ಭಾರತದಲ್ಲಿ ಮೋದಿ ಸರ್ಕಾರ (Central Government) ಆಡಳಿತಕ್ಕೆ ಬಂದ ಬಳಿಕ ಪ್ರತಿಯೊಂದು ಸರ್ಕಾರಿ ಕಾರ್ಯಕ್ಕೆ ಆಧಾರ್ ಕಾರ್ಡ್ (Aadhaar Card) ಕಡ್ಡಾಯವಾಗಿದೆ, 2010ರ ಸೆಪ್ಟೆಂಬರ್ 29ರಿಂದಲೇ ಆಧಾರ್ ಯೋಜನೆ ದೇಶದಲ್ಲಿ ಜಾರಿಗೆ ಬಂದಿತ್ತು. ಆದರೆ ಆಧಾರ್ ಆಗ ಅಷ್ಟೊಂದು ಪ್ರಾಮುಖ್ಯತೆ ಪಡೆದುಕೊಂಡಿರಲಿಲ್ಲ. ಇದೀಗ ಕಳೆದ 13 ವರ್ಷಗಳಿಂದ ಪ್ರತಿಯೊಂದು ವ್ಯವಹಾರಕ್ಕೂ ಆಧಾರ್ ನಂಬರ್ ಒದಗಿಸುವುದು ಕಡ್ಡಾಯವಾಗಿದೆ.
ಆಧಾರ್ ಕಾರ್ಡ್ನಲ್ಲಿ ನಿಮ್ಮ ಫೋಟೋ, ಬಯೋಮೆಟ್ರಿಕ್, ವಿಳಾಸ, ಜನ್ಮದಿನಾಂಕ, ಇಮೇಲ್ ಐಡಿ, ಫೋನ್ ನಂಬರ್ ಹೀಗೆ ಪ್ರತಿಯೊಂದು ಮಾಹಿತಿಯೂ ಇರುತ್ತದೆ . ಇದು ನಿಮ್ಮ ಗುರುತಿನ ಚೀಟಿಯಂತೆ ಕಾರ್ಯ ನಿರ್ವಹಿಸುತ್ತದೆ. ಹೀಗಾಗಿ ಈಗಿನ ಜಮಾನದಲ್ಲಿ ಆಧಾರ್ ಕಾರ್ಡ್ನಲ್ಲಿ ಒಂದೇ ಒಂದು ಮಾಹಿತಿ ತಪ್ಪಾಗಿದ್ದರೂ ಸಹ ನಿಮಗೆ ಸರ್ಕಾರಿ ಸವಲತ್ತುಗಳನ್ನು ಪಡೆಯುವುದು ತುಂಬಾನ ಕಷ್ಟವಾಗುತ್ತದೆ.

ಹೀಗಾಗಿ ಕೇಂದ್ರ ಸರ್ಕಾರ ನೀಡಿರುವ ಆಧಾರ್ ಕಾರ್ಡ್ನಲ್ಲಿ ಇರುವ ನಿಮ್ಮ ವಿವರಗಳನ್ನು ಸರಿಯಾಗಿ ಇರುವಂತೆ ನೋಡಿಕೊಳ್ಳುವುದು ಕಡ್ಡಾಯವಾಗಿದೆ. ಆಧಾರ್ ಕಾರ್ಡ್ನಲ್ಲಿ ನೀವು ನಮೂದಿಸಿದ ಮಾಹಿತಿಗಳಲ್ಲಿ ಯಾವುದೇ ಬದಲಾವಣೆಗಳು ಇದ್ದರೂ ಸಹ ನೀವು ಕೂಡಲೇ ಅದನ್ನು ಬದಲಾಯಿಸಿಕೊಳ್ಳಬೇಕು. ಆಧಾರ್ ಕಾರ್ಡ್ ವಿವರಗಳನ್ನು ಕಾಲ ಕಾಲಕ್ಕೆ ಅಪ್ಡೇಟ್ ಮಾಡುವುದು ಕಡ್ಡಾಯವಾಗಿದೆ.
ಇದನ್ನೂ ಓದಿ : ವಾಟ್ಸಾಪ್ನಲ್ಲಿ ಶೀಘ್ರದಲ್ಲಿಯೇ ಬರ್ತಿದೆ ಹೊಸ ವೈಶಿಷ್ಟ್ಯ : ಇನ್ಮೇಲೆ ನೀವು ಮಾಡಬಹುದು ಮತದಾನ
ಒಂದು ವೇಳೆ ನೀವು ಕಳೆದ ಅನೇಕ ವರ್ಷಗಳಿಂದ ನೀವು ಆಧಾರ್ ಕಾರ್ಡ್ನಲ್ಲಿ ನಿಮ್ಮ ಫೋಟೋ ಬದಲಾವಣೆ (Aadhaar Card Photo Change) ಮಾಡಿಲ್ಲ ಎಂದಾದಲ್ಲಿ ಇದೀಗ ಕೇಂದ್ರ ಸರ್ಕಾರವು ನಿಮಗೆ ಮನೆಯಲ್ಲಿಯೇ ಕುಳಿತು ನಿಮ್ಮ ಆಧಾರ್ ಕಾರ್ಡ್ನಲ್ಲಿರುವ ನಿಮ್ಮ ಫೋಟೋವನ್ನು ಬದಲಾವಣೆ ಮಾಡಲು ಸದಾವಕಾಶವನ್ನು ನೀಡಿದೆ .ಅಲ್ಲದೇ ಯುಐಡಿಎಐ ನಿಮಯದ ಪ್ರಕಾರ ಹದಿನೈದು ವರ್ಷ ದಾಟಿದ ಪ್ರತಿಯೊಬ್ಬರೂ ಕೂಡ ತಮ್ಮ ಆಧಾರ್ ಕಾರ್ಡ್ ವಿವರಗಳನ್ನು ಅಪ್ಡೇಟ್ ಮಾಡಿಕೊಳ್ಳುವುದು ಕಡ್ಡಾಯವಾಗಿರುತ್ತದೆ .

ಹಾಗಾದರೆ ನೀವು ಕೂಡ ಆಧಾರ್ ಕಾರ್ಡ್ನಲ್ಲಿ ನಿಮ್ಮ ಫೋಟೋವನ್ನು ಅಪ್ಡೇಟ್ ಮಾಡಿಕೊಳ್ಳಬೇಕು ಎಂದುಕೊಂಡಿದ್ದರೆ ನೀವು ಈ ಕೆಳಗಿನ ಹಂತಗಳನ್ನು ನೀವು ಪಾಲಿಸುವ ಮೂಲಕ ನಿಮ್ಮ ಫೋಟೋವನ್ನು ಆನ್ಲೈನ್ನಲ್ಲಿಯೇ ಅಪ್ಡೇಟ್ ಮಾಡಿಕೊಳ್ಳಬಹುದಾಗಿದೆ. ಇದಕ್ಕಾಗಿ ನೀವು ಯಾವ ಹಂತಗಳನ್ನು ಪಾಲಿಸಬೇಕು ಅನ್ನೋದಕ್ಕೆ ಇಲ್ಲಿ ಸಂಕ್ಷಿಪ್ತವಾಗಿ ನೀಡಲಾಗಿದೆ.
ಇದನ್ನೂ ಓದಿ : ಈ ಕೆಲಸ ಮಾಡಿಸದಿದ್ರೆ ನಿಷ್ಕ್ರೀಯಗೊಳ್ಳಲಿದೆ ನಿಮ್ಮ ಪ್ಯಾನ್‌ಕಾರ್ಡ್ : ಸರಕಾರದಿಂದ ಹೊಸ ರೂಲ್ಸ್ ಜಾರಿ
ಮೊದಲು ನೀವು ಯುಐಡಿಎಐನ ಅಧಿಕೃತ ವೆಬ್ಸೈಟ್ ಆಗಿರುವ – uidai.gov.inಗೆ ಭೇಟಿ ನೀಡಿ. ಈ ವೆಬ್ಸೈಟ್ನಿಂದ ನೀವು ಆಧಾರ್ ದಾಖಲಾತಿ ಫಾರ್ಮ್ನ್ನು ಡೌನ್ಲೋಡ್ ಮಾಡಿಕೊಳ್ಳಿ. ಈ ದಾಖಲಾತಿ ಫಾರ್ಮ್ನಲ್ಲಿ ಕೇಳಲಾಗುವ ಎಲ್ಲಾ ಮಾಹಿತಿಗಳನ್ನು ಸರಿಯಾಗಿ ನಮೂದಿಸಿ. ಇದಾದ ಬಳಿಕ ಹತ್ತಿರದಲ್ಲಿರುವ ಆಧಾರ್ ಸೇವಾ ಕೇಂದ್ರ ಅಥವಾ ಆಧಾರ್ ನೋಂದಣಿ ಕೇಂದ್ರಗಳಲ್ಲಿ ನೀವು ದಾಖಲಾತಿ ಫಾರ್ಮ್ ಸಲ್ಲಿಸುವ ಮೂಲಕ ನಿಮ್ಮ ಫೋಟೋ ಅಪ್ಡೇಟ್ ಮಾಡಿಕೊಳ್ಳಬಹುದಾಗಿದೆ. ನಿಮ್ಮ ಹತ್ತಿರದಲ್ಲಿ ಆಧಾರ್ ನೋಂದಣಿ ಕೇಂದ್ರ ಎಲ್ಲಿದೆ ಎಂಬ ಮಾಹಿತಿ ನಿಮಗಿಲ್ಲ ಎಂದಾದಲ್ಲಿ ನೀವು points.uidai.gov.in/. ಎಂಬ ಈ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ನಿಮ್ಮ ಹತ್ತಿರದ ಆಧಾರ್ ಕೇಂದ್ರದ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.
ಇದನ್ನೂ ಓದಿ : ಸುಕನ್ಯಾ ಸಮೃದ್ಧಿ ಯೋಜನೆ : 12000 ರೂ. ಹೂಡಿಕೆ ಮಾಡಿ ರೂ 70 ಲಕ್ಷ ಪಡೆಯಿರಿ
Aadhaar Card Photo Can be Updated Online Now Even Easier How ? Here is the information