ಭಾನುವಾರ, ಏಪ್ರಿಲ್ 27, 2025
Homekarnatakaಆಯುಧ ಪೂಜೆಗೂ ಸರ್ಕಾರದ ನಿರ್ಬಂಧ: ಅರಿಸಿನ ಕುಂಕುಮ ಬಳಕೆಗೆ ನಿಷೇಧ

ಆಯುಧ ಪೂಜೆಗೂ ಸರ್ಕಾರದ ನಿರ್ಬಂಧ: ಅರಿಸಿನ ಕುಂಕುಮ ಬಳಕೆಗೆ ನಿಷೇಧ

- Advertisement -

ಸದಾ ಹಿಂದೂ ಧಾರ್ಮಿಕ ನೀತಿ ಹಾಗೂ ಹಿಂದೂ ಧರ್ಮ ವಿರೋಧಿಯಂತೆ ವರ್ತಿಸುವ ಸಿಎಂ ಸಿದ್ಧರಾಮಯ್ಯನವರು (CM Siddaramaih) ಈ ಭಾರಿ ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ. ಆಯುಧ ಪೂಜೆ (Ayuda Pooja) ವೇಳೆ ಅರಿಸಿನ , ಕುಂಕುಮ, ಹೂವು,  ಹಣ್ಣು ಬಳಕೆಗೆ ನಿಬಂಧನೆಗಳನ್ನು ಹೇರುವ ಮೂಲಕ ಮತ್ತೊಮ್ಮೆ ಆಸ್ತಿಕರು ಹಾಗೂ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ನವರಾತ್ರಿ ಹಾಗೂ ದೀಪಾವಳಿ ಸಂದರ್ಭದಲ್ಲಿ ಕಚೇರಿ, ಕಟ್ಟಡಗಳು, ವಾಹನಗಳು ಹಾಗೂ ಪಿಠೋಪಕರಣಗಳಿಗೆ ಆಯುಧ ಪೂಜೆಯ ನೆಪದಲ್ಲಿ ಪೂಜಿಸುವುದು ಸಂಪ್ರದಾಯ. ಆದರೆ ಈಗ ಪೂಜೆಯ ಮೇಲೂ ಸಿದ್ಧು ಸರ್ಕಾರ ತನ್ನ ಅಧಿಕಾರ ಬಳಸಿ ನಿರ್ಬಂಧ ಹೇರಲು ಮುಂದಾಗಿದೆ. ವಿಧಾನಸೌಧದಲ್ಲಿ ಆಯುಧ ಪೂಜೆಯ ಸಂದರ್ಭದಲ್ಲಿ ಅರಿಸಿನ, ಕುಂಕುಮ, ಕುಂಬಳಕಾಯಿ ಮತ್ತು ರಂಗೋಲಿಯನ್ನು ಬಳಸಬಾರದು ಎಂದು ಆಡಳಿತ ಮತ್ತು ಸುಧಾರಣೆ ಇಲಾಖೆ ಸುತ್ತೋಲೆ ಹೊರಡಿಸಿದೆ.

Karnataka Govt Ban on Ayudha Puja, Ban on Use of Turmeric and Kumkum
Image Credit to Original Source

ಈ ಆದೇಶ ಈಗ ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ತಲೆತಲಾಂತರದಿಂದ ನಡೆದುಕೊಂಡು ಬಂದ ಸಂಪ್ರದಾಯಗಳ ಮೇಲೆ ಸರ್ಕಾರ ನಿರ್ಬಂಧ ಹೇರೋದು ಎಷ್ಟು ಸರಿ?! ಯಾವಾಗಲೂ ಸಿಎಂ ಸಿದ್ಧರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರಕ್ಕೆ ಹಿಂದೂ ಆಚರಣೆ,ಹಬ್ಬ ಹರಿದಿನಗಳೇ ಯಾಕೆ ಟಾರ್ಗೆಟ್ ಆಗುತ್ತೆ? ಎಂದು ಜನರು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡ್ತಿದ್ದಾರೆ .

ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆಯಡಿ ಸಿಗಲಿದೆ 4000 ರೂ.: ಗೃಹಿಣಿಯರಿಗೆ ದಸರಾ ಕೊಡುಗೆ ಘೋಷಿಸಿದ ರಾಜ್ಯ ಸರಕಾರ

ಗಣೇಶ್ ಹಬ್ಬದ ವೇಳೆಯಲ್ಲೂ ಸರ್ಕಾರ ಅನುಮತಿ ಸೇರಿದಂತೆ ಗಣೇಶನನ್ನು ಕೂರಿಸಲು ನೊರೆಂಟು ನಿಯಮ ವಿಧಿಸಿತ್ತು. ಈಗ ಮತ್ತೊಮ್ಮೆ ಆಯುಧ ಪೂಜೆಗೆ ಅರಿಸಿನ ಕುಂಕುಮ ಕುಂಬಳಕಾಯಿ ಬಳಸಲು ನಿಯಮ ಹೇರಿದೆ. ಇದು ಸರ್ಕಾರದ ಹಿಂದೂ ವಿರೋಧಿ ನೀತಿ ಎಂದು ಹಲವರು ಕಿಡಿಕಾರಿದ್ದಾರೆ. ಇನ್ನು ಈ ಆದೇಶವನ್ನು ಅಧೀನ ಕಾರ್ಯದರ್ಶಿ ಸಚಿವರ ಗಮನಕ್ಕೆ ತಾರದೇ ಹೊರಡಿಸಿದ್ದಾರೆ ಎನ್ನಲಾಗ್ತಿದೆ.

ಈ ಬಗ್ಗೆ ಸಚಿವರಿಗೆ ಹಾಗೂ ಸಿಎಂಗೆ ಖುದ್ದು ಮಾಹಿತಿ ಇಲ್ಲ ಎಂಬ ಮಾತು ಕೇಳಿಬಂದಿದೆ . ಇನ್ನೊಂದೆಡೆ ವಿಧಾನಸೌಧ ಪಾರಂಪರಿಕ ಕಟ್ಟಡವಾಗಿದ್ದು ಕೃತಕ ಬಣ್ಣವನ್ನು ಬಳಸಿದ ಕುಂಕುಮ ಹಾಗೂ ಅರಿಸಿನ ಬಳಕೆಯಿಂದ ಕಟ್ಟಡಕ್ಕೆ ಹಾನಿಯಾಗಲಿದೆ ಎಂಬ ಕಾರಣಕ್ಕೆ ಈ ಆದೇಶ ಹೊರಬಿದ್ದಿದೆ ಎಂಬ ಸಮಜಾಯಶಿ ಕೂಡ ನೀಡಲಾಗುತ್ತಿದೆ.Karnataka Govt Ban on Ayudha Puja, Ban on Use of Turmeric and Kumkum

ಆದರೆ ಈ ವಾದಕ್ಕೇ ಸಾರ್ವಜನಿಕರಿಂದ ವಿರೋಧ ಹಾಗೂ ಟೀಕೆ ವ್ಯಕ್ತವಾಗುತ್ತಿದೆ. ವಿಧಾನಸೌಧ ಶಕ್ತಿ ಕೇಂದ್ರ. ಸರ್ಕಾರದ ಆಡಳಿತ ನಡೆಯುವ ಈ ಜಾಗದಲ್ಲಿ ಪೂಜೆ ಪುನಸ್ಕಾರ ನಡೆಯಬೇಕು. ಪೂಜೆ ವಿಚಾರ ಬಂದಾಗ ಪಾರಂಪರಿಕ ಕಟ್ಟಡ ಎನ್ನುವ ಆಡಳಿತ ಇಲಾಖೆ ಅಧಿಕಾರಕ್ಕೆ ಬರೋ ಪ್ರತಿಯೊಬ್ಬ ಸಚಿವರು ತಮಗೆ ಬೇಕಾದಂತೆ ಕೊಠಡಿಯನ್ನು ಮಾರ್ಪಡಿಸಿಕೊಳ್ಳುವಾಗ ಸುಮ್ಮನಿರೋದ್ಯಾಕೆ ಎಂದು ಪ್ರಶ್ನಿಸಿದೆ.

ಇದನ್ನೂ ಓದಿ : ಶೋಭಾ ಕರಂದ್ಲಾಜೆ ಬಿಜೆಪಿ ರಾಜ್ಯಾಧ್ಯಕ್ಷೆ, ಯತ್ನಾಳ್‌ ಪ್ರತಿಪಕ್ಷ ನಾಯಕ : ಲಿಂಗಾಯಿತರ ಮುನಿಸು, ಇಬ್ಬಾಗವಾಗುತ್ತಾ ಬಿಜೆಪಿ

ಸರ್ಕಾರ ಹೊರಡಿಸಿದ ಆದೇಶದಲ್ಲಿ ಕೇವಲ ಅರಿಸಿನ ಕುಂಕುಮ ಮಾತ್ರವಲ್ಲದೇ ದೀಪಾಲಂಕಾರ,ದೀಪಗಳ ಬಳಕೆ ಬಗ್ಗೆಯೂ ಕಾಳಜಿ ವಹಿಸುವಂತೆ ಸೂಚಿಸಲಾಗಿದೆ. ಹೀಗಾಗಿ ಸರ್ಕಾರದ ಆದೇಶ ಪ್ರತಿ ಸಾಕಷ್ಟು ಟೀಕೆಗೆ ಗುರಿಯಾಗಿದೆ. ಇನ್ನೂ ಈ ಬಗ್ಗೆ ಸಿಎಂ ಸಿದ್ಧರಾಮಯ್ಯನವರು ಪತ್ರಿಕಾ ಪ್ರಕಟನೆ ಹೊರಡಿಸಿ ಸ್ಪಷ್ಟನೆ ನೀಡಿದ್ದು ಅನಗತ್ಯ ವಿವಾದ ಸೃಷ್ಟಿಸುವ ಅಗತ್ಯವಿಲ್ಲ ಎಂದು ಎಚ್ಚರಿಸಿದ್ದಾರೆ.

ಆಯುಧಪೂಜೆ ಸಂದರ್ಭದಲ್ಲಿ ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡಗಳಲ್ಲಿ ಅರಿಶಿನ-ಕುಂಕುಮ ಸೇರಿದಂತೆ ಯಾವುದೇ ರಾಸಾಯನಿಕಯುಕ್ತ ಬಣ್ಣಗಳನ್ನು ಕಚೇರಿಗಳ ಒಳಗೆ ಅಥವಾ ಕಾರಿಡಾರ್‌ಗಳಲ್ಲಿ ಬಳಸಬಾರದು ಎಂದು ಹೊರಡಿಸಿರುವ ಆದೇಶ ಇದು ಹೊಸತೇನಲ್ಲ.

ಇದನ್ನೂ ಓದಿ : ಬ್ಯಾಗಿನಲ್ಲಿ ಕೋಳಿ ಮಾಂಸ ಕೊಂಡೊಯ್ದ ಪ್ರಯಾಣಿಕ: ಕೆಎಸ್‌ಆರ್‌ಟಿಸಿ ಬಸ್ಸನ್ನೇ ಪೊಲೀಸ್‌ ಠಾಣೆಗೆ ಕೊಂಡೊಯ್ಯ ಬಸ್‌ ಚಾಲಕ !

ಇವುಗಳು ಪಾರಂಪರಿಕ ಕಟ್ಟಡಗಳಾಗಿರುವುದರಿಂದ ರಾಸಾಯನಿಕಯುಕ್ತ ಬಣ್ಣಗಳು ನೆಲಹಾಸಿನ ಮೇಲೆ ಬಿದ್ದು, ಅವುಗಳ ಕಲೆ ಶಾಶ್ವತವಾಗಿ ಅಥವಾ ಬಹುಕಾಲ ಉಳಿಯುವುದರಿಂದ ಇದರಿಂದಾಗುವ ಹಾನಿ ತಪ್ಪಿಸಲು ಹಿಂದಿನ ಸರ್ಕಾರಗಳು ಪಾಲಿಸಿಕೊಂಡು ಬಂದಿದ್ದ ಸಂಪ್ರದಾಯವನ್ನೇ ನಾವು ಪಾಲಿಸಿದ್ದೇವೆ.

ಈ ಬಗ್ಗೆ ಸರ್ಕಾರದ ವಿರುದ್ಧ ನಡೆಸಲಾಗುತ್ತಿರುವ ಅಪಪ್ರಚಾರಕ್ಕೆ ಕಿವಿಗೊಡಬಾರದು ಎಂದು ಮನವಿ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ಸರಕಾರ ಸದ್ಯಕ್ಕೊಂದು ಆದೇಶವಿಟ್ಟುಕೊಂಡು ಬಿಜೆಪಿ ವಿರುದ್ದ ಮುಗಿಬಿದ್ದಿದ್ದಾರೆ.

Karnataka Govt Ban on Ayudha Puja, Ban on Use of Turmeric and Kumkum

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular