ಭಾನುವಾರ, ಏಪ್ರಿಲ್ 27, 2025
HomekarnatakaMysore Dasara : ನಾಡಹಬ್ಬ ಮೈಸೂರು ದಸರಾ ಚಾಲನೆಗೆ ಕ್ಷಣಗಣನೆ

Mysore Dasara : ನಾಡಹಬ್ಬ ಮೈಸೂರು ದಸರಾ ಚಾಲನೆಗೆ ಕ್ಷಣಗಣನೆ

- Advertisement -

ಮೈಸೂರು : Mysore Dasara ವಿಶ್ವವಿಖ್ಯಾತ ಮೈಸೂರು ದಸರಾಗೆ ಇಂದು ಚಾಲನೆ ಸಿಗಲಿದೆ. ಇದೇ ಮೊದಲ ಬಾರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಚಾಮುಂಡಿಬೆಟ್ಟದಲ್ಲಿ ನಾಡಹಬ್ಬ ಮೈಸೂರು ದಸರಾ ಉದ್ಘಾಟನೆ ಮಾಡಲಿದ್ದಾರೆ.

ಕೊರೊನಾ ಮಹಾಮಾರಿಯಿಂದಾಗಿ ಎರಡು ವರ್ಷಗಳಿಂದ ಕಳೆಗುಂದಿದ್ದ ದಸರಾ ಹಬ್ಬವನ್ನ  ಬಾರಿ ಅದ್ಧೂರಿಯಾಗಿ ಆಚರಿಸಲಾಗ್ತಿದೆ. ಹೀಗಾಗೇ, ಮೈಸೂರು ಮಧುವಣಗಿತ್ತಿಯಂತೆ ಕಂಗೊಳಿಸುತ್ತಿದೆ. ಮೈಸೂರಿಗೆ ಆಗಮಿಸ್ತಿರೋ ರಾಷ್ಟ್ರಪತಿ ದ್ರೌಪದಿ ಮುರ್ಮು ಬೆಳಿಗ್ಗೆ 9 ಗಂಟೆ 45 ನಿಮಿಷದಿಂದ 10 ಗಂಟೆ 5 ನಿಮಿಷದೊಳಗೆ ಸಲ್ಲುವ ವೃಶ್ಚಿಕ ಲಗ್ನದಲ್ಲಿ ದೇವಿಗೆ ಪುಷ್ಪಾರ್ಚನೆ ಮಾಡಲಿದ್ದಾರೆ. ಆ ಮೂಲಕ ಮೈಸೂರು ದಸರಾ 2022ಕ್ಕೆ ಚಾಲನೆ ನೀಡಲಿದ್ದಾರೆ. ಇದಕ್ಕೂ ಮೊದಲು ರಾಷ್ಟ್ರಪತಿಗಳು ಶಕ್ತಿದೇವತೆ ದರ್ಶನ ಪಡೆದು ಸಲ್ಲಿಸುತ್ತಾರೆ. ಅಕ್ಟೋಬರ್ 5 ರಂದು ಜಂಬೂಸವಾರಿ ನಡೆಯಲಿದೆ. ದೇಶದ ರಾಷ್ಟ್ರಪತಿಗಳು ದಸರಾ ಉದ್ಘಾಟನೆಯಲ್ಲಿ ಭಾಗವಹಿಸುತ್ತಿರುವುದು ಇದೇ ಮೊದಲು.

ಏನೆಲ್ಲ ಕಾರ್ಯಕ್ರಮ ಇವೆ: ದಸರಾ ಉದ್ಘಾಟನೆ ಬಳಿಕ ಕೈಗಾರಿಕಾ ವಿಚಾರ ಸಂಕೀರ್ಣ, ಚಲನಚಿತ್ರೋತ್ಸವ, ಫಲಪುಷ್ಪ ಪ್ರದರ್ಶನ, ಆಹಾರ ಮೇಳ, ಸಾಂಪ್ರದಾಯಿಕ ದಸರಾ ಕುಸ್ತಿ ಪಂದ್ಯಾವಳಿ, ವಸ್ತು ಪ್ರದರ್ಶನ ಉದ್ಘಾಟನೆ, ಯೋಗ ದಸರಾ, ಅರಮನೆಯಲ್ಲಿ ಭಾರತದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಫಲಪುಷ್ಪ ಪ್ರದರ್ಶನ, ರಾಜ್ಯಮಟ್ಟದ ಶಿಲ್ಪ ಚಿತ್ರಕಲಾ ಪ್ರದರ್ಶನ ಮೈಸೂರು ನಗರದಲ್ಲಿ 124 ಕಿ.ಮೀ ವ್ಯಾಪ್ತಿಯ ದೀಪಾಲಂಕಾರ ಪ್ರದರ್ಶನ, ಯುವಜನರನ್ನು ಸೆಳೆಯುವ ಯುವ ದಸರಾ, ನಟ ಪುನೀತ್ ಸವಿ ನೆನಪಿಗಾಗಿ ಒಂದು ದಿನದ ಪುನೀತ್ ಚಲನಚಿತ್ರೋತ್ಸವ, ದಸರಾ ವಸ್ತು ಪ್ರದರ್ಶನ, ಕವಿಗೋಷ್ಠಿ, ಮಕ್ಕಳ ದಸರಾ, ಪಾರಂಪರಿಕ ಸೈಕಲ್ ಸವಾರಿ ಹಾಗೂ ಪಾರಂಪರಿಕ ಟಾಂಗಾ ಸವಾರಿ, ರೈತ ದಸರಾ, ಪೊಲೀಸ್ ವಾದ್ಯಗೋಷ್ಠಿ, ಕೃಷಿ ವಸ್ತು ಪ್ರದರ್ಶನ, ರೈತ ದಸರಾ ಮೆರವಣಿಗೆ ಹಾಗೂ ಸಾಕು ಪ್ರಾಣಿಗಳ ಪ್ರದರ್ಶನ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಮೈಸೂರು ನಗರದ ವಿವಿಧ ವೇದಿಕೆಗಳಲ್ಲಿ ನಡೆಯಲಿವೆ. ಇದೇ ರೀತಿ ಅರಮನೆಯ ವೇದಿಕೆಯಲ್ಲಿ 7 ದಿನಗಳ ಕಾಲ ಸುಗಮ ಸಂಗೀತ, ನಾದಸ್ವರ, ಭಕ್ತಿಗೀತೆ, ಕಂಸಾಳೆ, ಕೂಚಿಪುಡಿ, ಜಾನಪದ ಗಾಯನ, ಜನಪದ ಗೀತೆ, ಭರತನಾಟ್ಯ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳು ಅರಮನೆ ಮುಂಭಾಗದಲ್ಲಿ ಪ್ರತಿದಿನ ಸಂಜೆ 4 ಗಂಟೆಗಳ ಕಾಲ ನಡೆಯಲಿವೆ.ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಆಗಮಿಸಿರುವ ಅಭಿಮನ್ಯು ನೇತೃತ್ವದ 14 ಗಜಪಡೆ ಈಗಾಗಲೇ ಕಳೆದ 2 ತಿಂಗಳಿನಿಂದ ಅರಮನೆ ಆವರಣದ ಕೊಡಿ ಸೋಮೇಶ್ವರ ದೇವಾಲಯದ ಆವರಣದಲ್ಲಿ ಬೀಡು ಬಿಟ್ಟಿವೆ. ಪ್ರತಿದಿನ ಅರಮನೆಯಿಂದ ಬನ್ನಿ ಮಂಟಪದವರೆಗೆ ಜಂಬೂಸವಾರಿ ಸಾಗುವ ತಾಲೀಮು  ನಡೆಸಲಾಗಿದೆ. ಇದರ ಜೊತೆಗೆ ಮರದ ಅಂಬಾರಿ ತಾಲೀಮು ಸಹಾ ನಡೆದಿದ್ದು, 3 ಬಾರಿ ಕುಶಾಲತೋಪು ತಾಲೀಮನ್ನು ನಡೆಸಲಾಗಿದೆ. ಈ ಬಾರಿ ಜಂಬೂಸವಾರಿಯ ನೇತೃತ್ವವನ್ನು ಅರ್ಜುನ ಆನೆ ಮುನ್ನಡೆಸಲಿದ್ದು, ಅಂಬಾರಿಯನ್ನು ಅಭಿಮನ್ಯು ಆನೆ ಹೊತ್ತು ಸಾಗಲಿದೆ. ಅಕ್ಟೋಬರ್ 5 ರಂದು ಜಂಬೂಸವಾರಿ ಮೆರವಣಿಗೆ ನಡೆಯಲಿದ್ದು, ಜಂಬೂಸವಾರಿಯಲ್ಲಿ 100 ಕ್ಕೂ ಹೆಚ್ಚು ಸ್ತಬ್ಧ ಚಿತ್ರಗಳು ಮತ್ತು ಕಲಾ ತಂಡಗಳು ಭಾಗವಹಿಸಲಿದೆ.

ಇದನ್ನೂ ಓದಿ: Dasara 2022:ಮೈಸೂರು ದಸರಾಕ್ಕೆ ಸಕಲ ಸಿದ್ದತೆ : ಸಂಸದ ಪ್ರತಾಪ್‌ ಸಿಂಹ ಪರಿಶೀಲನೆ

ಇದನ್ನೂ ಓದಿ: Mysore Dasara 2022 : ಮೈಸೂರು ದಸರಾ : ಅರಮನೆ ನಗರಿಯಲ್ಲಿ 124 ಕಿ.ಮೀ ದೀಪಾಲಂಕಾರ

Mysore Dasara President to open a bigger brighter and grander festival

RELATED ARTICLES

Most Popular