10ರೂಪಾಯಿಯಲ್ಲಿ ದೃಷ್ಟಿ ತೆಗೆದು 25 ಸಾವಿರಕ್ಕೆ ಡಿಮ್ಯಾಂಡ್‌ : ಗೃಹ ಪ್ರವೇಶದ ಮನೆಯಲ್ಲಿ ಮಂಗಳಮುಖಿಯರ ದಾಂಧಲೆ

ಬೆಂಗಳೂರು : ಗೃಹ ಪ್ರವೇಶದ ಪೂಜೆ ನಡೆಯುತ್ತಿದ್ದ ವೇಳೆಯಲ್ಲಿ ಮಂಗಳ ಮುಖಿಯರ ಗುಂಪೊಂದು ಮನೆಯೊಳಗೆ ನುಗ್ಗಿ, 10 ರೂಪಾಯಿಯ ನೋಟಿನಲ್ಲಿ ದೃಷ್ಟಿ ತೆಗೆದು 25 ಸಾವಿರ ರೂಪಾಯಿಗೆ ಡಿಮ್ಯಾಂಟ್‌ ಇಟ್ಟಿದ್ದಾರೆ. ಮನೆ ಮಾಲೀಕ 1 ಸಾವಿರ ರೂಪಾಯಿ ನೀಡುತ್ತಿದ್ದಂತೆಯೇ ಸಿಟ್ಟಾದ ಮಂಗಳ ಮುಖಿಯರು (transgender Clash Threaten) ಮನೆ ಮಾಲೀಕನ ಪತ್ನಿ, ಮನೆಯವರಿಗೆ ಹಲ್ಲೆ ನಡೆಸಿ, ಮನೆಯಲ್ಲಿ ದಾಂಧಲೆ ನಡೆಸಿರುವ ಘಟನೆ ಬೆಂಗಳೂರಿನ ಕಲ್ಕೆರೆಯಲ್ಲಿ ನಡೆದಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ಸಿಲಿಕಾನ್‌ ಸಿಟಿ ಬೆಂಗಳೂರಿನ ರಾಮಮೂರ್ತಿ ನಗರದ ಕಲ್ಕೆರೆಯ ಚನ್ನಸಂದ್ರದ ಪೂಜಾ ಗಾರ್ಡನ್‌ನ 2ನೇ ಹಂತದಲ್ಲಿ ಲೋಕೇಶ್‌ ಎಂಬವರು ಮನೆಯೊಂದನ್ನು ಕಟ್ಟಿಸಿದ್ದರು. ಗುರುವಾರ ಬೆಳಗ್ಗೆ 7.30ರ ಸುಮಾರಿಗೆ ಮನೆಯಲ್ಲಿ ಪೂಜೆಯನ್ನು ನಡೆಸುತ್ತಿದ್ದರು. ಈ ವೇಳೆಯಲ್ಲಿ ಏಕಾಏಕಿಯಾಗಿ ಮನೆಗೆ ನುಗ್ಗಿದ ಮಂಗಳ ಮುಖಿಯರು 10 ರೂಪಾಯಿಯ ನೋಟಿನಲ್ಲಿ ಮನೆಗೆ ದೃಷ್ಟಿ ತೆಗೆದಿದ್ದಾರೆ. ನಂತರ 25 ಸಾವಿರ ರೂಪಾಯಿ ನೀಡುವಂತೆ ಮನೆ ಮಾಲೀಕನ ಬಳಿಯಲ್ಲಿ ಡಿಮ್ಯಾಂಡ್‌ ಇಟ್ಟಿದ್ದಾರೆ. ಆದರೆ ಅಷ್ಟೊಂದು ಹಣ ನನ್ನ ಬಳಿಯಲ್ಲಿ ಇಲ್ಲ ಎಂದರೂ ಮಂಗಳ ಮುಖಿಯರು ಕೇಳಲೇ ಇಲ್ಲ.

ಮನೆ ಮಾಲೀಕ 1 ಸಾವಿರ ರೂಪಾಯಿ ನೀಡಿದ್ದರೂ ಕೂಡ ಮಂಗಳಮುಖಿಯರು ಸಮಾಧಾನಗೊಳ್ಳಲಿಲ್ಲ. ನಂತರದಲ್ಲಿ ಮನೆಯವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುವುದಕ್ಕೆ ಆರಂಭಿಸಿದ್ದಾರೆ. ಅಲ್ಲದೇ ಮನೆಯವರ ಮುಂದೆಯೇ ಅಸಭ್ಯವಾಗಿ ವರ್ತಿಸಿದ್ದಾರೆ. ಕೊನೆಗೆ ಮನೆ ಮಾಲೀಕರು ಮಂಗಳಮುಖಿಯರನ್ನು ಮನೆಯಿಂದ ಹೊರಹೋಗುವಂತೆ ತಿಳಿಸಿದ್ದಾರೆ. ಈ ವೇಳೆಯಲ್ಲಿ ಕೋಪಗೊಂಡ ಮಂಗಳಮುಖಿಯರು ಲೋಕೇಶ್‌ ಪತ್ನಿ ಆಶಾ ಅವರ ಕೆನ್ನೆಗೆ ಬಾರಿಸಿದ್ದು, ಮಾವ ಸೊನ್ನೆಗೌಡ ಅವರ ಮೇಲೂ ಹಲ್ಲೆ ನಡೆಸಿದ್ದಾರೆ.

ಮನೆಯರು ಕೂಡಲೇ ಪೊಲೀಸರಿಗೆ ಕರೆ ಮಾಡುತ್ತಿದ್ದಂತೆಯೇ ಮಂಗಳಮುಖಿಯರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಅಲ್ಲದೇ ಮನೆಯ ಮುಂದೆ ಇರಿಸಿದ್ದ ಕುರ್ಚಿಗಳನ್ನು ಒಡೆದು, ಆಟೋದಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ. ಇದೀಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಇನ್ನು ಮನೆ ಮಾಲೀಕ ಲೋಕೇಶ್‌ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

ಇದನ್ನೂ ಓದಿ : mbbs student ends life : ಖಿನ್ನತೆಯಿಂದ ಬಳಲುತ್ತಿದ್ದ ವೈದ್ಯಕೀಯ ವಿದ್ಯಾರ್ಥಿ : ಮದುವೆಯಾಗಿ ಮೂರೇ ತಿಂಗಳಿಗೆ ಆತ್ಮಹತ್ಯೆ

ಇದನ್ನೂ ಓದಿ : Titanic Theatrical Release : 2023 ರ ಪ್ರೇಮಿಗಳ ದಿನದಂದು ಮತ್ತೆ ತೆರೆಗೆ ಬರಲಿದೆ ಟೈಟಾನಿಕ್

transgender Clash Threaten Gruhapravesh Function Kalkere Bangaluru

Comments are closed.