ಭಾನುವಾರ, ಏಪ್ರಿಲ್ 27, 2025
HomeCoastal Newsಯಕ್ಷಗಾನ ಲೋಕಕ್ಕೆ ಮಕ್ಕೆಕಟ್ಟು ಮೇಳ ಎಂಟ್ರಿ : ಮೆಕ್ಕೆಕಟ್ಟು ಕ್ಷೇತ್ರ ಮಹಾತ್ಮೆ ಪ್ರಸಂಗ ರಚನೆಗೆ ಆರೂಢ...

ಯಕ್ಷಗಾನ ಲೋಕಕ್ಕೆ ಮಕ್ಕೆಕಟ್ಟು ಮೇಳ ಎಂಟ್ರಿ : ಮೆಕ್ಕೆಕಟ್ಟು ಕ್ಷೇತ್ರ ಮಹಾತ್ಮೆ ಪ್ರಸಂಗ ರಚನೆಗೆ ಆರೂಢ ಪ್ರಶ್ನೆ !

- Advertisement -

ಉಡುಪಿ : ಕರಾವಳಿಯ ಗಂಡು ಕಲೆ ಎನಿಸಿಕೊಂಡಿರುವ ಯಕ್ಷಗಾನ ಲೋಕಕ್ಕೆ ಇದೀಗ ಮತ್ತೊಂದು ಹೊಸ ಮೇಳ ಸೇರ್ಪಡೆಯಾಗಲಿದೆ. ಪುರಾಣ ಪ್ರಸಿದ್ದ ಮೆಕ್ಕೆಕಟ್ಟು ಶ್ರೀ ನಂದಿಕೇಶ್ವರ ದೇವಸ್ಥಾನದಲ್ಲಿ(Mekkekattu Sri Nandikeshwara  Temple) ಶ್ರೀನಂದಿಕೇಶ್ವರ  ಪ್ರಸಾದಿತ ಯಕ್ಷಗಾನ ಮಂಡಳಿ ಮೆಕ್ಕೆಕಟ್ಟು (Sri Nandikeshwara Prasadita Yakshagana Mandali Mekkekattu) ನವೆಂಬರ್‌ 21 ರಂದು ಲೋಕಾರ್ಪಣೆ ಆಗಲಿದೆ. ಅದ್ರಲ್ಲೂ ಮೆಕ್ಕೆಕಟ್ಟು ಕ್ಷೇತ್ರ ಮಹಾತ್ಮೆ ಹಲವು ವಿಷಯಗಳಿಗಾಗಿ ಕುತೂಹಲ ಮೂಡಿಸಿದೆ.

ಇಂದಿನ ಆಧುನಿಕ ಯುಗದಲ್ಲೂ ಯಕ್ಷಗಾನ ತನ್ನ ಗತ್ತು, ಸೆಳೆತವನ್ನು ಉಳಿಸಿಕೊಂಡಿದೆ. ತೆಂಕತಿಟ್ಟು, ಬಡಗುತಿಟ್ಟಿನಲ್ಲಿ ಸಾಕಷ್ಟು ಮೇಳಗಳು ತಿರುಗಾಟ ವನ್ನು ನಡೆಸುತ್ತಿವೆ. ಇದೀಗ ಬಡಗುತಿಟ್ಟಿನ ಯಕ್ಷಗಾನ ಲೋಕಕ್ಕೆ ಮೆಕ್ಕೆಕಟ್ಟು ಮೇಳ ಸೇರ್ಪಡೆಯಾಗಲಿದೆ. ಡೇರೆ ಮೇಳಗಳ ಪ್ರಸಿದ್ದ ಕಲಾವಿದರನ್ನು ಸೇರಿಸಿಕೊಂಡು ಮೇಳವನ್ನು ಆರಂಭಿಸಲಾಗುತ್ತಿದೆ.

