INDIA VS ENGLAND 4 TEST : ಭಾರತೀಯರ ಪರಾಕ್ರಮಕ್ಕೆ ನೆಲಕ್ಕಚ್ಚಿದ ಇಂಗ್ಲೆಂಡ್‌ ಪಡೆ

ಲಂಡನ್‌ : ಇಂಗ್ಲೆಂಡ್‌ ವಿರುದ್ದದ ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಭಾರತ ಅಮೋಘ ಪ್ರದರ್ಶನ ನೀಡಿದೆ. ನಾಲ್ಕನೇ ಟೆಸ್ಟ್‌ ಪಂದ್ಯವನ್ನು ಭಾರತ 157ರನ್‌ ಗಳಿಂದ ಜಯಿಸುವ ಮೂಲಕ ಸರಣಿಯಲ್ಲಿ 2-1ರ ಮುನ್ನಡೆಯನ್ನು ಕಾಯ್ದುಕೊಂಡಿದ್ದು, ಸರಣಿ ಗೆಲ್ಲುವ ವಿಶ್ವಾಸದಲ್ಲಿದೆ.

ಮೊದಲು ಬ್ಯಾಟಿಂಗ್‌ ನಡೆಸಿದ್ದ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 191 ರನ್‌ಗಳಿಗೆ ಸರ್ಪ ಪತನ ಕಂಡಿತ್ತು. ಆದರೆ ಇಂಗ್ಲೆಂಡ್‌ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಿದೆ ಯಾದ್ರೂ ಭಾರತೀಯ ಬೌಲರ್‌ಗಳ ದಾಳಿಗೆ ತತ್ತರಿಸಿ 290 ರನ್‌ ಗಳಿಗೆ ಆಲೌಟಾಗಿತ್ತು. ನಂತರ ಎರಡನೇ ಇನ್ನಿಂಗ್ಸ್‌ ಆರಂಭಿಸಿದ್ದ ಭಾರತ ತಂಡ ಇಂಗ್ಲೆಂಡ್‌ ತಂಡಕ್ಕೆ ದಿಟ್ಟ ಉತ್ತರವನ್ನೇ ನೀಡಿತ್ತು.

ಟೀಂ ಇಂಡಿಯಾದ ಆರಂಭಿಕರಾದ ರೋಹಿತ್‌ ಶರ್ಮಾ ಹಾಗೂ ಕೆ.ಎಲ್.ರಾಹುಲ್‌ ಭರ್ಜರಿ ಜೊತೆಯಾಟ ನೀಡಿದ್ದರು. ರಾಹುಲ್‌ 46 ರನ್‌ ಗಳಿಸಿ ಔಟಾಗುತ್ತಲೇ ರೋಹಿತ್‌ ಶರ್ಮಾ ಜೊತೆಯಾದ ಚೇತೇಶ್ವರ ಪೂಜಾರ ಭರ್ಜರಿ ಅರ್ಧಶತಕ ಸಿಡಿದ್ರೆ, ರೋಹಿತ್‌ ಶರ್ಮಾ 127 ರನ್‌ ಸಿಡಿಸುವ ಮೂಲಕ ಭರ್ಜರಿ ಶತಕ ಬಾರಿಸಿದ್ದಾರೆ. ವಿರಾಟ್‌ ಕೊಯ್ಲಿ 44, ರಿಷಬ್‌ ಪಂತ್‌ 50, ಶಾರ್ದೂಲ್‌ ಠಾಕೂರ್‌ 60 ರನ್‌ ಸಿಡಿಸುವ ಮೂಲಕ ಟೀಂ ಇಂಡಿಯಾ ಎರಡನೇ ಇನ್ನಿಂಗ್ಸ್‌ನಲ್ಲಿ 466 ರನ್‌ಗಳಿಗೆ ಸರ್ವಪತನ ಕಂಡಿದೆ.

ಟೀಂ ಇಂಡಿಯಾ ನೀಡಿದ್ದ 368 ರನ್‌ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್‌ ತಂಡಕ್ಕೆ ಆರಂಭಿಕರಾದ ಜೋಸೆಫ್‌ ಬರ್ನ್ಸ್‌ 50 ಹಾಗೂ ಹಸೀಬ್‌ ಹಮೀದ್‌ 62 ರನ್‌ ಸಿಡಿಸುವ ಮೂಲಕ 100 ರನ್‌ಗಳ ಭರ್ಜರಿ ಜೊತೆಯಾಟ ನೀಡಿದ್ರು. ಆದರೆ ಶಾರ್ದೂಲ್‌ ಠಾಕೂರು ಇಂಗ್ಲೆಂಡ್‌ ತಂಡಕ್ಕೆ ಆರಂಭಿಕ ಆಘಾತ ನೀಡಿದ್ರು. ನಂತರ ಬಂದ ಡಿ ಮಲನ್‌ 5ರನ್‌ ಗೆ ಪೆವಿಲಿಯನ್‌ ಗೆ ಹೆಜ್ಜೆ ಹಾಕಿದ್ರೆ, ನಾಯಕ ಜೋ ರೂಟ್‌ 36ರನ್‌ ಗಳಿಸಿ ಔಟಾದ್ರು. ಉಳಿದಂತೆ ಯಾವುದೇ ಆಟಗಾರರು ಕೂಡ ಉತ್ತಮ ಆಟದ ಪ್ರದರ್ಶನ ನೀಡಲಿಲ್ಲ. ಉಮೇಶ್‌ ಯಾದವ್‌, ಜಸ್ಪ್ರಿತ್‌ ಬೂಮ್ರಾ, ರವೀಂದ್ರ ಜಡೇಜಾ ಹಾಗೂ ಶಾರ್ದೂಲ್‌ ಠಾಕೂರ್‌ ಮಾರಕ ದಾಳಿಯಿಂದಾಗಿ ಭಾರತ ತಂಡ ಐತಿಹಾಸಿಕ ಗೆಲುವು ದಾಖಲಿಸಿದೆ.

ಇದನ್ನೂ ಓದಿ : ICC TEST RANKINGನಲ್ಲಿ ವಿರಾಟ್‌ಗೆ ನಿರಾಸೆ : ಕೊಹ್ಲಿಯನ್ನು ಹಿಂದಿಕ್ಕಿದ ರೋಹಿತ್ ಶರ್ಮಾ

ಇದನ್ನೂ ಓದಿ : ಭಾರತದ ನಂ.1, ವಿಶ್ವದ ನಂ.2 ಬೌಲರ್‌‌ ಆರ್. ಅಶ್ವಿನ್‌ಗೆ ಇಲ್ಲ ಸ್ಥಾನ

(India Vs England 4th Test match : India Won by 157 runs)

Comments are closed.