Team India Holi celebration: ಟೀಮ್ ಇಂಡಿಯಾ ಆಟಗಾರರು, ರಾಯಲ್ ಚಾಲೆಂಜರ್ಸ್ ವನಿತೆಯರ ಹೋಳಿ ಸಂಭ್ರಮ ನೋಡಿದಿರಾ?

ಅಹ್ಮದಾಬಾದ್: (Team India Holi celebration) ಇಂದು ಬಣ್ಣಗಳ ಹಬ್ಬ ಹೋಳಿ. ಹೋಳಿ ಹಬ್ಬವನ್ನು ಜಗತ್ತಿನಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಅದರಲ್ಲೂ ಭಾರತದ ಮನೆ ಮನೆಗಳಲ್ಲೂ, ಗಲ್ಲಿ ಗಲ್ಲಿಗಳಲ್ಲೂ ಹೋಳಿ ಹಬ್ಬ ಮನೆ ಮಾಡಿದ್ದು, ಯುವಕ-ಯುವತಿಯರು ಪರಸ್ಪರ ಬಣ್ಣಗಳನ್ನು ಎರಚಿ ಸಂಭ್ರಮಿಸುತ್ತಿದ್ದಾರೆ.

ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ (Border-Gavaskar test series) 4ನೇ ಟೆಸ್ಟ್ ಪಂದ್ಯಕ್ಕೆ ಸಜ್ಜಾಗುತ್ತಿರುವ ಟೀಮ್ ಇಂಡಿಯಾ ಆಟಗಾರರು, ಟೀಮ್ ಬಸ್’ನಲ್ಲೇ ಹೋಳಿ ಹಬ್ಬ ಆಚರಿಸಿದ್ದಾರೆ. ಅಹ್ಮದಾಬಾದ್’ನ ಮೊಟೇರಾದಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮಂಗಳವಾರ ಟೀಮ್ ಇಂಡಿಯಾ ಆಟಗಾರರು ಅಭ್ಯಾಸ ನಡೆಸಿದರು. ಅಭ್ಯಾಸದ ನಂತರ ನರೇಂದ್ರ ಮೋದಿ ಕ್ರೀಡಾಂಗಣದ ಪೆವಿಲಿಯನ್’ನಲ್ಲಿ ಟೀಮ್ ಇಂಡಿಯಾ ಆಟಗಾರರು ಪರಸ್ಪರ ಬಣ್ಣ ಎರಚಿ ಹೋಳಿ ಹಬ್ಬ ಆಚರಿಸಿದರು. ರೋಹಿತ್ ಶರ್ಮಾ ಬಳಗದ ಹೋಳಿ ಸಂಭ್ರಮ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದೆ.


ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯ ಅಹ್ಮದಾಬಾದ್’ನ ನರೇಂದ್ರ ಮೋದಿಕ ಕ್ರೀಡಾಂಗಣದಲ್ಲಿ ಗುರುವಾರ (ಮಾರ್ಚ್ 9) ಆರಂಭವಾಗಲಿದೆ. ನಾಗ್ಪುರದಲ್ಲಿ ನಡೆದ ಸರಣಿಯ ಮೊದಲ ಪಂದ್ಯವನ್ನು ಇನ್ನಿಂಗ್ಸ್ ಹಾಗೂ 132 ರನ್’ಗಳಿಂದ ಗೆದ್ದುಕೊಂಡಿದ್ದ ಭಾರತ, ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದ 2ನೇ ಪಂದ್ಯವನ್ನು 6 ವಿಕೆಟ್’ಗಳಿಂದ ಗೆದ್ದು ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿತ್ತು.ಆದರೆ ಇಂದೋರ್’ನ ಹೋಳ್ಕರ್ ಮೈದಾನದಲ್ಲಿ ನಡೆದ 3ನೇ ಟೆಸ್ಟ್ ಪಂದ್ಯದಲ್ಲಿ 9 ವಿಕೆಟ್’ಗಳ ಭರ್ಜರಿ ಗೆಲುವು ದಾಖಲಿಸಿದ್ದ ಆಸ್ಟ್ರೇಲಿಯಾ ತಂಡ ಆತಿಥೇಯ ಭಾರತಕ್ಕೆ ತಿರುಗೇಟು ನೀಡಿತ್ತು. ಸರಣಿಯಲ್ಲಿ ಭಾರತ 2-1ರಲ್ಲಿ ಮುನ್ನಡೆಯಲ್ಲಿದ್ದು, 4ನೇ ಟೆಸ್ಟ್ ಪಂದ್ಯ ತೀವ್ರ ಕುತೂಹಲ ಕೆರಳಿಸಿದೆ. ಐಸಿಸಿ ಟೆಟ್ ಚಾಂಪಿಯನ್’ಷಿಪ್’ನಲ್ಲಿ ಫೈನಲ್ ಪ್ರವೇಶಿಸಬೇಕಾದರೆ ಅಹ್ಮದಾಬಾದ್ ಟೆಸ್ಟ್ ಪಂದ್ಯವನ್ನು ಭಾರತ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಆಸ್ಟ್ರೇಲಿಯಾ ತಂಡ ಈಗಾಗಲೇ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್’ನಲ್ಲಿ ಫೈನಲ್ ತಲುಪಿದೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್’ನ ಫೈನಲ್ ಪಂದ್ಯ ಮುಂದಿನ ಜೂನ್’ನಲ್ಲಿ ಇಂಗ್ಲೆಂಡ್’ನ ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ನಡೆಯಲಿದೆ.

ಇದೇ ವೇಳೆ ಮಹಿಳಾ ಪ್ರೀಮಿಯರ್ ಲೀಗ್ Women’s Premier League – WPL 2023) ಟೂರ್ನಿಯಲ್ಲಿ ಆಡುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವನಿತೆಯರು (Royal Challengers Bangalore Women’s team) ಮುಂಬೈನಲ್ಲಿ ಪರಸ್ಪರ ಬಣ್ಣ ಹಚ್ಚಿ ಹೋಳಿ ಹಬ್ಬ ಆಚರಿಸಿದ್ದಾರೆ.

ಸತತ 2 ಪಂದ್ಯಗಳಲ್ಲಿ ಸೋತಿರುವ ಸ್ಮೃತಿ ಮಂಧನ ನಾಯಕತ್ವದ ರಾಯಲ್ ಚಾಲೆಂಜರ್ಸ್ ತಂಡ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇ ಆಫ್ ಹಂತಕ್ಕೆ ಪ್ರವೇಶ ಪಡೆಯಬೇಕಾದರೆ ಮುಂದಿನ ಆರು ಪಂದ್ಯಗಳಲ್ಲಿ ಕನಿಷ್ಠ 4 ಅಥವಾ 5 ಪಂದ್ಯಗಳನ್ನು ಗೆಲ್ಲಬೇಕಿದೆ. ನಾಳೆ ಬ್ರೆಬೋರ್ನ್ ಕ್ರೀಡಾಂಗಣದಲ್ಲಿ ನಡೆಯಲಿರುವ ತನ್ನ 3ನೇ ಲೀಗ್ ಪಂದ್ಯದಲ್ಲಿ RCB ತಂಡ ಗುಜರಾತ್ ಜೈಂಟ್ಸ್ ತಂಡವನ್ನು ಎದುರಿಸಲಿದೆ. ಗುಜರಾತ್ ಕೂಡ ಆಡಿರುವ 2 ಪಂದ್ಯಗಳನ್ನೂ ಸೋತು ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವ ತಂಡದ ನೇರವಾಗಿ ಫೈನಲ್ ತಲುಪಲಿದ್ರೆ, 2 ಹಾಗೂ 3ನೇ ಸ್ಥಾನ ಪಡೆಯುವ ತಂಡಗಳು ಪ್ಲೇ ಆಫ್’ನ ಎಲಿಮಿನೇಟರ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ 2ನೇ ತಂಡವಾಗಿ ಫೈನಲ್ ತಲುಪಲಿದೆ.

WPL ಟೂರ್ನಿ: RCB ತಂಡದ ಮುಂದಿನ ಪಂದ್ಯಗಳು
ಮಾರ್ಚ್ 8: Vs ಗುಜರಾತ್ ಜೈಂಟ್ಸ್ (ಬ್ರೆಬೋರ್ನ್ ಕ್ರೀಡಾಂಗಣ, ಮುಂಬೈ; 7.30 pm)
ಮಾರ್ಚ್ 10: Vs ಯುಪಿ ವಾರಿಯರ್ಸ್ (ಬ್ರೆಬೋರ್ನ್ ಕ್ರೀಡಾಂಗಣ, ಮುಂಬೈ; 7.30 pm)
ಮಾರ್ಚ್ 13: Vs ಡೆಲ್ಲಿ ಕ್ಯಾಪಿಟಲ್ಸ್ (ಡಿ.ವೈ ಪಾಟೀಲ್ ಕ್ರೀಡಾಂಗಣ, ಮುಂಬೈ; 7.30 pm)
ಮಾರ್ಚ್ 15: Vs ಯುಪಿ ವಾರಿಯರ್ಸ್ (ಡಿ.ವೈ ಪಾಟೀಲ್ ಕ್ರೀಡಾಂಗಣ, ಮುಂಬೈ; 7.30 pm)
ಮಾರ್ಚ್ 18: Vs ಗುಜರಾತ್ ಜೈಂಟ್ಸ್ (ಬ್ರೆಬೋರ್ನ್ ಕ್ರೀಡಾಂಗಣ, ಮುಂಬೈ; 7.30 pm)
ಮಾರ್ಚ್ 21: Vs ಮುಂಬೈ ಇಂಡಿಯನ್ಸ್ (ಡಿ.ವೈ ಪಾಟೀಲ್ ಕ್ರೀಡಾಂಗಣ, ಮುಂಬೈ; 3.30 pm)

ಇದನ್ನೂ ಓದಿ : Women’s Premier League: ಸತತ ಎರಡು ಸೋಲುಗಳ ಎಫೆಕ್ಟ್, ರಾಯಲ್ ಚಾಲೆಂಜರ್ಸ್ ತಂಡದ ಪ್ಲೇ ಆಫ್ ಹಾದಿ ಕಷ್ಟ ಕಷ್ಟ

Team India Holi Celebration: Team India players, Royal Challengers

Comments are closed.