Makkekattu Mela entry for Yakshagana Arooda Prashne for Creation of Mekkekattu Kshetra Mahatme Prasanga
Image Credit to Original Source

ಮೆಕ್ಕೆಕಟ್ಟು ಶ್ರೀ ನಂದಿಕೇಶ್ವರ ದೇವಸ್ಥಾನ ಕರಾವಳಿ ಮಾತ್ರವಲ್ಲ ಕರ್ನಾಟಕದ ಪ್ರಮುಖ ಪುಣ್ಯಕ್ಷೇತ್ರ. ಕಾರಣೀಕವಾಗಿಯೂ ಪ್ರಖ್ಯಾತಿಯನ್ನು ಪಡೆದುಕೊಂಡಿದೆ. ನಂಬಿ ಬಂದ ಭಕ್ತರನ್ನು ಐದು ಮುಖದ ನಂದಿಕೇಶ್ವರ ಕೈ ಬಿಡುವುದಿಲ್ಲ ಎಂಬ ನಂಬಿಕೆ ಭಕ್ತರಲ್ಲಿದೆ.

ಅನಾದಿ ಕಾಲದಿಂದಲೂ ಮೆಕ್ಕೆಕಟ್ಟು ದೇವಸ್ಥಾನದ ಆವರಣದಲ್ಲಿ ವರ್ಷಂಪ್ರತಿ ಮಂದಾರ್ತಿ ಸೇರಿದಂತೆ ವಿವಿಧ ಮೇಳಗಳು ಯಕ್ಷಗಾನ ಸೇವೆಯನ್ನು ನೀಡುತ್ತಿವೆ. ಆದರೆ ಮೆಕ್ಕೆಕಟ್ಟು ಕ್ಷೇತ್ರದ ವತಿಯಿಂದಲೇ ಮೇಳವನ್ನು ಆರಂಭಿಸುವುದಾಗಿ ಮೇಳದ ಯಜಮಾನರಾದ ವಕ್ವಾಡಿ ರಂಜಿತ್‌ ಕುಮಾರ್‌ ಶೆಟ್ಟಿ ಕೇಳಿಕೊಂಡಿದ್ದರು.

ಇದನ್ನೂ ಓದಿ : ಸುಕನ್ಯಾ ಸಮೃದ್ಧಿ ಯೋಜನೆ : 12000 ರೂ. ಹೂಡಿಕೆ ಮಾಡಿ ರೂ 70 ಲಕ್ಷ ಪಡೆಯಿರಿ

ಮೆಕ್ಕೆಕಟ್ಟು ದೇವಸ್ಥಾನದಲ್ಲಿ ಯಾವುದೇ ಕಾರ್ಯಗಳನ್ನು ಮಾಡುವುದಾದ್ರೂ ಕೂಡ ದೇವರಲ್ಲಿ ಅಪ್ಪಣೆ ಪಡೆಯುವುದು ಸಂಪ್ರದಾಯ, ಅಂತೆಯೇ ದೇವರಲ್ಲಿ ಯಕ್ಷಗಾನ ಮೇಳ ಆರಂಭದ ಕುರಿತು ಅಪ್ಪಣೆಯನ್ನು ಕೇಳಿದಾಗ ದೇವರು ಸಂತೋಷಗೊಂಡಿತ್ತು. ಎಂದೋ ಆಗಬೇಕಾದ ಕಾರ್ಯ ತಡವಾಗಿ ಆಗುತ್ತಿದೆ ಎಂದು ತಿಳಿಸಿದೆ. ಆ ಹಿನ್ನೆಲೆಯಲ್ಲಿ ಸಂತೋಷದಿಂದಲೇ ಮೇಳವನ್ನು ಆರಂಭಿಸಲಾಗುತ್ತಿದ.

ಈಗಾಗಲೇ ನೂರಕ್ಕೂ ಅಧಿಕ ಆಟಗಳು ಬುಕ್‌ ಆಗಿದೆ. ಇದೇ ನವೆಂಬರ್‌ 21 ರಂದು ಕ್ಷೇತ್ರದ ವತಿಯಿಂದ ತಿರುಗಾಟವನ್ನು ಆರಂಭಿಸಲಾಗುತ್ತಿದೆ. ಮೆಕ್ಕೆಕಟ್ಟು ಮೇಳವನ್ನು ಎಲ್ಲರೂ ಪ್ರೋತ್ಸಾಹಿಸಬೇಕು ಎಂದು ಮೆಕ್ಕೆಕಟ್ಟು ಶ್ರೀ ನಂದಿಕೇಶ್ವರ ದೇವಸ್ಥಾನದ ಅನುವಂಶಿಕ ಮೊಕ್ತೇಸರರಾದ ಕಿಶನ್‌ ಹೆಗ್ಡೆ ಕೊಳ್ಕೆಬೈಲು ಅವರು ಮನವಿ ಮಾಡಿಕೊಂಡಿದ್ದಾರೆ.

ಮೆಕ್ಕೆಕಟ್ಟು ಮೇಳದಲ್ಲಿ ಪ್ರಬುದ್ದ ಕಲಾವಿದರಿದ್ದಾರೆ. ಖ್ಯಾತ ಭಾಗವತ ಶಂಕರ ಭಟ್‌ ಬ್ರಹ್ಮೂರು, ಸಂತೋಷ್‌ ಕುಮಾರ್‌ ಆರ್ಡಿ ಭಾಗವತರಾಗಿದ್ದು, ಮದ್ದಲೆಯಲ್ಲಿ ಶಶಾಂಕ್‌ ಆಚಾರ್ಯ ಕಿರಿಮಂಜೇಶ್ವರ, ವಿಶ್ವಂಭರ ಅಲ್ಸೆ, ಚಂಡೆಯಲ್ಲಿ ಸುಜನ್‌ ಕುಮಾರ್‌ ಹಾಲಾಡಿ, ಅಜಿತ್‌ ಆಚಾರ್ಯ ಕಾಲ್ತೋಡು ಹಿಮ್ಮೆಳದ ಕಲಾವಿದರಾಗಿದ್ದಾರೆ.

ಇದನ್ನೂ ಓದಿ : ಗೃಹಲಕ್ಷ್ಮೀ ಬೆನ್ನಲ್ಲೇ, ಗೃಹಿಣಿಯರಿಗೆ ಉಚಿತವಾಗಿ ಸಿಗಲಿದೆ 50 ಸಾವಿರ ರೂ.

ಇನ್ನು ಮುಮ್ಮೇಳದಲ್ಲಿ ಹಿರಿಯ ಕಲಾವಿದರಾದ ಜಲವಳ್ಳಿ ವಿದ್ಯಾಧರ ರಾವ್‌, ಚಿಟ್ಟಾಣಿ ಸುಬ್ರಹ್ಮಣ್ಯ ಹೆಗಡೆ, ಆನಂದ ಕೆಕ್ಕಾರು, ನರಸಿಂಹ ಗಾಂವ್ಕರ್‌, ಕಣ್ಣಿಮನೆ ಕಾರ್ತಿಕ್‌ ಭಟ್‌, ಮಾರ್ಷಲ್‌ ಫೆರ್ನಾಂಡೀಸ್‌, ದಿನೇಶ್‌ ಪೂಜಾರಿ ಆವರ್ಸೆ, ಅಜಿತ್‌ ಶೆಟ್ಟಿ ಯರುಕೋಣಿ, ಕೆಜಿ ಕಾರ್ತಿಕ್‌, ಶ್ರೇಯಸ್‌ ದೇವಾಡಿಗ, ಮಾಸ್ಟರ್‌ ರಂಜಿತ್‌ ಪುರುಷ ವೇಷಧಾರಿಗಳಾಗಿದ್ದಾರೆ.

Makkekattu Mela entry for Yakshagana Arooda Prashne for Creation of Mekkekattu Kshetra Mahatme Prasanga
Image Credit to Original Source

ಸ್ತ್ರೀ ವೇಷದಲ್ಲಿ ನೀಲ್ಕೋಡು ಶಂಕರ ಹೆಗಡೆ, ಮಂಜುನಾಥ ಕೆರವಳ್ಳಿ, ರಟ್ಟಾಡಿ ಶ್ರೀಕಾಂತ ಪೂಜಾರಿ, ವಸುಂಧರ ಹಾಗೂ ರಮೇಶ್‌ ಭಂಡಾರಿ ಮೂರೂರು ಹಾಗೂ ಗುಂಡು ಪೂಜಾರಿ ಬಾಣಿಗ ಹಾಸ್ಯ ಕಲಾವಿದರಾಗಿ ಬಣ್ಣ ಹಚ್ಚಲಿದ್ದಾರೆ. ಕಲಾವಿದರಿಂದಾಗಿಯೇ ಮೇಳ ಈ ಬಾರಿ ಪ್ರೇಕ್ಷಕರನ್ನು ತನ್ನತ್ತ ಸೆಳೆಯಲಿದೆ.

ಮೆಕ್ಕೆಕಟ್ಟು ಕ್ಷೇತ್ರ ಮಹಾತ್ಮೆ ಪ್ರಸಂಗ ರಚನೆಗೆ ಆರೂಢ ಪ್ರಶ್ನೆ

ಯಕ್ಷಗಾನದಲ್ಲಿ ಪ್ರಸಂಗ ರಚನೆ ಮಾಡುವುದು ಸುಲಭದ ಮಾತಲ್ಲ. ಸಾಹಿತ್ಯ, ಛಂದಸ್ಸಿನ ಮೇಲೆ ಪ್ರಸಂಗಕರ್ತರಿಗೆ ಆಳವಾದ ಹಿಡಿತ ಇರಬೇಕು. ಯಕ್ಷಗಾನ ದ ಆಳ ಅಗಲ ಚೆನ್ನಾಗಿ ಅರಿತಿರಬೇಕು. ಅದ್ರಲ್ಲೂ ಕ್ಷೇತ್ರ ಮಹಾತ್ಮೆ ಪ್ರಸಂಗ ರಚಿಸುವಾಗ ಮೈತುಂಬಾ ಕಣ್ಣಾಗಿರಬೇಕು. ಆ ವಿಚಾರದಲ್ಲಿ ಪ್ರಸಂಗ ಕವಿ ಬೇಳೂರು ವಿಷ್ಣುಮೂರ್ತಿ ನಾಯಕ್‌ ಅವರು ಉತ್ತಮ ಕಾರ್ಯ ನಿರ್ವಹಿಸಿದ್ದಾರೆ.

ಇದನ್ನೂ ಓದಿ : Ayodhya’s Ram Temple : ಅಯೋಧ್ಯೆ ರಾಮ ಮಂದಿರ 2024 ರ ಜನವರಿಯಲ್ಲಿ ಪ್ರತಿಷ್ಠಾಪನೆ

