Hassan : 2 ಮನೆಗಳ ಗೋಡೆ ಕುಸಿತ, ಮಹಿಳೆ ಸಾವು
Hassan: ಕಳೆದ ಎರಡು ದಿನಗಳಿಂದಲೂ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಎಡು ಕಡೆಗಳಲ್ಲಿ ಮನೆ ಕುಸಿತವಾಗಿದ್ದು, ಮಹಿಳೆ ಸಾವನ್ನಪ್ಪಿರುವ ಘಟನೆ ಹಾಸನದಲ್ಲಿ ನಡೆದಿದೆ.
ಹಾಸನ ಜಿಲ್ಲೆಯ ಅರಕಲಗೋಡು ತಾಲೂಕಿನ ಮತ್ತಿಗೋಡು ಗ್ರಾಮದ ಜವರಮ್ಮ (63 ವರ್ಷ) ಎಂಬಾಕೆಯೆ ಮೃತ ಮಹಿಳೆ. ಇಂದು ಮುಂಜಾನೆ 5.30 ರ ವೇಳೆಯಲ್ಲಿ ಜವರಮ್ಮ ಮನೆಯಲ್ಲಿ ಮಲಗಿದ್ದರು.

ಈ ವೇಳೆಯಲ್ಲಿ ಒಮ್ಮಿದ್ದೊಮ್ಮೆಲೆ ಮನೆಯ ಗೋಡೆ ಕುಸಿತವಾಗಿದೆ. ಮನೆಯಲ್ಲಿದ್ದ ಜವರಮ್ಮನ ಮೈ ಮೇಲೆ ಗೋಡೆ ಕುಸಿತವಾಗಿದು, ಸ್ಥಳದಲ್ಲಿಯೇ ಸಾವನ್ನಪ್ಪಿದ್ದರೆ.
ಆದರೆ ಮನೆಯಲ್ಲಿದ್ದ ಜವರಮ್ಮನ ಮಗ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಶಾಸಕ ಎ.ಮಂಜು ಭೇಟಿ ನೀಡಿ ಪರಿಶೀಲನೆ ನಡೆದಿದ್ದಾರೆ. ಈ ಕುರಿತು ಕೊಣನೂರು ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮೃತ ಜವರಮ್ಮನ ಮೃತದೇಹವನ್ನು ಕೊಣನೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ರವಾನೆ ಮಾಡಲಾಗಿದೆ.
Also Read: Hassan Accident: ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಬಿದ್ದ ಕಾರು : ನಾಲ್ವರಿಗೆ ಗಾಯ
ಹೊಸಲೈನ್ ರಸ್ತೆಯಲ್ಲಿ ಮನೆ ಕುಸಿತ
ಇನ್ನು ಹಾಸನ ನಗರದ ಹೊಸಲೈನ್ ರಸ್ತೆಯಲ್ಲಿಯೂ ಮನೆ ಕುಸಿತವಾಗಿದೆ. ಹಾಸನ ನಗರದಲ್ಲಿಯೂ ಬಾರೀ ಮಳೆ ಸುರಿಯುತ್ತಿದ್ದು, ಬಾರೀ ಮಳೆಗೆ ಅಸ್ಲಂ ಶೇರ್ ಖಾನ್ ಎಂಬವರಿಗೆ ಸೇರಿದ ವಾಸದ ಮನೆ ಕುಸಿತವಾಗಿದೆ.
ಗೋಡೆ ಕುಸಿತದ ಪರಿಣಾಮವಾಗಿ ಮನೆಯಲ್ಲಿದ್ದ ವಸ್ತುಗಳಿಗೆ ಹಾನಿಯಾಗಿದೆ. ಆದರೆ ಅದೃಷ್ಟವಶಾತ್ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅರ್ಧ ಮನೆಯ ಗೋಡೆ ಸಂಪೂರ್ಣ ಕುಸಿತವಾಗಿದೆ. ಮನೆಯಲ್ಲಿದ್ದ ಪೀಠೋಪಕರಣಗಳಿಗೆ ಹಾನಿ ಉಂಟಾಗಿದ್ದು, ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡುವಂತೆ ಒತ್ತಾಯಿಸಿದ್ದಾರೆ. ಮಳೆಯಿಂದ ಉಂಟಾಗಿರುವ ಹಾನಿಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.
Also Read: Mysore Sandal Soap: ಮೈಸೂರು ಸ್ಯಾಂಡಲ್ ಸೋಪ್ ಭರ್ಜರಿ ಮಾರಾಟ : ಸರಕಾರಕ್ಕೆ 135 ಕೋಟಿ ರೂ ಡಿವಿಡೆಂಟ್



