Hasanamba : ಇಂದಿನಿಂದ ಹಾಸನಾಂಬೆಯ ದರ್ಶನ : ಏಳು ದಿನ ಭಕ್ತರಿಗೆ ದರ್ಶನ ನೀಡಲಿದ್ದಾಳೆ ದೇವಿ

ಹಾಸನ : ವಿಶ್ವಪ್ರಸಿದ್ದ ಹಾಸನ ಜಿಲ್ಲೆಯಲ್ಲಿರುವ ಹಾಸನಾಂಬೆ ದೇವಸ್ಥಾನದ ಬಾಗಿಲು ಇಂದಿನಿಂದ ತೆರೆಯಲಿದೆ. ಒಂದು ವಾರಗಳ ಕಾಲ ಹಾಸನಾಂಬೆ ಭಕ್ತರಿಗೆ ದರ್ಶನವನ್ನು ನೀಡಲಿದ್ದಾಳೆ. ದೇವಸ್ಥಾನದಲ್ಲಿ ಹಚ್ಚಿಟ್ಟ ದೀಪ ಒಂದು ವರ್ಷಗಳ ಕಾಲ ಬೆಳಗುತ್ತದೆ. ಇಂತಹ ಪವಾಡವನ್ನು ನೋಡಲು ಭಕ್ತರು ಕಾಯುತ್ತಿದ್ದಾರೆ.

ವರ್ಷದಲ್ಲೊಮ್ಮೆ ಮಾತ್ರ ಭಕ್ತರಿಗೆ ದರ್ಶನವನ್ನು ನೀಡುವ ಹಾಸನಾಂಬೆಯ ದೇವಸ್ಥಾನವು ಇಂದು ಮಧ್ಯಾಹ್ನ 12 ಗಂಟೆಗೆ ತೆರೆಯಲಿದೆ. ಇಂದಿನಿಂದ ಏಳು ದಿನಗಳ ಕಾಲವೂ ಭಕ್ತರಿಗೆ ಹಾಸನಾಂಬೆಯ ದರ್ಶನ ದೊರೆಯಲಿದೆ. ದೇವಿಯ ದರ್ಶನಕ್ಕಾಗಿ ರಾಜ್ಯದಲ್ಲಿ ಮಾತ್ರವಲ್ಲದೇ ವಿದೇಶಗಳಿಂದಲೂ ಭಕ್ತರು ಆಗಮಿಸುತ್ತಾರೆ. ದೇವಸ್ಥಾನದ ಬಾಗಿಲು ತೆರೆಯುವ ಮೊದಲ ಹಾಗೂ ಕೊನೆಯ ದಿನ ಭಕ್ತರ ಪ್ರವೇಶಕ್ಕೆ ಅವಕಾಶ ನಿರಾಕರಿಸಲಾಗಿದೆ.

ಹಾಸನಾಂಬೆ ವರ್ಷದಲ್ಲಿ ಒಮ್ಮೆ ಮಾತ್ರವೇ ಭಕ್ತರಿಗೆ ದರ್ಶನವನ್ನು ನೀಡುತ್ತಿದ್ದು, ದೇವಸ್ಥಾನಕ್ಕೆ ಬಾಗಿಲು ಹಾಕುವ ವೇಳೆಯಲ್ಲಿ ದೀಪವನ್ನು ಹಚ್ಚಡಲಾಗುತ್ತದೆ. ಈ ದೀಪವು ವರ್ಷ ಪೂರ್ತಿ ಉರಿಯುತ್ತಿರುತ್ತದೆ. ಅಷ್ಟೇ ಅಲ್ಲಾ ದೇವರಿಗೆ ಇಷ್ಟ ನೈವೇದ್ಯ ಒಂದು ವರ್ಷದ ಕಾಲವೂ ಕೆಡುವುದಿಲ್ಲ ಅನ್ನೋ ನಂಬಿಕೆ ಭಕ್ತರಲ್ಲಿದೆ. ದೇವಿಯ ಈ ಪವಾಡವನ್ನು ನೋಡಲು ಲಕ್ಷಾಂತರ ಭಕ್ತರು ಹಾಸನಾಂಬೆಯ ಸನ್ನಿಧಾನಕ್ಕೆ ಆಗಮಿಸುತ್ತಿದ್ದಾರೆ.

