ಬಯೋಮೆಟ್ರಿಕ್​ ಹಾಜರಾತಿ ಪದ್ಧತಿಗೆ ಕೊನೆಗೂ ಬ್ರೇಕ್​ : ಕರ್ತವ್ಯ ಆ್ಯಪ್​ ಬಳಕೆ ಇನ್ಮುಂದೆ ಕಡ್ಡಾಯ

ರಾಜ್ಯ ಸರ್ಕಾರವು ಸರ್ಕಾರಿ ನೌಕರರ ಹಾಜರಾತಿ ಪ್ರಕ್ರಿಯೆಯಲ್ಲಿ ಮತ್ತೊಂದು ಮಹತ್ವದ ಬದಲಾವಣೆ ತಂದಿದೆ. ಕಾಗದ ಪತ್ರಗಳಲ್ಲಿ ನಡಯುತ್ತಿದೆ ಹಾಜರಾತಿ ವ್ಯವಸ್ಥೆಗೆ ಬ್ರೇಕ್​ ಹಾಕಿ, ಸರ್ಕಾರಿ ಕಚೇರಿಯಲ್ಲಿ ಬಯೋಮೆಟ್ರಿಕ್​ ವ್ಯವಸ್ಥೆ ಜಾರಿಗೆ ತರಲಾಗಿತ್ತು, ಇದೀಗ ಬಯೋಮೆಟ್ರಿಕ್​ ಹಾಜರಾತಿ ವ್ಯವಸ್ಥೆಗೂ ಕೊಕ್​ ನೀಡಲು ರಾಜ್ಯ ಸರ್ಕಾರ ಸಜ್ಜಾಗಿದ್ದು, ಮೊಬೈಲ್​ನಲ್ಲೇ ಅಟೆಂಡೆನ್ಸ್​ (Kartavya App) ಹಾಕುವ ಪದ್ಧತಿ ಜಾರಿಗೆ ಬರಲಿದೆ.

ಮೇ 1ರಿಂದ ಈ ನೂತನ ಹಾಜರಾತಿ ಪ್ರಕ್ರಿಯೆ ರಾಜ್ಯಾದ್ಯಂತ ಜಾರಿಗೆ ಬರಲಿದೆ. ಇದಕ್ಕಾಗಿ ರಾಜ್ಯ ಸರ್ಕಾರಿ ನೌಕರರು ಕರ್ತವ್ಯ ಎಂಬ ಹೆಸರಿನಲ್ಲಿ ಅಪ್ಲಿಕೇಶನ್​ನನ್ನು ಮೊಬೈಲ್​ನಲ್ಲಿ ಹೊಂದಿರುವುದು ಕಡ್ಡಾಯವಾಗಿದೆ. ಕೃತಕ ಬುದ್ಧಿಮತ್ತೆ ಹಾಗೂ ಜಿಯೋ ಫೆನ್ಸಿಂಗ್​ ತಂತ್ರಜ್ಞಾನವನ್ನು ಬಳಸಿ ಸಿದ್ಧಪಡಿಸಿರುವ ರಾಜ್ಯದ ಆಧುನಿಕ ಹಾಜರಾತಿ ನಿರ್ವಹಣಾ ವ್ಯವಸ್ಥೆಯಾಗಿದ್ದು, ಸರ್ಕಾರಿ ನೌಕರರು ತಮ್ಮ ಕಚೇರಿ ಆವರಣದಲ್ಲಿ ನಿಂತು ಮಾತ್ರವೇ ಹಾಜರಾತಿ ಹಾಕಲು ಸಾಧ್ಯವಿದೆ.

ಇದನ್ನೂ ಓದಿ: ಇಂದು ರಾಜ್ಯಾದ್ಯಂತ ದ್ವಿತೀಯ ಪಿಯುಸಿ ಫಲಿತಾಂಶ – ಮಧ್ಯಾಹ್ನ 3 ಗಂಟೆಗೆ ರಿಸಲ್ಟ್​​ ಪ್ರಕಟ

ಸ್ಮಾರ್ಟ್​ಫೋನ್​ಗಳನ್ನು ಹೊಂದಿರದ ಸರ್ಕಾರಿ ನೌಕರರಿಗೆ ಕಚೇರಿಗಳಲ್ಲಿ ಬೇರೆ ಸಾಧನವನ್ನು ಅಳವಡಿಸಲಾಗುತ್ತದೆ. ಇದನ್ನು ಕರ್ತವ್ಯ ಡಿವೈಸ್​ ಎಂದು ಕರೆಯಲಾಗುತ್ತದೆ. ಬಯೋಮೆಟ್ರಿಕ್​ ವ್ಯವಸ್ಥೆಯನ್ನು ಸರ್ಕಾರ ಹಿಂಪಡೆದಿದ್ದು, ಇನ್ಮುಂದೆ ಈ ಆ್ಯಪ್​ ಮೂಲಕವೇ ಸರ್ಕಾರಿ ನೌಕರರ ಹಾಜರಾತಿ ನಮೂದಾಗಲಿದೆ. ಮೊಬೈಲ್​ನಲ್ಲಿ ಹಾಜರಾತಿ ದಾಖಲೆ ಎಂದು ಎಲ್ಲೆಲ್ಲೋ ನಿಂತು ಅಟೆಂಡೆನ್ಸ್​ ನಮೂದಿಸಲು ಸಾಧ್ಯವಾಗುವುದಿಲ್ಲ. ಸರ್ಕಾರಿ ನೌಕರನು ತನ್ನ ಕಚೇರಿಗೆ ಆಗಮಿಸಿದ ಬಳಿಕವೇ ಹಾಜರಾತಿ ದಾಖಲಿಸಬಹುದಾಗಿದೆ.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories