ದಿನಭವಿಷ್ಯ 24 ಡಿಸೆಂಬರ್‌ 2023 : ಕೃತಿಕಾ ನಕ್ಷತ್ರದ ಪ್ರಭಾವ, ಸಿದ್ದಯೋಗ ಕುಂಭರಾಶಿಗೆ ಅದೃಷ್ಟ

Horoscope Today :  ದಿನಭವಿಷ್ಯ 24 ಡಿಸೆಂಬರ್‌ 2023 ಭಾನುವಾರ. ದ್ವಾದಶ ರಾಶಿಗಳ ಮೇಲೆ ಇಂದು ಕೃತಿಕಾ ನಕ್ಷತ್ರದ ಪ್ರಭಾವ ಇರುತ್ತದೆ. ಚಂದ್ರನು ವೃಷಭರಾಶಿಗೆ ಪ್ರಯಾಣ ಬೆಳೆಸುತ್ತಾನೆ. ಸಿದ್ದಯೋಗದಿಂದ ಕುಂಭರಾಶಿಯವರಿಗೆ ಬಾರೀ ಅದೃಷ್ಟ ತರಲಿದೆ

Horoscope Today :  ದಿನಭವಿಷ್ಯ 24 ಡಿಸೆಂಬರ್‌ 2023 ಭಾನುವಾರ. ದ್ವಾದಶ ರಾಶಿಗಳ ಮೇಲೆ ಇಂದು ಕೃತಿಕಾ ನಕ್ಷತ್ರದ ಪ್ರಭಾವ ಇರುತ್ತದೆ. ಚಂದ್ರನು ವೃಷಭರಾಶಿಗೆ ಪ್ರಯಾಣ ಬೆಳೆಸುತ್ತಾನೆ. ಸಿದ್ದಯೋಗದಿಂದ ಕುಂಭರಾಶಿಯವರಿಗೆ ಬಾರೀ ಅದೃಷ್ಟ ತರಲಿದೆ. ಮೇಷರಾಶಿಯಿಂದ ಮೀನರಾಶಿಯ ವರೆಗೆ ಒಟ್ಟು ೧೨ ದ್ವಾದಶ ರಾಶಿಗಳ ಇಂದಿನ ದಿನಭವಿಷ್ಯ ಹೇಗಿದೆ.

ಮೇಷರಾಶಿ ದಿನಭವಿಷ್ಯ
ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಯಶಸ್ವಿ ಆಗುತ್ತಾರೆ. ಕುಟುಂಬದ ಹಿರಿಯ ಸದಸ್ಯರ ಸಲಹೆಯಿಂದ ನಿಮ್ಮ ಸಮಸ್ಯೆಗೆ ಪರಿಹಾರ ದೊರೆಯಲಿದೆ. ವ್ಯವಹಾರಿಕವಾಗಿ ಚೇತರಿಕೆಯನ್ನು ಕಾಣುವಿರಿ. ಪುಣ್ಯಕ್ಷೇತ್ರಗಳ ದರ್ಶನದಿಂದ ಮನಸಿಗೆ ನೆಮ್ಮದಿ. ದೂರ ಪ್ರಯಾಣ ಲಾಭವನ್ನು ತರಲಿದೆ.

ವೃಷಭರಾಶಿ ದಿನಭವಿಷ್ಯ
ಹೊಸ ಯೋಜನೆಗಳನ್ನು ಆರಂಭಿಸಲು ಸಕಾಲ. ಬಿಡುವಿಲ್ಲದ ಕೆಲಸದಲ್ಲಿ ತಾವು ತೊಡಗಿಕೊಳ್ಳುವಿರಿ. ವಿದೇಶದಲ್ಲಿ ವಾಸುತ್ತಿರುವ ಕೆಲವು ಸದಸ್ಯರಿಂದ ನೀವು ಶುಭ ಸುದ್ದಿಯೊಂದನ್ನು ಕೇಳುವಿರಿ. ಸ್ನೇಹಿತರು ನಿಮಗೆ ಆರ್ಥಿಕವಾಗಿ ಸಹಕಾರವನ್ನು ಮಾಡಲಿದ್ದಾರೆ.

ಮಿಥುನರಾಶಿ ದಿನಭವಿಷ್ಯ
ಅಗತ್ಯಕ್ಕಿಂತ ಅಧಿಕ ಖರ್ಚುಗಳನ್ನು ಯಾವುದೇ ಕಾರಣಕ್ಕೂ ಮಾಡಬೇಡಿ. ದೀರ್ಘ ಕಾಲದಿಂದ ಬಾಕಿ ಉಳಿದಿರುವ ಕೆಲಸ ಕಾರ್ಯಗಳು ಇಂದು ಪೂರ್ಣಗೊಳ್ಳಲಿದೆ. ಸರಕಾರಿ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯಲಿದೆ. ಸಹೋದರ ನಡುವಿನ ಭಿನ್ನಾಭಿಪ್ರಾಯ ದೂರವಾಗಲಿದೆ.

ಕರ್ಕಾಟಕರಾಶಿ ದಿನಭವಿಷ್ಯ
ಸಂಗಾತಿಯೊಂದಿಗೆ ವಾದ ವಿವಾದಗಳು ಉಂಟಾಗುವ ಸಾಧ್ಯತೆಯಿದೆ. ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯಲಿದೆ. ದೂರ ಪ್ರಯಾಣದಿಂದ ಹೊಸ ವ್ಯವಹಾರಕ್ಕೆ ಚಾಲನೆ ಸಿಗಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ.

ಸಿಂಹರಾಶಿ ದಿನಭವಿಷ್ಯ
ನಿಮ್ಮ ಆದಾಯ ದುಪ್ಪಟ್ಟು ಏರಿಕೆಯಾಗಲಿದೆ. ಆರ್ಥಿಕ ಪರಿಸ್ಥಿತಿಯು ಅನುಕೂಲಕರವಾಗಿ ಇರಲಿದೆ. ಸಂಗಾತಿಯ ಮೇಲೆ ಪ್ರೀತಿ ಹೆಚ್ಚಲಿದೆ. ರಾಜಕಾರಣಿಗಳಿಗೆ ಅನುಕೂಲಕರವಾದ ದಿನ. ವೈವಾಹಿಕ ಜೀವನವು ಸುಖಮಯವಾಗಿ ಇರಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ.

ಇದನ್ನೂ ಓದಿ : ಐಪಿಎಲ್ 2024 : ಹಾರ್ದಿಕ್‌ ಪಾಂಡ್ಯ ಔಟ್‌ : ಮುಂಬೈ ಇಂಡಿಯನ್ಸ್‌ಗೆ ರೋಹಿತ್‌ ಶರ್ಮಾ ನಾಯಕ

ಕನ್ಯಾರಾಶಿ ದಿನಭವಿಷ್ಯ
ಸಂಗಾತಿಯೊಂದಿನ ಭಿನ್ನಾಭಿಪ್ರಾಯ ಇಂದು ಪರಿಹಾರ ಕಾಣಲಿದೆ. ಉದ್ಯೋಗಿಗಳಿಗೆ ಕೆಲಸದ ಸ್ಥಳದಲ್ಲಿ ಗೌರವ ಹೆಚ್ಚಲಿದೆ. ತಂದೆಯ ಕೆಲವೊಂದು ಸಲಹೆಗಳು ನಿಮಗೆ ಲಾಭವನ್ನು ತಂದುಕೊಡಲಿದೆ. ಹಳೆಯ ಸ್ನೇಹಿತರ ಭೇಟಿಯಿಂದ ಮನಸಿಗೆ ಸಮಾಧಾನ.

Horoscope Today 24 December 2023 Zodiac Sign Siddi Yoga
Image Credit to Original Source

ತುಲಾರಾಶಿ ದಿನಭವಿಷ್ಯ
ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯವಿದೆ. ಆರ್ಥಿಕವಾಗಿ ಅಭಿವೃದ್ದಿಯನ್ನು ಕಾಣುವಿರಿ. ವ್ಯವಹಾರಕ್ಕೆ ಸಂಬಂಧಿಸಿದಂತೆ ಶುಭ ಸುದ್ದಿಯೊಂದನ್ನು ಕೇಳುವಿರಿ. ಪಾಲುದಾರಿಕೆಯ ವ್ಯವಹಾರ ನಿಮಗೆ ಹೆಚ್ಚು ಲಾಭವನ್ನು ತಂದುಕೊಡಲಿದೆ.. ಸಂಗಾತಿಯೊಂದಿಗೆ ಸುಂದರ ಕ್ಷಣಗಳನ್ನು ಕಳೆಯುವಿರಿ.

ವೃಶ್ವಿಕರಾಶಿ ದಿನಭವಿಷ್ಯ
ಆಹಾರ ಸೇವನೆಯ ಬಗ್ಗೆ ಎಚ್ಚರವಾಗಿ ಇರಿ. ವ್ಯಾಪಾರ, ವ್ಯವಹಾರಗಳನ್ನು ಮುಂದೂಡುವ ಸಾಧ್ಯತೆಯಿದೆ. ಭವಿಷ್ಯದಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರವನ್ನು ಕಾಣಲಿದೆ. ಮನೆಗೆ ಅತಿಥಿಗಳು ಆಗಮಿಸುವ ಸಾಧ್ಯತೆಯಿದೆ. ಆರೋಗ್ಯದ ಸಮಸ್ಯೆ ತೆಲೆದೋರಲಿದೆ.

ಇದನ್ನೂ ಓದಿ :ಕರ್ನಾಟಕ ರಾಜ್ಯ ಬಿಜೆಪಿ ಘಟಕಕ್ಕೆ ನೂತನ ಪದಾಧಿಕಾರಿಗಳ ನೇಮಕ

ಧನಸ್ಸುರಾಶಿ ದಿನಭವಿಷ್ಯ
ಯಾರಿಗೆ ಸಾಲ ನೀಡಿದ್ದರೂ ಕೂಡ ಅದನ್ನು ಸುಲಭವಾಗಿ ಮರಳಿ ಪಡೆಯುವಿರಿ. ಆರ್ಥಿಕ ಪರಿಸ್ಥಿತಿಯು ಇಂದು ಉತ್ತಮಗೊಳ್ಳಲಿದೆ. ಕುಟುಂಬ ಸದಸ್ಯರ ಆಸೆ ಈಡೇರಿಕೆಯಾಗಲಿದೆ. ಸಂಗಾತಿಯಿಂದ ನೀವು ಉಡುಗೊರೆಯೊಂದನ್ನು ಪಡೆಯುವಿರಿ.

ಮಕರರಾಶಿ ದಿನಭವಿಷ್ಯ
ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಎಚ್ಚರವಾಗಿ ಇರಿ. ಮಾನಸಿಕ ಒತ್ತಡಕ್ಕೆ ನೀವು ಒಳಗಾಗುವ ಸಾಧ್ಯತೆಯಿದೆ. ಪಡೆದುಕೊಂಡಿರುವ ಸಾಲ ಮರುಪಾವತಿ ಮಾಡುವಿರಿ. ಹೊಂದಾಣಿಕೆಯಿಂದ ಕಾರ್ಯಾನುಕೂಲ. ಸಹೋದ್ಯೋಗಿಗಳಿಂದ ಸಹಕಾರ ದೊರೆಯಲಿದೆ.

ಇದನ್ನೂ ಓದಿ :ಮಹಿಳೆಯರ ಹೆಲ್ಪ್ ಡೆಸ್ಕ್ ರದ್ದು : 250 ಆಪ್ತ ಸಮಾಲೋಚಕಿಯರಿಗೆ ಸಂಕಷ್ಟ

ಕುಂಭರಾಶಿ ದಿನಭವಿಷ್ಯ
ಅಧಿಕಾರಿಗಳು ನಿಮ್ಮ ಸಹಾಯಕ್ಕೆ ನಿಲ್ಲಲಿದ್ದಾರೆ. ಬುದ್ದಿವಂತಿಕೆಯಿಂದ ಶತ್ರುಗಳನ್ನು ನಾಶ ಮಾಡುವಿರಿ. ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದಂತೆ ಶುಭ ಸುದ್ದಿಯೊಂದನ್ನು ಕೇಳುವಿರಿ. ಸರಕಾರಿ ಉದ್ಯೋಗಿಗಳಿಗೆ ಅನುಕೂಲಕರ. ವೇತನ ಹೆಚ್ಚಳವಾಗುವ ಸಾಧ್ಯತೆಯಿದೆ. ಸಂಜೆಯ ವೇಳೆಗೆ ಶುಭ ಸುದ್ದಿಯೊಂದನ್ನು ಕೇಳುವಿರಿ.

ಮೀನರಾಶಿ ದಿನಭವಿಷ್ಯ
ಹೊಸ ವಾಹನ ಖರೀದಿ ಸಾಧ್ಯತೆ. ಆರೋಗ್ಯ ಸಮಸ್ಯೆ ಎದುರಾಗಲಿದೆ. ವ್ಯವಹಾರಕ್ಕೆ ಸಂಬಂಧಿಸಿದಂತೆ ಹೊಸ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ. ತಂದೆ ತಾಯಿಯ ಆಶೀರ್ವಾದದಿಂದ ಮಾಡುವ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯಲಿದೆ. ಹೊಂದಾಣಿಕೆಯಿಂದ ಕಾರ್ಯಾನುಕೂಲ.

Horoscope Today 24 December 2023 Zodiac Sign Siddi Yoga

Comments are closed.