ಬಿಜೆಪಿಯವರು ಕುದುರೆ ವ್ಯಾಪಾರಕ್ಕೆ ಹೆಸರುವಾಸಿ: ಡಿಸಿಎಂ ಡಿಕೆ ಶಿವಕುಮಾರ್ ವ್ಯಂಗ್ಯ

Odisha Congress MLA's in Bengaluru | DCM DK Shivakumar: "ಕಾಂಗ್ರೆಸ್‌ಗೆ ತನ್ನ ಶಾಸಕರ ಮೇಲೆ ನಂಬಿಕೆ ಇಲ್ಲ" ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರ ಟೀಕೆಗೆ ತಿರುಗೇಟು ನೀಡಿದ ಡಿಕೆಶಿ, "ಹಾಗಿದ್ದರೆ ಈ ಹಿಂದೆ ಕರ್ನಾಟಕದಲ್ಲಿ ಬಿಜೆಪಿ ಆಪರೇಷನ್ ಕಮಲ ಮಾಡಿದ್ದು ಯಾಕೆ? ನಮ್ಮ ಶಾಸಕರಿಗೆ ದೊಡ್ಡ ದೊಡ್ಡ ಆಫರ್‌ಗಳನ್ನು ನೀಡಲಾಗುತ್ತಿದೆ, ಅವರ ಮೇಲೆ ಒತ್ತಡ ಹೇರಲಾಗುತ್ತಿದೆ," ಎಂದು ಗಂಭೀರ ಆರೋಪ ಮಾಡಿದರು.

ಬೆಂಗಳೂರು: “ಬಿಜೆಪಿಯವರು ಆಪರೇಷನ್ ಕಮಲದ ಪಿತಾಮಹರು ಮತ್ತು ಕುದುರೆ ವ್ಯಾಪಾರಕ್ಕೆ ಹೆಸರುವಾಸಿ. ಅವರ ಇಂತಹ ಪ್ರಯತ್ನಗಳಿಗೆ (Odisha Congress MLA’s in Bengaluru)  ನಾವು ಅವಕಾಶ ನೀಡುವುದಿಲ್ಲ,” ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು (DCM DK Shivakumar) ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಶುಕ್ರವಾರ ವಿಧಾನಸೌಧದ ಆವರಣ ಹಾಗೂ ಬಿಡದಿಯ ರೆಸಾರ್ಟ್ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದ ಪ್ರಸಕ್ತ ವಿದ್ಯಮಾನಗಳ ಕುರಿತು ಹರಿಹಾಯ್ದರು.

ರೆಸಾರ್ಟ್‌ನಲ್ಲಿ ಒಡಿಶಾ ಶಾಸಕರು: ಅತಿಥಿ ಸತ್ಕಾರ ನಮ್ಮ ಧರ್ಮ

ಒಡಿಶಾದ ಶಾಸಕರು ರಾಮನಗರದ ರೆಸಾರ್ಟ್‌ನಲ್ಲಿ ತಂಗಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ರಾಜಕೀಯ ರಂಗದಲ್ಲಿ ಕುದುರೆ ವ್ಯಾಪಾರದ ಭೀತಿ ಎಲ್ಲಾ ಪಕ್ಷಗಳಿಗೂ ಇರುತ್ತದೆ. ಒಡಿಶಾ ಪಿಸಿಸಿ ಅಧ್ಯಕ್ಷರು ನಮಗೆ ಕರೆ ಮಾಡಿ, ಆಪರೇಷನ್ ಕಮಲದ ಭೀತಿ ಇರುವುದಾಗಿ ತಿಳಿಸಿದರು. ಜಾತ್ಯಾತೀತ ಪಕ್ಷಗಳೆಲ್ಲಾ ಒಂದಾಗಿ ಅಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೇವೆ. ಅವರು ಇಲ್ಲಿಗೆ ಬಂದಾಗ ಅವರಿಗೆ ನೆರವು ನೀಡುವುದು ಮತ್ತು ಅವರ ಯೋಗಕ್ಷೇಮ ವಿಚಾರಿಸುವುದು ನಮ್ಮ ಕರ್ತವ್ಯ,” ಎಂದರು. ಪ್ರಸ್ತುತ 14-15 ಶಾಸಕರು ರೆಸಾರ್ಟ್‌ನಲ್ಲಿದ್ದು, ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದರು.