ಕೊರೊನಾ ವೈರಸ್‌ ಸೋಂಕಿನ ಹಿನ್ನೆಲೆಯಲ್ಲಿ ಭಕ್ತರಿಗೆ ಈ ಬಾರಿ ಹಲವು ನಿರ್ಬಂಧಗಳನ್ನು ಹೇರಲಾಗಿದೆ. ಪ್ರಮುಖವಾಗಿ ಬೆಳಗ್ಗೆ 6 ರಿಂದ ಮಧ್ಯಾಹ್ನ 1 ಹಾಗೂ ಮಧ್ಯಾಹ್ನ 3 ರಿಂದ ರಾತ್ರಿ 8ರ ವರೆಗೆ ಮಾತ್ರವೇ ಭಕ್ತರಿಗೆ ದೇವಿ ದರ್ಶನಕ್ಕೆ ಅವಕಾಶವನ್ನು ಕಲ್ಪಿಸಲಾಗಿದೆ. ಕೊರೊನಾ ಎರಡು ಲಸಿಕೆಯನ್ನು ಪಡೆದಿದ್ದವರಿಗೆ ಮಾತ್ರವೇ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಅಲ್ಲದೇ ವ್ಯಾಕ್ಸಿನ್‌ ಹಾಕಿಸಿಕೊಂಡ ಸರ್ಟಿಫಿಕೆಟ್‌ ಹಾಗೂ ಮೆಸೆಜ್‌ ತೋರಿಸಿ ದರ್ಶನವನ್ನು ಪಡೆಯಬಹುದಾಗಿದೆ.

Hasanamba
ಹಾಸನಾಂಬ

ಹಾಸನಾಂಬೆಯ ದರ್ಶನಕ್ಕೆ ಸಂಬಂಧಿಸಿದಂತೆ ಸರಕಾರ ಹಾಗೂ ಜಿಲ್ಲಾಡಳಿತ ಪ್ರತ್ಯೇಕವಾದ ಮಾರ್ಗಸೂಚಿಯನ್ನು ಹೊರಡಿಸಿವೆ. ಭಕ್ತರು ಸಾಮಾಜಿಕ ಅಂತರ, ಮಾಸ್ಕ್‌ ಬಳಕೆ ಯನ್ನು ಕಡ್ಡಾಯಗೊಳಿಸಲಾಗಿದೆ. ಯಾವುದೇ ಕಾರಣಕ್ಕೂ ನೂಕು ನುಗ್ಗಲು ಆಗುವುದನ್ನು ತಪ್ಪಿಸುವ ಸಲುವಾಗಿ ದೇವಸ್ಥಾನದಲ್ಲಿ ಬಿಗಿ ಪೊಲೀಸ್‌ ಭದ್ರತೆಯನ್ನು ಕೈಗೊಳ್ಳಲಾಗಿದೆ.

ಇದನ್ನೂ ಓದಿ : ಕೊರೋನಾ ಎಫೆಕ್ಟ್…! ಈ ವರ್ಷ ಹಾಸನಾಂಬೆ ದೇಗುಲಕ್ಕೆ ಭಕ್ತರಿಗಿಲ್ಲ ಎಂಟ್ರಿ…!!

ಇದನ್ನೂ ಓದಿ : ತೆಂಗಿನಕಾಯಿ ನೀಡಿದ್ರೆ ಒಲಿತಾನೆ ರಾಮಭಂಟ : ವಾಯುಪುತ್ರನನ್ನು ನಂಬಿದ್ರೆ ಎಲ್ಲಾ ಕಾರ್ಯಸಿದ್ಧಿ

( Famous Hasanamba Temple Opened from Today )

Comments are closed.