ಮೆಕ್ಕೆಕಟ್ಟು ಕ್ಷೇತ್ರದಲ್ಲಿನ ಧಾರ್ಮಿಕತೆ, ನಂಬಿಕೆ, ಇತಿಹಾಸ, ಪುರಾಣ, ಆಚಾರ, ಸಂಪ್ರದಾಯ ಹೀಗೆ ಎಲ್ಲಾ ರೀತಿಯಲ್ಲಿಯೂ ಮೆಕ್ಕೆಕಟ್ಟು ಕ್ಷೇತ್ರ ಮಹಾತ್ಮೆ ಯನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಕ್ಷೇತ್ರದ ಪುರಾಣಕ್ಕೆ ಸ್ವಲ್ಪವೂ ಲೋಪವಾಗ ಬಾರದು ಅನ್ನೋ ಕಾರಣಕ್ಕೆ ಕ್ಷೇತ್ರದ ಮೊಕ್ತೇಸರರು, ಅರ್ಚಕರು ಸೇರಿದಂತೆ ಹಲವರಿಂದಲೂ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಅಷ್ಟೇ ಅಲ್ಲಾ ಮೆಕ್ಕೆಕಟ್ಟು ಕ್ಷೇತ್ರ ಮಹಾತ್ಮೆ ಪ್ರಸಂಗದ ಕುರಿತು ನ್ಯೂಸ್‌ ನೆಕ್ಸ್ಟ್‌ ಜೊತೆ ಮನಬಿಚ್ಚಿ ಮಾತನಾಡಿದ್ದಾರೆ.

ನವೆಂಬರ್‌ 21 ರಂದು ಶ್ರೀ ನಂದಿಕೇಶ್ವರ ಪ್ರಸಾದಿತ ಯಕ್ಷಗಾನ ಮಂಡಳಿ ಮೆಕ್ಕೆಕಟ್ಟು ಲೋಕಾರ್ಪಣೆ ಆಗಲಿದೆ. ಅಲ್ಲದೇ ನವೆಂಬರ್‌ 29 ರಂದು ಮೆಕ್ಕೆಕಟ್ಟು ಕ್ಷೇತ್ರ ಮಹಾತ್ಮೆ ಪ್ರಸಂಗ ಬಿಡುಗಡೆ ಗೊಳ್ಳಲಿದೆ. ಒಟ್ಟಿನಲ್ಲಿ ಬಡಗುತಿಟ್ಟಿನ ಯಕ್ಷಗಾನಕ್ಕೆ ಹೊಸ ಮೇಳ ಸೇರ್ಪಡೆ ಆಗುತ್ತಿರುವುದು ಯಕ್ಷಗಾನ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಮೆಕ್ಕೆಕಟ್ಟು ಮೇಳದ ಲೋಕಾಪರ್ಣೆ ಕಾರ್ಯಕ್ರಮ ಹಾಗೂ ಪ್ರಥಮ ದೇವರ ಸೇವೆ News Next Kannada ವಾಹಿನಿಯಲ್ಲಿ ನೇರಪ್ರಸಾರ ಆಗಲಿದೆ. ಕೆಳಗಿನ ಲಿಂಕ್‌ ಬಳಸಿ ಯೂಟ್ಯೂಬ್‌ ಚಾನೆಲ್‌ Subscribe ನೇರ ಪ್ರಸಾರವನ್ನು ವೀಕ್ಷಿಸಬಹುದಾಗಿದೆ.

ಮೆಕ್ಕೆಕಟ್ಟು ಮೇಳದ ಯಕ್ಷಗಾನದ ಪ್ರದರ್ಶನ ಬೇಕಿದ್ದವರು ರಂಜಿತ್‌ ಕುಮಾರ್‌ ಶೆಟ್ಟಿ ವಕ್ವಾಡಿ – 9141930593  ಇವರನ್ನು ಸಂಪರ್ಕಿಸಬಹುದಾಗಿದೆ. 

News Next Kannada Youtube Channel Link :

https://www.youtube.com/@kannadanewsnext

ಮೆಕ್ಕೆಕಟ್ಟು ಮೇಳದ ದೇವರ ಸೇವೆ ನೇರಪ್ರಸಾರವನ್ನು ವೀಕ್ಷಿಸಲು ಈ ಲಿಂಕ್‌ ಕ್ಲಿಕ್‌ ಮಾಡಿ : https://www.youtube.com/watch?v=R3ew0TgqarA

Makkekattu Mela entry for Yakshagana Arooda Prashne for Creation of Mekkekattu Kshetra Mahatme Prasanga

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular