ಪಿಂಕ್ ಲೈನ್ ಮೆಟ್ರೋ ಕಾರ್ಯಾರಂಭ ಯಾವಾಗ? ಎಲ್ಲಿಂದ ಎಲ್ಲಿಗೆ?

ಬೆಂಗಳೂರಿನ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಪಿಂಕ್ ಲೈನ್ ಕಾರ್ಯಾಚರಣೆ ಬಗ್ಗೆ ಬಿಎಮ್ಆರ್ ಸಿಎಲ್ ಮಹತ್ವದ ಮಾಹಿತಿ ನೀಡಿದೆ. ಕಾಳೇನ ಅಗ್ರಹಾರ – ನಾಗವಾರ ಮಾರ್ಗವು 2026 ಕಾರ್ಯಾರಂಭ ವಾಗಲಿದೆ. 21 ಕಿ. ಮೀ ಉದ್ದದ ಈ ಮಾರ್ಗವು 18 ನಿಲ್ದಾಣ ಹೊಂದಿದ್ದು ನಗರದ ಉತ್ತರ – ದಕ್ಷಿಣ ಸಂಪರ್ಕವನ್ನು ಬಲಪಡಿಸುತ್ತದೆ.

ಪರ್ಪಲ್ ಲೈನ್, ಗ್ರೀನ್ ಲೈನ್ ಮತ್ತು ಯೆಲ್ಲೋ ಲೈನ್ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿವೆ. ಬೆಂಗಳೂರು ಮೆಟ್ರೋ ಪ್ರಸ್ತುತ ಪಿಂಕ್ ಲೈನ್ (ಕಳೇನ ಅಗ್ರಹಾರದಿಂದ ನಾಗವಾರ) ಮತ್ತು ಬ್ಲೂ ಲೈನ್ (ORR ನಿಂದ ವಿಮಾನ ನಿಲ್ದಾಣ) ಗಳಲ್ಲಿ ಪ್ರಮುಖ ನಿರ್ಮಾಣ ಕಾರ್ಯಗಳೊಂದಿಗೆ ತನ್ನ ಜಾಲವನ್ನು ವಿಸ್ತರಿಸುತ್ತಿದೆ.

ಜಯದೇವ ಆಸ್ಪತ್ರೆ ಹಾಗೂ ಎಂಜಿ ರಸ್ತೆ ಒಟ್ಟು ಮೂರು ಇಂಟರ್ ಚೇಂಜ್ ನಿಲ್ದಾಣವು ಗುಲಾಬಿ ಮಾರ್ಗದಲ್ಲಿ ಬರುತ್ತದೆ. ಜಯದೇವ ಆಸ್ಪತ್ರೆ ನಿಲ್ದಾಣದಲ್ಲಿ ಆರ್ ವಿ ರಸ್ತೆ ಬೊಮ್ಮಸಂದ್ರದ ಹಳದಿ ಮಾರ್ಗದೊಂದಿಗೆ ಸಂಪರ್ಕಿಸುತ್ತದೆ. ಎಂಜಿ ರಸ್ತೆ ನಿರ್ಮಾಣದಲ್ಲಿ ಚಲ್ಲಘಟ್ಟ – ವೈಟ್ ಫೀಲ್ಡ್ ನಡುವಿನ ನೇರಳೆ ಮಾರ್ಗ ಸಂಪರ್ಕಿಸುತ್ತದೆ. ನಾಗವಾರ ನಿಲ್ದಾಣದಲ್ಲಿ ವಿಮಾನ ನಿಲ್ದಾಣ – ಸಿಲ್ಕ ಬೋರ್ಡ್ ನಡುವೆ ಆರಂಭವಾಗಲಿರುವ ನೀಲಿ ಮಾರ್ಗ ಸಂಪರ್ಕಿಸುತ್ತದೆ.

ಕಾಳೇನ ಅಗ್ರಹಾರ – ತಾವರೆಕೆರೆ 7.5 ಕಿ.ಮೀ ಎಲಿವೇಟೆಡ್ ವಿಭಾಗ ಒಂದಾದರೆ,‌ಉಳಿದ 13.76 ಕಿ.ಮೀ ಸುರಂಗ ಮಾರ್ಗ ಎರಡನೇಯದ್ದಾಗಿದೆ. ಹೀಗೆ ಪಿಂಕ್ ಲೈನ್ ಮೆಟ್ರೋ ಎರಡು ಹಂತದಲ್ಲಿ ಉದ್ಘಾಟನೆಯಾಗಲಿದೆ ಎಂದು BMRCL ಅಧಿಕಾರಿಗಳು ತಿಳಿಸಿದ್ದಾರೆ. ನಮ್ಮ ಮೆಟ್ರೋ ಪಿಂಕ್ ಲೈನ್ ನಲ್ಲಿ ಸಂಪೂರ್ಣವಾಗಿ ರೈಲು ಸಂಚಾರ 2026 ರ ಡಿಸೆಂಬರ್ ವೇಳೆಗೆ ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ. ಪಿಂಕ್ ಲೈನ್ ಎಲಿವೇಟೆಡ್ ವಿಭಾಗದ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ.

ಮೊದಲಿಗೆ 2025ರ ಅಂತ್ಯದಲ್ಲಿ ಕಾಳೇನ ಅಗ್ರಹಾರ, ಹುಳಿಮಾವು, ಐಐಎಂ ಬೆಂಗಳೂರು, ಜೇಪಿ ನಗರ 4 ನೇ ಹಂತ, ಜಯದೇವ ಆಸ್ಪತ್ರೆ ಮತ್ತು ತಾವರೆಕೆರೆ (ಸ್ವಾಗತ್ ಕ್ರಾಸ್ ರಸ್ತೆ) ಎಂಬ 6 ನಿಲ್ದಾಣ ಒಳಗೊಂಡ 7 ಕಿ.ಮೀ ಮಾರ್ಗ ಆರಂಭಿಸುವ ಗುರಿಯನ್ನು BMRCL ಹೊಂದಿತ್ತು. ಆದರೆ ನಿಲ್ದಾಣದ ಕಾಮಗಾರಿ ಬಾಕಿ ಇದ್ದ ಕಾರಣ 2026 ಮೇ ಗೆ ಗಡುವು ಹಾಕಿಕೊಂಡಿದೆ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories