Rain 7 Death : ಮಳೆಗೆ ಮನೆ ಕುಸಿತ : 7 ಮಂದಿ ದುರ್ಮರಣ

ಬೆಳಗಾವಿ : ಭಾರೀ ಮಳೆಯಿಂದಾಗಿ ಮನೆ ಕುಸಿತವಾಗಿ ಒಂದೇ ಕುಟುಂಬದ 6 ಮಂದಿ ಸೇರಿದಂತೆ ಒಟ್ಟು 7 ಜನರು ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಬಡಾಲ ಅಂಕಲಗಿ ಗ್ರಾಮದಲ್ಲಿ ನಡೆದಿದೆ. ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ 3 ಮಂದಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಅಂಕಲಗಿ ನಿವಾಸಿಗಳಾದ ಗಂಗಮ್ಮ ಭೀಮಪ್ಪ ( 50 ವರ್ಷ), ಸತ್ಯವ್ವ ಅರ್ಜುನ್‌ ( 8 ವರ್ಷ), ಸವಿತಾ ಬೀಮಪ್ಪ (28 ವರ್ಷ), ಪೂಜಾ ಅರ್ಜುನ್‌ ( 8 ವರ್ಷ), ಲಕ್ಷ್ಮೀ ಅರ್ಜುನ್‌ (15 ವರ್ಷ), ಕಾಶವ್ವ ವಿಠ್ಠಲ್‌ (8 ವರ್ಷ), ಅರ್ಜುನ್‌ ಕನಗಾವಿ ಮೃತ ದುರ್ದೈವಿಗಳು ಎಂದು ತಿಳಿದು ಬಂದಿದೆ. ಇನ್ನು ಮೂರು ಮಂದಿ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದು, ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇದನ್ನೂ ಓದಿ : ಕಾಡು ಅಣಬೆಯ ಪದಾರ್ಥ ಸೇವನೆ : 12 ಮಂದಿ ಅಸ್ವಸ್ಥ, ಇಬ್ಬರು ಗಂಭೀರ

ಭಾರೀ ಮಳೆಯ ಹಿನ್ನೆಲೆಯಲ್ಲಿ ಮನೆ ಕುಸಿತವಾಗಿತ್ತು. ಮನೆಯಲ್ಲಿದ್ದವರೆಲ್ಲಾ ಹೊರಗೆ ಓಡಿ ಬರುವ ಮುನ್ನವೇ ಪ್ರಾಣ ಪಕ್ಷಿಯೇ ಹಾರಿ ಹೋಗಿತ್ತು. ಇದೀಗ ಸಂಬಂಧಿಕ ರನ್ನು ಕಳೆದುಕೊಂಡವರ ಆಕ್ರಂಧನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಹಿರೇಬಾಗೆವಾಡಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ : ವಾಮಾಚಾರದ ಹೆಸರಲ್ಲಿ ದಂಪತಿಗೆ 4.41 ಕೋಟಿ !

( 7 people killed in rain fall in Belagavi )

Comments are closed.