ಹೊಸ ವರ್ಷದ ಮೊದಲ ದಿನವೇ ನಶೆಯಲ್ಲಿ ಮಿಂದೆದ್ದ ಸಿಲಿಕಾನ್​ ಸಿಟಿ ಮಂದಿ : ಖಾಕಿ ಸುಸ್ತೋ ಸುಸ್ತು

New Year Celebration: 2025ಕ್ಕೆ ಗುಡ್​ ಬೈ ಹೇಳಿದ ದೇಶದ ಜನತೆ 2026ರನ್ನು (Happy New Year 2026) ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. 21ನೇ ಶತಮಾನದ ಮೊದಲ 25 ವರ್ಷಗಳನ್ನು ಕಳೆದು ಹೊಸ ಅಂಕಕ್ಕೆ ಸಂಪೂರ್ಣ ವಿಶ್ವ ಕಾಲಿಟ್ಟಿದೆ. ಹೊಸ ವರ್ಷದ ಸಂಭ್ರಮವನ್ನು ಸಿಲಿಕಾನ್​ ಸಿಟಿಯ ಬಹುತೇಕ ಯುವ ಸಮೂಹ ನಶೆಯಲ್ಲಿ ತೇಲಾಡುವ ಮೂಲಕ ಸ್ವಾಗತಿಸಿದೆ. ಬಿಗಿ ಬಂದೋಬಸ್ತ್​ ನಡುವೆಯೂ ಕೆಲವೆಡೆ ಪುಂಡಾಟ ಪ್ರದರ್ಶನವಾಗಿತ್ತು. ಹೀಗಾಗಿ ಹೊಸ ವರ್ಷದಂದು ಕೆಲವರು ಲಾಠಿ ರುಚಿಯನ್ನೂ ನೋಡುವಂತಾಯ್ತು.

ಹೊಸ ವರ್ಷವನ್ನು ಬೆಂಗಳೂರಿನ ಎಂ.ಜಿ ರೋಡ್​, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ಓಪೇರಾ ರಸ್ತೆಯಲ್ಲಿ ಮತ್ತಿನ ನಶೆಯ ಮೂಲಕವೇ ಸ್ವಾಗತಿಸಲಾಗಿದೆ. ಕುಡಿದು ಟೈಟಾಗಿ ಮನೆಗೆ ತೆರಳಲು ಕಷ್ಟಪಡುತ್ತಿದ್ದ ಯುವತಿಯನ್ನು ಪೊಲೀಸರೇ ಆಟೋ ಮಾಡಿ ಮನೆಗೆ ಕಳಿಸಿಕೊಟ್ಟ ಪ್ರಸಂಗವೂ ನಡೀತು. ಒಪೇರಾ ರಸ್ತೆಯಲ್ಲಿ ಕುಡಿದ ಮತ್ತಿನಲ್ಲಿ ಗೆಳತಿ ತನ್ನ ಗೆಳೆಯನಿಗೆ ಕಪಾಳ ಮೋಕ್ಷ ಮಾಡಿದ್ದು ಇವರಿಬ್ಬರ ನಡುವಿನ ಗಲಾಟೆ ಪರಿಹರಿಸಲು ಪೊಲೀಸರೇ ಮಧ್ಯ ಪ್ರವೇಶಿಸಬೇಕಾಯ್ತು.
ಕೋರಮಂಗಲದ ಟೋಕಾ ಕ್ಲಬ್​ನಲ್ಲಿಯೂ ಯುವಕರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಗಾಯಗೊಂಡಿದ್ದರೂ ಆ್ಯಂಬುಲೆನ್ಸ್​ ಹತ್ತಲು ನಿರಾಕರಿಸುತ್ತಿದ್ದ ಯುವಕನನ್ನು ಪೊಲೀಸರು ಕಪಾಳಮೋಕ್ಷ ಮಾಡಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತಾಗಿತ್ತು.

ಈ ರೀತಿಯ ಹತ್ತಾರು ಮತ್ತಿನ ಕಿರಿಕ್​ ಮೂಲಕವೇ ಬೆಂಗಳೂರಿನ ಜನತೆ ಹೊಸ ವರ್ಷವನ್ನು ವೆಲ್ಕಮ್​ ಮಾಡಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿಯೂ ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತಿಸಲಾಗಿದ್ದು ಹೊಸ ಭರವಸೆ ಹೊಸ ಚೈತನ್ಯ ಮೂಡಿಸಿದೆ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories