ವಿಶ್ವಕಪ್‌ ನಿಂದ ಶುಭಮನ್‌ ಗಿಲ್‌ ಔಟ್‌ ? ಭಾರತ ತಂಡಕ್ಕೆ ರುತುರಾಜ್‌ ಗಾಯಕ್ವಾಡ್‌, ಯಶಸ್ವಿ ಜೈಸ್ವಾಲ್‌

ಶುಭಮನ್‌ ಗಿಲ್‌ (Shubman Gill) ಡೆಂಗ್ಯೂನಿಂದ (dengue) ಬಳಲುತ್ತಿದ್ದಾರೆ. ದಿನೇ ದಿನೇ ಅವರ ಪ್ಲೇಟ್ಲೆಟ್ಸ್‌ (blood platelets count) 1 ಲಕ್ಷಕ್ಕಿಂತಲೂ ಕಡಿಮೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅವರು ವಿಶ್ವಕಪ್‌ನ ಬಹುತೇಕ ಪಂದ್ಯಗಳನ್ನು ಮಿಸ್‌ ಮಾಡಿಕೊಳ್ಳುವುದು ಖಚಿತ ಎನ್ನಲಾಗುತ್ತಿದೆ.

ಚೆನ್ನೈ: ವಿಶ್ವಕಪ್‌ (World Cup 2023)  ಪಂದ್ಯಾವಳಿಯ ನಡುವಲ್ಲೇ ಭಾರತ ಕ್ರಿಕೆಟ್‌ ತಂಡಕ್ಕೆ (Indian Cricket team) ಶಾಕಿಂಗ್‌ ಸುದ್ದಿಯೊಂದು ಎದುರಾಗಿದೆ. ಟೀಂ ಇಂಡಿಯಾದ ಆರಂಭಿಕ ಆಟಗಾರ ಶುಭಮನ್‌ ಗಿಲ್‌ (Shubman Gill) ವಿಶ್ವಕಪ್‌ ನಿಂದಲೇ ಹೊರಬೀಳುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

ಕಳೆದ ಕೆಲವು ದಿನಗಳಿಂದಲೂ ಶುಭಮನ್‌ ಗಿಲ್‌ (Shubaman Gill)  ಡೆಂಗ್ಯೂನಿಂದ (Dengue) ಬಳಲುತ್ತಿದ್ದಾರೆ. ಬಿಸಿಸಿಐ ಶುಭಮನ್‌ ಗಿಲ್‌ ಆರೋಗ್ಯದ ಮೇಲೆ ನಿಗಾ ಇರಿಸಿದೆ. ಆದರೆ ದಿನೇ ದಿನೇ ಅವರ ಪ್ಲೇಟ್ಲೆಟ್ಸ್‌ (blood platelets count) 1 ಲಕ್ಷಕ್ಕಿಂತಲೂ ಕಡಿಮೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅವರು ವಿಶ್ವಕಪ್‌ನ (World Cup 2023) ಬಹುತೇಕ ಪಂದ್ಯಗಳನ್ನು ಮಿಸ್‌ ಮಾಡಿಕೊಳ್ಳುವುದು ಖಚಿತ ಎನ್ನಲಾಗುತ್ತಿದೆ.

Shubman Gill out of the World Cup 2023 Ruturaj Gaikwad Yasshav Jaiswal sanju Samson for Indian team
Image Credit to Original Source

ಭಾರತ ತಂಡ ನಾಳೆ ಅಫ್ಘಾನಿಸ್ತಾನ (India vs Afghanistan) ತಂಡದ ವಿರುದ್ದ ಪಂದ್ಯವನ್ನು ಆಡಲಿದೆ. ಅಲ್ಲದೇ ನಂತರದ ಪಂದ್ಯವನ್ನು ಭಾರತ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ದ ಆಡಲಿದೆ. ಆದರೆ ಈ ಪಂದ್ಯದಲ್ಲಿ ಶುಭಮನ್‌ ಗಿಲ್‌ ಆಡುವುದು ಬಹುತೇಕ ಖಚಿತ. ಉಳಿದ ಪಂದ್ಯಗಳಿಗೆ ಲಭ್ಯತೆಯ ಬಗ್ಗೆ ಖಚಿತತೆ ಇಲ್ಲ.

ಇದನ್ನೂ ಓದಿ : ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡಕ್ಕೆ ವಾಡಾ ನಿಷೇಧದ ಭೀತಿ !

ಸದ್ಯ ಶುಭಮನ್‌ ಗಿಲ್‌ ಅವರನ್ನು ಚೆನ್ನೈ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಅವರು ಭಾರತ ತಂಡದ ಜೊತೆಗೆ ದೆಹಲಿಗೆ ಪ್ರಯಾಣಿಸಿಲ್ಲ. ಉನ್ನತ ವೈದಾಧಿಕಾರಿಗಳ ತಂಡ ಶುಭಮನ್‌ ಗಿಲ್‌ ಅವರ ಆರೋಗ್ಯದ ಮೇಲೆ ನಿಗಾ ಇರಿಸಿದೆ. ಅಲ್ಲದೇ ಬಿಸಿಸಿಐ ವೈದ್ಯರ ತಂಡ ಕೂಡ ಆರೋಗ್ಯ ಚೇತರಿಕೆಗೆ ಎಲ್ಲಾ ಪ್ರಯತ್ನಗಳನ್ನೂ ಮಾಡುತ್ತಿದೆ.

ಇಂದು ಶುಭಮನ್‌ ಗಿಲ್‌ ಅವರನ್ನು ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಲ್ಲದೇ ತಂಡದೊಂದಿಗೆ ಪ್ರಯಾಣಿಸುತ್ತಿದ್ದ ಬಿಸಿಸಿಐ ವೈದ್ಯರಾದ ಡಾ.ರಿಜ್ವಾನ್‌ ಖಾನ್‌ ಅವರು ಶುಭಮನ್‌ ಗಿಲ್‌ ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಭಾರತ ತಂಡಕ್ಕೆ ಶುಭಮನ್‌ ಗಿಲ್‌ ಅವರ ಅನುಪಸ್ಥಿತಿ ಭಾರೀ ಹೊಡೆತವನ್ನು ಕೊಟ್ಟಿದೆ. ಸದ್ಯ ರೋಹಿತ್‌ ಶರ್ಮಾ ಹಾಗೂ ಇಶಾನ್‌ ಕಿಶಾನ್‌ ಆರಂಭಿಕರಾಗಿ ಕಣಕ್ಕೆ ಇಳಿದಿದ್ದಾರೆ. ಆದರೆ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಇಬ್ಬರು ಆಟಗಾರರು ಶೂನ್ಯಕ್ಕೆ ಔಟಾಗಿದ್ದಾರೆ. ಜೊತೆಗೆ ಶ್ರೇಯಸ್‌ ಅಯ್ಯರ್‌ ಕೂಡ ಶೂನ್ಯಕ್ಕೆ ಔಟಾಗುವ ಮೂಲಕ ನಿರಾಸೆ ಮೂಡಿಸಿದ್ದಾರೆ.

ಇದನ್ನೂ ಓದಿ : ವಿಶ್ವಕಪ್‌ನಲ್ಲಿ ವೇಗವಾಗಿ 1000 ರನ್ : ಸಚಿನ್‌ ತೆಂಡೂಲ್ಕರ್‌ ದಾಖಲೆ ಮುರಿದ ಡೇವಿಡ್‌ ವಾರ್ನರ್‌

ಶುಭಮನ್‌ ಗಿಲ್‌ ಅನುಪಸ್ಥಿತಿಯಲ್ಲಿ ವಿಶ್ವಕಪ್‌ನ ಆರಂಭಿಕ ಪಂದ್ಯದಲ್ಲಿಯೇ ನಿರಾಸೆ ಮೂಡಿಸಿರುವ ಭಾರತದ ಆರಂಭಿಕ ಆಟಗಾರರ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ. ನಾಳಿನ ಅಫ್ಘಾನಿಸ್ತಾನ ತಂಡದ ವಿರುದ್ದದ ಪಂದ್ಯದಲ್ಲಿ ರೋಹಿತ್‌ ಶರ್ಮಾ ಇಶನ್‌ ಕಿಶನ್‌ ಕಣಕ್ಕೆ ಇಳಿಯವುದು ಖಚಿತ.

Shubman Gill out of the World Cup 2023 Ruturaj Gaikwad Yasshav Jaiswal sanju Samson for Indian team
Image Credit to Original Source

ಯಶಸ್ವಿ ಜೈಸ್ವಾಲ್‌ / ರುತುರಾಜ್‌ ಗಾಯಕ್ವಾಡ್‌ ಆಯ್ಕೆ ಸಾಧ್ಯತೆ ?

ಇನ್ನು ಶುಭಮನ್‌ ಗಿಲ್‌ ಸದ್ಯ ಆಸ್ಪತ್ರೆಗೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಅವರು ಸಂಪೂರ್ಣ ಗುಣಮುಖರಾದ್ರೂ ತಂಡಕ್ಕೆ ಮರಳಲು ಕನಿಷ್ಠ ಎರಡು ವಾರಗಳ ಅಗತ್ಯ ಇದೇ ಕಾರಣಕ್ಕೆ ಶುಭಮನ್‌ ಗಿಲ್‌ ಬದಲಿ ಆಟಗಾರರ ನೇಮಕಕ್ಕೆ ಬಿಸಿಸಿಐ ಮುಂದಾಗಿದೆ ಎನ್ನಲಾಗಿದೆ.

ಒಂದೊಮ್ಮೆ ಬಿಸಿಸಿಐ ಬದಲಿ ಆಟಗಾರನ ನೇಮಕಕ್ಕೆ ಮುಂದಾದ್ರೆ ಬಿಸಿಸಿಐ ಮೊದಲ ಆಯ್ಕೆ ಯುವ ಆಟಗಾರರಾದ ಯಶಸ್ವಿ ಜೈಸ್ವಾಲ್‌  (Yashaswi Jaiswal) ಅಥವಾ ರುತುರಾಜ್‌ ಗಾಯಕ್ವಾಡ್‌ (Ruturaj Gaikwad)  ಆಗಿರುವ ಸಾಧ್ಯತೆಯಿದೆ. ಈ ಇಬ್ಬರು ಆಟಗಾರರು ಈಗಾಗಲೇ ಏಷ್ಯನ್‌ ಗೇಮ್ಸ್‌ ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದು, ತಂಡ ಪ್ರಶಸ್ತಿ ಜಯಿಸಿದೆ.

ಇದನ್ನೂ ಓದಿ : ವಿಶ್ವಕಪ್‌ನಲ್ಲಿ ಗರಿಷ್ಠ ಸ್ಕೋರ್‌ ದಾಖಲಿಸಿದ ದಕ್ಷಿಣ ಆಫ್ರಿಕಾ : ವೇಗದ ಶತಕ ಸಿಡಿಸಿದ ಮಕ್ರಮ್‌

ಈಗಾಗಲೇ ಜೈಸ್ವಾಲ್‌ ಹಾಗೂ ರುತುರಾಜ್‌ ಗಾಯಕ್ವಾಡ್‌ ಹಲವು ಪಂದ್ಯಾವಳಿಗಳಲ್ಲಿಯೂ ಮಿಂಚು ಹರಿಸಿದ್ದಾರೆ. ಶುಭಮನ್‌ ಗಿಲ್‌ ಬದಲು ಈ ಆಟಗಾರರು ಉತ್ತಮ ಆಯ್ಕೆ ಆಗುವುದಲ್ಲಿ ಯಾವುದೇ ಅನುಮಾನವಿಲ್ಲ ಎನ್ನಲಾಗುತ್ತಿದೆ.

Shubman Gill out of the World Cup 2023 Ruturaj Gaikwad Yasshav Jaiswal sanju Samson for Indian team
Image Credit to Original Source

ಭಾರತ ತಂಡ ಸೇರ್ತಾರಾ ಸಂಜು ಸ್ಯಾಮ್ಸನ್‌ ?

ಒಂದೊಮ್ಮೆ ಬಿಸಿಸಿಐ ಬದಲಿ ಆಟಗಾರರ ನೇಮಕಕ್ಕೆ ಮುಂದಾದ್ರೆ ಸಂಜು ಸ್ಯಾಮ್ಸನ್‌ (Sanju Samson) ತಂಡಕ್ಕೆ ಮರಳುವ ಸಾಧ್ಯತೆಯಿದೆ. ಸಂಜು ಸ್ಯಾಮ್ಸನ್‌ ಯಾವುದೇ ಕ್ರಮಾಂಕದಲ್ಲಿ ಕಣಕ್ಕೆ ಇಳಿಯುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಇದೇ ಕಾರಣಕ್ಕೆ ಟೀಂ ಇಂಡಿಯಾವನ್ನು ಅವರು ಸೇರುವ ಸಾಧ್ಯತೆಯಿದೆ.

ಈ ಹಿಂದೆ ಏಷ್ಯಾಕಪ್‌ ನಲ್ಲಿ ಭಾರತ ತಂಡಕ್ಕೆ ಸ್ಯಾಮ್ಸನ್‌ ಆಯ್ಕೆಯಾಗಿದ್ದರು. ಹೆಚ್ಚುವರಿ ಆಟಗಾರನ ನೆಲೆಯಲ್ಲಿ ಸ್ಯಾಮ್ಸನ್‌ ಆಯ್ಕೆಯೂ ನಡೆಯಬಹುದು ಎನ್ನಲಾಗಿದೆ. ಆದರೆ ಶುಭಮನ್‌ ಶೀಘ್ರದಲ್ಲಿ ಚೇತರಿಕೆ ಕಂಡ್ರೆ ಮುಂದು ಎರಡು ವಾರದ ನಂತರ ಭಾರತ ತಂಡದ ಪರ ಕಣಕ್ಕೆ ಇಳಿಯಲೂ ಬಹುದು.

2023ರ ವಿಶ್ವಕಪ್‌ಗೆ ಭಾರತ ತಂಡ :

ಬ್ಯಾಟಿಂಗ್‌ : ರೋಹಿತ್ ಶರ್ಮಾ, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್

ವಿಕೆಟ್‌ ಕೀಪರ್‌ : ಇಶಾನ್ ಕಿಶನ್, ಕೆಎಲ್ ರಾಹುಲ್

ವೇಗದ ಆಲ್‌ರೌಂಡರ್‌ಗಳು: ಹಾರ್ದಿಕ್ ಪಾಂಡ್ಯ (ವಿಸಿ), ಶಾರ್ದೂಲ್ ಠಾಕೂರ್

ಸ್ಪಿನ್ ಆಲ್ ರೌಂಡರ್ಸ್: ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್

ವೇಗದ ಬೌಲರ್‌ಗಳು : ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್

ಸ್ಪಿನ್ನರ್: ಕುಲದೀಪ್ ಯಾದವ್

Shubman Gill out of the World Cup 2023 Ruturaj Gaikwad Yasshav Jaiswal sanju Samson for Indian team

Comments are closed.