ಖಾಸಗಿ ಉದ್ಯಮದ ಮಹಿಳಾ ನೌಕರರಿಗೆ ತಿಂಗಳಲ್ಲಿ ಮಾಸಿಕ ಋತುಚಕ್ರ ರಜೆ : ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ

ರಾಜ್ಯದ ಮಹಿಳಾ ನೌಕರರಿಗೆ ವೇತನ ಸಹಿತ ಮುಟ್ಟಿನ ರಜೆಯನ್ನು ನೀಡುವ ಐತಿಹಾಸಿಕ ನಿರ್ಣಯ ಕೈಗೊಂಡಿದ್ದ ರಾಜ್ಯ ಸರ್ಕಾರ ಇದೀಗ ಖಾಸಗಿ ವಲಯದ ಮಹಿಳಾ ಸಿಬ್ಬಂದಿಗೂ ಗುಡ್​ ನ್ಯೂಸ್​ ನೀಡಿದೆ. ವಿವಿಧ ಕಾರ್ಮಿಕ ಕಾಯ್ದೆಗಳ ಅಡಿಯಲ್ಲಿ ನೋಂದಣಿಯಾಗಿರುವ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಸಿಬ್ಬಂದಿಯೂ ಮುಟ್ಟಿನ ರಜೆಗೆ ಅರ್ಹರು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಕಾರ್ಖಾನೆಗಳ ಕಾಯ್ದೆ, 1948, ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ, 1961, ತೋಟ ಕಾರ್ಮಿಕರ ಕಾಯ್ದೆ, 1951, ಬೀಡಿ ಮತ್ತು ಸಿಗಾರ್ ಕಾರ್ಮಿಕರ ಕಾಯ್ದೆ, 1966 ಹಾಗೂ ಮೋಟಾರು ಸಾರಿಗೆ ಕಾರ್ಮಿಕರ ಕಾಯ್ದೆ 1961 ರಡಿ ನೋಂದಣಿಯಾಗಿರುವ ಎಲ್ಲಾ ಕೈಗಾರಿಕೆಗಳು ಹಾಗೂ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರು ಮುಟ್ಟಿನ ರಜೆ ನೀಡುವ ಬಗ್ಗೆ ಚರ್ಚಿಸಲು ಸಮಿತಿ ರಚನೆ ಮಾಡಲಾಗಿತ್ತು. ಇದೀಗ ಈ ಸಮಿತಿ ನೀಡಿದ ವರದಿ ಆಧರಿಸಿದ ರಾಜ್ಯ ಸರ್ಕಾರ ವಿಶೇಷ ರಾಜ್ಯಪತ್ರಿಕೆ ಮೂಲಕ ಈ ಆದೇಶ ಹೊರಡಿಸಿದೆ.

ಸಚಿವ ಸಂಪುಟ ಟಿಪ್ಪಣಿಯಲ್ಲಿ ರಾಜ್ಯಾದ್ಯಂತ ಸರ್ಕಾರಿ ಕಚೇರಿಗಳು, ಗಾರ್ಮೆಂಟ್ಸ್, MNC ಗಳು, IT ಮತ್ತು ಇತರ ಖಾಸಗಿ ಕೈಗಾರಿಕೆಗಳು ಸೇರಿದಂತೆ ಎಲ್ಲಾ ವಲಯಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಪ್ರತಿ ತಿಂಗಳು ಋತುಚಕ್ರ ರಜೆ ಪಡೆಯಲಿದ್ದಾರೆ. ವರ್ಷದಲ್ಲಿ 12 ಮಾಸಿಕ ರಜೆಗಳನ್ನು ಪಡೆಯಲು ಇವರು ಅರ್ಹರು ಎಂದು ತಿಳಿಸಲಾಗಿದೆ.

ಇದನ್ನೂ ಓದಿ: ಕೇವಲ 1000 ಹೂಡಿಕೆಗೆ 3 ಲಕ್ಷ ಸಾಲ ಪಡೆಯಿರಿ! ರಾಜ್ಯ ಸರ್ಕಾರದಿಂದ ಗೃಹಲಕ್ಷ್ಮಿಯರಿಗೆ ಬಂಪ‌ರ್

ಕಾರ್ಮಿಕರು, ಕಾರ್ಮಿಕ ಸಂಘ, ಮಾಲೀಕರು, ಮಾಲೀಕ ಸಂಘಗಳು, ಮಹಿಳಾ ಸಂಘಟನೆ ಹೀಗೆ ಒಟ್ಟೂ 75 ಮಂದಿಯಿಂದ ಋತುಚಕ್ರ ರಜಾನೀತಿಯ ಸಂಬಂಧ ಅಭಿಪ್ರಾಯ ಸಂಗ್ರಹಣೆ ಮಾಡಲಾಗಿತ್ತು. ಈ ಪೈಕಿ 56 ಅಭಿಪ್ರಾಯಗಳು ಋತುಚಕ್ರ ರಜಾನೀತಿಯ ಪರವಾಗಿ ಬಂದಿತ್ತು. 19 ಮಂದಿ ಋತುಚಕ್ರ ನೀತಿಯ ವಿರುದ್ಧವಾಗಿ ಬಂದಿತ್ತು.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories