Preveen Nettaru NIA reward : ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ : ಆರೋಪಿಗಳ ಸುಳಿವು ನೀಡಿದ್ರೆ 5 ಲಕ್ಷ ಬಹುಮಾನ

ಮಂಗಳೂರು : Preveen Nettaru NIA reward : ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ತನಿಖೆ ಚುರುಕುಗೊಳಿಸಿದೆ. ನಾಲ್ವರು ಆರೋಪಿಗಳಾದ ಮಹಮ್ಮದ್ ಮುಸ್ತಫಾ, ತುಫೈಲ್, ಉಮ್ಮರ್ ಫಾರೂಕ್, ಅಬೂಬಕರ್ ಸಿದ್ದೀಕ್ ತಲೆ ಮರೆಯಿಸಿಕೊಂಡಿದ್ದು, ಇದೀಗ ಎಲ್ಲಾ ಆರೋಪಿಗಳಿಗೆ ಎನ್ಐಎ ಲುಕ್ ಔಟ್ ನೋಟಿಸ್ ಜಾರಿ ಮಾಡಿದೆ. ಇನ್ನೊಂದೆಡೆಯಲ್ಲಿ ನಾಲ್ವರು ಆರೋಪಿಗಳ ಸುಳಿವು ನೀಡಿದ್ರೆ ತಲಾ ಐದು ಲಕ್ಷ ರೂಪಾಯಿ ಬಹುಮಾನ ಘೋಷಣೆ ಮಾಡಿದೆ.

ದಕ್ಷಿಣ ಕನ್ನಡ ಜಿಲೆಯ ಸುಳ್ಯದ ಬೆಳ್ಳಾರೆಯಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರನ್ನು ದುಷ್ಕರ್ಮಿಗಳು ಭೀಕರವಾಗಿ ಹತ್ಯೆ ಮಾಡಿದ್ದಾರೆ. ಪ್ರಕರಣ ತನಿಖೆಯನ್ನು ನಡೆಸಿದ್ದ ಮಂಗಳೂರು ಪೊಲೀಸರು ಈಗಾಗಲೇ ಸವಣೂರು ನಿವಾಸಿ ಜಾಕೀರ್, ಬೆಳ್ಳಾರೆ ನಿವಾಸಿ ಶಫೀಕ್, ಬೆಳ್ಳಾರೆ ಪಳ್ಳಿಮಜಲು ನಿವಾಸಿ ಸದ್ದಾಂ, ಬೆಳ್ಳಾರೆ ಪಳ್ಳಿಮಜಲು ನಿವಾಸಿ ಹಾರಿಸ್, ಸುಳ್ಯದ ನಾವೂರು ನಿವಾಸಿ ಹಬೀದ್, ಬೆಳ್ಳಾರೆ ಗೌರಿಗದ್ದೆ ನಿವಾಸಿ ನೌಫಲ್, ಸುಳ್ಯ ಜಟ್ಟಿಪಳ್ಳಿ ನಿವಾಸಿ ಅಬ್ದುಲ್ ಕಬೀರ್, ಸುಳ್ಯ ನಿವಾಸಿ ಶಿಹಾಬುದ್ದೀನ್, ಪುತ್ತೂರು ನಿವಾಸಿ ರಿಯಾಜ್, ಸುಳ್ಯದ ಬಶೀರ್ ಸೇರಿದಂತೆ ಒಟ್ಟು ಹತ್ತು ಮಂದಿ ಆರೋಪಿಗಳನ್ನು ಬಂಧಿಸಿದ್ದರು.

ಆದರೆ ನಂತರದಲ್ಲಿ ಪ್ರಕರಣವನ್ನು ಎನ್ಐಎ ತನಿಖೆಗೆ ವಹಿಸುವಂತೆ ಒತ್ತಡ ಕೇಳಿಬಂದ ಹಿನ್ನೆಲೆಯಲ್ಲಿ, ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣವನ್ನು ರಾಜ್ಯ ಸರಕಾರ ಎನ್ಐಎ ತನಿಖೆಗೆ ವಹಿಸಿತ್ತು. ಇದರ ಬೆನ್ನಲ್ಲೇ ಎನ್ಐಎ ಹಲವು ಮಂದಿಯನ್ನು ಬಂಧಿಸಿ ವಿಚಾರಣೆಗೆ ಒಳಪಿಸಿದೆ. ಇದೀಗ ಪ್ರಕರಣದ ಪ್ರಮುಖ ಆರೋಪಿಗಳಾದ ಬೆಳ್ಳಾರೆಯ ನಿವಾಸಿ ಮೂಡುಮನೆ ಮಹಮ್ಮದ್ ಮುಸ್ತಫಾ ಸುಳಿವು ನೀಡಿದ್ರೆ ಐದು ಲಕ್ಷ ರೂಪಾಯಿ, ಮಡಿಕೇರಿ ಗದ್ದಿಗೆ ಮಸೀದಿ ಪಕ್ಕದ ನಿವಾಸಿ ತುಫೈಲ್ ಸುಳಿವು ನೀಡಿದ್ರೆ ಐದು ಲಕ್ಷ, ಸುಳ್ಯದ ಕಲ್ಲಮುಟ್ಟು ನಿವಾಸಿ ಉಮ್ಮರ್ ಫಾರೂಕ್ ಹಾಗೂ ಬೆಳ್ಳಾರೆ ನಿವಾಸಿ ಅಬೂಬಕರ್ ಸಿದ್ದೀಕ್ ಸುಳಿವು ನೀಡಿದವರಿಗೆ ತಲಾ ಎರಡು ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಎನ್ಐಎ ಘೋಷಣೆ ಮಾಡಿದೆ.

ಇದನ್ನೂ ಓದಿ : ಪ್ರಭಾವಿ ಬಿಜೆಪಿ ಶಾಸಕರಿಗೆ ನಗ್ನ ವಿಡಿಯೋ ಕಾಲ್ ಮಾಡಿ ಹನಿಟ್ರ್ಯಾಪ್ ಯತ್ನ : ಪ್ರಕರಣ ದಾಖಲು

ಇದನ್ನೂ ಓದಿ : KSRTC conductor Death:ಬಸ್ಸಿನಲ್ಲೇ ಕೆಎಸ್‌ಆರ್‌ ಟಿಸಿ ಕಂಡಕ್ಟರ್‌ ಹೃದಯಾಘಾತದಿಂದ ಸಾವು

Mangaluru Preveen Nettaru Murder Case NIA Declares reward

Comments are closed.