ಸಚಿವ ಶ್ರೀರಾಮುಲು ಆಪ್ತ ಸಹಾಯಕ ರಾಜು ಅರೆಸ್ಟ್

ಬೆಂಗಳೂರು : ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಅವರ ಆಪ್ತ ಸಹಾಯಕನನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ರಾಜು ಎಂಬಾತನೇ ಇದೀಗ ಬಂಧನಕ್ಕೆ ಒಳಗಾದ ಸಚಿವರಾದ ಶ್ರೀರಾಮುಲು ಅವರ ಆಪ್ತ ಸಹಾಯಕ. ಹವರಿಗೆ ಕೆಲಸ‌ ಕೊಡಿಸುವು ದಾಗಿ ಕೋಟ್ಯಾಂತರ ರೂಪಾಯಿ‌ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ. ರಾಜು ಸಚಿವ ಶ್ರೀರಾಮುಲು ಹಾಗೂ ಬಿ.ವೈ. ವಿಜಯೇಂದ್ರ ಹೆಸರಲ್ಲಿ ವಂಚನೆ ಮಾಡಿದ್ದಾನೆ.

ಈ ಕುರಿತು ಖುದ್ದು ಸಿಎಂ ಪುತ್ರ ಬಿವೈ ವಿಜಯೇಂದ್ರ ಅವರು ಸಿಸಿಬಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಸಿಸಿ ಕ್ಯಾಮರಾ ವಿಡಿಯೋದಲ್ಲಿ ಆರೋಪ ದೃಢಪಟ್ಟಿದೆ. ಇದೀಗ ಸಿಸಿಬಿ ಪೊಲೀಸರು ರಾಜುವನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಕಳೆದ 10 ವರ್ಷಗಳಿಂದಲೂ ರಾಜು ಶ್ರೀರಾಮುಲು ಅವರ ಪಿಎ ಆಗಿ‌‌ ಕೆಲಸ ಮಾಡುತ್ತಿದ್ದಾರೆ. ಬಳ್ಳಾರಿ ಮೂಲದ ರಾಜು ಶ್ರೀರಾಮುಲು ಮಾತ್ರವಲ್ಲದೇ ಜನಾರ್ಧನ ರೆಡ್ಡಿ ಅವರ ಜೊತೆಗೆ ಕೂಡ ಆಪ್ತರಾಗಿ ದ್ದರು ಎನ್ನಲಾಗಿದೆ.

Comments are closed.