T20 World Cup 2022: ನಾಳೆ ಭಾರತ Vs ದಕ್ಷಿಣ ಆಫ್ರಿಕಾ ಮ್ಯಾಚ್, ಕನ್ನಡಿಗ ರಾಹುಲ್‌ಗೆ ಮತ್ತೊಂದು ಅಗ್ನಿಪರೀಕ್ಷೆ

ಪರ್ತ್: India vs South Africa KL Rahul : ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಭಾನುವಾರ ಸೂಪರ್-12 ಹಂತದಲ್ಲಿ ತನ್ನ 3ನೇ ಲೀಗ್ ಪಂದ್ಯವನ್ನಾಡಲಿದ್ದು, ಪರ್ತ್’ನ ವಾಕಾ ಮೈದಾನದಲ್ಲಿ ನಡೆಯುವ ಪಂದ್ಯದಲ್ಲಿ ಟೀಮ್ ಇಂಡಿಯಾ ಎದುರಾಳಿ ದಕ್ಷಿಣ ಆಫ್ರಿಕಾ (India vs South Africa). ಈಗಾಗಲೇ ಪಾಕಿಸ್ತಾನ ಹಾಗೂ ನೆದರ್ಲೆಂಡ್ಸ್ ವಿರುದ್ಧ ಆಡಿದ ಎರಡೂ ಪಂದ್ಯಗಳನ್ನು 4 ಅಂಕಗಳೊಂದಿಗೆ ಗೆದ್ದು ಗ್ರೂಪ್-2ರಲ್ಲಿ ಅಗ್ರಸ್ಥಾನದಲ್ಲಿರುವ ಭಾರತ, ಭಾನುವಾರ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಸೆಮಿಫೈನಲ್ ಸ್ಥಾನವನ್ನು ಖಚಿತ ಪಡಿಸಿಕೊಳ್ಳುವ ತವಕದಲ್ಲಿದೆ. ಆದರೆ ಭರ್ಜರಿ ಫಾರ್ಮ್’ನಲ್ಲಿ ಟೀಮ್ ಇಂಡಿಯಾ ಚಿಂತೆಗೆ ಕಾರಣ ಒಂದೇ. ಅದು ಆರಂಭಿಕ ಬ್ಯಾಟ್ಸ್’ಮನ್, ಉಪನಾಯಕ ಕೆ.ಎಲ್ ರಾಹುಲ್ (KL Rahul) ಅವರ ವೈಫಲ್ಯ.

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಕೇವಲ 4 ರನ್ ಗಳಿಸಿ ಔಟಾಗಿದ್ದ ರಾಹುಲ್, ನೆದರ್ಲೆಂಡ್ಸ್ ವಿರುದ್ಧವೂ ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲರಾಗಿ ಕೇವಲ 9 ರನ್ನಿಗೆ ಔಟಾಗಿದ್ದರು. ಹೀಗಾಗಿ ದಕ್ಷಿಣ ಆಫ್ರಿಕಾ ವಿರುದ್ಧ ರಾಹುಲ್ ಉತ್ತಮ ಪ್ರದರ್ಶನ ತೋರಲೇಬೇಕಾದ ಒತ್ತಡದಲ್ಲಿದ್ದಾರೆ. ಔಟ್ ಆಫ್ ಫಾರ್ಮ್ ರಾಹುಲ್ ಬೆಂಬಲಕ್ಕೆ ಮಾಜಿ ಟೆಸ್ಟ್ ಕ್ರಿಕೆಟಿಗ ವಸೀಮ್ ಜಾಫರ್ ನಿಂತಿದ್ದು, ರಾಹುಲ್ ಅದ್ಭುತ ಆಟಗಾರ ಎಂದಿದ್ದಾರೆ.

