Hijab Row Karnataka High Court: ಹಿಜಾಬ್-ಕೇಸರಿ ಶಾಲು: ಹೈಕೋರ್ಟ್‌ನಲ್ಲಿ ವಾದ ಪ್ರತಿವಾದ ಹೇಗಿತ್ತು? ಮಂಡನೆಯಾದ ಅಂಶಗಳೇನು?

ಇಡೀ ದೇಶದ ಗಮನ ಇಂದು ಮಂಗಳವಾದ (ಫೆಬ್ರವರಿ 8) ಕರ್ನಾಟಕ ಉಚ್ಛ ನ್ಯಾಯಾಲಯದತ್ತ (Hijab Row Karnataka High Court) ನೆಟ್ಟಿತ್ತು. ಕಾರಣ ಹಿಜಾಬ್ -ಕೇಸರಿ ಶಾಲು ಸಂಘರ್ಷದ ವಿಚಾರಣೆ. ಮಹತ್ವಪೂರ್ಣ ಪ್ರಕರಣದ ವಿಚಾರಣೆಯನ್ನು ಹೈಕೋರ್ಟ್ ನ್ಯಾ.ಕೃಷ್ಣ ದೀಕ್ಷಿತ್ ನಡೆಸಿಕೊಟ್ಟರು. ಹಿಜಾಬ್ ಬೇಕೆಂದು ಅರ್ಜಿ ಸಲ್ಲಿಸಿದ್ದ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರ (Muslim Students Hijab) ಪರ ದೇವದತ್ ಕಾಮತ್ ಹಾಗೂ ಸರ್ಕಾರದ ಪರವಾಗಿ ಎಜಿ ಪ್ರಭುಲಿಂಗ ನಾವದಗಿ ವಾದ ಹೈಕೋರ್ಟ್ ನ್ಯಾ.ಕೃಷ್ಣ ದೀಕ್ಷಿತ್ ಮುಂದೆ ವಾದ ಮಂಡಿಸಿದರು.

ಹೇಗಿತ್ತು ವಾದ ವಿವಾದ? ಮಂಡನೆಯಾದ ಅಂಶಗಳೇನು?
ಮುಸ್ಲಿಂ ಸಮುದಾಯದ ವಿದ್ಯಾರ್ತಿನಿಯರ ಪರವಾಗಿ ಅರ್ಜಿ ಸಲ್ಲಿಸಿದ ದೇವದತ್ ಕಾಮತ್, ಸರ್ಕಾರ ಹಿಜಾಬ್ ಧರಿಸಿ ತರಗತಿಗೆ ಹಾಜರಾಗಲು ಕ್ರಮ ನೀಡದಿರುವುದು ಸಂವಿಧಾನದ 25(1) ರ ವಿಧಿಗೆ ವಿರುದ್ಧವಾಗಿದೆ. ಹಿಜಾಬ್ ಮುಸ್ಲಿಂ ಹೆಣ್ಣುಮಕ್ಕಳ ಜೀವನದ ಭಾಗವಾಗಿದೆ. ಹಿಜಾಬ್ ಹಕ್ಕಿಗೆ ಕಾನೂನಿನ ಹೆಸರಲ್ಲಿ ನಿರ್ಬಂಧ ವಿಧಿಸುವುದು ಕಾನುನಿನ ಉಲ್ಲಂಘನೆ ಎಂದು ಮನವಿ ಮಾಡಿಕೊಂಡಿದ್ದರಲ್ಲದೇ, ಹೈಕೋರ್ಟ್ ತೀರ್ಪು ಬರುವವರೆಗೂ ಹಿಜಾಬ್ ಧರಿಸಿಯೇ ತರಗತಿಗೆ ಹಾಜರಾಗಲು ಅವಕಾಶ ನೀಡುವಂತೆ ಮನವಿ ಮಾಡಿದರು. ಅಲ್ಲದದೇ ಹಿಜಾಬ್ ಧರಿಸಿಬಂದವರನ್ನು ಪ್ರತ್ಯೇಕವಾಗಿ ಕೂರಿಸುವುದು ಧಾರ್ಮಿಕ ಅಸ್ಪೃಶ್ಯತೆಗೆ ಅವಕಾಶ ಮಾಡಿಕೊಟ್ಟಿದೆ ಎಂದು ಸಹ ಅವರು ಪ್ರತಿಪಾದಿಸಿದರು. ದೇವದತ್ ಕಾಮತ್ ಅವರ ವಾದಕ್ಕೆ ಎಜಿ ಪ್ರಭುಲಿಂಗ ನಾವದಗಿ ಆಕ್ಷೇಪ ವ್ಯಕ್ತಪಡಿಸಿದರು.

ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರ ವಕೀಲರು ಮತ್ತು ಸರ್ಕಾರದ ಪರ ವಕೀಲರ ನಡುವೆ ವಾದ ಪ್ರತಿವಾದ ತಾರಕ್ಕೇರುತ್ತಿತ್ತು. ಬಿಗುವಿನ ವಾತಾವರಣ ನಿರ್ಮಾಣವಾಗುತ್ತಿತ್ತು. ಈ ವಾತಾವರಣವನ್ನು ತಿಳಿಗೊಳಿಸಲು ಸ್ವತಃ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರೇ ಮಧ್ಯಪ್ರವೇಶಿಸಬೇಕಾಯಿತು. ಹಿಜಾಬ್ ಧರಿಸಿದರೆ ಯಾರಿಗೂ ತೊಂದರೆಯಿಲ್ಲ. ಯಾರಾದರೂ ಹಂದಿಮರಿಯನ್ನು ತೆಗೆದುಕೊಂಡು ಮಾರುಕಟ್ಟೆಗೆ ಹೋದರೆ  ಸಹ ಯಾರಿಗೂ ಸಮಸ್ಯೆಯಿಲ್ಲ. ಹೀಗೆ ಮಾಡಿದರೆ ಯಾರಾದರೂ ನಗಬಹುದಷ್ಟೇ. ಆದರೆ ಸಮಸ್ಯೆಯಾಗುವುದು ದೇವಾಲಯ, ಚರ್ಚ್, ಅಥವಾ ಮಸೀದಿಗೆ ಕರೆದೊಯ್ದರೆ ಮಾತ್ರ ಎಂದು ತಿಳಿಹಾಸ್ಯ ಮಾಡಿದರು. ಈಮೂಲಕ ಬಿಗುವಿನ ವಾತಾವರಣವನ್ನು ತಿಳಿಗೊಳಿಸುವ ಪ್ರಯತ್ನ ಮಾಡಿದರು.

ಇದನ್ನೂ ಓದಿ: Hijab Explainer: ಹಿಜಾಬ್ ಎಂದರೇನು? ಬುರ್ಖಾ, ನಿಕಾಬ್‌ಗೂ ಹಿಜಾಬ್‌ಗೂ ಇರುವ ವ್ಯತ್ಯಾಸವೇನು?

ಇದನ್ನೂ ಓದಿ: Hijab Row Opinion: ಬ್ರಾಹ್ಮಣ ಸಮುದಾಯದಂತೆ ಮುಸ್ಲಿಂ ಸಮುದಾಯ ‘ಓಪನ್ ಅಪ್’ ಆಗುವುದು ಯಾವಾಗ?

(Hijab Row Karnataka High Court hearing full details)

Comments are closed.