ತಾಪಮಾನದಲ್ಲಿ ಹೆಚ್ಚಳ : ಬತ್ತಿದ ಹೊಳೆಕೆರೆಗಳು, ಎಲ್ಲೆಡೆ ನೀರಿಗಾಗಿ ಹಾಹಾಕಾರ

(Temperature increase) ಬೇಸಿಗೆಯ ತಾಪಮಾನ ಹೆಚ್ಚುತ್ತಿದ್ದು, ಎಲ್ಲಡೆ ನೀರಿನ ಅಭಾವ ಉಂಟಾಗಿದೆ. ಕಳೆದ ಕೆಲವು ವರ್ಷಗಳಿಂದ ಅತಿಯಾದ ಮಳೆ ಸುರಿದು ಪ್ರವಾಹ ಸೃಷ್ಟಿಯಾಗುವ ಸಂದರ್ಭ ಉಂಟಾಗಿತ್ತು. ಆದರೆ ಅಷ್ಟು ಮಳೆ ಸುರಿದರು ಕೂಡ ಬೇಸಿಗೆ ಆರಂಭವಾದ ದಿನಗಳಲ್ಲೇ ನದಿಗಳ ಒಡಲಲ್ಲಿ ನೀರು ಬತ್ತಲು ಪ್ರಾರಂಭವಾಗಿದೆ. ಕೆಲವು ಕಡೆಗಳಲ್ಲಂತೂ ನೀರೇ ಕಾಣಿಸದೆ ಬರೀ ಕಲ್ಲು ಬಂಡೆಗಳು ಕಾಣಿಸುತ್ತಿವೆ.

ಏರುತ್ತಿರುವ ತಾಪಮಾನದ ಪರಿಣಾಮ ಎಲ್ಲೆಡೆ ನೀರಿಗಾಗಿ ಹಾಹಾಕಾರ ಎದ್ದಿದೆ. ಬಿಸಿಲ ಬೇಗೆಯಿಂದ ಇದೀಗ ಬಹುತೇಕ ಭಾಗದಲ್ಲಿ ನದಿ ತೊರೆ ಬತ್ತುತ್ತಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಬಹುಬೇಗನೆ ನದಿ ತೊರೆ ಬಾವಿಗಳು ಬತ್ತಿ ಹೋಗಿ ನೀರಿನ ಸಮಸ್ಯೆ ಕಾಡುತ್ತಿದೆ.

ಸಣ್ಣದಾಗಿ ಹರಿಯುತ್ತಿರುವ ನೀರಿನಲ್ಲಿ ಸಣ್ಣ ಸಣ್ಣ ಮೀನು, ಕಪ್ಪೆಗಳು ಸೇರಿದಂತೆ ಸಾವಿರಾರು ಜಲಚರಗಳು ಸಂಕಷ್ಟ ಎದುರಿಸುವ ಪರಿಸ್ಥಿತಿ ಬಂದಿದೆ. ಅಲ್ಲಲ್ಲಿ ನಿಂತಿರುವ ನೀರಿನಲ್ಲಿ ಪಕ್ಷಿಗಳು ಆಹಾರ ಹುಡುಕಿಕೊಳ್ಳುತ್ತಿವೆ. ಇದು ಜಲಚರಗಳ ಪರಿಸ್ಥಿತಿಯಾದರೆ ನದಿಯ ನೀರನ್ನೇ ಅವಲಂಬಿಸಿರುವ ಅದೆಷ್ಟೋ ರೈತರು, ನಗರದ ನಿವಾಸಿಗಳಿಗೂ ಕುಡಿಯುವ ನೀರಿಗೆ ಹಾಹಾಕಾರ ಎದುರಾಗುವ ಸ್ಥಿತಿ ಬಂದೊದಗಿದೆ. ಬೇಸಿಗೆ ಪ್ರಾರಂಭದ ವೇಳೆಯಲ್ಲಿಯೇ ನೀರು ಬತ್ತಿ ಹೋಗುತ್ತಿದ್ದು, ಬೇಸಿಗೆಯಲ್ಲಿ ಯಾವ ಸ್ಥಿತಿ ಎದುರಾಗಲಿದೆಯೋ ತಿಳಿಯುತ್ತಿಲ್ಲ.

ಅಷ್ಟಕ್ಕೂ ಮಳೆಗಾಲದಲ್ಲಿ ಅಷ್ಟೊಂದು ತುಂಬಿ ಹರಿಯುತ್ತಿದ್ದ ನದಿಗಳು ಬೇಸಿಗೆಯ ಆರಂಭದಲ್ಲೇ ಸಂಪೂರ್ಣವಾಗಿ ಬತ್ತಿ ಹೋಗುತ್ತಿರುವುದಕ್ಕೂ ಮುಖ್ಯ ಕಾರಣ ನಿರಂತರವಾಗಿ ಪರಿಸರ ನಾಶವಾಗುತ್ತಿರುವುದು. ನದಿಪಾತ್ರದ ಪ್ರದೇಶದಲ್ಲಿ ಕಾಡುಗಳ ವಿನಾಶದಿಂದ ಧಾರಾಕರಾ ಮಳೆ ಸುರಿದರು ಕೂಡ ಬೇಸಿಗೆ ಆರಂಭದ ದಿನಗಳಲ್ಲಿಯೇ ನದಿಯಲ್ಲಿ ನೀರಿನ ಹರಿವು ತೀವ್ರ ಕಡಿಮೆಯಾಗುತ್ತಿದೆ. ಇದಲ್ಲದೇ ನದಿಯ ನೀರನ್ನೇ ಅವಲಂಭಿಸಿರುವ ಜನರು, ರೈತರು ಹಾಗೂ ಪ್ರಾಣಿ ಪಕ್ಷಿಗಳಿಗೆ ಸಂಕಷ್ಟ ಎದುರಾಗಲಿದೆ.

ಇದನ್ನೂ ಓದಿ : ಟಿಕೆಟ್ ತಪ್ಪಿದ್ದಕ್ಕೆ ಕಣ್ಣೀರಿಟ್ಟ ಶಾಸಕ ರಘುಪತಿ ಭಟ್ : ಪಕ್ಷೇತರರಾಗಿ ಸ್ಪರ್ಧಿಸುತ್ತಾರಾ ಬಿಜೆಪಿ ಶಾಸಕ

ನದಿ ಕೊಳವೆ ಬಾವಿಗಳನ್ನು ನಂಬಿಕೊಂಡು ಬದುಕುತ್ತಿದ್ದ ಕೃಷಿಕರು ಈ ಬಾರಿ ಕಂಗಾಲಾಗಿದ್ದಾರೆ. ಕುಡಿಯುವ ನೀರಿಗಾಗಿ ಪರಿತಪಿಸುವ ಹೊತ್ತಿನಲ್ಲಿ ಕೃಷಿಗೆ ನೀರುಣಿಸಲು ಕೃಷಿಕರು ಪರದಾಡುತ್ತಿದ್ದಾರೆ. ನದಿಯನ್ನೇ ನಂಬಿದ ಜನರ ಮೇಲೆ ಸ್ಥಳೀಯಾಡಳಿತಗಳು ಮಿತ ಬಳಕೆಯ ಒತ್ತಡ ಹೇರುತ್ತಿದ್ದಾರೆ.

Temperature increase: Dried up streams, everywhere is desperate for water

Comments are closed.