ರಾಷ್ಟ್ರ ರಾಜಧಾನಿಯಲ್ಲಿ ಭೀಕರ ಅಪಘಾತ : ಮೂವರು ರೈತ ಮಹಿಳೆಯರ ಸಾವು

ದೆಹಲಿ : ದೆಹಲಿಯಲ್ಲಿ ಘೋರ ದುಂರತ ಸಂಭವಿಸಿದೆ. ದೆಹಲಿ- ಹರ್ಯಾಣ ಹೆದ್ದಾರಿಯ ಬಹದ್ದೂರ್‌ ಗಢ ಸಮೀಪ ಝುಜ್ಜರ್‌ ರಸ್ತೆಯಲ್ಲಿ ಪ್ರತಿಭಟನೆ ಮುಗಿಸಿ ವಾಪಾಸಾಗುತ್ತಿದ್ದ ಮೂವರು ರೈತ ಮಹಿಳೆಯರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

ಕೃಷಿ ಕಾಯ್ದೆಯನ್ನು ವಿರೋಧಿಸಿ ರೈರತು ನಡೆಯುತ್ತಿದ್ದ ಪ್ರತಿಭಟನೆಯಲ್ಲಿ 3 ಮಂದಿ ರೈತ ಮಹಿಳೆಯರು ಹಲವು ದಿನಗಳಿಂದ ಭಾಗಿಯಾಗಿದ್ದರು. ಪ್ರತಿಭಟನಾ ಅವಧಿ ಮುಗಿದ ಮೇಲೆ ಮನೆಗೆ ಹಿಂತಿರುಗಲು ಆಟೋ ರಿಕ್ಷಾಕ್ಕಾಗಿ ಕಾಯುತ್ತಿದ್ದ ವೇಳೆಯಲ್ಲಿ ವೇಗವಾಗಿ ಬಂದ ಲಾರಿ ಮೂವರು ಮಹಿಳೆಯರ ಮೇಲೆ ಹರಿದಿದೆ.

ಇದನ್ನೂ ಓದಿ: Kiran Gosavi : ಆರ್ಯನ್ ಖಾನ್ ಪ್ರಕರಣದ ಎನ್‌ಸಿಬಿ ಸಾಕ್ಷಿ ಕಿರಣ್ ಗೋಸಾವಿ ಆರೆಸ್ಟ್‌

ಈ ಅಪಘಾತದ ಬೆನ್ನಲ್ಲೇ ಲಾರಿ ಚಾಲಕ ಪರಾರಿಯಾಗಿದ್ದು. ಮೃತಪಟ್ಟ ಈ ಮೂವರು ಮಹಿಳೆಯರು ಪಂಜಾಬ್‌ ನ ಮಾನ್ಸಾ ಜಿಲ್ಲೆಯವರಾಗಿದ್ದು. ನಿರಂತರ ಪ್ರತಿಭಟನೆಯಲ್ಲಿ ಭಾಗವಹಿಸಲು ಬಂದಿದ್ದರು. ಆದರೆ ಪ್ರತಿಭಟನೆ ಮುಗಿಸಿ ಮನೆಗೆ ಸೇರುವ ಮೊದಲೇ ಈ ದುರಂತ ಸಂಭವಿಸಿದೆ.

ಇದನ್ನೂ ಓದಿ: Tamil Nadu : ಪಟಾಕಿ ಗೋಡೌನ್‌ನಲ್ಲಿ ಅಗ್ನಿ ದುರಂತ : 6 ಮಂದಿ ಸಜೀವ ದಹನ, 10 ಮಂದಿ ಗಂಭೀರ

(Three farmer women killed in fatal accident in national capital)

Comments are closed.