ ವಿಸ್ತರಣೆಯಾಗೋ (School Holiday Extend) ಸಾಧ್ಯತೆ ಇದೆ ಎನ್ನಲಾಗಿದೆ.

ನಿಧಾನಕ್ಕೆ ಮತ್ತೆ ಮರುಕಳಿಸಿದ ಕೊರೋನಾ ಭೀತಿ ಮತ್ತೆ ಸಾಂಕ್ರಾಮಿಕವಾಗುವ ಲಕ್ಷಣ ದಟ್ಟವಾಗಿದೆ. ನಿಧಾನಕ್ಕೆ ರಾಜ್ಯದಲ್ಲಿ ಕೊರೋನಾ ಪೀಡಿತರ ಸಂಖ್ಯೆ ಶತಕ ದಾಟಿದ್ದು ಪ್ರಸ್ತುತ ರಾಜ್ಯದಲ್ಲಿ ಕೊರೋನಾ ಪೀಡಿತರ ಸಂಖ್ಯೆ 175 ಕ್ಕೇ ಏರಿದೆ. ಕೇವಲ ಕೊರೋನಾ ಪೀಡಿತರ ಸಂಖ್ಯೆ ಮಾತ್ರವಲ್ಲ ಸಾವಿನ ಸಂಖ್ಯೆ ಯಲ್ಲೂ ಏರಿಕೆ ಆಗುತ್ತಿದೆ. ರಾಜ್ಯದಲ್ಲಿ ಶುಕ್ರವಾರ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ.

Christmas Holiday extended for Corona threat to school 
Image Credit to Original Source

ತಜ್ಞರ ಮಾಹಿತಿಯಂತೆ ಕೊರೋನಾ ಯಾರಿಗೂ ಮಾರಣಾಂತಿಕವಾಗುತ್ತಿಲ್ಲ.‌ಬದಲಾಗಿ ಇತರ ರೋಗಗಳಿಂದ ಬಳಲುತ್ತಿರುವವರಿಗೆ ಕೊರೋನಾ ಸೋಂಕು ಜೀವಘಾತುಕವಾಗ್ತಿದೆ. ಹೀಗಾಗಿ ಸದ್ಯ ಸರ್ಕಾರ ಕೊರೋನಾ ಟೆಸ್ಟಿಂಗ್ ಪ್ರಮಾಣ ಹೆಚ್ಚಿಸಿದ್ದು ಸೋಂಕಿತರಿಗೆ ಸ್ವಯಂ ನಿರ್ಬಂಧಹೇರಿಕೊಳ್ಳಲು‌ಮನವಿ ಮಾಡ್ತಿದೆ. ಅದರೊಂದಿಗೆ ಜನನಿಬಿಡ ಸ್ಥಳಗಳಲ್ಲಿ ಮಾಸ್ಕ್ ಧರಿಸಲು ಮನವಿ ಮಾಡಿದೆ.

ಇದನ್ನೂ ಓದಿ : ಮಹಿಳೆಯರ ಹೆಲ್ಪ್ ಡೆಸ್ಕ್ ರದ್ದು : 250 ಆಪ್ತ ಸಮಾಲೋಚಕಿಯರಿಗೆ ಸಂಕಷ್ಟ

ಈ ಮಧ್ಯೆ ಶಾಲೆಗಳಿಗೂ ಕೊರೋನಾ ಗುಮ್ಮ ಕಾಡಲಾರಂಭಿಸಿದ್ದು ಪುಟ್ಟ ಪುಟ್ಟ ಮಕ್ಕಳಿಗೂ ಮಾಸ್ಕ್ ಧರಿಸುವಂತೆ ನಿಯಮ ಹೇರಲಾರಂಭಿಸಿದ್ದಾರೆ. ಸದ್ಯ ರಾಜಧಾನಿಯಲ್ಲಿ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳ ಶಾಲೆಗಳಲ್ಲಿ ಕ್ರಿಸ್ಮಸ್ ರಜೆ ನೀಡಲಾಗಿದೆ. ಆದರೆ ಮೂಲಗಳ ಮಾಹಿತಿ ಪ್ರಕಾರ ಒಂದೊಮ್ಮೆ ಮುಂದಿನ ವಾರದ ವೇಳೆಗೆ ಕೊರೋನಾ ಸಂಖ್ಯೆ ಏರಿಕೆಯಾದಲ್ಲಿ ಮಕ್ಕಳಿಗೆ ವಿಧಿಸಲಾದ ರಜೆ ಮುಂದುವರೆಸುವ ಸಾಧ್ಯತೆ ಇದೆ.

ತಾಂತ್ರಿಕ ಸಮಿತಿ ಹಾಗೂ ತಜ್ಞರ ಮಾಹಿತಿಯಂತೆ ಡಿಸೆಂಬರ್ ಅಂತ್ಯ ಹಾಗೂ ಜನವರಿ ವೇಳೆಗೆ ಕೊರೋನಾ ಉಲ್ಬಣಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಹೀಗಾಗಿ ಮಕ್ಕಳಿಗೆ ವ್ಯಾಪಿಸಿದ ಬಳಿಕ ಎಚ್ಚೆತ್ತುಕೊಳ್ಳುವ ಬದಲು ಮುಂಜಾಗ್ರತಾ ಕ್ರಮವಾಗಿ ಕ್ರಿಸ್ಮಸ್ ಗೆ ನೀಡಲಾದ ಮಧ್ಯಂತರ ಒಂದು ವಾರದ ರಜೆಯನ್ನು ಒಂದು ತಿಂಗಳ ಅವಧಿಗೆ ಮುಂದುವರೆಸುವಂತೆಯೂ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರಂತೆ.

ಇದನ್ನೂ ಓದಿ : ಯುವನಿಧಿಗೆ ಅರ್ಜಿ ಸಲ್ಲಿಸಲು ಹೊಸ ರೂಲ್ಸ್‌ : ಆನ್ಲೈನ್‌, ಆಫ್‌ ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ?

ಹೀಗಾಗಿ ರಜೆ ವಿಸ್ತರಿಸುವ ಕುರಿತು ಶಿಕ್ಷಣ ಇಲಾಖೆ ಚಿಂತನೆ ನಡೆಸಬೇಕು ಎಂದು ಪೋಷಕರು ಒತ್ತಾಯಿಸಿದ್ದಾರೆ. ಸಹಜವಾಗಿಯೇ ಕ್ರಿಸ್ಮಸ್ ರಜೆ ಹಿನ್ನೆಲೆಯಲ್ಲಿ ಮಕ್ಕಳು ಹಾಗೂ ಪೋಷಕರು ಪ್ರವಾಸ ಹೋಗೋ ಸಾಧ್ಯತೆ ಇದೆ. ಹೀಗಾಗಿ ಸಹಜವಾಗಿಯೇ ಮಕ್ಕಳಲ್ಲಿ ಶೀತ-ಜ್ವರ-ಗಂಟಲುನೋವಿನಂತ ಸಮಸ್ಯೆ ಎದುರಿಸುವ ಸಾಧ್ಯತೆ ಇದೆ. ಹೀಗಾಗಿ ಸೋಂಕು ಹರಡದಂತೆ ತಡೆಯಲು ರಜೆ ವಿಸ್ತರಿಸಬೇಕೆಂಬ ಆಗ್ರಹವೂ ವ್ಯಕ್ತವಾಗಿದೆ.

Christmas Holiday extended for Corona threat to school 
Image Credit to Original Source

ಈಗಾಗಲೇ ಮಹಾರಾಷ್ಟ್ರ, ಗೋವಾ ಹಾಗೂ ಕೇರಳದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಹೆಚ್ಚಿದ್ದು, ಆ ರಾಜ್ಯಗಳಲ್ಲೂ ಶಾಲಾ ಮಕ್ಕಳಿಗೆ ಕ್ರಿಸ್ಮಸ್ ರಜೆ ಅವಧಿ ವಿಸ್ತರಣೆಯಾಗೋ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ ರಾಜ್ಯ ಶಿಕ್ಷಣ ಇಲಾಖೆ ಮಾತ್ರ ಕ್ರಿಸ್ಮಸ್ ರಜೆ ಅವಧಿ ವಿಸ್ತರಣೆ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.‌

ಇದನ್ನೂ ಓದಿ : ಶಾಲೆ, ಕಾಲೇಜುಗಳಲ್ಲಿ ಹಿಜಾಬ್‌ ನಿಷೇಧ ವಾಪಾಸ್‌ : ಸಿಎಂ ಸಿದ್ದರಾಮಯ್ಯ ಘೋಷಣೆ

ಇನ್ನೊಂದೆಡೆ ರಾಜ್ಯದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಮಾತ್ರ ಕ್ರಿಸ್ಮಸ್ ರಜೆ ನೀಡ್ತಿದ್ದು, ರಾಜ್ಯ ಸರ್ಕಾರಿ ಶಾಲೆಗಳಲ್ಲಿ ರಜೆ ನೀಡಲಾಗಿಲ್ಲ. ಹೀಗಾಗಿ ಕೊರೋನಾ ಮಕ್ಕಳನ್ನೂ ಕಾಡುವ ಭೀತಿ ದಟ್ಟವಾಗಿದೆ. ಒಟ್ಟಿನಲ್ಲಿ ಕೊರೊನಾ ಹೆಚ್ಚಳವಾದ್ರೆ ಶೈಕ್ಷಣಿಕ ಚಟುವಟಿಕೆಯ ಮೇಲೆ ಗಂಭೀರ ಪರಿಣಾಮ ಬೀರುವುದು ಗ್ಯಾರಂಟಿ.

Christmas Holiday extended for Corona threat to school  

Comments are closed.