ಜೋಷಿ ಹೇಳಿಕೆಗೆ ತಿರುಗೇಟು

“ಕಾಂಗ್ರೆಸ್‌ಗೆ ತನ್ನ ಶಾಸಕರ ಮೇಲೆ ನಂಬಿಕೆ ಇಲ್ಲ” ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರ ಟೀಕೆಗೆ ತಿರುಗೇಟು ನೀಡಿದ ಡಿಕೆಶಿ, “ಹಾಗಿದ್ದರೆ ಈ ಹಿಂದೆ ಕರ್ನಾಟಕದಲ್ಲಿ ಬಿಜೆಪಿ ಆಪರೇಷನ್ ಕಮಲ ಮಾಡಿದ್ದು ಯಾಕೆ? ನಮ್ಮ ಶಾಸಕರಿಗೆ ದೊಡ್ಡ ದೊಡ್ಡ ಆಫರ್‌ಗಳನ್ನು ನೀಡಲಾಗುತ್ತಿದೆ, ಅವರ ಮೇಲೆ ಒತ್ತಡ ಹೇರಲಾಗುತ್ತಿದೆ,” ಎಂದು ಗಂಭೀರ ಆರೋಪ ಮಾಡಿದರು.

LPG ಅಭಾವದ ವದಂತಿ: ಸಿಲಿಂಡರ್ ದಾಸ್ತಾನಿನ ಬಗ್ಗೆ ಕೇಂದ್ರ ಸರ್ಕಾರದಿಂದ ಮಹತ್ವದ ಮಾಹಿತಿ

ನಮ್ಮ ಶಾಸಕರಿಗೆ ಜವಾಬ್ದಾರಿಯಿದೆ

ಟ್ರಬಲ್ ಶೂಟರ್ ಕೆಲಸದ ಬಗ್ಗೆ ಪ್ರತಿಕ್ರಿಯಿಸುತ್ತಾ, “ಇಲ್ಲಿ ಮಾಗಡಿ ಬಾಲಕೃಷ್ಣ ಮತ್ತು ಯೋಗೇಶ್ವರ್ ಅವರಂತಹ ಅನುಭವವಿರುವ ನಾಯಕರಿದ್ದಾರೆ. ಅವರ ಕಸ್ಟಡಿಯಲ್ಲೇ ನಾವಿದ್ದೇವೆ. ನಮ್ಮ ಜಿಲ್ಲೆಯ ಶಾಸಕರೆಲ್ಲರಿಗೂ ಬಂದವರನ್ನು ಕಾಪಾಡುವ ಜವಾಬ್ದಾರಿಯಿದೆ. ಯಾರೂ ನಮ್ಮವರನ್ನು ಮುಟ್ಟಲು ಅಥವಾ ಮಾತನಾಡಿಸಲು ಸಾಧ್ಯವಿಲ್ಲ, ಅದಕ್ಕೆ ನಾವು ಅವಕಾಶವನ್ನೂ ನೀಡುವುದಿಲ್ಲ,” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶ್ರಮಕ್ಕೆ ತಕ್ಕ ಫಲ ನಿಶ್ಚಿತ

ಹಿಂದೆ ಗುಜರಾತ್ ಚುನಾವಣೆ ವೇಳೆ ನೆರವಾಗಿದ್ದನ್ನು ಸ್ಮರಿಸಿದಾಗ ಮತ್ತು ಮುಂದಿನ ರಾಜಕೀಯ ಕನಸಿನ ಬಗ್ಗೆ ಕೇಳಿದಾಗ, “ನಾನು ಈಗಲೇ ಯಾವುದರ ಬಗ್ಗೆಯೂ ಮಾತನಾಡುವುದಿಲ್ಲ. ನಾನೇಕೆ ಕನಸು ಕಾಣಲಿ? ಎಲ್ಲಿ ಶ್ರಮವಿರುತ್ತದೆಯೋ ಅಲ್ಲಿ ಖಂಡಿತ ಫಲ ಸಿಗುತ್ತದೆ. ಕಾದು ನೋಡೋಣ,” ಎಂದು ಮಾರ್ಮಿಕವಾಗಿ ಉತ್ತರಿಸಿದರು.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories