ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಮಂಗಗಳು ಹಾವಳಿ : ಬಾಣಂತಿಯರು, ಮಕ್ಕಳು ಸುಸ್ತೋ ಸುಸ್ತು

ಗದಗ : ಅದು‌ ಹೇಳಿಕೊಳ್ಳುವುದಕ್ಕೆ ಹೆರಿಗೆ ಆಸ್ಪತ್ರೆ. ಆದರೆ ಆಸ್ಪತ್ರೆಯಲ್ಲಿ ಮಂಗಗಳ ಹಾವಳಿ ಮಿತಿ ಮೀರಿದೆ. ವಾರ್ಡ್ ಗೆ ನುಗ್ಗಿರುವ ಕೋತಿಗಳ ಹಿಂಡು ಹಾಸಿಗೆಯಿಂದ ಹಾಸಿಗೆಗೆ ಜಿಗಿದು ರೋಗಿಗಳಿಗೆ ಭಯವನ್ನು ಹುಟ್ಟಿಸಿವೆ. ಮಂಗಗಳ ಹಾವಳಿಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಘಟನೆ ನಡೆದಿರುವುದು ಉತ್ತರ ಕರ್ನಾಟಕದ ಗದಗದ ಸರ್ಕಾರಿ ಆಸ್ಪತ್ರೆಯಲ್ಲಿ. ಹೆರಿಗೆ ಆಸ್ಪತ್ರೆಯ ಮಕ್ಕಳ ವಾರ್ಡ್ ಗಳನ್ನು ಪ್ರವೇಶಿಸಿ ರೋಗಿಗಳು ಮತ್ತು ಅವರ ಸಂಬಂಧಿಕರನ್ನು ಭಯಭೀತಗೊಳಿಸಿದೆ. ಸ್ಥಳೀಯ ಮಾದ್ಯಮದ ವರದಿಯ ಪ್ರಕಾರ ಈ ಘಟನೆಯು ವೈದ್ಯರಲ್ಲಿಯೂ ಭಯವನ್ನು ಸೃಷ್ಟಿಸಿತು.

ಇದನ್ನೂ ಓದಿ: Online Gambling Ban : ಕರ್ನಾಟಕದಲ್ಲಿ ಆನ್‌ಲೈನ್‌ ಗ್ಯಾಂಬ್ಲಿಂಗ್‌ ಗೇಮ್‌ ನಿಷೇಧ

ಮಂಗಗಳು ಹೆರಿಗೆ ಆಸ್ಪತ್ರೆಗೆ ಪ್ರವೇಶಿಸಿರುವುದು ಇದೇ ಮೊದಲಲ್ಲ. ಕಳೆದ ವರ್ಷ, ಕೋತಿಯೊಂದು ಅದೇ ಆಸ್ಪತ್ರೆಯ ಆವರಣವನ್ನು ಪ್ರವೇಶಿಸಿ ಆವರಣದಲ್ಲಿ ಆಟವಾಡುತ್ತಿದ್ದ ಮಗುವನ್ನು ತೀವ್ರವಾಗಿ ಗಾಯಗೊಳಿ ಸಿತ್ತು. ನಂತರ ಮಗುವಿಗೆ ತಗುಲಿದ ತಲೆ ಮತ್ತು ಬೆನ್ನಿನ ಗಾಯಗಳಿಗೆ ಚಿಕಿತ್ಸೆ ನೀಡಲು ಮಗು ವನ್ನು ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಇದನ್ನೂ ಓದಿ: Dasara: ಕೊರೋನಾ ಎಫೆಕ್ಟ್: ಈ ಭಾರಿಯೂ ಸರಳಾ ದಸರಾಗೆ ನಿರ್ಧಾರ

ಅಲ್ಲಿನ ಸ್ಥಳಿಯ ನಿವಾಸಿಗಳ ಪ್ರಕಾರ, ಈ ಸಮಸ್ಯೆಯ ಬಗ್ಗೆ ಅರಣ್ಯ ಇಲಾಖೆಯ ಬಳಿ ಹಲವಾರು ಭಾರಿ ದೂರುಗಳನ್ನು ನೀಡಿದರು ಯಾವುದೇ ರೀತಿಯ ಪ್ರಯೋಜನ ವಾಗಲಿಲ್ಲಾ ಎಂದಿದ್ದಾರೆ. ಈ ಮಂಗಗಳ ಸಮಸ್ಯೆಯನ್ನು ಬಗೆಹರಿಸಲು ಅರಣ್ಯ ಇಲಾಖೆಯ ಸಿಬ್ಬಂದಿಗಳು ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂದು ಅಲ್ಲಿನ ಸ್ಥಳಿಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

(Monkeys at children hospital in gadag)

Comments are closed.