Karnataka Weather Report : ನ.2 ರಿಂದ ಮತ್ತೆ ವರುಣಾರ್ಭಟ :ಕರ್ನಾಟಕದಲ್ಲಿ Yellow Alert ಘೋಷಣೆ

ಬೆಂಗಳೂರು : (Karnataka Weather Report)ಸಾಮಾನ್ಯವಾಗಿ ದೀಪಾವಳಿ ಕಳೆದ ನಂತರ ಮಳೆ ಕಡಿಮೆಯಾಗಿ ಚಳಿ ಹೆಚ್ಚಾಗುತ್ತದೆ. ಆದರೆ ಈ ವರ್ಷ ತಾಪಮಾನ ಕುಸಿದು ಚಳಿ ಹೆಚ್ಚಾದರೂ ಮಳೆ ಇನ್ನೂ ಕಡಿಮೆಯಾಗಿಲ್ಲ. ಪ್ರತಿ ವರ್ಷ ಜೂನ್ ತಿಂಗಳಲ್ಲಿ ಮುಂಗಾರು ಮಳೆ ಆರಂಭವಾಗಿ, ಅಕ್ಟೋಬರ್​ ತಿಂಗಳಿನಲ್ಲಿ ಹಿಂಗಾರು ಮಳೆ ಆರಂಭವಾಗುವುದು ಸಾಮಾನ್ಯವಾಗಿರುತ್ತದೆ. ಆದ್ರೆ ಇದೀಗ ಅಕ್ಟೋಬರ್ ಅಂತ್ಯದ ವೇಳೆಯಲ್ಲಿಯೂ ಮಲೆ ಸುರಿಯುತ್ತಿದೆ. ಅದ್ರಲ್ಲೂ ನವೆಂಬರ್ 2ರಿಂದ ಕರ್ನಾಟಕದಲ್ಲಿ ಮತ್ತೆ ಮಳೆ ಆರ್ಭಟಿಸಲಿದೆ. ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದ್ದು, ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆಯಿಂದ (ಅ 29) ಮಳೆ ಸುರಿದಿದೆ.(Karnataka Weather Report) ಮಂಗಳೂರಿನಲ್ಲಿ ಇಂದು ಬೆಳಗ್ಗೆ ಮಳೆಯಾಗಿದ್ದು, ನವೆಂಬರ್‌ 2ರಿಂದ ಐದು ದಿನಗಳ ಕಾಲ ಮಳೆ ವ್ಯಾಪಕ ಮಳೆ ಸುರಿಯಲಿದೆ. ಪ್ರಮುಖವಾಗಿ ರಾಜ್ಯದ ತುಮಕೂರು, ರಾಮನಗರ, ಬೆಂಗಳೂರು ನಗರ ಮತ್ತು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಕೋಲಾರ, ಕೊಡಗು ಹಾಗೂ ಚಿಕ್ಕಮಗಳೂರು ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಈ ಜಿಲ್ಲೆಗಳಿಗೆ ಹವಾಮಾನ ಇಲಾಖೆಯು ಯೆಲ್ಲೋ ಅಲರ್ಟ್‌ನ್ನು ಘೋಷಿಸಿದ್ದಾರೆ. ರಾಜ್ಯದ ಹಲವೆಡೆ ಮೋಡ ಕವಿದ ವಾತಾವಣವಿದ್ದು, ಅಲ್ಲಲ್ಲಿ ಚದುರಿದಂತೆ ಮಳೆಯಾಗಿದೆ.

ಇದನ್ನೂ ಓದಿ : Parking Policy: ಬೆಂಗಳೂರಿಗರೇ ಗಮನಿಸಿ; ಇನ್ಮುಂದೆ ಬೇಕಾಬಿಟ್ಟಿ ಗಾಡಿ ಪಾರ್ಕ್ ಮಾಡಿದ್ರೆ ಬೀಳುತ್ತೆ ಫೈನ್

ಇದನ್ನೂ ಓದಿ : Bangalore Heavy Rain: ರಾತ್ರಿಯಿಡಿ ರಣಭೀಕರ ಮಳೆ.. ಮುಳುಗಿದ ಬೆಂಗಳೂರು.. ಇನ್ನೂ ಇದೇ ಮಳೆ ಅನಾಹುತ

ಇದನ್ನೂ ಓದಿ : Namma Metro 12 years : 5 ರಿಂದ 8 ಲಕ್ಷಕ್ಕೆ ಪ್ರಯಾಣಿಕರ ಸಂಖ್ಯೆ ಏರಿಕೆ: 12 ವರ್ಷಕ್ಕೆ ನಮ್ಮ ಮೆಟ್ರೋ ಗುರಿ

ಹಿಂಗಾರು ಮಾರುತಗಳ ಪ್ರಭಾವದಿಂದ ಪಶ್ಚಿಮ ಕೇಂದ್ರ ಮತ್ತು ಪಕ್ಕದ ನೈಋತ್ಯ ಬಂಗಾಳ ಕೊಲ್ಲಿಯ ಮೇಲ್ಮೈ ಉಷ್ಣಾಂಶ ಕಡಿಮೆಯಾಗಿದೆ. ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌ನಲ್ಲಿ ವಿಭಾಗಗಳಲ್ಲಿ ಗುಡುಗು, ಮಿಂಚು ಸಹಿತ ಮಳೆ ಆರಂಭವಾಗಿದೆ. ಆಂಧ್ರ ಪ್ರದೇಶ, ತಮಿಳುನಾಡು ಮತ್ತು ತೆಲಂಗಾಣ ರಾಜ್ಯಗಳಲ್ಲಿಯೂ ಈ ವರ್ಷ ಹಿಂಗಾರು ಮಳೆ ಚುರುಕಾಗಿ ಇರಬಹುದು ಎಂದು ನಿರೀಕ್ಷಿಸಲಾಗಿದೆ.

Karnataka Weather Report Yellow Alert announced in Karnataka

Comments are closed.