“ಅಂಕಿ ಅಂಶಗಳು ಏನನ್ನು ತೋರಿಸುತ್ತಿವೆಯೋ, ಅದಕ್ಕಿಂತಲೂ ರಾಹುಲ್ ಉತ್ತಮ ಆಟಗಾರ. ಟೆಸ್ಟ್ ಕ್ರಿಕೆಟ್’ನಲ್ಲಿ ರಾಹುಲ್ ಅದ್ಭುತ ಆಟಗಾರ. ಟಿ20 ಹಾಗೂ ಏಕದಿನ ಕ್ರಿಕೆಟ್’ನಲ್ಲೂ ರಾಹುಲ್ ಅದ್ಭುತ ಕ್ರಿಕೆಟಿಗ” ಎಂದು ವಸೀಮ್ ಜಾಫರ್ ಹೇಳಿದ್ದಾರೆ. ಟಿ20 ವಿಶ್ವಕಪ್’ನ ಮೊದಲ ಎರಡೂ ಪಂದ್ಯಗಳಲ್ಲಿ ವಿಫಲರಾಗಿರುವ ರಾಹುಲ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆ ಮಾಡಲಾಗುತ್ತಿದೆ. ದಕ್ಷಿಣ ಆಫ್ರಿಕಾ ವಿರುದ್ಧ ರಾಹುಲ್ ಮತ್ತೆ ಎಡವಿದರೆ, ಟೀಕಾಸ್ತ್ರಗಳು ಮತ್ತಷ್ಟು ವೇಗವಾಗಿ ರಾಹುಲ್ ಅವರತ್ತ ನುಗ್ಗಿ ಬರಲಿವೆ.

ಮತ್ತೊಂದೆಡೆ ದಕ್ಷಿಣ ಆಫ್ರಿಕಾ ತಂಡ ತನ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 104 ರನ್’ಗಳಿಂದ ಸೋಲಿಸಿ ಶುಭಾರಂಭ ಮಾಡಿತ್ತು. ಆದರೆ ಜಿಂಬಾಬ್ವೆ ವಿರುದ್ಧದ 2ನೇ ಪಂದ್ಯ ಮಳೆಯಿಂದ ರದ್ದಾದ ಕಾರಣ ಅಂಕ ಹಂಚಿಕೊಂಡಿತ್ತು. ತೆಂಬಾ ಬವೂಮ ನಾಯಕತ್ವದ ದಕ್ಷಿಣ ಆಫ್ರಿಕಾ ಆಡಿರುವ 2 ಪಂದ್ಯಗಳಿಂದ 3 ಅಂಕ ಗಳಿಸಿ ಗ್ರೂಪ್-2 ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ.

ದಕ್ಷಿಣ ಆಫ್ರಿಕಾ ವಿರುದ್ಧದದ ಪಂದ್ಯದಲ್ಲಿ ಭಾರತದ ಪ್ಲೇಯಿಂಗ್ XI

1.ರೋಹಿತ್ ಶರ್ಮಾ (ನಾಯಕ), 2.ಕೆ.ಎಲ್ ರಾಹುಲ್ (ಉಪನಾಯಕ), 3.ವಿರಾಟ್ ಕೊಹ್ಲಿ, 4.ಸೂರ್ಯಕುಮಾರ್ ಯಾದವ್, 5.ಹಾರ್ದಿಕ್ ಪಾಂಡ್ಯ, 6.ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), 7.ರವಿಚಂದ್ರನ್ ಅಶ್ವಿನ್, 8.ಅಕ್ಷರ್ ಪಟೇಲ್, 9.ಮೊಹಮ್ಮದ್ ಶಮಿ, 10.ಭುವನೇಶ್ವರ್ ಕುಮಾರ್, 11.ಅರ್ಷದೀಪ್ ಸಿಂಗ್.

More Sports News Click Here

ಪಂದ್ಯ ಆರಂಭ: ಸಂಜೆ 4.30ಕ್ಕೆ (ಭಾರತೀಯ ಕಾಲಮಾನ)
ಸ್ಥಳ: ವಾಕಾ ಕ್ರಿಕೆಟ್ ಮೈದಾನ, ಪರ್ತ್
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
ಲೈವ್ ಸ್ಟ್ರೀಮಿಂಗ್: ಡಿಸ್ನಿ+ಹಾಟ್ ಸ್ಟಾರ್

ಇದನ್ನೂ ಓದಿ : T20 World Cup 2022: ಭಾರತದ ಕೈಯಲ್ಲಿ ಪಾಕ್ ಭವಿಷ್ಯ, ಟೀಮ್ ಇಂಡಿಯಾ ಗೆಲುವಿಗೆ ಪಾಕಿಸ್ತಾನ ಪ್ರಾರ್ಥನೆ

ಇದನ್ನೂ ಓದಿ : IPL 2023 RCB TEAM : ಟೀಂ ಇಂಡಿಯಾದ 3 ಆಟಗಾರರಿಗೆ ಕೋಕ್ ಕೊಡಲಿದೆ ಆರ್ ಸಿಬಿ

India vs South Africa match tomorrow, another ordeal for KL Rahul T20 World Cup 2022

Comments are closed.